ಮಟನ್ ಸಾಂಬಾರ್ ಮಾಡುವಾಗ ಮಾವಿನ ಎಲೆಗಳನ್ನು ಸೇರಿಸುವುದರಿಂದ ಮಾಂಸವು ಬೇಗನೆ ಮೃದುವಾಗಿ ಬೇಯುತ್ತದೆ. ಇದರಲ್ಲಿರುವ ನೈಸರ್ಗಿಕ ಎಂಜೈಮ್‌ಗಳು ಮಾಂಸದ ಹಸಿ ವಾಸನೆಯನ್ನು ಹೋಗಲಾಡಿಸಿ, ಅಡುಗೆಗೆ ವಿಶೇಷ ರುಚಿ ಮತ್ತು ಸುವಾಸನೆಯನ್ನು ನೀಡುತ್ತವೆ.

ನಾನ್‌ವೇಜ್ ಪ್ರಿಯರು ಚಿಕನ್, ಮಟನ್, ಮೀನು ತಿನ್ನಲು ಇಷ್ಟ ಪಡುತ್ತಾರೆ. ಕೆಲವು ವಾರಕ್ಕೆ ಒಮ್ಮೆಯಾದರೂ ಮಾಂಸಹಾರ ಸೇವಿಸುತ್ತಾರೆ. ಭಾನುವಾರ ಆದರೆ ಬಹುತೇಕ ಮನೆಗಳಲ್ಲಿ ಮಾಂಸಹಾರ ಮಾಡುತ್ತಾರೆ. ಆದರೆ ಮಟನ್ ಸಂಬಾರ್ ಮಾಡುವುದು ಕೆಲವು ಕಷ್ಟಪಡುತ್ತಾರೆ. ಚಿಕನ್‌ಗೆ ಹೋಲಿಕೆ ಮಾಡಿದರೆ ಮಟನ್ ಅಡುಗೆ ಮಾಡುವುದು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಕುಕ್ಕರ್ನಲ್ಲಿ ಮಟನ್ ಅಡುಗೆ ಮಾಡಿದ್ದರೆ, ಈ ಸಮಯ ಮತ್ತಷ್ಟು ಹೆಚ್ಚಾಗುತ್ತದೆ.

ಆದರೆ, ದಕ್ಷಿಣ ಭಾರತದ ಕೆಲವು ಗ್ರಾಮೀಣ ಭಾಗಗಳಲ್ಲಿ ಮಟನ್ ಸಂಬಾರ್ ಮಾಡುವ ಸಂದರ್ಭದಲ್ಲಿ ಅದರಲ್ಲಿ ಮಾವಿನ ಎಲೆಗಳನ್ನು ಸಂಪ್ರದಾಯವಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ. ಆದರೆ ಹಲವರಿಗೆ ಮಾವಿನ ಎಲೆ ಸಂಬಾರ್ ಬೇಯುವ ಸಂದರ್ಭದಲ್ಲಿ ಯಾಕೆ ಹಾಕುತ್ತಾರೆ ಅಂತ ಗೊತ್ತಿಲ್ಲ. ಇದಕ್ಕೆ ಒಂದು ವೈಜ್ಞಾನಿಕ ಕಾರಣ ಇದ್ದು, ಇನ್‌ಸ್ಟಾದಲ್ಲಿ ವಿನ್ನೂಸ್ ಕಿಚನ್‌ನಲ್ಲಿ ಇದಕ್ಕೆ ಕಾರಣವೇನು ಎಂದು ತಿಳಿಸಿದ್ದಾರೆ.

ಮಟನ್ ಬೇಗ ಬೆಂದು, ಸಾಪ್ಟ್ ಆಗಲು ಸಹಾಯ

ಮಟನ್ ಬೇಯಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಮಾವಿನ ಎಲೆಗಳಲ್ಲಿ ಹಸಿ ಪಪ್ಪಾಯದಲ್ಲಿರುವಂತೆ ಸಹಜ ಎಂಜೈಮ್‌ಗಳು ಇರುತ್ತವೆ. ಈ ಎಂಜೈಮ್‌ಗಳು ಮಾಂಸದಲ್ಲಿರುವ ಗಟ್ಟಿ ಪ್ರೋಟೀನ್ ಫೈಬರ್‌ಗಳನ್ನು ಹೊಡೆದು ಹಾಕುತ್ತದೆ. ಇದರಿಂದ ಮಾಂಸ ಕಡಿಮೆ ಸಮಯದಲ್ಲಿಯೇ ಬೇಗ ಮೃದುವಾಗುತ್ತದೆ.

ಅಜ್ಜಿ ಹೇಳಿರುವ ಈ ಟಿಪ್‌ಅನ್ನು, ಕೆಲವರು ಚಿಕನ್ ಬೇಯಿಸುವ ಸಂದರ್ಭದಲ್ಲಿಯೂ ಫಾಲೋ ಮಾಡ್ತಾರೆ. ಮಾವಿನ ಎಲೆಗಳು ಸಿಗದಿದ್ದರೆ ಹಸಿ ಪಪ್ಪಾಯ ಪೀಸ್‌ಗಳನ್ನು ಅಥವಾ ಮೋಸರನ್ನು ಅಥವಾ ಹಸಿ ಕೊಬ್ಬರಿ ಚಿಪ್ಪನ್ನು ಕೂಡ ಆಡುಗೆಯಲ್ಲಿ ಸಂಪ್ರದಾಯವಾಗಿ ಬೆಳಕೆ ಮಾಡುತ್ತಿದ್ದರು.

ಮಾಂಸದ ಹಸಿ ವಾಸನೆ ದೂರ, ತಾಜಾ ಸುವಾಸನೆ

ಮಟನ್‌ನಲ್ಲಿ ಹಸಿ ವಾಸನೆ ಬರುತ್ತಿರುವ ಸಂದರ್ಭದಲ್ಲಿ ಮಾವಿನ ಎಲೆಗಳು ಹಾಕಿದರೆ ಮಾಂಸ ಸುವಾಸನೆ ಬರುವಂತೆ ಮಾಡುತ್ತದೆ. ಮಟನ್ ಬೇಯುವ ಸಂದರ್ಭದಲ್ಲಿ ಮಾವಿನ ಎಲೆಗಳಲ್ಲಿ ಸುಗಂಧ ಎಣ್ಣೆ ಹೊರಗೆ ಬಂದು, ಅಡುಗೆಗೆ ರುಚಿಯನ್ನು ನೀಡುತ್ತದೆ. ಇದರೊಂದಿಗೆ ಮಟನ್ ಸಂಬಾರ್‌ಗೆ ವಿಶೇಷ ಫ್ಲೇವರ್ ಸಿಗುತ್ತದೆ.

ಅಡುಗೆಯಲ್ಲಿ ಮಾವಿನ ಎಲೆಗಳನ್ನು ಹೇಗೆ ಬಳಕೆ ಮಾಡಬೇಕು?

  • ಎಳೆಯ ಎಲೆಗಳನ್ನು ಮಟನ್ ಸಂಬಾರ್ ನಲ್ಲಿ ಮಾಡುವ ಸಂದರ್ಭದಲ್ಲಿ ಬಳಸುವುದು ಉತ್ತಮ
  • ಧೂಳು, ಕೀಟಗಳು, ಅಂಟು ಇಲ್ಲದ ಎಲೆಗಳನ್ನು ಬಳಕೆ ಮಾಡ್ಬೇಕು
  • ಮಟನ್ ಮ್ಯಾರಿನೇಟ್ ಮಾಡುವ ಸಂದರ್ಭದಲ್ಲಿ ಎಲೆಯ ಪೇಸ್ಟ್ ಅಥವಾ ರಸವನ್ನು ಸೇರಿಸಿಬಹುದು
  • ಅಥವಾ ಮಟನ್ ಬೇಯುವ ಸಂದರ್ಭದಲ್ಲಿ ನೇರವಾಗಿ ಎಲೆಗಳನ್ನು ಸಂಬಾರ್‌ಗೆ ಹಾಕಬಹುದು
  • ಸಂಬಾರ್ ಬೇಯಿಸಿದ ಬಳಿಕ ನೀವು ಎಲೆಗಳನ್ನು ತೆಗೆದು ಸರ್ವ್ ಮಾಡಬಹುದು

ಮಟನ್ ಸಂಬಾರ್ ಮಾಡುವ ಸಂದರ್ಭದಲ್ಲಿ ಒಂದು ಅಂಶವನ್ನು ಯಾವಾಗಲು ನೆನಪಿಡಬೇಕು. ಅದೆನಪ್ಪಾ ಎಂದರೆ, ಕಡಿಮೆ ಉರಿಯಲ್ಲಿ ಮಟನ್ ಬೇಯಿಸಬೇಕು. ಹೆಚ್ಚಿನ ಉರಿಯಲ್ಲಿ ಮಾಂಸ ಬೇಯಿಸಿದರೆ ಮಾಂಸ ಗಟ್ಟಿಯಾಗುತ್ತದೆ. ಮಟನ್ ಸಂಬಾರ್ ಮಾಡಲು ಪ್ರೆಶರ್ ಕುಕ್ಕರ್ ಬಳಕೆ ಮಾಡುವುದು ಉತ್ತಮ ವಿಧಾನ. ಮಾಂಸ ವಯಸ್ಸು, ಗಾತ್ರ ಆಧಾರದ ಅನ್ವಯ 4-6 ವಿಶಲ್ ಹಾಕಿಸಿದರೆ ಮಾಂಸ ಮೃದುವಾಗಿ ರುಚಿಕರ ಸಂಬಾರ್ ಶುರುವಾಗುತ್ತದೆ.