ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಮಾತ್ರ ಇದ್ಯಲ್ಲ ಅಂದ್ರೆ ನಿಮ್ಮ ಯೋಚನೆ ತಪ್ಪು. ಹೀಟ್‌ವೇವ್‌ ಎಫೆಕ್ಟ್‌ನಿಂದಾಗಿ ಉದ್ಯಾನನಗರಿ ಬೆಂಗಳೂರಿನಲ್ಲಿ ಬಿಯರ್‌ಗೂ ಬರ ಶುರುವಾಗಿದೆ. 

ಬೆಂಗಳೂರು (ಮೇ.11): ಉದ್ಯಾನನಗರಿ ಬೆಂಗಳೂರು ಕುರಿತಾಗಿ ಬಹಳ ವಿಶೇಷತೆ ಇದೆ. ಇಲ್ಲಿ ನೀರಿಗೆ ಬೇಕಾದ್ರೂ ಬರ ಆಗ್ಬಹುದು. ಬಿಯರ್‌ಗೆ ಮಾತ್ರ ಬರ ಬರೋಕೆ ಸಾಧ್ಯಾನೇ ಇಲ್ಲ ಅನ್ನೋದು. ಆದರೆ, ಈ ಮಾತೀಗ ಸುಳ್ಳಾಗುತ್ತಿದೆ. ರಾಜ್ಯದ ಇತರ ನಗರಗಳ ಬ್ರೂವರೀಸ್‌ಗೆ ಹೋಲಿಸಿದರೆ, ಬೆಂಗಳೂರಿನ ಬ್ರೂವರೀಸ್‌ಗಳು ವಿಶಿಷ್ಟವಾಗಿದೆ. ಏಕೆಂದರೆ, ಅವುಗಳು ರಾಜಧಾನಿಜಯ ಜನರಿಗೆ ಪ್ರಮುಖ ಹ್ಯಾಂಗ್‌ಔಟ್‌ ತಾಣಗಳು. ಬೆಂಗಳೂರನ್ನು ಬಿಯರ್ ರಾಜಧಾನಿಯನ್ನಾಗಿ ಮಾಡಿದ ಅನೇಕ ಜನಪ್ರಿಯ ಬ್ರೂವರಿಗಳು ಈಗ ಗ್ರಾಹಕರಿಗೆ ಸೇವೆ ಸಲ್ಲಿಸಲು ಸಾಧ್ಯವಾಗದೆ ಪರಿತಪಿಸುತ್ತಿದೆ. ನೀರಿನ ಸಮಸ್ಯೆಯಂತೆಯೇ ಬೆಂಗಳೂರು ಕೂಡ ಬಿಯರ್ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ವರದಿಯಾಗಿದೆ.

ಬೆಂಗಳೂರಿನಲ್ಲಿ ಬಿಯರ್‌ ಬರ ಶುರುವಾಗಿದ್ದು ಹೇಗೆ?: ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಹೀಟ್‌ವೇವ್‌ ಕಾರಣದಿಂದಾಗಿ ನಗರದ ಅನೇಕ ಸ್ಥಳಗಳು ಬಿಯರ್ ಪ್ರಿಯರಿಂದ ತುಂಬಿ ತುಳುಕುತ್ತಿವೆ. ಅನೇಕ ಗ್ರಾಹಕರು ತಮ್ಮ ಎಂದಿನ ಹಾರ್ಡ್ ಡ್ರಿಂಕ್ಸ್‌ನಿಂದ ಕೋಲ್ಟ್‌ ಆಗಿರುವ ಪಾನೀಯದ ಕಡೆಗೆ ಬದಲಾಗುತ್ತಿರುವುದರಿಂದ ಬಿಯರ್ ಅನ್ನು ಆದ್ಯತೆಯ ಮದ್ಯವಾಗಿ ಪರಿಗಣಿಸಿದ್ದಾರೆ. ಇದು ಪೂರೈಕೆಯ ಕುಸಿತಕ್ಕೆ ದೊಡ್ಡ ಪ್ರಮಾಣದಲ್ಲಿ ಕಾರಣವಾಗಿದೆ. ಬ್ರೂವರೀಸ್‌ಗಳು ಸಾಮಾನ್ಯ ಸಮಯಕ್ಕಿಂತ ಹೆಚ್ಚು ಬಿಯರ್ ಉತ್ಪಾದಿಸುವ ಅನಿವಾರ್ಯತೆಗೆ ಸಿಲುಕಿವೆ.
ಒಂದೇ ಬ್ರೂವರಿಯಲ್ಲಿ, ಈ ವರ್ಷದ ಮೇ ತಿಂಗಳವರೆಗೆ ಸುಮಾರು 30,000 ಲೀಟರ್ ಬಿಯರ್ ಮಾರಾಟವಾಗಿದ್ದರೆ, ಕಳೆದ ವರ್ಷ, ಇಡೀ ಬೇಸಿಗೆಯಲ್ಲಿ ಕೇವಲ 9,000 ಲೀಟರ್ ಬಿಯರ್ ಮಾತ್ರ ಮಾರಾಟವಾಗಿತ್ತು. ಭಾರೀ ಬಿಯರ್‌ ಮಾರಾಟದ ಕಾರಣದಿಂದ ಪಬ್‌ ಮಾಲೀಕರಿಗೂ ಸಂಕಷ್ಟ ಎದುರಾಗಿದ್ದು, ಅವರು ಬಿಯರ್‌ ಔಟ್‌ ಆಫ್‌ ಸ್ಟಾಕ್‌ ಎಂದು ಬೋರ್ಡ್‌ ಹಾಕಲು ಆರಂಭಿಸಿದ್ದಾರೆ.

ಈ ನಡುವೆ, ಬೆಂಗಳೂರಿನಲ್ಲಿ ಕೆಲವು ವರ್ಷಗಳ ಹಿಂದೆ ಪ್ರಾರಂಭವಾದ ಹಣ್ಣಿನ ರುಚಿಯ ಬಿಯರ್‌ಗಳ ಟ್ರೆಂಡ್ ನಿಧಾನವಾಗಿ ಇಳಿಯುತ್ತಿದೆ. “ಬಿಯರ್‌ನ ಹೆಚ್ಚಿನ ಉತ್ಪಾದನೆಯಿಂದಾಗಿ, ನಾವು ಬಿಯರ್ ತಯಾರಿಸಲು ಪ್ರೀಮಿಯಂ ಹಣ್ಣುಗಳನ್ನು ಬಳಸುತ್ತಿಲ್ಲ. ಬಿಯರ್ ತಯಾರಿಸಲು ಕಡಿಮೆ ಗುಣಮಟ್ಟದ ಹಣ್ಣುಗಳನ್ನು ಬಳಸಿದರೆ ಮಾರಾಟವು ಯಾವುದೇ ಅಭಿವೃದ್ಧಿಯನ್ನು ಕಾಣುವುದಿಲ್ಲ. ಜನರು ಅಪಾಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ, ಮತ್ತು ಈಗ ಅವರು ಹಣ್ಣಿನ ಬಿಯರ್‌ಗಳ ಬದಲಿಗೆ ಸಾಮಾನ್ಯ ಬಿಯರ್‌ಗಳಿಗೆ ಹೋಗುತ್ತಿದ್ದಾರೆ, ”ಎಂದು ಜನಪ್ರಿಯ ಬ್ರೂವರಿಯ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

ಐಪಿಎಲ್‌ ಗೆ ಕಿಕ್‌ ಹೆಚ್ಚಿಸಲು, 120 ರಿಂದ 4 ಸಾವಿರ ಬೆಲೆಯ ಟಾಪ್‌ 10 ಬೆಸ್ಟ್ ವಿಸ್ಕಿ ಮತ್ತು ಬಿಯರ್

ಸಾಮಾನ್ಯವಾಗಿ "ಹ್ಯಾಪಿ ಅವರ್ಸ್" ಅಥವಾ "ಬೈ1 ಗೆಟ್ 1" ಆಫರ್‌ಗಳೊಂದಿಗೆ ಗ್ರಾಹಕರನ್ನು ಆಕರ್ಷಣೆ ಮಾಡುತ್ತಿದ್ದ ಅನೇಕ ಪಬ್‌ಗಳು ಈಗ ಬೇಡಿಕೆಯನ್ನು ಪೂರೈಸಲು ಈ ಆಫರ್‌ಗಳನ್ನು ರದ್ದು ಮಾಡುತ್ತಿದೆ. ಐಪಿಎಲ್‌ ಟೈಮ್‌ನಲ್ಲಿ ನಗರದಲ್ಲಿನ ದೊಡ್ಡ ಬ್ರೂವರೀಸ್‌ಗೆ ಹೆಚ್ಚಿನ ಜನಸಂದಣಿಯನ್ನು ಸೆಳೆಯುತ್ತದೆ, ಅಲ್ಲಿ ಗ್ರಾಹಕರಿಗೆ ಪಂದ್ಯಗಳನ್ನು ಪ್ರದರ್ಶಿಸಲಾಗುತ್ತದೆ.

ಬಿಸಿಲ ಬೇಗೆ: ಕರ್ನಾಟಕದಲ್ಲಿ 11 ದಿನದಲ್ಲಿ 17 ಲಕ್ಷ ಲೀ. ಬಿಯರ್‌ ಮಾರಾಟ, ದಾಖಲೆ