ಹೊಟೇಲ್ ಬಿಲ್ ಕಟ್ಟಲಾಗದೇ ಹಾರ್ಟ್ ಆಟ್ಯಾಕ್ ನಾಟಕವಾಡಿದ ಭೂಪ!
ಹೊಟೇಲ್ ಗೆ ಹೋಗಿ ಹೊಟ್ಟೆತುಂಬ ತಿಂದ್ಮೇಲೆ ಬಿಲ್ ನೋಡಿದ್ರೆ ಅಳು ಬರೋದು ಸಾಮಾನ್ಯ. ಎಷ್ಟೇ ಕಷ್ಟವಾದ್ರೂ ತಿಂದ್ಮೇಲೆ ಬಿಲ್ ಪಾವತಿ ಮಾಡ್ಬೇಬೇಕು ಅಂತಾನಾವು ಬಿಲ್ ಪಾವತಿ ಮಾಡಿ ಬರ್ತೇವೆ. ಆದ್ರೆ ಈತ ಬಿಲ್ ತಪ್ಪಿಸಿಕೊಳ್ಳಲು ಭರ್ಜರಿ ನಾಟಕವಾಡಿದ್ದಾನೆ.
ಖಾತೆಯಲ್ಲಿ ಹಣವಿಲ್ಲ ಎಂದಾಗ ನಾವು ರೆಸ್ಟೋರೆಂಟ್, ಹೊಟೇಲ್ ಕಡೆ ಮುಖ ಹಾಕೋದಿಲ್ಲ. ಪರ್ಸ್ ನಲ್ಲಿ ಅಲ್ಪಸ್ವಲ್ಪ ಹಣವಿದೆ ಎಂದಾಗ ಹೊಟೇಲ್ ಗೆ ಹೋಗಿ ಮೊದಲು ಮೆನ್ಯು ನೋಡಿ, ನಮ್ಮ ಬಜೆಟ್ ಗೆ ಹೊಂದಿಕೆಯಾಗುವ ಫುಡ್ ಆರ್ಡರ್ ಮಾಡ್ತೇವೆ. ಕೆಲವರು ಹೊಟೇಲ್ ಬಿಲ್ ಪಾವತಿಸಲು ಕಷ್ಟಪಡೋದನ್ನು ನೀವು ನೋಡಿರಬಹುದು. ಇದಕ್ಕೆ ಅನೇಕ ಬಾರಿ ಕಿತ್ತಾಟಗಳಾಗ್ತಿರುತ್ತವೆ. ಸಿನಿಮಾಗಳಲ್ಲಿ ಈ ಬಿಲ್ ಪಾವತಿ ಮಾಡದೆ ತಪ್ಪಿಸಿಕೊಂಡು ಬರೋರನ್ನು ನೀವು ನೋಡಿರ್ತೀರಿ. ವಾಶ್ ರೂಮಿಗೆ ಹೋದಂತೆ ಇಲ್ಲವೆ ಅವರು ಕೊಡ್ತಾರೆ, ಇವರು ಕೊಡ್ತಾರೆ ಅಂತಾ ಬೇರೆಯವರನ್ನು ತೋರಿಸಿ ಅಲ್ಲಿಂದ ತಪ್ಪಿಸಿಕೊಂಡು ಬರುವ ಕಲಾವಿದರನ್ನು ನೋಡಿ ನಾವು ನಗ್ತಿರುತ್ತೇವೆ. ಆದ್ರೆ ಸ್ಪ್ಯಾನಿಷ್ ವ್ಯಕ್ತಿಯೊಬ್ಬ ರಿಯಲ್ ಆಗಿ ಅನೇಕ ಹೊಟೇಲ್ ಮಾಲೀಕರಿಗೆ ಪಂಗನಾಮ ಹಾಕಿದ್ದಾನೆ.
ಒಂದಲ್ಲ ಎರಡಲ್ಲ ಬರೋಬ್ಬರಿ 20 ರೆಸ್ಟೋರೆಂಟ್ (Restaurant) ಗೆ ಪಂಗನಾಮ ಹಾಕಿರುವ ಸ್ಪ್ಯಾನಿಷ್ (Spanish) ವ್ಯಕ್ತಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಪ್ರತಿ ಬಾರಿ ಹೊಟೇಲ್ ಗೆ ಹೋಗಿ, ಕಂಠಪೂರ್ತಿ ತಿಂದು ಬರ್ತಿದ್ದ ವ್ಯಕ್ತಿ ಬಿಲ್ (Bill) ಮಾತ್ರ ಪಾವತಿ ಮಾಡ್ತಿರಲಿಲ್ಲ. ಆತನ ಟೆಕ್ನಿಕ್ ಬಹಳ ಅನನ್ಯವಾಗಿದೆ. ಆದ್ರೆ ಕೊನೆಗೂ ಆತನ ನಾಟಕ ಹೊಟೇಲ್ ಮಾಲೀಕರಿಗೆ ಗೊತ್ತಾಗಿದೆ. ಲಿಥುವೇನಿಯಾದ ಈ ಅಪರಿಚಿತ ವ್ಯಕ್ತಿ ವಯಸ್ಸು ಸುಮಾರು 50 ವರ್ಷ ಎಂದು ಮಾಧ್ಯಮಗಳು ವರದಿ ಮಾಡಿವೆ. ವ್ಯಕ್ತಿ ಹೃದಯಾಘಾತ ಎಂದು ನಟಿಸುವ ಮೂಲಕ ಕನಿಷ್ಠ 20 ಹೊಟೇಲ್ ಗೆ ಟೋಪಿ ಹಾಕಿದ್ದಾನೆ. ಸ್ಪೇನ್‌ನ ಕೋಸ್ಟಾ ಬ್ಲಾಂಕಾ ಪ್ರದೇಶದಲ್ಲಿರುವ ಹೊಟೇಲ್ ಗಳೇ ಈತನ ಟಾರ್ಗೆಟ್ ಆಗಿತ್ತು. ಎಲ್ಲೆಂದರಲ್ಲಿ ಹೋಗಿ ಮೊದಲು ತಿಂಡಿ-ತಿನಿಸುಗಳನ್ನು ಆರ್ಡರ್ ಮಾಡಿ ತಿಂದು ತೇಗುತ್ತಿದ್ದ ವ್ಯಕ್ತಿ, ಬಿಲ್ ಪಾವತಿಸುವ ಸಮಯ ಬಂದ ಕೂಡಲೇ ಆಟ ಶುರು ಮಾಡ್ತಿದ್ದ. ಹೃದಯಾಘಾತವಾದಂತೆ ಎದೆಯನ್ನು ಹಿಡಿದುಕೊಂಡು ಇದ್ದಕ್ಕಿದ್ದಂತೆ ಮೂರ್ಛೆ ಹೋದಂತೆ ನಟಿಸುತ್ತಿದ್ದ. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗ್ತಿತ್ತು. ಇದ್ರಿಂದ ಬಿಲ್ ಪಾವತಿಯನ್ನು ಈತ ತಪ್ಪಿಸಿಕೊಳ್ತಿದ್ದ.
ಹೊಟೇಲ್ ಮಾಲಿಕರಿಗೆ ಈತನ ಬಣ್ಣ ಬಯಲಾಗುವವರೆಗೆ ಈತನ ನಾಟಕ ನಡೆದಿತ್ತು. ಒಂದು ಹೊಟೇಲ್ ಮಾಲಿಕರಿಗೆ ಈತ ನಾಟಕವಾಡ್ತಿದ್ದಾನೆ ಎಂಬ ಅನುಮಾನ ಬಂದಿತ್ತು. ಹಾಗಾಗಿ ಆತನ ಫೋಟೋವನ್ನು ಎಲ್ಲ ರೆಸ್ಟೋರೆಂಟ್ ಮಾಲಿಕರಿಗೆ ನೀಡಿದ್ದಲ್ಲದೆ, ಎಚ್ಚರಿಕೆಯಿಂದ ಇರುವಂತೆ ಹೇಳಿದ್ದ.
ಕಚೇರಿಗೂ ಹೋಗ್ಬೇಕು.. ನವರಾತ್ರಿ ವ್ರತ ಮಾಡ್ಬೇಕು ಎನ್ನುವ ಮಹಿಳೆಯರಿಗೆ ಟಿಪ್ಸ್
ಹಿಂದಿನ ತಿಂಗಳು ವ್ಯಕ್ತಿ ಅಲಿಕಾಂಟೆಯ ಎಲ್ ಬ್ಯೂನ್ ಕಮರ್ ಹೊಟೇಲ್ ಗೆ ಬಂದಿದ್ದಾನೆ. ಅಲ್ಲಿ ಸಮುದ್ರಾಹಾರ ಸೇವಿಸಿದ್ದಲ್ಲದೆ ವಿಸ್ಕಿ ಕುಡಿದಿದ್ದಾನೆ. ಸಿಬ್ಬಂದಿ ಈತನಿಗೆ ಬಿಲ್ ನೀಡಿದ್ದಾರೆ. ವ್ಯಕ್ತಿ 34.85 ಯುರೋವನ್ನು ಹೊಟೇಲ್ ಗೆ ನೀಡ್ಬೇಕಾಗಿತ್ತು. ಆದ್ರೆ ಬಿಲ್ ನೀಡದೆ ಎದ್ದು ಹೊರಟಿದ್ದಾನೆ. ಆಗ ಸಿಬ್ಬಂದಿ ಈತನನ್ನು ಪ್ರಶ್ನಿಸಿದ್ದಾರೆ. ಇಲ್ಲ ಹೊಟೇಲ್ ರೂಮಿನಲ್ಲಿ ಹಣವಿದೆ. ಅಲ್ಲಿಂದ ತರ್ತೇನೆ ಎಂದು ಹೇಳಿದ್ದಾನೆ. ಆದ್ರೆ ಇದನ್ನು ಅವರು ನಿರಾಕರಿಸಿದ್ದಾರೆ. ಸಿಬ್ಬಂದಿ ಮಾತನಾಡ್ತಿರುವಾಗಲೇ ಈತ ಕುರ್ಚಿ ಮೇಲೆ ಕುಸಿದು ಬಿದ್ದಿದ್ದಾನೆ. ಹೃದಯಾಘಾತದ ನಾಟಕವಾಡಿದ್ದಾನೆ. ಈ ವೇಳೆ ಹೊಟೇಲ್ ಸಿಬ್ಬಂದಿ ಪೊಲೀಸ್ ಕರೆಸಿದ್ದಾರೆ. ಪೊಲೀಸ್ ಬದಲು ಆಂಬ್ಯುಲೆನ್ಸ್ ಕರೆಸುವಂತೆ ಈತ ಹೇಳಿದ್ದಾನೆ. ಆಸ್ಪತ್ರೆಗೆ ಕರೆದೊಯ್ಯುವ ಬದಲು ಪೊಲೀಸರು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಡೆನಿಮ್ ಚಡ್ಡಿ ಧರಿಸಿ ಹೆಲ್ಮೆಟ್ ಇಲ್ದೆ ಬೈಕ್ ಓಡಿಸ್ತಿರೋ ಜೋಮಾಟೊ ಹುಡುಗಿ ಟ್ರೋಲ್
2022 ರಿಂದ ಈತನನ್ನು ಅಲಿಕಾಂಟೆಯಲ್ಲಿ ಜನರು ನೋಡ್ತಿದ್ದಾರೆ. ಒಂದೆರಡು ಬಾರಿ ಸಿಕ್ಕಿಬಿದ್ದಿದ್ದ ವ್ಯಕ್ತಿ ಒಂದು ದಿನ ಪೊಲೀಸ್ ಠಾಣೆಯಲ್ಲಿದ್ದು ವಾಪಸ್ ಬರ್ತಿದ್ದ. ಆದ್ರೆ ಈ ಬಾರಿ ಎಲ್ಲ ಹೊಟೇಲ್ ಮಾಲಿಕರು ಸೇರಿ ಪ್ರಕರಣ ದಾಖಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಹಾಗಾಗಿ ಒಂದೆರಡು ವರ್ಷ ಈತನಿಗೆ ಜೈಲು ಗ್ಯಾರಂಟಿ ಆಗಲಿದೆ.