ಒಣ ಎಲೆಗಳಿಂದ ಮಾಡಿದ ಬಾಕ್ಸ್‌ನಲ್ಲಿ ಬಿಸಿಬಿಸಿ ಪಿಝಾ..! ಇದು ಇಕೋ ಪ್ರೆಂಡ್ಲೀ
ಫಿಝಾ ಸಮಾನ್ಯವಾಗಿ ದಪ್ಪದ ಪೇಪರ್ ಕವರ್‌ನಲ್ಲಿ ಪಾರ್ಸೆಲ್ ಮಾಡ್ತಾರೆ. ಆದರೆ ಇಲ್ಲೊಂದು ಕಡೆ ಒಣ ಎಲೆಗಳಿಂದಲೇ ಪಿಝಾ ಬಾಕ್ಸ್ ತಯಾರಿಸಲಾಗ್ತಿದೆ.
ಫಿಝಾ ಸಮಾನ್ಯವಾಗಿ ದಪ್ಪದ ಪೇಪರ್ ಕವರ್‌ನಲ್ಲಿ ಪಾರ್ಸೆಲ್ ಮಾಡ್ತಾರೆ. ಆದರೆ ಇಲ್ಲೊಂದು ಕಡೆ ಒಣ ಎಲೆಗಳಿಂದಲೇ ಪಿಝಾ ಬಾಕ್ಸ್ ತಯಾರಿಸಲಾಗ್ತಿದೆ. ಕೊರೋನಾದಿಂದಾಗಿ ಬಹಳಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ. ಉದ್ಯೋಗವಿಲ್ಲದೆ ಹೊಟ್ಟೆ ತುಂಬಿಸುವುದೂ ಕಷ್ಟವಾಗಿದೆ. ಹೀಗಿರುವಾಗ ಫಿಲ್ಲಿಪ್ಪೈನ್ಸ್‌ನ ಪಿಝೇರಿಯಾ ಚಿಕ್ಕದೊಂದು ನಿರ್ಧಾರದ ಮೂಲಕ ಬಡವರಿಗೆ ಆದಾಯ ನೀಡುವ ಮಹತ್ವದ ಹೆಜ್ಜೆ ಇಟ್ಟಿದೆ.
ಸ್ಥಳೀಯ ಜನರಿಗೆ ನೆರವಾಗುವ ಉದ್ದೇಶದಿಂದ ಫಿಲಿಪ್ಪೈನ್ಸ್‌ನ ಲಗುನಾದಲ್ಲಿರುವ ಬ್ರಿಕ್ ಓವನ್ ರೆಸ್ಟೋರೆಂಟ್‌ನಲ್ಲಿ ಫಿಝಾ ಪಾರ್ಸೆಲ್ ಕೊಡಗುವುದು ಒಣ ಎಲೆಗಳಿಂದ ಮಾಡಿದ ಬಾಕ್ಸ್‌ನಲ್ಲಿ. ಬುಟ್ಟಿ ಬಾಕ್ಸ್ ನೇಯುವವರನ್ನು ಬೆಂಬಲಿಸುವುಕ್ಕಾಗಿ ಈ ರೀತಿ ಮಾಡಲಾಗಿದೆ.
ಈ ಕಾರಣಕ್ಕಾಗಿ ಈರುಳ್ಳಿಗಳು ಆರೋಗ್ಯಕ್ಕೆ ಒಳ್ಳೆಯದಲ್ಲ..!
ಫಿಲಿಪ್ಪೈನ್ಸ್‌ನ ಫಿಜೇರಿಯಾ ಮಾಲೀಕರಾದ ಡೆನ್ನಿಸ್ ಹಾಗೂ ಧೋನ್ ಜೋನ್ ಸುಸ್ಥಿತರತೆಯನ್ನು ಕಾಪಾಡಿಕೊಂಡೇ ಉದ್ಯಮ ನಡೆಸುವ ಇರಾದೆ ಹೊಂದಿದ್ದರು. ಹಾಗಾಗಿ ಒಣಗಿದ ಪಂಡನ್ ಎಲೆಯಿಂದ ಮಾಡುವ ಟಂಪಿಪಿ ಎಂಬ ಪಿಝಾ ಬಾಕ್ಸ್‌ನ್ನು ಡೆಲಿವರಿಗಾಗಿ ಬಳಸಲಾರಂಭಿಸಿದರು.
ಈ ಹಿಂದೆ ಪಿಝಾ ಪಾರ್ಸೆಲ್ ಮಾಡಲು ಮಾನಿಲದಿಂದ ಕಾರ್ಡ್ ಬೋರ್ಡ್ ಫಿಝಾ ಬಾಕ್ಸ್ ತರಿಸುತ್ತಿದ್ದೆವು. ಇದು ಬಹಳ ದೂರವಾಗುತ್ತಿತ್ತು. ಹಾಗಾಗಿ ಹತ್ತಿರದಲ್ಲಿಯೇ ಇದಕ್ಕೆ ಪರಿಹಾರ ಹುಡುಕಬೇಕಿತ್ತು. ಹತ್ತಿರದಲ್ಲಿರುವುದು ಬುಟ್ಟಿ ನೇಯುವ ಉದ್ಯಮ ಮಾತ್ರ. ಕಾವಿಂಟಿ ಎಂಬ ಇಂಟಸ್ಟ್ರಿ ಹತ್ತಿರದಲ್ಲಿತ್ತು. ಹಾಗಾಗಿ ನಾವು ಅಲ್ಲಿಯ ಕಾರ್ಮಿಕರನ್ನು ಪಿಝಾ ಬಾಕ್ಸ್ ಮಾಡಿಕೊಡಲು ಕೇಳಿದೆವು ಎಂದಿದ್ದಾರೆ ಮಾಲೀಕರು.
ಶ್ರಾವಣಕ್ಕಾಗಿ ವಿಶೇಷ ಅಡುಗೆ..! ಇಲ್ಲಿವೆ ಸುಲಭ ರೆಸಿಪಿಗಳು
ಕೊರೋನಾ ಸಂಕಷ್ಟದ ಸಮಯದಲ್ಲಿ ನಮ್ಮ ಸ್ತಳೀಯ ಸಮುದಾಯಕ್ಕೆ ಆದಾಯ ಪಡೆಯಲು ನಾವೊಂದು ಮಾರ್ಗ ಮಾಡಿಕೊಟ್ಟಿದ್ದೇವೆ ಎಂದಿದ್ದಾರೆ. ಇದನ್ನು ಮಾದರಿಯಾಗಿ ತೆಗೆದುಕೊಂಡ ಇನ್ನೊಂದು ಫಿಲ್ಲಿಪ್ಪೈನ್ ರೆಸ್ಟೋರೆಂಟ್ ಟಕ್ವಾ ಸಿಯಾರ್ಗೋ ಇಕೋ ಫ್ರೆಂಡ್ಲೀ ಪಿಝಾ ಬಾಕ್ಸ್ ಚಿತ್ರಗಳನ್ನು ಪೋಸ್ಟ್ ಮಾಡಿದೆ.