ಕೃಷ್ಣನಿಗೆ ಇಷ್ಟವಾಗುವ ಈ ಖಾದ್ಯಗಳು ಜನ್ಮಾಷ್ಟಮಿಯಲ್ಲಿ ಇರಲಿ!
ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಜನರು ಕೃಷ್ಣನಿಗೆ ವಿವಿಧ ರೀತಿಯ ಹಣ್ಣು ಮತ್ತು ಭಕ್ಷ್ಯಗಳಿಟ್ಟು ಪೂಜಿಸುತ್ತಾರೆ. ಆದರೆ ಕೃಷ್ಣನಿಗೆ ಇಷ್ಟವಾದ ಖಾದ್ಯಗಳೇನು ಗೊತ್ತಾ? ಶ್ರೀಕೃಷ್ಣನು ಇಷ್ಟಪಡುವ ಅನೇಕ ತಿಂಡಿಗಳು ಮತ್ತು ಸಿಹಿತಿಂಡಿಗಳ ಬಗ್ಗೆ ಇಲ್ಲಿದೆ ಮಾಹಿತಿ.
ಕೃಷ್ಣ ಜನ್ಮಾಷ್ಟಮಿಯನ್ನು ಕೃಷ್ಣ ಪಕ್ಷ, ರೋಹಿಣಿ ನಕ್ಷತ್ರ, ಅಷ್ಟಮಿ ತಿಥಿಯಂದು ಆಚರಿಸಲಾಗುತ್ತದೆ. ಈ ವಿಶೇಷ ಸಂದರ್ಭದಲ್ಲಿ ವಿವಾಹಿತ ಮಹಿಳೆಯರು ಇಡೀ ದಿನ ಉಪವಾಸ ಮಾಡುತ್ತಾರೆ ಮತ್ತು ಮಧ್ಯರಾತ್ರಿ 12 ಗಂಟೆಯ ನಂತರ ಆಹಾರ ಸೇವಿಸುತ್ತಾರೆ. ಈ ಸಿಹಿ ಮತ್ತು ತಿಂಡಿ ಪಾಕವಿಧಾನಗಳನ್ನು ತಯಾರಿಸಿ ಶ್ರೀಕೃಷ್ಣನಿಗೆ ಜನ್ಮಾಷ್ಟಮಿಯಂದು ನೈವೇದ್ಯಕ್ಕಾಗಿ ಅರ್ಪಿಸಬಹುದು. ಕೃಷ್ಣನು ಇಷ್ಟಪಡುವ ನೆಚ್ಚಿನ ಪಾಕವಿಧಾನಗಳಲ್ಲಿ ಹಾಲು, ಮೊಸರು, ಕರಿದ ಪದಾರ್ಥಗಳು ಇತ್ಯಾದಿ. ಅಲ್ಲದೆ, ಹಬ್ಬದಲ್ಲಿ ಉಪವಾಸ ಇರುವುದೇ ಪ್ರಮುಖ ಆಚರಣೆಯಾಗಿರುವುದರಿಂದ ಜನರು ಅನ್ನವನ್ನು ಬಳಸಿ ಯಾವುದೇ ಭಕ್ಷ್ಯ ತಯಾರಿಸುವುದಿಲ್ಲ. ಆದ್ದರಿಂದ ಭಗವಾನ್ ಕೃಷ್ಣನ ಅಚ್ಚುಮೆಚ್ಚಿನ ಭಕ್ಷ್ಯಗಳಲ್ಲಿ ಅವಲಕ್ಕಿ ಒಂದಾಗಿದ್ದು, ಅನ್ನದ ಬದಲಿಗೆ, ಬೀಟ್ ರೈಸ್ ಅಥವಾ ಅವಲಕ್ಕಿಯನ್ನು ನಾನಾ ರೀತಿಯಲ್ಲಿ ತಯಾರಿಸುತ್ತಾರೆ. ಹಾಗಾದರೆ ಕೃಷ್ಣನಿಗೆ ಇಷ್ಟವಾಗುವ ಆಹಾರಗಳು ಇಲ್ಲಿವೆ ನೋಡಿ.
ಮುರುಕು
ಮುರುಕು ಅಥವಾ ಚಕ್ಕುಲಿ ಇದು ಕರಿದ ತಿಂಡಿ ರೆಸಿಪಿಯಾಗಿದೆ. ಇದನ್ನು ಕೃಷ್ಣ ಜನ್ಮಾಷ್ಟಮಿಗಾಗಿ ತಯಾರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಮುರುಕು ಕೃಷ್ಣನಿಗೆ ಅಗತ್ಯವಾಗಿ ಅರ್ಪಿಸಲಾಗುತ್ತದೆ. ಏಕೆಂದರೆ ಕರಿದ ತಿಂಡಿಗಳೆAದರೆ ಕೃಷ್ಣನಿಗೆ ಬಲು ಪ್ರೀತಿ. ಮುರುಕು ಎಂದರೆ ಕೇವಲ ಅಕ್ಕಿ ಹಿಟ್ಟಿನಿಂದ ತಯಾರಿಸಬೇಕೆಂದೇನಿಲ್ಲ. ಅದು ಚಿರೋಟಿ ರವೆ, ಅವಲಕ್ಕಿ, ಆಲೂ ಚಕ್ಕುಲಿಯಾದರೂ ಸರಿ.
ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಭಗವಂತನ ಆಶೀರ್ವಾದ ಹೀಗೆ ಪಡೆಯಿರಿ
ಬೆಸನ್ ಲಡ್ಡು
ಕಡಲೇ ಹಿಟ್ಟು, ತುಪ್ಪ, ಸಕ್ಕರೆಯಿಂದ ತಯಾರಾಗುವ ಈ ಸಿಹಿ ಲಡ್ಡು ಕೃಷ್ಣನಿಗೆ ಬಲು ಪ್ರೀತಿ. ಈ ಬೇಸನ್ ಲಡ್ಡು ತುಂಬಾ ಸುಲಭ, ರುಚಿಕರವಾಗಿರುತ್ತದೆ. ನೆನಪಿರಲಿ ಬೆಸಲ್ ಲಡ್ಡು ಮಾಡಲು ಕಡಲೇ ಹಿಟ್ಟು ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿಯಬೇಕು. ಇಲ್ಲವಾದಲ್ಲಿ ಲಡ್ಡು ಸೇವಿಸುವಾಗ ಬಾಯಿಗೆ ಹಿಟ್ಟು ಅಂಟುವುದಲ್ಲದೆ, ಕಹಿ ಅನುಭವ ನೀಡಬಹುದು. ಜೊತೆಗೆ ಇದಕ್ಕೆ ತುಪ್ಪ ಬಿದ್ದಷ್ಟು ರುಚಿ ಹೆಚ್ಚಾಗುತ್ತದೆ.
ಕೋಡುಬಳೆ
ಕೋಡುಬಳೆ ಒಂದು ವಿಶಿಷ್ಟವಾದ ದಕ್ಷಿಣ ಭಾರತದ ತಿಂಡಿ. ಜನ್ಮಾಷ್ಟಮಿಗೆ ಇದನ್ನು ತಯಾರಿಸಲಾಗುತ್ತದೆ. ಮೃದು, ಗರಿಗರಿಯಾಗಿ ಕೆಂಪಾಗಿ ಬಳೆಯಾಕಾರದಲ್ಲಿ ತಯಾರಿಸಲಾಗುತ್ತದೆ. ಮಸಾಲೆಗಳೊಂದಿಗೆ ಸ್ವಲ್ಪ ಖಾರ ಹೆಚ್ಚಿದ್ದರೆ ಕೋಡುಬಳೆ ಚೆನ್ನಾಗಿರುತ್ತದೆ. ಕೋಡುಬಳೆಯಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಎಂದರೆ ಸಾಟಿ ಕೊಡುವುದು. ಸಾಟಿ ಚೆನ್ನಾಗಿ ಇದ್ದರೆ ಕೋಡುಬಳೆ ಮೃದುವಾಗಿರುತ್ತದೆ.
ಘಿಯಾ ಹಲ್ವಾ
ಕೃಷ್ಣನ ನೆಚ್ಚಿನ ಭಕ್ಷ್ಯಗಳಲ್ಲಿ ಸೋರೆಕಾಯಿ ಹಲ್ವಾ ಸಹ ಒಂದು. ತುಪ್ಪ, ಸಕ್ಕರೆ, ಸೋರೆಕಾಯಿ, ಡ್ರೆöÊ ಫ್ರೂಟ್ಸ್ ಹಾಕಿ ತಯಾರಿಸುವ ಈ ಹಲ್ವಾ ನಾಲ್ಕೆöÊದು ದಿನ ಇಡಬಹುದು.
ಆಲೂ ಪೋಹಾ
ಯಾರಾದರೂ ಅವಲಕ್ಕಿ ನೀಡಿದಾಗ ಅದನ್ನು ನಿರಾಕರಿಸಬಾರದು ಎಂದು ನಂಬಲಾಗಿದೆ. ಕೃಷ್ಣನಿಗೆ ಅವಲಕ್ಕಿ ಇಷ್ಟವಾದ್ದರಿಂದ ಅದನ್ನು ಭಗವಂತನಿಗೆ ಅರ್ಪಿಸಿ ನಂತರ ಸೇವಿಸುವುದು ಒಳ್ಳೆಯದು.
ಒಗ್ಗರಣೆ ಅವಲಕ್ಕಿ
ಕೃಷ್ಣನಿಗೆ ಬಹಳ ಮುಖ್ಯವಾದ ಖಾದ್ಯ ಮತ್ತು ನೆಚ್ಚಿನ ಖಾದ್ಯ. ಮೀಡಿಯಂ ಅವಲಕ್ಕಿ ತೊಳೆದು ಅದು ಉದುರಾಗುವಂತೆ ನೆನೆಯಲು ಬಿಡಿ. ನಂತರ ಒಗ್ಗರಣೆಯೊಂದಿಗೆ ಅವಲಕ್ಕಿ ತಯಾರಿಸಿ.
ತೆಂಗಿನಕಾಯಿ ಬರ್ಫಿ
ತೆಂಗಿನಕಾಯಿ ಬರ್ಫಿ ಕೂಡ ಶ್ರೀಕೃಷ್ಣನ ಸರಳ ಮತ್ತು ನೆಚ್ಚಿನ ಭಕ್ಷ್ಯವಾಗಿದೆ. ಸಿಹಿ ಪಾಕವಿಧಾನಗಳಲ್ಲಿ, ತಯಾರಿಸಬಹುದಾದ ಸುಲಭವಾದ ಸ್ವೀಟ್ ಇದಾಗಿದೆ. ಸಕ್ಕರೆಯ ಮಾಧುರ್ಯ ಮತ್ತು ತುಪ್ಪ ಮತ್ತು ತೆಂಗಿನಕಾಯಿಯ ರುಚಿ ಅದ್ಭುತವಾಗಿರುತ್ತದೆ. ತೆಂಗಿನಕಾಯಿ ಬರ್ಫಿಯನ್ನು ನೈವೇದ್ಯವಾಗಿ ಬಡಿಸಿ ನಂತರ ಪ್ರಸಾದವಾಗಿ ಹಂಚಬಹುದು.
ಖೋಯಾ ಪೇಡಾ
ಜನ್ಮಾಷ್ಟಮಿಯು ಉತ್ತರ ಭಾರತದಲ್ಲಿ ಬಹಳ ಪ್ರಸಿದ್ಧವಾದ ಖೋಯಾ ಅಥವಾ ಮಾವಾ ಪೇಡಾ ಪಾಕವಿಧಾನವನ್ನು ತಯಾರಿಸಲಾಗುತ್ತದೆ. ಇದಕ್ಕೆ ಅನೇಕ ಡ್ರೆöÊ ಫ್ರೂಟ್ಸ್ಗಳನ್ನು ಸೇರಿಸುವುದರಿಂದ ಅತ್ಯಂತ ಶ್ರೀಮಂತ ಸಿಹಿ ಖಾದ್ಯವಾಗಿದೆ.
ಜನ್ಮಾಷ್ಟಮಿ 2022: ಉಪವಾಸ ಆಚರಿಸುವಾಗ ಈ ನಿಯಮ ಮರೀಬೇಡಿ..
ತಂಬಿಟ್ಟು
ತಂಬಿಟ್ಟು ದಕ್ಷಿಣ ಭಾರತದಲ್ಲಿ ಬಹಳ ಪ್ರಸಿದ್ಧವಾಗಿದೆ ಮತ್ತು ಜನ್ಮಾಷ್ಟಮಿಗೆ ತಯಾರಿಸಬೇಕಾದ ಭಕ್ಷ್ಯವಾಗಿದೆ. ತಂಬಿಟ್ಟು ತಯಾರಿಸಲು, ಅಕ್ಕಿ ಹಿಟ್ಟು ಅಥವಾ ಗೋಧಿ ಹಿಟ್ಟನ್ನು ಬೆಲ್ಲ ಮತ್ತು ತುಪ್ಪದೊಂದಿಗೆ ಸೇರಿಸಲಾಗುತ್ತದೆ.
ಸಾಬುದಾನ ಖೀರ್
ಸಾಬುದಾನ ಖೀರ್ ಅಥವಾ ಸಬ್ಬಕ್ಕಿ ಪಾಯಸ ಒಂದು ಸವಿಯಾದ ಸಿಹಿಯಾಗಿದ್ದು ಇದನ್ನು ಸಾಮಾನ್ಯವಾಗಿ ಯಾವುದೇ ಹಬ್ಬದಲ್ಲಿ ಉಪವಾಸ ಮಾಡುವಾಗ ತಯಾರಿಸಲಾಗುತ್ತದೆ. ಕೃಷ್ಣನಿಗೂ ಸಬ್ಬಕ್ಕಿ ಪಾಯಸ ಇಷ್ಟವಾದ್ದರಿಂದ ಈ ಜನ್ಮಾಷ್ಟಮಿಗೆ ಮಿಸ್ ಮಾಡಬೇಡಿ.