Asianet Suvarna News Asianet Suvarna News

ಕ್ವಿಕ್ ಆಗಿ ಮಾಡೋ, ಎಲ್ಲ ಅಚ್ಚು ಮೆಚ್ಚಿನ ಮ್ಯಾಗಿ ಕಂಡು ಹಿಡಿದ ರೋಚಕ ಕಥೆ ಇದು!

ಮನೆಮನೆಗಳಲ್ಲೂ ಇರುವ ಸಿದ್ಧ ಆಹಾರೋತ್ಪನ್ನಗಳಲ್ಲಿ ಮ್ಯಾಗಿಗೆ ಮೊದಲ ಸ್ಥಾನ. ಅದರ ಬಗ್ಗೆ ಯಾರು ಏನು ಹೇಳಿದರೂ ಜನಪ್ರಿಯತೆ ಮಾತ್ರ ಕುಸಿದಿಲ್ಲ. ಇಷ್ಟು ಜನಪ್ರಿಯವಾಗಿರುವ ಮ್ಯಾಗಿಯನ್ನು ಸಿದ್ಧಪಡಿಸಿದ್ದು ಯಾರು ಗೊತ್ತೇ? ಮ್ಯಾಗಿಯ ಹೆಸರಲ್ಲೇ ಆತನ ಹೆಸರೂ ಇದೆ. ಆತ ಜ್ಯೂಲಿಯಸ್ ಮ್ಯಾಗಿ.
 

How maggi born and who invent it know about favorite food for kids and home makers sum
Author
First Published Nov 20, 2023, 11:39 AM IST

ಮ್ಯಾಗಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಯಾರು ಎಷ್ಟೇ ಹೇಳಿದರೂ, ಭಾರತದಲ್ಲಿ ಅದರ ಜನಪ್ರಿಯತೆಗೆ ಮಾತ್ರ ಎಂದಿಗೂ ಕುಂದು ಬರುವುದಿಲ್ಲ. ತಕ್ಷಣ ರೆಡಿ ಮಾಡಲು ನೆನಪಾಗುವ ಮೊದಲ ಆಹಾರವೇ ಮ್ಯಾಗಿ. ಮಧ್ಯರಾತ್ರಿಯ ಹಸಿವನ್ನು ತಣಿಸುವುದೇ ಮ್ಯಾಗಿ. ಸ್ನೇಹಿತರು ಜತೆಯಾಗಿ ತಿನ್ನಲು ಅನುಕೂಲವಾಗುವುದೇ ಮ್ಯಾಗಿ. ಒಟ್ಟಿನಲ್ಲಿ ಮ್ಯಾಗಿಯ ಜನಪ್ರಿಯತೆ ಮತ್ತಷ್ಟು ಹೆಚ್ಚುತ್ತಲೇ ಇದೆ. ಹಲವರಿಗೆ ಇದು ಕೇವಲ ಆಹಾರವಲ್ಲ, ಇನ್ನೂ ಹೆಚ್ಚಿನದು. ಅಷ್ಟೊಂದು ಆಪ್ತತೆ. ಇಷ್ಟೊಂದು ಜನಪ್ರಿಯ ಮ್ಯಾಗಿ ನೂಡಲ್ಸ್ ಅನ್ನು ಕಂಡುಹಿಡಿದವರ ಕತೆ ಮಾತ್ರ ಇಂದಿಗೂ ಅನಾಮಧೇಯವಾಗಿಯೇ ಇದೆ. ಯಾವುದೇ ವಸ್ತು ಇಂದು ಎಷ್ಟೇ ಖ್ಯಾತಿ ಪಡೆದಿರಲಿ, ಅದಕ್ಕೊಂದು ಹುಟ್ಟು ಎನ್ನುವುದಿದೆಯಲ್ಲ, ಅದು ರೋಚಕವಾಗಿರುತ್ತದೆ. ಹಾಗೆಯೇ, ಮ್ಯಾಗಿ ನೂಡಲ್ಸ್ ಹುಟ್ಟು ಸಹ.

ಜ್ಯೂಲಿಯಸ್ ಮ್ಯಾಗಿ (Julius Maggi) ಸ್ವಿಜರ್ಲ್ಯಾಂಡ್ ನಲ್ಲಿ (Switzerland) 1846ರ ಅಕ್ಟೋಬರ್ 4ರಂದು ಜನಿಸಿದ ಕನಸುಗಾರ. ಜಗತ್ತಿನ ಆಹಾರದ ಶೈಲಿಯನ್ನು (Food Style) ಬದಲಿಸಿ, ಪ್ರತಿ ಮನೆಯಲ್ಲೂ ಜಾಗ ಪಡೆದ ನೂಡಲ್ಸ್ ಇದೇ ಮ್ಯಾಗಿಯ ಹೆಸರನ್ನು ಹೊತ್ತಿದೆ. ಈತನೇ ಮ್ಯಾಗಿಯನ್ನು ಸೃಷ್ಟಿಸಿದ ಚಮತ್ಕಾರಿ. ಈತ 1912ರ ಅಕ್ಟೋಬರ್ 19ರಂದು ನಿಧನ ಹೊಂದಿದ. 

ಮ್ಯಾಗಿಯ ಹುಟ್ಟು (Born) ಆಗಿದ್ದೇಕೆ?
ಜ್ಯೂಲಿಯಸ್ ಮ್ಯಾಗಿ 1884ರಲ್ಲಿ ಮ್ಯಾಗಿಯನ್ನು ಸೃಷ್ಟಿಸಿದ. ಈತ ಮ್ಯಾಗಿಯನ್ನು ಕಂಡುಹಿಡಿದ ಉದ್ದೇಶ ಭಾರೀ ಸಕಾರಾತ್ಮಕವಾಗಿದೆ. ದುಡಿಮೆಯಲ್ಲಿ ಬ್ಯುಸಿಯಾಗಿರುವ ಕುಟುಂಬಗಳಿಗೆ ಆಹಾರವನ್ನು ತಯಾರಿಸುವುದೇ ಬಹುದೊಡ್ಡ ಸಮಸ್ಯೆ. ಅದಕ್ಕೆ ಸಮಯವಿರುವುದಿಲ್ಲ. ಅಂದಿನ ದಿನಗಳಲ್ಲಿ ಸ್ವಿಜರ್ಲ್ಯಾಂಡ್ ನಂತಹ ಶೀತ ಪ್ರದೇಶದ ದೇಶಗಳಲ್ಲಿ ದುಡಿಮೆ (Work) ಎನ್ನುವುದು ಮರೀಚಿಕೆಯಾಗಿತ್ತು. ಮನೆಯ ಪುರುಷರು, ಮಹಿಳೆಯರಿಬ್ಬರೂ ಹಲವು ಫ್ಯಾಕ್ಟರಿಗಳಲ್ಲಿ ದುಡಿಯುತ್ತಿದ್ದರು. ಮಹಿಳೆಯರು ಫ್ಯಾಕ್ಟರಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಲು ಆರಂಭಿಸಿದ್ದರು. ಜತೆಗೆ, ಮನೆಯ ಎಲ್ಲ ಜನರೂ ದುಡಿಯುವುದು ಅನಿವಾರ್ಯವಾಗಿತ್ತು. ಅವರು ತಮ್ಮ ತಮ್ಮ ಮನೆಗಳಲ್ಲಿ ಅತಿ ಕಡಿಮೆ ಸಮಯ (Time) ಕಳೆಯುತ್ತಿದ್ದರು. ಆ ಅವಧಿಯಲ್ಲೇ ಮನೆಯ ಎಲ್ಲ ಕೆಲಸಗಳನ್ನು ಮಾಡಬೇಕಾಗುತ್ತಿತ್ತು. ಹೀಗಾಗಿ, ಅವರಿಗೆ ಕಡಿಮೆ ವೆಚ್ಚದಲ್ಲಿ ಸುಲಭವಾಗಿ ತಯಾರಿಸಬಹುದಾದ ಆಹಾರದ ಅಗತ್ಯವಿತ್ತು. ಅಗತ್ಯವನ್ನು ಮ್ಯಾಗಿ ಸೃಷ್ಟಿಸುವ ಮೂಲಕ ಈ ಜ್ಯೂಲಿಯಸ್ ಮ್ಯಾಗಿ ಪೂರೈಸಿದ. 

48ರ ಹರೆಯದಲ್ಲೂ ಫಿಟ್‌ ಆಗಿರುವ ಶಿಲ್ಫಾ ಶೆಟ್ಟಿ ಸೌಂದರ್ಯದ ಗುಟ್ಟಿದು!

ಮೊಟ್ಟಮೊದಲು ಈತ ಸೃಷ್ಟಿ ಮಾಡಿದ್ದುದು ಪೌಡರ್ (Powder) ಎಂದು ನೆಸ್ಲೆ ಕಂಪನಿ ತಿಳಿಸುತ್ತದೆ. ಹಲವು ವರ್ಷಗಳ ಆಳವಾದ ಸಂಶೋಧನೆ ಬಳಿಕ, ಸೂಪ್ ನಂತೆ ಮಾಡಿಕೊಂಡು ಕುಡಿಯಬಹುದಾದ ಸಿದ್ಧ ಪೌಡರ್ ಅನ್ನು ತಯಾರಿಸಿದ್ದ. ಕಾಳು ಮತ್ತು ಬೀನ್ಸ್ ಅನ್ನು ಒಳಗೊಂಡ ಸೂಪ್ ಇದಾಗಿತ್ತು. ಇದು ಸಾಕಷ್ಟು ಯಶಸ್ಸು (Success) ಪಡೆಯಿತು. ಆದರೆ, ಆತ ಇಷ್ಟಕ್ಕೇ ತನ್ನ ಕೆಲಸವನ್ನು ನಿಲ್ಲಿಸಲಿಲ್ಲ. ನೂಡಲ್ಸ್ ಅನ್ನೂ ಸಿದ್ಧಪಡಿಸಿದ. ಇಂದು ಎಲ್ಲರೂ ಬಳಕೆ ಮಾಡುವ ಮ್ಯಾಗಿ ಲಿಕ್ವಿಡ್ ಸೀಸನಿಂಗ್ ಸಾಸ್ ಅನ್ನು ಸಹ ಆತನೇ ಕಂಡುಹಿಡಿದಿದ್ದಾಗಿದೆ. ಅಷ್ಟೇ ಅಲ್ಲ, ಮ್ಯಾಗಿ ಬುಯ್ಲನ್ ಕ್ಯೂಬ್ ಗಳನ್ನು ಸಹ ಆಗಲೇ ಸಿದ್ಧ ಪಡಿಸಿದ್ದ.
ಆತ ಕಂಡುಹಿಡಿದ ಎಲ್ಲ ಸಿದ್ಧ ಆಹಾರೋತ್ಪನ್ನಗಳು (Food Products) ಆಗ ಅದೇ ಮೊದಲಾಗಿದ್ದವು. ಹೀಗಾಗಿ, ಬ್ಯುಸಿ ಮನೆಗಳಲ್ಲಿ ಸಿಕ್ಕಾಪಟ್ಟೆ ಖ್ಯಾತಿ ಪಡೆದವು. ಪ್ರತಿ ಮನೆಗಳಲ್ಲೂ ಬಳಕೆ ಮಾಡಲು ಆರಂಭವಾಗಿತ್ತು. ಶೀಘ್ರದಲ್ಲೇ ಈ ಎಲ್ಲ ಉತ್ಪನ್ನಗಳು ನೈಜೀರಿಯಾ, ಶ್ರೀಲಂಕಾ, ಮಲೇಷ್ಯಾಕ್ಕೂ ಪ್ರವೇಶ (Entry) ಪಡೆದವು. 

ದೇಹದಲ್ಲಿ ಈ ಪೋಷಕಾಂಶಗಳ ಕೊರತೆ ಇದ್ರೆ ಹೃದಯ ಬಡಿತವೇ ನಿಲ್ಲಬಹುದು!

ನೆಸ್ಲೆ (Nestle) ಖರೀದಿ
ನೆಸ್ಲೆ ಕಂಪನಿ ಮ್ಯಾಗಿ ಬ್ರ್ಯಾಂಡ್ ಅನ್ನು 1947ರಲ್ಲಿ ತನ್ನದಾಗಿಸಿಕೊಂಡಿತು. ಗುಣಮಟ್ಟದ ಸಿದ್ಧ ಆಹಾರ ತಯಾರಿಸುವ ಸಮಾನ ಮನಸ್ಕ ಧೋರಣೆಯೇ ಎರಡೂ ಕಂಪೆನಿಗಳನ್ನು ಜತೆಗೂಡಿಸಿತು. ಇಂದು ನೆಸ್ಲೆ ಜಗತ್ತಿನ ಎಲ್ಲೆಡೆ ತನ್ನ ಆಹಾರೋತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಇದರ ಈ ವರ್ಷದ ಮೂರನೇ ತ್ರೈಮಾಸಿಕದ ನಿವ್ವಳ ಆದಾಯ 908 ಕೋಟಿ ರೂಪಾಯಿ! ನೆಸ್ಲೆ ಇಂಡಿಯಾದ ಮಾರುಕಟ್ಟೆ ವ್ಯಾಪ್ತಿ ಸುಮಾರು 2.35 ಟ್ರಿಲಿಯನ್ ನಷ್ಟಿದೆ. 
 

Follow Us:
Download App:
  • android
  • ios