Asianet Suvarna News Asianet Suvarna News

ಶ್ರೀಮಂತರೂ ಈ ಆಹಾರಗಳನ್ನ ತಿನ್ನೋಕೆ ಹಿಂದೆ ಮುಂದೆ ನೋಡ್ತಾರೆ!

ವಿಶ್ವದ ಕೆಲವು ದುಬಾರಿ ತಿನಿಸುಗಳ ಬಗ್ಗೆ ಕೇಳಿರಬಹುದು. ಅವುಗಳನ್ನು ಈ ದುಬಾರಿ ಆಹಾರ ಪದಾರ್ಥಗಳಿಂದಲೇ ತಯಾರಿಸಲಾಗುತ್ತದೆ. ಈ ಆಹಾರಗಳನ್ನು ಸೇವಿಸಲು ಶ್ರೀಮಂತರೂ ಒಂದು ಕ್ಷಣ ಹಿಂದೇಟು ಹಾಕಬಹುದು! 
 

These are most expensive food items rich people thinks before eat it
Author
First Published Dec 14, 2023, 5:25 PM IST

ಶ್ರೀಮಂತ ಜನ ದುಬಾರಿ ಹೋಟೆಲುಗಳಿಗೆ ಹೋಗುತ್ತಾರೆ, ಬಯಸಿದ್ದನ್ನು ತಿಂದು, ಕುಡಿದು ತೃಪ್ತಿ ಪಡುತ್ತಾರೆ. ಆಹಾರಕ್ಕಾಗಿ ವೆಚ್ಚ ಮಾಡುವ ದುಡ್ಡಿನ ಬಗ್ಗೆ ವಿಚಾರ ಮಾಡುವ ಅಗತ್ಯ ಅವರಿಗೆ ಇರುವುದಿಲ್ಲ. ಆದರೆ, ಬಹಳಷ್ಟು ಮಧ್ಯಮ ವರ್ಗದ ಜನರಿಗೆ ಹಾಗಲ್ಲ. ಹೋಟೆಲುಗಳಿಗೆ ಹೋಗಿ, ಬೇಕಾಗಿದ್ದನ್ನು ಸೇವಿಸಲೂ ಯೋಚಿಸಬೇಕಾದ ಪರಿಸ್ಥಿತಿ ಇರುತ್ತದೆ. ಇನ್ನು, ಬಡವರು ಕೆಲವು ತಿನಿಸುಗಳನ್ನು ತಮ್ಮ ಕನಸಿನಲ್ಲೂ ಯೋಚಿಸಲಾರರು. ಏಕೆಂದರೆ, ನಮ್ಮ ಜಗತ್ತಿನಲ್ಲಿ ಅಷ್ಟು ಆಹಾರದ ವೈವಿಧ್ಯಗಳಿವೆ. ಜತೆಗೆ, ಹಣಕ್ಕೆ ತಕ್ಕಂತೆ ಅವುಗಳನ್ನು ಬಯಸುವುದು, ಪಡೆಯುವುದು ಸಾಧ್ಯವಿದೆ. ಆದರೆ, ಜಗತ್ತಿನಲ್ಲಿ ಕೆಲವು ಆಹಾರಗಳಿವೆ, ಅವುಗಳನ್ನು ಸೇವಿಸಲು ಶ್ರೀಮಂತರು ಸಹ ಯೋಚನೆ ಮಾಡಬೇಕಾಗುತ್ತದೆ. ಅವು ಅಷ್ಟು ದುಬಾರಿ. ಮೊದಲೆಲ್ಲ ಆಹಾರ ಜೀವಿಸುವುದಕ್ಕೆ ಅಗತ್ಯವಾದ ಮೂಲ ವಸ್ತುವಷ್ಟೇ ಆಗಿತ್ತು. ಈಗ ಹಾಗಲ್ಲ, ಆಹಾರ ಐಷಾರಾಮಿಯೂ ಆಗಬಲ್ಲದು. ವಿಶ್ವದಲ್ಲಿ ಕಂಡುಬರುವ ಕೆಲವು ಆಹಾರ ಪದಾರ್ಥಗಳು ಅತಿ ದುಬಾರಿ ಎನ್ನುವ ಹಣೆಪಟ್ಟಿ ಹೊತ್ತಿವೆ. 

•    ವೈಟ್ ಟ್ರಫಲ್ (White Truffle)
ಜಗತ್ತಿನ ನಿರ್ದಿಷ್ಟ ಭಾಗದಲ್ಲಿ ಮಾತ್ರ ದೊರೆಯುವ ಫಂಗಿ (Fungi) ಇದು. ಇಟಲಿಯ ಕೆಲವು ಪ್ರದೇಶದಲ್ಲಷ್ಟೇ ದೊರೆಯುತ್ತದೆ. ಇದರ ದರ ಕೇಳಿದರೆ ಶ್ರೀಮಂತರೂ (Rich) ಯೋಚಿಸುತ್ತಾರೆ. ಪೌಂಡ್ ತೂಕಕ್ಕೆ ಬರೋಬ್ಬರಿ 3 ಸಾವಿರ ಡಾಲರ್ ವೆಚ್ಚ ಮಾಡಬೇಕಾಗುತ್ತದೆ. ಜಗತ್ತಿನಲ್ಲೇ ಅತಿ ದುಬಾರಿ (Expensive) ಫಂಗಿ ಎನ್ನುವ ಹೆಗ್ಗಳಿಕೆಯೂ ಇದಕ್ಕಿದೆ. ನೆಲದಡಿ ಬೆಳೆಯುವ ಫಂಗಸ್ ಮೇಲೆ ಇದು ಬೆಳೆಯುತ್ತದೆ. ಕೆಲವೊಮ್ಮೆ ಇದನ್ನು ಅಣಬೆ ಎಂದು ತಪ್ಪಾಗಿ ಗುರುತಿಸಲಾಗುತ್ತದೆ. ಇದು ಆಹಾರಕ್ಕೆ (Food) ವಿಶಿಷ್ಟ ಪರಿಮಳ ನೀಡುತ್ತದೆ. ಪರಿಮಳಕ್ಕಾಗಿಯೇ ಇದನ್ನು ಬಳಸಲಾಗುತ್ತದೆ. ಇದು ಅತ್ಯಂತ ಅಪರೂಪವಾಗಿದ್ದು, ನಿರ್ದಿಷ್ಟ ಋತುಮಾನದಲ್ಲಿ ಮಾತ್ರ ಬೆಳೆಯುತ್ತದೆ.  

ಟೀ ಕುಡೀರಿ ತಪ್ಪಲ್ಲ, ಆದ್ರೆ ಅದರೆ ಜೊತೆ ತಿನ್ನೋ ಕೆಲವು ಫುಡ್ಸ್ ಆರೋಗ್ಯಕ್ಕೆ ಒಳ್ಳೇದಲ್ಲ!

•    ಕೋಪಿ ಲುವಾಕ್ ಕಾಫಿ (Coffee)
ಸಿವೆಟ್ (Civet) ಕಾಫಿ ಎಂದರೆ ಎಲ್ಲರಿಗೂ ಅರ್ಥವಾಗುತ್ತದೆ. ಇದು ವಿಶ್ವದ ಅತಿ ದುಬಾರಿ ಕಾಫಿ ಎನ್ನುವ ಹೆಗ್ಗಳಿಕೆ ಹೊಂದಿದೆ. ಗಲ್ಫ್ ಮತ್ತು ಯುರೋಪ್ ನಲ್ಲಿ ಜನಪ್ರಿಯವಾಗಿದೆ. ಸಿವೆಟ್ ಬೆಕ್ಕಿನ ಕರುಳಿನಲ್ಲಿ ಸಾಗಿ ಪಕ್ವವಾದ ಕಾಫಿ ಬೀಜಗಳಿಂದ ಇದನ್ನು ತಯಾರಿಸುತ್ತದೆ. ಇದರ ತವರು ಭಾರತ ಹಾಗೂ ನಮ್ಮದೇ ರಾಜ್ಯದ ಕೊಡಗು (Coorg) ಎಂದರೆ ಹೆಮ್ಮೆಯಾಗುತ್ತದೆ. ಕೆಲವೆಡೆ, ಒಂದು ಕಪ್ ಕಾಫಿಗೆ 8 ಸಾವಿರ ರೂಪಾಯಿ ಬೆಲೆಯಿದೆ! ಒಂದು ಕೆಜಿ ಬೀಜಕ್ಕೆ ಸರಾಸರಿ 25 ಸಾವಿರ ರೂಪಾಯಿ ದರವಿದೆ!

•    ಕೇಸರಿ (Saffron)
ಕೇಸರಿ ದಳಗಳು ಎಲ್ಲರಿಗೂ ಚಿರಪರಿಚಿತ. ಇದನ್ನು ರೆಡ್ ಗೋಲ್ಡ್ (Red Gold) ಎಂದೇ ಕರೆಯಲಾಗುತ್ತದೆ. ವಿಶ್ವದ ಅತಿ ದುಬಾರಿ ಮಸಾಲೆ ಎನ್ನುವ ಹೆಗ್ಗಳಿಕೆ ಇದಕ್ಕಿದೆ. ಕೇಸರಿ ಬೆಳೆಯ ಸಂಸ್ಕರಣೆ ಮಾಡುವುದು ಕಷ್ಟಕರ ಕಾರ್ಯ. ಕಾಶ್ಮೀರದಂತಹ ಕೆಲವು ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಬೆಳೆಯಬಹುದು. ವಿದೇಶಗಳಲ್ಲಿ ಕೇಸರಿಯ ಬೆಲೆ ಗ್ರಾಮ್ ಗೆ 2 ಸಾವಿರ ರೂ.ವರೆಗೂ ಇದೆ. 

•    ಯುಬಾರಿ ಕಿಂಗ್ ಮೆಲನ್ (Yubari King Melon)
ನಿಖರ ಸಿಹಿ (Sweetness) ಮತ್ತು ಸ್ವಾದಕ್ಕೆ ಹೆಸರಾಗಿರುವ ಯುಬಾರಿ ಕಿಂಗ್ ಮೆಲನ್ ಹಣ್ಣು ವಿಶ್ವದ ದುಬಾರಿ ಹಣ್ಣುಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಜಪಾನ್ ನಲ್ಲಿ ಇದನ್ನು ಬೆಳೆಯಲಾಗುತ್ತದೆ. 

ಗೆಸ್ಟ್ ಬರೋವಾಗಲೇ ಊಟ ತಂದು ಕೊಳ್ತಾರೆ ಈ ದೇಶದಲ್ಲಿ! ಅತಿಥಿಗಳಿಗೆ ಊಟ ಹಾಕೋ ಪದ್ಧತಿಯೇ ಇಲ್ಲ ಇಲ್ಲಿ

•    ಮಾತ್ಸುಟಕೆ ಮಶ್ರೂಮ್ (Matsutake Mashroom)
ಜಪಾನ್ ಅಡುಗೆ ಮನೆಯಿಂದ ಗುರುತಿಸಲ್ಪಟ್ಟ ಈ ಮಶ್ರೂಮ್ ವಿಶ್ವದಲ್ಲೇ ಅತಿ ದುಬಾರಿ ಅಣಬೆ ಎನ್ನುವ ಹೆಗ್ಗಳಿಕೆ ಹೊಂದಿದೆ. ಕೇವಲ ಒಂದು ಪೌಂಡ್ ಗೆ 1 ಸಾವಿರ ಡಾಲರ್ ಬೆಲೆಯಿದೆ. ಅರ್ಧ ಕೆಜಿಗೆ 82 ಸಾವಿರ ರೂಪಾಯಿ ದರ!

•    ಆಲ್ಮಾಸ್ ಕೇವಿಯರ್ (Almas Caviar)
ಇದೊಂದು ಮೀನೋಗರ. ಇರಾನಿಯನ್ ಬೆಲುಗಾ (Beluga) ಎನ್ನುವ ಮೀನಿನಿಂದ ಹೊರತೆಗೆದ ಅಂಶದಿಂದ ಈ ಮೀನೋಗರವನ್ನು ತಯಾರಿಸಲಾಗುತ್ತದೆ. ಇದರ ಬೆಲೆ ಒಂದು ಕೆಜಿಗೆ 29 ಲಕ್ಷ ರೂಪಾಯಿ!

 

Latest Videos
Follow Us:
Download App:
  • android
  • ios