ಲಾಕ್‌ಡೌನ್ ಟೈಮಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಬಿಸ್ಕತ್ ಇದು..
ನಿಮಗೆ ಆಶ್ಚರ್ಯ ಆಗಬಹುದು. ಆದರೆ ಇದು ನಿಜ. ಲಾಕ್‌ಡೌನ್ ಟೈಮಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಐಟಂ ಅಂದರೆ ಪಾರ್ಲೆ ಜಿ ಬಿಸ್ಕತ್!
ಪಾರ್ಲೆ ಜಿ ಬಿಸ್ಕತ್ ಅಂದ್ರೆ ಎಲ್ಲರೂ ಒಮ್ಮೆ ಕಣ್ಣರಳಿಸುತ್ತಾರೆ. ಯಾವುದೇ ಟೀ ಪಾರ್ಟಿ ಇರಲಿ, ಟೀ ಜೊತೆಗೆ ಎಷ್ಟೇ ಹೊಸದಾದ, ದುಬಾರಿ ಬಿಸ್ಕತ್ ಇಟ್ಟಿರಲಿ, ಎಷ್ಟೇ ದೊಡ್ಡ ಅಧಿಕಾರಿಯಾಗಿರಲಿ, ಆತ ಆರಿಸಿಕೊಳ್ಳುವುದು ಪಾರ್ಲೆ ಜಿ ಬಿಸ್ಕತ್ತನ್ನು. ಟೀ ಜೊತೆಗೆ ನೆಂಚಿಕೊಳ್ಳುವುದಕ್ಕೆ ಪಾರ್ಲೆ ಜಿಯೇ ಬೆಸ್ಟ್. ಹೆಚ್ಚಿನವರು ಟೀಯಲ್ಲಿ ಒಮ್ಮೆ ಆ ಬಿಸ್ಕತ್ತನ್ನು ಮುಳುಗಿಸಿಕೊಂಡು ತೆಗೆದು ತಿನ್ನುತ್ತಾರೆ. ಟೀಯಲ್ಲಿ ಅದು ಪೂರ್ತಿ ಕರಗಿ ಬೀಳದಂತೆ ಅದ್ದಿ ತೆಗೆಯುವುದು ಒಂದು ಕಲೆ. ಅದು ಎಲ್ಲರಿಗೂ ಬರುವುದಿಲ್ಲ.
ಪಾರ್ಲೆ ಜಿ ಬಿಸ್ಕತ್ ಬಗ್ಗೆ ಈಗ ಬರೆಯಲು ಕಾರಣವಿದೆ. ಲಾಕ್‌ಡೌನ್ ಟೈಮಲ್ಲಿ ಅತ್ಯಂತ ಹೆಚ್ಚು ಮಾರಾಟವಾಧ ಪ್ರಾಡಕ್ಟ್ ಬೇರಿನ್ಯಾವುದೂ ಅಲ್ಲ, ಇದೇ ಪಾರ್ಲೆ ಜಿ ಬಿಸ್ಕತ್. ಮೂರು ರೂಪಾಯಿಯ ಪುಟ್ಟ ಪ್ಯಾಕೆಟ್‌ನಿಂದ ಹಿಡಿದು, ಐವತ್ತು ರೂಪಾಯಿಯ ದೊಡ್ಡ ಪ್ಯಾಕೆಟ್‌ಗಳವರೆಗೂ ಇವು ಸಾಕಷ್ಟು ಮಾರಾಟವಾಗಿವೆ. ಕಳೆದ 80 ವರ್ಷಗಳಲ್ಲೇ ಇಷ್ಟೊಂದು ಪಾರ್ಲೆ ಜಿ ಬಿಸ್ಕತ್ ಮಾರಾಟವಾಗಿಲ್ಲ ಅಂತ ಕಂಪನಿಯೇ ಹೇಳಿಕೊಂಡಿದೆ! ಅಂದ ಮೇಲೆ ಅದು ಎಷ್ಟು ಸೇಲ್ ಮಾಡಿರಬಹುದು ಎಂದು ನೀವು ಊಹಿಸಬಹುದು.
ಅದು ಸರಿ, ಪಾರ್ಲೆ ಜಿಯೇ ಇಷ್ಟೊಂದು ಮಾರಾಟವಾಗಲು ಕಾರಣವೇನು?
ಮುಖ್ಯವಾಗಿ, ಅದು ಅತ ಅಗ್ಗದ, ಅತ್ಯಂತ ಸರಳ ಆಹಾರ ಪದಾರ್ಥ. ಇದು ಮೂರು ರೂಪಾಯಿ ಬೆಲೆಯ ಪ್ಯಾಕೆಟ್‌ನಲ್ಲೂ ಸಿಗುತ್ತೆ, ನೂರು ರೂಪಾಯಿಯ ಪ್ಯಾಕೆಟ್‌ನಲ್ಲೂ ಸಿಗುತ್ತೆ. ದುಬಾರಿ ಅಲ್ಲವೇ ಅಲ್ಲ. ಹಳ್ಳಿ ಮೂಲೆಯ ಯಾವುದೇ ಪೆಟ್ಟಿಗೆ ಅಂಗಡಿಯಲ್ಲೂ ಸಿಗುತ್ತೆ, ಹಾಗೇ ನಗರದ ಮಾಲ್‌ಗಳಲ್ಲೂ ಸಿಗುತ್ತೆ. ಶ್ರೀಮಂತರ ಟೀ ಪಾರ್ಟಿಗಳಿಗೂ ಆಗುತ್ತೆ. ಬಡವರು ಕೂತು ಟೀ ಕುಡಿಯುತ್ತಾ ಇದ್ದರೆ ಬೇರೇನೂ ಇಲ್ಲವಾದರೂ ಪಾರ್ಲೆ ಜಿ ನೆಂಚಿಕೊಂಡರೆ ಸಾಕಾಗುತ್ತೆ. ಅದು ಆತನಿಗೆ ಅಂದಿನ ಬ್ರೇಕ್‌ಫಾಸ್ಟ್ ಕೂಡ ಆಗಿಬಿಡುತ್ತೆ. ಹಲವಾರು ದಶಕಗಳಿಂದ ಅದೇ ಗುಣಮಟ್ಟ. ಏನೂ ವ್ಯತ್ಯಾಸವಿಲ್ಲ.
ಲಾಕ್‌ಡೌನ್ ಟೈಮಲ್ಲಿ ಎಲ್ಲರಿಗೂ ಅತ್ಯಂತ ಸುಲಭವಾಗಿ ಸಿಕ್ಕಿದ ಆಹಾರ ಪದಾರ್ಥ ಅಂದರೆ ಪಾರ್ಲೆ ಜಿ. ಜೊತೆಗೆ ಮನೆಯಲ್ಲಿರುವ ಮಕ್ಕಳಿಗೆ ಸುಲಭವಾಗಿ ಕೊಡಬಹುದಾದ ಯಾವುದೇ ಅಪಾಯವಿಲ್ಲದ ಬಿಸ್ಕತ್ತೂ ಇದುವೇ. ಲಾಕ್ಡೌನ್ ಶುರುವಾದಾಗ ಎಲ್ಲರೂ ಒಂದು ಬಗೆಯ ಆತಂಕದಲ್ಲಿದ್ದರು. ಮನೆಯಲ್ಲಿ ಸಾಮಗ್ರಿಗಳನ್ನ ತಂದು ಶೇಖರಿಸಿ ಇಟ್ಟುಕೊಳ್ಳುವ ಗಡಿಬಿಡಿಯಲ್ಲಿದ್ದರು. ಅಂತ ಹೊತ್ತಿನಲ್ಲಿ, ಸುಲಭವಾಗಿ ಸ್ಟಾಕ್ ಮಾಡಿ ಇಡಬಹುದಾದ ಪದಾರ್ಥವಾಗಿ ಕಾಣಿಸಿಕೊಂಡದ್ದು ಪಾರ್ಲೆ ಜಿ. ಜೊತೆಗೆ ಆಸುಪಾಸಿನಲ್ಲಿ ಎಲ್ಲ ಕಡೆಯೂ ಕಾಣಸಿಗುತ್ತದಲ್ಲ. ಕೆಲವೆಡೆ ಅಂಗಡಿಗಳಲ್ಲಿ, ಜನ ಎಲ್ಲ ಸಾಮಗ್ರಿಗಳನ್ನೂ ಕೊಂಡೊಯ್ದು, ಕಡೆಗೆ ಉಳಿದದ್ದು ಎಂದರೆ ಪಾರ್ಲೆ ಜಿ ಬಿಸ್ಕತ್ತುಗಳೇ. ಹೀಗೆ ಮಾರಾಟವಾಗದೆ ಉಳಿದಿದ್ದ ಬಿಸ್ಕತ್ ಕೂಡ ಮಾರಾಟವಾದವು.
ಪರಿಸರಸ್ನೇಹಿ ಊಟಕ್ಕೆ 10 ಉಪಾಯಗಳು!
ಭಾರತದಲ್ಲಿ ಯಾವುದೇ ವ್ಯಕ್ತಿ ಒಂದು ಹತ್ತಿನ ಊಟವನ್ನು ಸಲೀಸಾಗಿ ಸ್ಕಿಪ್ ಮಾಡಬಲ್ಲ. ಆತನಿಗೆ ಒಂದು ಟೀ ಮತ್ತು ಐದು ರೂಪಾಯಿಯ ಒಂದು ಪ್ಯಾಕೆಟ್ ಪಾರ್ಲೆ ಜಿ ಸಿಕ್ಕಿದರೆ ಸಾಕೋ ಸಾಕು. ಆತ ಅಥವಾ ಆಎ ಅದರಿಂದಲೇ ಸಂತೃಪ್ತ. ಇದು ತಲೆಮಾರಗಳಿಂದಲೂ ನಡೆದುಕೊಂಡು ಬಂದಿದೆ. ನಮ್ಮ ಹಿಂದಿನವರೂ ಹಾಗೇ ಮಾಡಿದ್ದಾರೆ, ನಾವೂ ಹಾಗೇ ಮಾಡುತ್ತಿದ್ದೇವೆ.
ಕ್ಯಾಲ್ಸಿಯಂ ಮಾತ್ರೆ ತೆಗೆದುಕೊಂಡರೆ ಹಾರ್ಟ್ ಅಟ್ಯಾಕ್ ಸಾಧ್ಯತೆ ಹೆಚ್ಚು ..
ವಿಶೇಷ ಗೊತ್ತಾ? ಲಾಕ್‌ಡೌನ್ ಆರಂಭವಾಗಿ ಒಂದು ವಾರದಲ್ಲೇ ಕಂಪನಿಗೆ ಹೆಚ್ಚಿನ ಉತ್ಪಾದನೆಗೆ ಬೇಡಿಕೆಗಳು ಬರತೊಡಗಿದ್ದವು. ಯಾಕೆಂದರೆ ದೇಶದ ಉದ್ದಗಲಕ್ಕೆ ನಿರಾಶ್ರಿತರಿಗೆ, ವಲಸಿಗರಿಗೆ ಆಹಾರ ಹಂಚುತ್ತಿದ್ದವರು ದೊಡ್ಡ ಪ್ರಮಾಣದಲ್ಲಿ ಪಾರ್ಲೆ ಜಿ ಬಿಸ್ಕತ್ ಪ್ಯಾಕೆಟ್ಟನ್ನು ನೀಡುತ್ತಿದ್ದರು. ಇದರಿಂದಾಗಿಯೂ ಕಂಪನಿಗೆ ಬೇಡಿಕೆ ತುಂಬಾ ಹೆಚ್ಚಿತು. ದೇಶಾದ್ಯಂತ ಪಾರ್ಲೆಜಿಗೆ ೧೩೦ ಫ್ಯಾಕ್ಟರಿಗಳಿವೆ. ಇಡೀ ದೇಶದ ಬಿಸ್ಕತ್ ಉತ್ಪಾದನೆಯಲ್ಲಿ ಮೂರನೇ ಒದು ಭಾಗ ಪಾರ್ಲೆ ಜಿಯದ್ದೇ ಆಗಿದೆ.
#Feelfree: ತುಂಬಾ ಬೇಗ ಮುಗಿದೇ ಹೋಗಿ ಬಿಡುತ್ತೆ, ಏನು ಮಾಡೋದು?