ರಸ್ಕ್ ಟೇಸ್ಟಿ ಅಂತ ನೀವೂ ತಿಂದು ಮಕ್ಕಳಿಗೂ ಕೊಡುತ್ತೀರಾ? ಆರೋಗ್ಯಿದು ಅಪಾಯ

ಕೆಲವೊಂದು ಆಹಾರದ ರುಚಿ ಹೆಚ್ಚು. ತಿಂದಷ್ಟು ಮತ್ತೆ ಮತ್ತೆ ತಿನ್ಬೇಕು ಎನ್ನಿಸುತ್ತದೆ. ಆದ್ರೆ ಅದು ಆರೋಗ್ಯ ಹಾಳು ಮಾಡುತ್ತೆ ಎಂಬುದು ನಮಗೆ ತಿಳಿದಿರೋದಿಲ್ಲ. ರಸ್ಕ್ ಕೂಡ ಇದ್ರಲ್ಲಿ ಒಂದು. ಟೀ ಜೊತೆ ರಸ್ಕ್ ರುಚಿ ಡಬಲ್ ಮಾಡೋ ಜೊತೆಗೆ ಆರೋಗ್ಯ ಹಾಳು ಮಾಡುತ್ತೆ.
 

These Are Side Effect Of Rusk

ಕೋಲ್ಡ್ ಡ್ರಿಂಕ್ಸ್ ಇರಲಿ ಇಲ್ಲ ಬಿಸಿ ಬಿಸಿ ಟೀ, ಕಾಫಿ ಇರಲಿ, ಅದ್ರ ಜೊತೆ ಸ್ನ್ಯಾಕ್ಸ್, ಬಿಸ್ಕತ್, ರಸ್ಕ್ ,ಚಿಪ್ಸ್ ಹೀಗೆ ಏನಾದ್ರೂ ಕುರುಕಲು ತಿಂಡಿ ಬೇಕೇಬೇಕು. ಸಂಜೆ ಸಮಯದಲ್ಲಿ ಅದರಲ್ಲೂ ಚಳಿ, ಮಳೆಯ ಸೀಸನ್ ಗಳಲ್ಲಿ ಜನರು ಟೀ, ಕಾಫಿ ಜೊತೆ ಸ್ನ್ಯಾಕ್ಸ್ ತಿನ್ನಲು ಇಷ್ಟಪಡ್ತಾರೆ. ಇನ್ನು ಕಚೇರಿಗೆ ತೆರಳುವ ಜನರು ತಮ್ಮ ಬಿಡುವಿನ ವೇಳೆಯಲ್ಲಿ ಟೀ ಅಥವಾ ಕಾಫಿ ಕುಡಿಯುವಾಗ ಅದ್ರ ಜೊತೆ ರಸ್ಕ್ ಅಥವಾ ಬಿಸ್ಕತ್ ತಿನ್ನುವುದು ಸರ್ವೇ ಸಾಮಾನ್ಯ. ತಿನ್ನಲು ಬಹಳ ರುಚಿ ಎನಿಸುವ ಇಂತಹ ಕುರುಕುರಿಗಳೆಲ್ಲವೂ ಆರೋಗ್ಯಕ್ಕೆ ಒಳ್ಳೆಯದಲ್ಲ. ನಾವು ಯಾವುದ್ರ ಜೊತೆ ಏನನ್ನು ತಿನ್ನುತ್ತಿದ್ದೇವೆ ಎಂಬ ನಮ್ಮ ಕಾಂಬಿನೇಷನ್  ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. 

ಕೆಲವರು ನಿಯಮಿತವಾಗಿ ಟೀ (Tea) ಜೊತೆ ರಸ್ಕ್ (Rusk) ಅನ್ನು ಸೇವಿಸುತ್ತಾರೆ. ಬಿಸಿ ಬಿಸಿ ಟೀ ಜೊತೆ ಕುರುಂ ಕುರುಂ ಎನ್ನುವ ರಸ್ಕ್ ತಿನ್ನುವುದು ಅವರ ನಿತ್ಯದ ರೂಢಿಯಾಗಿರುತ್ತದೆ. ಟೀ ಅಥವಾ ಕಾಫಿ ಜೊತೆ ರಸ್ಕ್ ತಿನ್ನೋದು ಒಂದು ತರ ಮಜಾ. ರುಚಿ ಕೂಡ ಹೆಚ್ಚು. ಆದ್ರೆ ಪ್ರತಿನಿತ್ಯ ಟೀ ಜೊತೆ ರಸ್ಕ್ ತಿನ್ನುವುದು ಆರೋಗ್ಯ (health) ಕ್ಕೆ ಬಹಳ ಹಾನಿಕರವಾಗಿದೆ. ರಸ್ಕ್ ನಲ್ಲಿ ಬಳಸುವ ಹೆಚ್ಚಿನ ಗ್ಲೂಟೆನ್, ಸಂಸ್ಕರಿಸಿದ ಹಿಟ್ಟು ಮತ್ತು ಸಕ್ಕರೆಯು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರ ಸೇವನೆಯಿಂದ ಆರೋಗ್ಯದ ಮೇಲೆ ಅನೇಕ ರೀತಿಯ ದುಷ್ಟರಿಣಾಮ ಉಂಟಾಗುತ್ತದೆ. 

ಮಧುಮೇಹಿಗಳಿಗೆ ಬೀಟ್ ರೂಟ್ ಬೆಸ್ಟ್! ಎಷ್ಟು ಪ್ರಮಾಣ ಬೆಟರ್?

ಟೀ ಜೊತೆ ರಸ್ಕ್ ಸೇವನೆಯಿಂದ ಕಾಡುತ್ತೆ ಈ ಎಲ್ಲ ಸಮಸ್ಯೆ :
ಮಧುಮೇಹ ಕಾಡುತ್ತೆ ಹುಷಾರ್ :
ಇತ್ತೀಚಿನ ಒತ್ತಡದ ಹಾಗೂ ಬಿಡುವಿಲ್ಲದ ಜೀವನದ ಶೈಲಿಯಲ್ಲಿ ಚಿಕ್ಕವರು ದೊಡ್ಡವರೆನ್ನದೆ ಎಲ್ಲರೂ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಡಯಾಬಿಟೀಸ್ ಎಂದರೆ ತಪ್ಪಾಗದು. ನಾವು ಸೇವಿಸುವ ಕೆಲವು ಆಹಾರಗಳು ನಮಗೆ ತಿಳಿಯದಂತೇ ನಮ್ಮ ಶರೀರವನ್ನು ಹಾಳು ಮಾಡುತ್ತಿವೆ. ಉದಾಹರಣೆಗೆ ಟೀ ಜೊತೆ ರಸ್ಕ್ ಸೇವಿಸುವುದರಿಂದ ಅನೇಕ ರೀತಿಯ ಶಾರೀರಿಕ ಸಮಸ್ಯೆಗಳು ಉದ್ಭವವಾಗುತ್ತದೆ. ರಸ್ಕ್ ತಯಾರಿಕೆಯಲ್ಲಿ ಕಡಿಮೆ ಗುಣಮಟ್ಟದ ರಿಫೈಂಡ್ ಆಯಿಲ್, ಮೈದಾ ಹಿಟ್ಟು, ಸಕ್ಕರೆ ಮತ್ತು ಗ್ಲೂಟೆನ್ ಗಳನ್ನು ಬಳಸಲಾಗುತ್ತದೆ. ಹೀಗೆ ತಯಾರಾದ ರಸ್ಕ್ ಗಳನ್ನು ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗಿ ಡಯಾಬಿಟೀಸ್ ಸಮಸ್ಯೆ ಎದುರಾಗಬಹುದು.

ಮಲಬದ್ಧತೆ ಸಮಸ್ಯೆ : ಪ್ರತಿನಿತ್ಯ ಚಹಾ ಜೊತೆ ರಸ್ಕ್ ತಿನ್ನುವುದರಿಂದ ಕರುಳಿನಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳು ಹುಟ್ಟಿಕೊಳ್ಳುತ್ತವೆ. ಇದರಿಂದ ಶರೀರದ ರೋಗನಿರೋಧಕ ಶಕ್ತಿ ಕೂಡ ಕಡಿಮೆಯಾಗುತ್ತದೆ. ಇಂತಹ ಸಮಸ್ಯೆಗಳು ಮುಂದೆ ಜೀರ್ಣಕ್ರಿಯೆಯ ಮೇಲೂ  ಕೆಟ್ಟ ಪ್ರಭಾವ ಬೀರಿ ಶರೀರಕ್ಕೆ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ತಲೆದೋರುತ್ತದೆ. 

ಟೀ ಜೊತೆ ರಸ್ಕ್ ತಿಂದ್ರೆ ಕಾಡುತ್ತೆ ಬೊಜ್ಜು :  ರಸ್ಕ್ ನಂತಹ ತಿಂಡಿಗಳು ಮನುಷ್ಯನ ಆಹಾರದ ಬಯಕೆಯನ್ನು ಹೆಚ್ಚಿಸಿ ಇನ್ನೂ ಹೆಚ್ಚು ಹೆಚ್ಚು ತಿನ್ನಲು ಪ್ರೇರೇಪಿಸುತ್ತದೆ. ಇದರಿಂದ ಸಹಜವಾಗಿ ವ್ಯಕ್ತಿಯ ತೂಕ ಹೆಚ್ಚುತ್ತದೆ. ರಸ್ಕ್ ನಲ್ಲಿ ಇರುವ ಹೆಚ್ಚಿನ ಸಕ್ಕರೆ, ಹಿಟ್ಟಿನ ಅಂಶ ಬೊಜ್ಜಿಗೆ ಕಾರಣವಾಗುತ್ತದೆ.

Healthy Food: ಆಲೂ ಖಾರ ಸೇವ್ ತಿನ್ನುವ ಮುನ್ನ..

ಪೋಷಕಾಂಶಗಳ ಕೊರತೆ : ರಸ್ಕ್ ನಲ್ಲಿ ಯಾವುದೇ ರೀತಿಯ ಪೋಷಕಾಂಶಗಳು ಇರುವುದಿಲ್ಲ. ಇದು ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ. ಸಂಸ್ಕರಿಸಿದ ಹಿಟ್ಟಿನಿಂದ ತಯಾರಾಗುವ ರಸ್ಕ್ ನಲ್ಲಿ  ನಾರಿನ ಅಂಶ ಕೂಡ ಇರುವುದಿಲ್ಲ. ಬಹಳ ಕಾಲ ರಸ್ಕ್ ಅನ್ನು ಶೇಖರಣೆ ಮಾಡುವ ಸಲುವಾಗಿ ಇದರ ತಯಾರಿಕೆಯಲ್ಲಿ ಕೆಲವು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇಂತಹ ರಾಸಾಯನಿಕಗಳು ಮನುಷ್ಯನ ಆರೋಗ್ಯದ ಸ್ಥಿತಿ ಹದಗೆಡುವಂತೆ ಮಾಡುತ್ತದೆ.
 

Latest Videos
Follow Us:
Download App:
  • android
  • ios