Asianet Suvarna News Asianet Suvarna News

ಎಂಡಿಎಚ್‌, ಎವರೆಸ್ಟ್‌ ಮಸಾಲೆ ಪದಾರ್ಥ ಸುರಕ್ಷಿತ: ಕೇಂದ್ರದ ಕ್ಲೀನ್‌ಚಿಟ್‌

ಹಾಂಕಾಂಗ್‌, ನೇಪಾಳ ಮತ್ತು ಸಿಂಗಾಪುರ ನಿಷೇಧದ ನಡುವೆಯೇ ಮಸಾಲೆ ಪದಾರ್ಥಗಳಾದ ಎಂಡಿಎಚ್‌, ಎವರೆಸ್ಟ್‌ ಕಂಪನಿಯ ಆಹಾರದಲ್ಲಿ ಯಾವುದೇ ಹಾನಿಕಾರಕ ಅಂಶಗಳಿಲ್ಲ ಎಂದು ತಿಳಿಸಿದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಪ್ರಾಧಿಕಾರ  

MDH Everest Spice is Safe Says FSSAI grg
Author
First Published May 22, 2024, 10:30 AM IST

ನವದೆಹಲಿ(ಮೇ.22):  ಹಾಂಕಾಂಗ್‌, ನೇಪಾಳ ಮತ್ತು ಸಿಂಗಾಪುರ ನಿಷೇಧದ ನಡುವೆಯೇ ಮಸಾಲೆ ಪದಾರ್ಥಗಳಾದ ಎಂಡಿಎಚ್‌, ಎವರೆಸ್ಟ್‌ ಕಂಪನಿಯ ಆಹಾರದಲ್ಲಿ ಯಾವುದೇ ಹಾನಿಕಾರಕ ಅಂಶಗಳಿಲ್ಲ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ತಿಳಿಸಿದೆ.

ಈ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಎವರೆಸ್ಟ್‌ ಮತ್ತು ಎಂಡಿಎಚ್‌ ಕಂಪನಿಯ ಆಹಾರ ಪದಾರ್ಥಗಳ 34 ಸ್ಯಾಂಪಲ್‌ಗಳನ್ನು ದೇಶಾದ್ಯಂತ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಇದರ ಪೈಕಿ 28 ಸ್ಯಾಂಪಲ್‌ಗಳಲ್ಲಿ ಕ್ಯಾನ್ಸರ್‌ಕಾರಕ ಎಥೆಲೈನ್‌ ಆಕ್ಸೈಡ್‌ ಇರುವುದು ಪತ್ತೆಯಾಗಿಲ್ಲ. 

ಕ್ಯಾನ್ಸರ್‌ ಬರುವ ಅಂಶ ಪತ್ತೆ, ಎವರೆಸ್ಟ್, ಎಂಡಿಎಚ್‌ ಮಸಾಲೆಗೆ ನೇಪಾಳ ನಿಷೇಧ

ಹೊರದೇಶಗಳಲ್ಲಿ ನಿಷೇಧಿಸಲಾಗಿರುವ ಇತರೆ ಮಸಾಲೆ ಪದಾರ್ಥಗಳ 300 ಸ್ಯಾಂಪಲ್‌ಗಳನ್ನೂ ಪರೀಕ್ಷೆ ಮಾಡಲಾಗಿದೆ. ಅದರಲ್ಲೂ ಯಾವುದೇ ಮಾರಣಾಂತಿಕ ರಾಸಾಯನಿಕ ಅಂಶಗಳಿರುವುದು ಕಂಡುಬಂದಿಲ್ಲ ಎಂದು ದೃಢೀಕರಿಸಿದೆ.

Latest Videos
Follow Us:
Download App:
  • android
  • ios