ಮಳೆಯಲ್ಲಿ ಬಿಸಿಬಿಸಿಯಾಗಿ ಚಿಕನ್ ದೋಸೆ ಮಾಡಿ ತಿನ್ನಿ

ಮಳೆ ಬರುವಾಗ ಬಿಸಿ ಬಿಸಿ ದೋಸೆ (Dosa) ತಿನ್ನೋಕೆ ಎಲ್ಲರಿಗೂ ಇಷ್ಟವಾಗುತ್ತೆ. ಆದ್ರೆ ಯಾವಾಗ್ಲೂ ಅದೇ ಮಸಾಲೆ ದೋಸೆ, ತುಪ್ಪ ದೊಸೆಮ ಸೆಟ್ ದೋಸೆ ಎಷ್ಟೂಂತ ತಿನ್ಬೋದು ಹೇಳಿ. ಹಾಗಿದ್ರೆ ಸ್ಪೆಷ (Special) ಲ್ ಆಗಿ ಏನಾದ್ರೂ ಟ್ರೈ ಮಾಡ್ಬೇಕಲ್ಲಾ. ಇಲ್ಲಿದೆ ರುಚಿಕರವಾದ ಚಿಕನ್ (Chikcen) ದೋಸೆ ರೆಸಿಪಿ.

Have You Tried Chicken Dosa In This Monsoon Vin

ಮಳೆಗಾಲ (Monsoon) ಶುರುವಾಗೇ ಬಿಡ್ತು. ಈಗೆಲ್ಲಾ ಸಂಜೆಯಾದ್ರೆ ಸಾಕು ಬಿಸಿಬಿಸಿಯಾಗಿ ಟೀ (Tea), ಜೊತೆಗೆ ಏನಾದ್ರೂ ಬಜ್ಜಿ, ಬೋಂಡ, ಪಕೋಡಾ (Pakoda) ತಿನ್ನೋಣ ಅನ್ಸುತ್ತೆ.  ಬಿಸಿಯಾದ, ಹಬೆಯಾಡುವ ಪಕೋಡಗಳು ಮತ್ತು ಸಮೋಸಗಳನ್ನು ಚಹಾದ ಜೊತೆಗೆ ಆನಂದಿಸಲು ಮಳೆಗಾಲಕ್ಕಿಂತ ಉತ್ತಮವಾದ ಸಮಯವಿಲ್ಲ. ಆದ್ರೆ ಮನೆಯಲ್ಲೇ ಇದನ್ನೆಲ್ಲಾ ಮಾಡ್ಕೊಳ್ಳೋದು ಅಂದ್ರೆ ಎಲ್ರಿಗೂ ಬೇಜಾರು. ಎಷ್ಟೊಂದು ಕೆಲ್ಸ ಇದ್ಯಪ್ಪಾ ಅಂತ ಗೋಳಾಡ್ತಾರೆ. ಅಂಥವರಿಗೆ ಇಲ್ಲೊಂದು ಸ್ಪೆಷಲ್ ರೆಸಿಪಿಯಿದೆ.

ಮಳೆಗಾಲದಲ್ಲಿ ಬಿಸಿಬಿಸಿಯಾದ ದೋಸೆಯನ್ನು ತಿನ್ಬೇಕು ಅಂತ ನಿಮ್ಗೆ ಆಸೆಯಾಗಿದ್ರೆ ನೀವು ಈ ರುಚಿಕರವಾದ ಚಿಕನ್ ದೋಸೆ (Chicken dosa) ಯನ್ನು ಟ್ರೈ ಮಾಡ್ಬೋದು. ನೀವು ಸ್ಟಫ್ಡ್ ದೋಸೆಗಳನ್ನು ಇಷ್ಟಪಡುತ್ತೀರಾ. ಹಾಗಾದರೆ ಈ ರುಚಿಕರವಾದ ಪ್ರೋಟೀನ್ (Protein) ಭರಿತ ದೋಸೆಯನ್ನು ಪ್ರಯತ್ನಿಸಿ. ಈರುಳ್ಳಿ, ಟೊಮೇಟೊ ಮತ್ತು ಮಸಾಲಾದಲ್ಲಿ ಬೇಯಿಸಿದ ಕೊಚ್ಚಿದ ಚಿಕನ್‌ನೊಂದಿಗೆ ಇದನ್ನು ತಯಾರಿಸಲಾಗುತ್ತದೆ, ಈ ಚಿಕನ್ ದೋಸೆ ರೆಸಿಪಿ (Recipe) ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೂ ಸೂಕ್ತವಾಗಿದೆ. ಇದನ್ನು ತೆಂಗಿನಕಾಯಿ ಚಟ್ನಿ (Coconut chutney), ಟೊಮೆಟೊ ಚಟ್ನಿ ಅಥವಾ ಸಾಂಬಾರ್‌ನೊಂದಿಗೆ ಬಡಿಸಿ ಸವಿಯಬಹುದು. ಹಾಗಿದ್ರೆ ಈ ಸ್ಪೆಷಲ್ ಚಿಕನ್ ದೋಸೆಯನ್ನು ಮಾಡೋದು ಹೇಗೆ ತಿಳ್ಕೊಳ್ಳೋಣ.

ಬೇಕಾದ ಪದಾರ್ಥಗಳು
400 ಗ್ರಾಂ ಕೊಚ್ಚಿದ ಕೋಳಿ ಮಾಂಸ
2 ಮಧ್ಯಮ ಈರುಳ್ಳಿ
1 ಟೀ ಸ್ಪೂನ್ ಕೆಂಪು ಮೆಣಸಿನ ಪುಡಿ
1/2 ಟೀ ಚಮಚ ಕರಿಮೆಣಸು
1 ಟೀ ಚಮಚ ಜೀರಿಗೆ ಬೀಜಗಳು
1 ಟೀ ಚಮಚ ಶುಂಠಿ ಪೇಸ್ಟ್
2 ಟೇಬಲ್ ಸ್ಪೂನ್ ಎಣ್ಣೆ
ಅಗತ್ಯವಿರುವಷ್ಟು ದೋಸೆ ಹಿಟ್ಟು
ಕರಿಬೇವಿನ ಎಲೆಗಳು
1/2 ಕಪ್ ಟೊಮೆಟೊ 
1/2 ಟೀಚಮಚ ಅರಿಶಿನ
1/2 ಟೀ ಚಮಚ ಗರಂ ಮಸಾಲಾ ಪುಡಿ
1 ಟೀ ಚಮಚ ಬೆಳ್ಳುಳ್ಳಿ ಪೇಸ್ಟ್
ಸ್ಪಲ್ಪಕೊತ್ತಂಬರಿ ಸೊಪ್ಪು
ಅಗತ್ಯವಿರುವಷ್ಟು ಉಪ್ಪು
3/4 ಕಪ್ ನೀರು

ಮಾನ್ಸೂನ್‌ನಲ್ಲಿ ನಾನ್‌ವೆಜ್‌ ಪ್ರಿಯರು ಮಟನ್ ವಡೆ ಮಿಸ್ ಮಾಡೋಕಾಗುತ್ತಾ

ಚಿಕನ್ ದೋಸೆ ಮಾಡುವ ವಿಧಾನ

ಹಂತ 1: ಮಸಾಲಾವನ್ನು ತಯಾರಿಸಿ
ಕುಕ್ಕರ್‌ನಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಜೀರಿಗೆ, ಕರಿಬೇವಿನ ಸೊಪ್ಪು, ಶುಂಠಿ ಪೇಸ್ಟ್ ಮತ್ತು ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಒಂದು ನಿಮಿಷ ಹುರಿಯಿರಿ. ಇದಕ್ಕೆ ಕತ್ತರಿಸಿದ ಈರುಳ್ಳಿ ಸೇರಿಸಿ ಮತ್ತು ಇನ್ನೊಂದು ಎರಡು ನಿಮಿಷಗಳ ಕಾಲ ಹುರಿಯಿರಿ. ಈಗ ಟೊಮೆಟೊ ರಸ, ಕೆಂಪು ಮೆಣಸಿನ ಪುಡಿ, ಅರಿಶಿನ, ಕರಿಮೆಣಸಿನ ಪುಡಿ, ಗರಂ ಮಸಾಲಾ ಮತ್ತು ಉಪ್ಪು ಸೇರಿಸಿ. ಮಸಾಲಾವನ್ನು 3-4 ನಿಮಿಷ ಬೇಯಿಸಲು ಬಿಡಿ.

ಹಂತ 2: ಚಿಕನ್ ಅನ್ನು ಬೇಯಿಸಿ
ಈಗ ಕೊಚ್ಚಿದ ಚಿಕನ್ ಅನ್ನು ಕುಕ್ಕರ್‌ಗೆ ಸೇರಿಸಿ ಮತ್ತು ಮಸಾಲಾದೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. 3/4 ಕಪ್ ನೀರು ಸೇರಿಸಿ, ಮಿಶ್ರಣ ಮಾಡಿ ಮತ್ತು ಮುಚ್ಚಳವನ್ನು ಮುಚ್ಚಿ. 8-10 ನಿಮಿಷ ಬೇಯಿಸಿ. ಅದರ ನಂತರ, ಇನ್ನೂ ಯಾವುದೇ ನೀರು ಉಳಿದಿದ್ದರೆ, ನೀರನ್ನು ಹೊರಹಾಕಲು 2 ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಬೇಯಿಸಿ. ಇದಕ್ಕೆ ಸಣ್ಣ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ.

ಜಿಟಿಜಿಟಿ ಮಳೆಗೆ ಬಿಸಿಬಿಸಿ ಪಕೋಡಾ, ಇಲ್ಲಿದೆ ಸಿಂಪಲ್ ರೆಸಿಪಿ

ಹಂತ 3: ದೋಸೆಯನ್ನು ತಯಾರಿಸಿ 
ದೋಸೆ ಹಿಟ್ಟನ್ನು ತವಾ ಮೇಲೆ ಹರಡಿ ಮತ್ತು ಎರಡೂ ಬದಿಗಳಿಂದ ಬೇಯಿಸಿ. ಪ್ರತಿ ದೋಸೆಯಲ್ಲಿ 2-3 ಚಮಚ ಮಸಾಲೆಯನ್ನು ತುಂಬಿಸಿ ಮತ್ತು ಚಟ್ನಿ ಮತ್ತು ಸಾಂಬಾರ್‌ನೊಂದಿಗೆ ಬಡಿಸಿ. ಆನಂದಿಸಿ.

Latest Videos
Follow Us:
Download App:
  • android
  • ios