Jaggery Benefits: ರೋಗ ನಿರೋಧಕ ಶಕ್ತಿ ಹೆಚ್ಚಿಸೋ ಬೆಲ್ಲ
ದಿನವೂ ಸ್ವಲ್ಪವಾದರೂ ಬೆಲ್ಲ ಸೇವನೆ ಮಾಡುವುದು ಆರೋಗ್ಯಕ್ಕೆ ಅತ್ಯುತ್ತಮ. ಪ್ರತಿದಿನ ನಿಯಮಿತವಾಗಿ ಬೆಲ್ಲ ಬಳಕೆ ಮಾಡುತ್ತಿದ್ದರೆ ರಕ್ತ ಶುದ್ಧಿಯಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಳವಾಗಿ ಲವಲವಿಕೆಯಿಂದಿರಲು ಸಾಧ್ಯವಾಗುತ್ತದೆ.
ಪ್ರತಿದಿನ ಬೆಳಗ್ಗೆ (Morning) ಸ್ವಲ್ಪವಾದರೂ ಬೆಲ್ಲ (Jaggery) ತಿನ್ನಬೇಕು ಎನ್ನುವುದು ಮಲೆನಾಡಿನಲ್ಲಿ ಚಾಲ್ತಿಯಲ್ಲಿರುವ ಅಲಿಖಿತ ನಿಯಮ. ಮಕ್ಕಳಿಗಂತೂ ಕಡ್ಡಾಯವಾಗಿ ಬೆಲ್ಲ ನೀಡಲಾಗುತ್ತದೆ. ಜೋನಿಬೆಲ್ಲದೊಂದಿಗೆ ತುಪ್ಪ (Ghee) ಸೇರಿಸಿ ತಿನ್ನುವುದು ಮಜವೇ ಮಜ. ಅದರ ಮುಂದೆ ಬೇರ್ಯಾವ ಸಿಹಿಯೂ ಇಲ್ಲ. ಅಷ್ಟು ಖುಷಿ ಸಿಗುತ್ತದೆ. ಕೇವಲ ಖುಷಿ ಮಾತ್ರವಲ್ಲ. ಬೆಲ್ಲದಿಂದ ದೇಹಕ್ಕೆ ಸದೃಢತೆಯೂ ದೊರೆಯುತ್ತದೆ. ಸಕ್ಕರೆ (Sugar)ಯ ಸಿಹಿ ದೇಹಕ್ಕೆ ಒಳ್ಳೆಯದಲ್ಲ. ಬದಲಿಗೆ ಬೆಲ್ಲ ತಿನ್ನುವುದು ಅತಿ ಉತ್ತಮ.
ಬೇಸಿಗೆಯ ಮಧ್ಯಾಹ್ನದ ಸಮಯದಲ್ಲಿ ಬೆಲ್ಲ-ಮಜ್ಜಿಗೆಯ ಹೊಂದಾಣಿಕೆ ದೇಹಕ್ಕೆ ತಂಪು ನೀಡುತ್ತದೆ. ಬೆಲ್ಲದೊಂದಿಗೆ ಚೂರು ನೀರು ಬೆರೆಸಿ, ಲಿಂಬೆರಸ (Lime) ಸೇರಿಸಿ, ಪಾನಕ ಮಾಡಿ ಸೇವಿಸುವುದೂ ಇದೆ. ಇನ್ನು, ಸಾಂಬಾರಿಗೂ ಸ್ವಲ್ಪ ಬೆಲ್ಲ, ಪಲ್ಯಕ್ಕೂ ಬೆಲ್ಲ ಸೇರಿಸುವ ಅಭ್ಯಾಸವಂತೂ ಹಲವೆಡೆ ಇದೆ. ಇದೆಲ್ಲ ಸುಮ್ಮನೆ ಬಾಯಿರುಚಿಗಲ್ಲ. ಬೆಲ್ಲವನ್ನು ಯಾವುದಾದರೂ ಆಹಾರದೊಂದಿಗೆ ಸ್ವಲ್ಪವಾದರೂ ಸೇವನೆ ಮಾಡಬೇಕು ಎನ್ನುವ ಉದ್ದೇಶಕ್ಕೆ ಮಾತ್ರ.
ಇತ್ತೀಚೆಗಂತೂ ಬೆಲ್ಲ ಬಲು ಜನಪ್ರಿಯವಾಗಿದೆ. ಸಕ್ಕರೆ ತಿನ್ನದ ಮಧುಮೇಹಿ (Diabetes) ಗಳೂ ಚೂರು ಬೆಲ್ಲ ತಿನ್ನಲು ಹಿಂದೇಟು ಹಾಕುವುದಿಲ್ಲ.
ಲಿವರ್ (Liver) ಸ್ವಚ್ಛವಾಗುತ್ತದೆ
ನಾವು ದಿನವೂ ಏನೇನೋ ತಿನ್ನುತ್ತಿರುತ್ತೇವೆ. ಕಂಡಿದ್ದನ್ನೆಲ್ಲ ರುಚಿ(Taste) ನೋಲಿ ನಲಿಯುತ್ತೇವೆ. ಆದರೆ, ಎಲ್ಲವನ್ನೂ ದಕ್ಕಿಸಿಕೊಳ್ಳುವ ತಾಕತ್ತು ಲಿವರ್ ಗೆ ಇರಬೇಕಲ್ಲವೇ? ನಮ್ಮ ಲಿವರ್ ಅರ್ಥಾತ್ ಯಕೃತ್ ನಲ್ಲಿ ನಾವು ಸೇವಿಸುವ ಆಹಾರದಿಂದ ಅನೇಕ ವಿಷಕಾರಿ ಅಂಶಗಳು ಶೇಖರಣೆಯಾಗುತ್ತಿರುತ್ತವೆ. ಬೆಲ್ಲ ಸೇವನೆ ಮಾಡುವುದರಿಂದ ಈ ವಿಷಕಾರಿ ಅಂಶ ನಾಶವಾಗುತ್ತದೆ. ಬೆಲ್ಲವು ಡಿಟಾಕ್ಸ್ ನಂತೆ ಕೆಲಸ ಮಾಡುತ್ತದೆ.
ಜೀವನದ ಎಲ್ಲ ಕಷ್ಟ ದೂರ ಮಾಡುತ್ತೆ ಬೆಲ್ಲ
ಪಚನಶಕ್ತಿ (Digestion) ಹೆಚ್ಚುತ್ತದೆ
ಬೆಲ್ಲದಿಂದ ಪಚನಶಕ್ತಿ ಹೆಚ್ಚುತ್ತದೆ. ಜೀರ್ಣಕ್ರಿಯೆಗೆ ನೆರವಾಗುವ ಬೆಲ್ಲದಿಂದ ಮಲಬದ್ಧತೆಯೂ ದೂರವಾಗುತ್ತದೆ. ಪಚನಗೊಳಿಸುವ ಪ್ರಕ್ರಿಯೆಗೆ ಪುರಕವಾಗಿರುವ ಕಿಣ್ವಗಳನ್ನು ಬೆಲ್ಲದಲ್ಲಿರುವ ಅಂಶ ಸಕ್ರಿಯಗೊಳಿಸುತ್ತದೆ. ಹೀಗಾಗಿ, ತಿನ್ನುವ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಹೀಗಾಗಿಯೇ ಅನೇಕ ಕಡೆಗಳಲ್ಲಿ ಊಟವಾದ ಬಳಿಕ ಚೂರು ಬೆಲ್ಲ ಮೆಲ್ಲುವ ರೂಢಿಯನ್ನು ಕಾಣಬಹುದು.
ಇಮ್ಯೂನಿಟಿ (Immunity) ಹೆಚ್ಚಳ
ನೀವು ಎಂಥದ್ದೇ ಕಷಾಯ ಮಾಡಿ. ಅದಕ್ಕೆ ಬೆಲ್ಲ ಸೇರಿಸಿಕೊಳ್ಳದೆ ರುಚಿ ಬರುವುದಿಲ್ಲ. ಅಷ್ಟಕ್ಕೂ ಬೆಲ್ಲ ಸೇರಿಸುವುದು ರುಚಿಗೆ ಮಾತ್ರವೇ ಅಲ್ಲ. ಬೆಲ್ಲದಲ್ಲಿ ಸತು(Zinc) ಮತ್ತು ಸೆಲೆನಿಯಂ ಖನಿಜಾಂಶವಿರುತ್ತದೆ. ಇವು ಸೋಂಕುಗಳ (Infection) ವಿರುದ್ಧ ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಹೀಗಾಗಿ, ರೋಗ ನಿರೋಧಕ ಶಕ್ತಿ ಸದೃಢಗೊಳ್ಳುತ್ತದೆ.
ರಕ್ತ ಶುದ್ಧಿ (Blood purify) ಮಾಡುವ ಬೆಲ್ಲ
ನಿತ್ಯವೂ ಬೆಲ್ಲ ಸೇವಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ ಎನ್ನುವುದನ್ನು ಹಲವಾರು ಅಧ್ಯಯನಗಳು ಹೇಳಿವೆ. ಆದರೆ, ಬೆಲ್ಲ ಕೂಡ ಶುದ್ಧವಾಗಿರಬೇಕು. ಯಾವುದೇ ಕೆಟ್ಟ ಅಂಶ ಬೆರೆತಿರದ ಉತ್ತಮ ಬೆಲ್ಲ ಆರೋಗ್ಯಕ್ಕೆ ಮಹತ್ವಪೂರ್ಣ ಕೊಡುಗೆ ನೀಡುತ್ತದೆ.
ಮೊಸರಿಗೆ ಬೆಲ್ಲ ಸೇರಿಸಿ ತಿಂದರೆ ಲಾಭ ನೂರಾರು
ಕಬ್ಬಿಣಾಂಶ (Iron)ದಿಂದ ಹಿಮೋಗ್ಲೋಬಿನ್ (Hemoglobin) ಏರಿಕೆ
ಮಹಿಳೆಯರಿಗೆ (Women) ಹಿಮೋಗ್ಲೋಬಿನ್ ಕೊರತೆಯುಂಟಾದರೆ ಬೆಲ್ಲವನ್ನು ದಿನವೂ ತಿನ್ನಿ ಎಂದು ಕೆಲವು ಆಯುರ್ವೇದ (Ayurveda) ವೈದ್ಯರು ಶಿಫಾರಸು ಮಾಡುತ್ತಾರೆ. ಇದರಿಂದ ಹಿಮೋಗ್ಲೋಬಿನ್ ಮಟ್ಟದಲ್ಲಿ ಏರಿಕೆಯಾಗುತ್ತದೆ. ಅತ್ಯುತ್ತಮ ಮಟ್ಟದಲ್ಲಿ ಕಬ್ಬಿಣಾಂಶ ಇರುವ ಬೆಲ್ಲದಿಂದ ಕೆಂಪು ರಕ್ತಕಣಗಳು(Red Blood Cells) ಹೆಚ್ಚುತ್ತವೆ. ಮುಟ್ಟು ನಿಲ್ಲುವ ವಯಸ್ಸಿನಲ್ಲಂತೂ ದಿನವೂ ಬೆಲ್ಲ ಸೇವನೆ ಮಾಡಬೇಕು. ಇದರಿಂದ ಮೆನೋಪಾಸ್ ಲಕ್ಷಣಗಳನ್ನು ಎದುರಿಸಲು ಅನುಕೂಲವಾಗುತ್ತದೆ. ಮೆನೋಪಾಸ್ ಸಮಯದಲ್ಲಿ ಸಾಮಾನ್ಯವಾಗಿ ಕಂಡುಬರುವ ಮಾನಸಿಕ ಏರಿಳಿತ, ಉದ್ವೇಗ ನಿಯಂತ್ರಣಕ್ಕೂ ಇದು ಅನುಕೂಲ.