Healthy Recipes : ಬಾಯಲ್ಲಿ ನೀರೂರಿಸುತ್ತೆ ಈ ಟೊಮೇಟೊ ಚಟ್ನಿ

ಬೆಳಗ್ಗೆ ಬ್ರೇಕ್ ಫಾಸ್ಟ್ ಗೆ ಏನ್ ಮಾಡ್ಬೇಕು? ಇದು ಎಲ್ಲ ಮಹಿಳೆಯರ ಚಿಂತೆ. ದೋಸೆ, ಇಡ್ಲಿ, ಪರಾಟ, ಚಪಾತಿ ಯಾವುದೇ ಮಾಡ್ಲಿ ಹಚ್ಚಿಕೊಳ್ಳೋಕೆ ಏನಾದ್ರೂ ಬೇಕು. ಅದೇ ಸಾಂಬಾರ್, ಬಾಜಿ, ಕಾಯಿ ಚಟ್ನಿ ಮಾಡಿ ಬೋರ್ ಆಗಿದ್ರೆ ಇಂದು ಹೊಸ ರೆಸಿಪಿ ಟ್ರೈ ಮಾಡಿ.
 

How To Make Spicy Tomato Chutney Know The Recipe

ಟೊಮೆಟೊ ಇಲ್ಲದೆ ಅಡುಗೆ ಮುಂದೆ ಹೋಗುವುದಿಲ್ಲ ಎಂದರೆ ಅತಿಶಯೋಕ್ತಿ ಆಗಲಾರದು. ಇಂದು ನಿತ್ಯದ ಅಡುಗೆಯಲ್ಲಿ ನಾನಾ ಬಗೆಯ ಚಾಟ್ಸ್, ಸ್ನ್ಯಾಕ್ಸ್ ಗಳಲ್ಲಿ ಟೊಮೆಟೊ ಬೇಕೇಬೇಕು. ಇದು ಅಡುಗೆಯ ರುಚಿಯನ್ನು ಇಮ್ಮಡಿಗೊಳಿಸುತ್ತದೆ. ಟೊಮಟೊ ಒಂದಿದ್ದರೆ ಸಾಕು ಅದರಿಂದ ಸೂಪ್, ಸಾಂಬಾರ್, ಚಟ್ನಿ, ಕರ್ರಿ, ಸಲಾಡ್, ಟೊಮೆಟೊ ರೈಸ್ ಹೀಗೆ ಹತ್ತು ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಟೊಮೆಟೊ (Tomato) ಬರಿ ಅಡುಗೆಯಲ್ಲಿ ಮಾತ್ರವಲ್ಲ ಆರೋಗ್ಯ (Health ) ದೃಷ್ಟಿಯಿಂದಲೂ ಇದು ಬಹಳ ಒಳ್ಳೆಯದು. ಅನೇಕ ಜನರು ಇದನ್ನು ಸೌಂದರ್ಯವರ್ಧಕವಾಗಿ ಕೂಡ ಬಳಸುವುದುಂಟು. ಇಂತಹ ಬಹುಪಯೋಗಿ ಟೊಮೆಟೊದಿಂದ ರುಚಿ (Taste) ಕರವಾದ ಚಟ್ನಿಯನ್ನು ಹೇಗೆ ತಯಾರಿಸುವುದೆಂದು ನೋಡೋಣ.

ಫಟ್ ಅಂತಾ ತಯಾರಿಸಿ ಟೊಮೆಟೊ ಚಟ್ನಿ (Chutney)  : 
ವಿಧಾನ 1 :  ಟೊಮೆಟೊ ಚಟ್ನಿಗೆ ಬೇಕಾಗುವ ಸಾಮಗ್ರಿ : 

• 4 ರಿಂದ 5 ಟೊಮೆಟೊ
• 2 ಈರುಳ್ಳಿ
• 3 ರಿಂದ 4 ಚಮಚ ಎಣ್ಣೆ
• 3 ರಿಂದ 4 ಹಸಿಮೆಣಸು
• ರುಚಿಗೆ ತಕ್ಕಷ್ಟು ಉಪ್ಪು

ಟೊಮೆಟೊ ಚಟ್ನಿ ಮಾಡುವ ವಿಧಾನ : 
• ಮೊದಲು ಟೊಮೆಟೊ ಮತ್ತು ಹಸಿಮೆಣಸನ್ನು ಚೆನ್ನಾಗಿ ತೊಳೆದುಕೊಳ್ಳಿ.
• ಈರುಳ್ಳಿ ಮತ್ತು ಹಸಿಮೆಣಸನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ
• ಒಂದು ಸಣ್ಣ ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿಮಾಡಿ ಅದಕ್ಕೆ ಟೊಮೆಟೊ ಹಾಕಿ
• ಟೊಮೆಟೊ ಹಾಕಿದ ನಂತರ ಅದು ಸೀದುಹೋಗದಂತೆ ಕೈಯಾಡಿಸುತ್ತಿರಿ
• ಸುಮಾರು 5 ರಿಂದ 10 ನಿಮಿಷಗಳ ಕಾಲ ಟೊಮೆಟೊ ಬೇಯಿಸಿ. ನಂತರ ಟೊಮೆಟೊದ ಸಿಪ್ಪೆ ತೆಗೆದು ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ
• ನಂತರ ಮ್ಯಾಶ್ ಮಾಡಿದ ಟೊಮೆಟೊಗೆ ಕತ್ತರಿಸಿದ ಈರುಳ್ಳಿ ಮತ್ತು ಹಸಿಮೆಣಸನ್ನು ಹಾಕಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ
• ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿದರೆ ಟೊಮೆಟೊ ಚಟ್ನಿ ಸವಿಯಲು ಸಿದ್ದ. 

ಏರ್ ಇಂಡಿಯಾದ ಆಹಾರದಲ್ಲಿ ಸಿಕ್ತು ಇರುವೆ, ಯಪ್ಪಾ..ಯಾವಾಗ್ಲೂ ಇದೇ ಗೋಳಾ..

ವಿಧಾನ 2: ಟೊಮೆಟೊ ಚಟ್ನಿಗೆ ಬೇಕಾಗುವ ಸಾಮಗ್ರಿ
• 3 ರಿಂದ ನಾಲ್ಕು ಟೊಮೆಟೊ
• ಬೆಳ್ಳುಳ್ಳಿ ಒಂದು ಗಡ್ಡೆ
• 4 ರಿಂದ 5 ಒಣಮೆಣಸಿನಕಾಯಿ
• 3 ರಿಂದ 4 ಚಮಚ ಎಣ್ಣೆ

ಟೊಮೆಟೊ ಚಟ್ನಿ ಮಾಡುವ ವಿಧಾನ
• ಮೊದಲು ಟೊಮೆಟೊವನ್ನು ಚೆನ್ನಾಗಿ ತೊಳೆಯಿರಿ. ನಂತರ ಒಂದು ಪಾತ್ರೆಯಲ್ಲಿ ನೀರನ್ನು ಬಿಸಿಮಾಡಿ ಅದಕ್ಕೆ ಟೊಮೆಟೊ, ಒಣಮೆಣಸು ಹಾಕಿ ಬೇಯಿಸಿ
• ಟೊಮೆಟೊ ಬೆಂದ ನಂತರ ಗ್ಯಾಸ್ ಆರಿಸಿ. ಟೊಮೆಟೊ ತಣ್ಣಗಾದ ಮೇಲೆ ಅದರ ಸಿಪ್ಪೆಯನ್ನು ತೆಗೆಯಿರಿ
• ಬೆಂದ ಟೊಮೆಟೊ, ಮೆಣಸು ಮತ್ತು ಬೆಳ್ಳುಳ್ಳಿಯನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ
• ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿಮಾಡಿ ಅದಕ್ಕೆ ಮಿಕ್ಸಿ ಮಾಡಿದ ಟೊಮೆಟೊ ಪೇಸ್ಟ್ ಸೇರಿಸಿ
• ಎಣ್ಣೆಯ ಅಂಶ ಹೊರಬರುವವರೆಗೂ ಟೊಮೆಟೊವನ್ನು ಕುದಿಸಿ
• ಹೀಗೆ ತಯಾರಾದ ಚಟ್ನಿಯನ್ನು ನೀವು ರೊಟ್ಟಿ, ಪರೋಟಾ ಮುಂತಾದವುಗಳ ಜೊತೆ ಸವಿಯಬಹುದು.

ಖಾರ, ಅಂಟುಂಡೆ ಬಾಣಂತಿಗೆ ಮದ್ದು, ಈ ಅಂಟುಂಡೆ ಮಾಡೋದು ಹೇಗೆ?

ಅತ್ಯಂತ ಶಕ್ತಿಶಾಲಿ ಹಣ್ಣು ಎನಿಸಿಕೊಂಡಿರುವ ಟೊಮೆಟೊದಲ್ಲಿ ಹೇರಳವಾದ ವಿಟಮಿನ್ ಇದೆ. ಇದರಲ್ಲಿ ಖನಿಜಗಳಾದ ಎ, ಸಿ, ಕೆ, ಬಿ1, ಬಿ3, ಬಿ5, ಬಿ6 ಮತ್ತು ಬಿ7 ಇರುತ್ತದೆ. ಇಷ್ಟೇ ಅಲ್ಲದೆ ಇದರಲ್ಲಿ ಪೋಲೆಟ್, ಕಬ್ಬಿಣ, ಪೊಟ್ಯಾಸಿಯಂ, ಸತು ರಂಜಕಗಳು ಕೂಡ ಇವೆ. ಟೊಮೆಟೊದಲ್ಲಿನ ಲೈಕೋಪೀನ್ ರಾಸಾಯನಿಕ ಕ್ಯಾನ್ಸರ್ ಕೋಶಗಳನ್ನು ನಾಶಮಾಡುತ್ತದೆ. ಇದರ ಸೇವನೆಯಿಂದ ಹೃದಯದ ಸಮಸ್ಯೆಗಳು ಕೂಡ ದೂರವಾಗುತ್ತವೆ. ಟೊಮೆಟೊ ಹಣ್ಣು ನಮ್ಮ ಚರ್ಮಕ್ಕೆ ಕೂಡ ಬಹಳ ಒಳ್ಳೆಯದು. ಇದು ಅಲ್ಟ್ರಾ ವೈಲೆಟ್ ಕಿರಣಗಳಿಂದ ನಮ್ಮ ಚರ್ಮವನ್ನು ರಕ್ಷಿಸುತ್ತದೆ.  
 

Latest Videos
Follow Us:
Download App:
  • android
  • ios