Asianet Suvarna News Asianet Suvarna News

ಟೀಗೆ 55 ರೂ. ಬಿಲ್ ಹಾಕಿದ್ದಕ್ಕೆ ಅಯೋಧ್ಯೆಯ ಶಬರಿ ರಸೋಯ್‌ಗೆ ನೋಟಿಸ್; ಹೋಟೆಲ್ ಪರ ವಹಿಸಿದ್ರು ನೆಟ್ಟಿಗರು!

ಶಬರಿ ರಸೋಯ್‌‌ನ ಟೀ ಬಿಲ್ ಸೋಷ್ಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ಯಾವ ಆಧಾರದ ಮೇಲೆ ಟೀ ಮತ್ತು ಟೋಸ್ಟ್‌ಗೆ ಇಷ್ಟೊಂದು ಹಣ ನಿಗದಿಪಡಿಸಿದ್ದೀರಿ ಎಂಬುದನ್ನು ವಿವರಿಸಿ ಎಂದು ಎಡಿಎ ಕೇಳಿದೆ.

Shabari Rasoi in Ayodhya gets notice after Rs 252 bill for tea toast goes viral skr
Author
First Published Jan 29, 2024, 11:52 AM IST

ಅಯೋಧ್ಯೆಯ ಅರುಂಧತಿ ಭವನದ ಶಬರಿ ರಸೋಯ್ ಹೋಟೆಲ್‌ನ ಟೀ ಬಿಲ್‌  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ (ADA) ರೆಸ್ಟೋರೆಂಟ್ ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡಿದೆ.
ಬಿಲ್‌ನ ಪ್ರಕಾರ, ಎರಡು ಚಹಾ ಮತ್ತು ಎರಡು ಟೋಸ್ಟ್‌, ತೆರಿಗೆಗಳು ಸೇರಿದಂತೆ 252 ವೆಚ್ಚವಾಗಿದೆ. ಚಹಾಕ್ಕೆ 55 ರೂ, ಹಾಗೂ ಟೋಸ್ಟ್‌‍ಗೆ 65 ರೂ. ನಿಗದಿಪಡಿಸಲಾಗಿದೆ. ಈ ಬಿಲ್ ಸೋಷ್ಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ಯಾವ ಆಧಾರದ ಮೇಲೆ ಟೀ ಮತ್ತು ಟೋಸ್ಟ್‌ಗೆ ಇಷ್ಟೊಂದು ಹಣ ನಿಗದಿಪಡಿಸಿದ್ದೀರಿ ಎಂಬುದನ್ನು ವಿವರಿಸಿ ಎಂದು ಎಡಿಎ ಕೇಳಿತ್ತು. ಮೂರು ದಿನದಲ್ಲಿ ತಮಗೆ ಉತ್ತರ ಬೇಕು. ಇಲ್ಲವಾದಲ್ಲಿ ಪ್ರಾಧಿಕಾರವು ನಿಮ್ಮೊಂದಿಗಿನ ಒಪ್ಪಂದವನ್ನು ರದ್ದುಪಡಿಸುತ್ತದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.

ಈಕೆ ಭಾರತದ ಅತ್ಯಂತ ಕಿರಿಯ ಮಹಿಳಾ ಐಎಎಸ್ ಅಧಿಕಾರಿ; 22ಕ್ಕೇ ಯುಪಿಎಸ್ಸಿ ಕ್ರ್ಯಾಕ್ ಮಾಡಿದ ಸ್ಮಿತಾ

ಆದರೆ, ಯಾರು ಮೊದಲು ಈ ಬಿಲ್ ನೋಡಿ ವಿರೋಧಿಸಿದ್ದರೋ ಈಗ ಇದೇ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹೋಟೆಲ್ ಪರ ಮಾತಾಡುತ್ತಿದ್ದಾರೆ. ಸ್ಟಾರ್ ಬಕ್ಸ್, 5 ಸ್ಟಾರ್ ಹೋಟೆಲ್‌ಗಳಲ್ಲಿ ಇದಕ್ಕಿಂತಾ ಹೆಚ್ಚಿನ ಹಣವನ್ನು ಕಾಫಿಯೊಂದಕ್ಕೆ ಮಾತಿಲ್ಲದೆ ಜನರು ಕೊಡುತ್ತಾರೆ. ಇದನ್ನೇಕೆ ಇಷ್ಟು ದೊಡ್ಡದು ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಕೇಳುತ್ತಿದ್ದಾರೆ.

ನಗರದ ಬೀದಿ ಬದಿಯ ರೆಸ್ಟೋರೆಂಟ್‌ಗಳ ಬಿಲ್‌ಗೆ ಹೋಲಿಸಿದರೆ ಇದೇನು ಅಂತಾ ದೊಡ್ಡ ಮೊತ್ತವಲ್ಲ ಎಂದು ಅವರು ಹೇಳುತ್ತಿದ್ದಾರೆ.

ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಲಾದ ಅರುಂಧತಿ ಭವನ ಪಶ್ಚಿಮದ ಸೌಲಭ್ಯಗಳನ್ನು M/s ಕವಚ್ ಫೆಸಿಲಿಟಿ ಮ್ಯಾನೇಜ್‌ಮೆಂಟ್ ನೋಡಿಕೊಳ್ಳುತ್ತಿದೆ. ಪ್ರಾಧಿಕಾರದ ಉಪಾಧ್ಯಕ್ಷ ವಿಶಾಲ್ ಸಿಂಗ್ ಅವರು M/s ಕವಚ್ ಅವರಿಗೆ ಪತ್ರ ಬರೆದಿದ್ದಾರೆ. ಅಯೋಧ್ಯೆಗೆ ಬರುವ ಭಕ್ತರ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು ಗುತ್ತಿಗೆ ಪದ್ಧತಿಯಡಿ ವಸತಿ ನಿಲಯ, ವಾಹನ ನಿಲುಗಡೆ, ಆಹಾರಕ್ಕೆ ಸೂಕ್ತ ದರವನ್ನು ನೀವೇ ನಿರ್ಧರಿಸುತ್ತೀರಿ ಎಂದು ಬರೆದಿರುವ ಪತ್ರದಲ್ಲಿ ಶಬರಿ ರಸೋಯಿಯ ಬಿಲ್ ವೈರಲ್ ಆಗಿದೆ. ಒಂದು ಚಹಾದ ದರ ರೂ. 55. ಇದನ್ನು ರೂ.ನಲ್ಲಿ ಇರಿಸಲಾಗಿದೆ. ಅದು ಮಾರುಕಟ್ಟೆ ದರಕ್ಕಿಂತ ಹೆಚ್ಚು. ಈ ವೈರಲ್ ಸಂದೇಶದಿಂದ ಪ್ರಾಧಿಕಾರದ ಇಮೇಜ್ ಹಾಳಾಗುತ್ತಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಆಹಾರ ಮತ್ತು ಇತರ ಸೇವೆಗಳಿಗೆ ಸಮಂಜಸವಾದ ದರಗಳನ್ನು ನಿರ್ಧರಿಸಲು ನಿರ್ದೇಶಿಸಲಾಗಿದೆ. 

ಇದರೊಂದಿಗೆ ಭಕ್ತಾದಿಗಳಿಂದ ಊಟಕ್ಕೆ ಹೆಚ್ಚಿನ ದರ ವಸೂಲಿ ಮಾಡಿ ಪ್ರಾಧಿಕಾರದ ಘನತೆಗೆ ಮಸಿ ಬಳಿಯುವ ನಿಮ್ಮ ಒಪ್ಪಂದವನ್ನು ಏಕೆ ರದ್ದುಗೊಳಿಸಬಾರದು ಎಂಬುದಕ್ಕೆ ಮೂರು ಕೆಲಸದ ದಿನಗಳಲ್ಲಿ ಸ್ಪಷ್ಟನೆ ನೀಡಿ ಎಂದಿದೆ.

ಮಗುಗಾಗಿ ಹಂಬಲಿಸುತ್ತಿದ್ದೀರಾ? ಫಲವತ್ತತೆ ಹೆಚ್ಚಿಸೋ ಈ ಆಹಾರ ಹೆಚ್ಚು ಸೇವಿಸಿ

ನಮ್ಮಲ್ಲಿ ದೊಡ್ಡ ಹೋಟೆಲ್‌ಗಳಂತಹ ಸೌಲಭ್ಯಗಳಿವೆ!
ಶಬರಿ ರಸೋಯಿ ಪ್ರಾಜೆಕ್ಟ್ ಹೆಡ್, ಸತ್ಯೇಂದ್ರ ಮಿಶ್ರಾ ಅವರು ತಮ್ಮ ಪಾಲುದಾರರು ಅಹಮದಾಬಾದ್‌ನ M/s ಕವಚ್‌ನ ಸಂಸ್ಥೆಯಾಗಿದೆ. ಬಿಲ್ ಅನ್ನು ಯಾರು ವೈರಲ್ ಮಾಡಿದ್ದಾರೆಂದು ನನಗೆ ತಿಳಿದಿದೆ. ಇದೊಂದು ಷಡ್ಯಂತ್ರ. ಜನರು ಉಚಿತವಾಗಿ ಚಹಾ ಕುಡಿಯಲು ಬಯಸುತ್ತಾರೆ. ಇಲ್ಲಿನ ಸೌಲಭ್ಯಗಳು ದೊಡ್ಡ ಹೋಟೆಲ್‌ಗಳಂತಿವೆ. ಪ್ರಾಧಿಕಾರದ ನೋಟಿಸ್‌ಗೆ ಸಂಬಂಧಿಸಿದಂತೆ ನಮ್ಮ ಕಡೆಯಿಂದ ಉತ್ತರ ನೀಡಲಾಗಿದೆ ಎಂದಿದ್ದಾರೆ. 

Follow Us:
Download App:
  • android
  • ios