Asianet Suvarna News Asianet Suvarna News

ಜಪಾನ್ ಪ್ರಧಾನಿ ಮೆಚ್ಚಿಕೊಂಡ ಗೋಲ್ಗೊಪ್ಪಾನ ಮೊದಲು ತಯಾರಿಸಿದ್ದು ಮಹಾಭಾರತದ ದ್ರೌಪದಿ!

ಪುಟ್ಟ ಮಗುವೂ ಹುಳಿ, ಉಪ್ಪು, ಖಾರ ರುಚಿಗೆ ಮುಖ ಹುಳ್ಳ ಹುಳ್ಳಗೆ ಮಾಡುತ್ತಲೇ ಚಪ್ಪರಿಸಿಕೊಂಡು ತಿನ್ನೋ ಗೋಲ್ಗೊಪ್ಪಾದ ಹಿನ್ನೆಲೆ ಸಖತ್ ಇಂಟರೆಸ್ಟಿಂಗ್ ಆಗಿದೆ. ಈ ಸ್ಟ್ರೀಟ್ ಫುಡ್‌ ಅನ್ನು ಹಿಂದಿನ ಕಾಲದಲ್ಲಿ ರಾಜ ಮಹಾರಾಜರೂ ಚಪ್ಪರಿಸಿಕೊಂಡು ತಿನ್ನುತ್ತಿದ್ದರಂತೆ.

Golgoppa's interesting history
Author
First Published Mar 25, 2023, 1:33 PM IST

ಹಳ್ಳಿ ಇರಲಿ, ಸಿಟಿ ಇರಲಿ, ಮಧ್ಯಾಹ್ನ ಇರಲಿ, ಸಂಜೆ ಇರಲಿ, ಗೊಲ್ಗೊಪ್ಪ ಅನ್ನೋ ಇಂಡಿಯಾದ ಇಂಟರ್‌ನ್ಯಾಶನಲ್ ಸ್ಟ್ರೀಟ್ ಫುಡ್ಡಿಗೆ ಸಖತ್ ಡಿಮ್ಯಾಂಡ್. ಇದಕ್ಕೆ ಇಂಟರ್‌ನ್ಯಾಶನಲ್ ಫೇಮ್‌ ಇದೆ ಅನ್ನೋದಕ್ಕೆ ಸಾಕ್ಷಿ ಆದದ್ದು ಮೊನ್ನೆ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಗೋಲ್ಗೊಪ್ಪವನ್ನು ಚಪ್ಪರಿಸಿಕೊಂಡು ತಿಂದಾಗ. ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತಕ್ಕೆ ಭೇಡಿ ನೀಡಿದ್ದ ಜಪಾನ್‌ನ ಪ್ರಧಾನಿ ಫ್ಯೂಮಿಯೊ ಕಿಶಿಡಾ ದೆಹಲಿಯಲ್ಲಿ ಗೋಲ್‌ಗೊಪ್ಪ ಸವಿಯುತ್ತಿರುವ ವೀಡಿಯೊ ಆಮೇಲೆ ಸಾಮಾಜಿಕ ತಾಣದಲ್ಲಿ ವೈರಲ್ ಆಯಿತು. ಗೋಲ್‌ಗಪ್ಪ ಸ್ಟಾಲ್‌ನಲ್ಲಿ ರುಚಿಯಾದ ಗೋಲ್‌ಗಪ್ಪ ಸವಿದ ಜಪಾನ್ ಪ್ರಧಾನಿ, ಈ ಸ್ಟ್ರೀಟ್‌ಪುಡ್‌ನ ರುಚಿಗೆ ಮನಸೋತಂತೆ ಕಾಣುತ್ತಿದ್ದುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಅತ್ಯಂತ ಉನ್ನತ ಸ್ಥಾನದಲ್ಲಿರುವ ಇಬ್ಬರೂ ವ್ಯಕ್ತಿಗಳು ತಮ್ಮ ವ್ಯಾವಹಾರಿಕ ಮಾತುಕತೆಗಳನ್ನೆಲ್ಲಾ ಬದಿಗೊತ್ತಿ ಗೋಲ್‌ಗಪ್ಪಾ ಸವಿಯುವುದರಲ್ಲಿ ನಿರತರಾಗಿದ್ದು ಇದು ಪ್ರತಿಯೊಬ್ಬರ ಗಮನ ಸೆಳೆಯುವಂತೆ ಮಾಡಿದ್ದಂತೂ ಸುಳ್ಳಲ್ಲ. ಇದರೊಂದಿಗೆ ಗೋಲ್‌ಗಪ್ಪಾದ ರುಚಿಗೆ ಮನಸೋಲದವರು ಯಾರೂ ಇಲ್ಲ ಎಂಬ ಮಾತನ್ನು ಅಕ್ಷರಶಃ ಸತ್ಯವಾಗಿಸಿದೆ ಈ ಘಟನೆ..

ಇನ್ನೊಂದು ಇಂಟರೆಸ್ಟಿಂಗ್ ವಿಷಯ ಅಂದರೆ ಈ ಗೋಲ್ಗೊಪ್ಪ ಯಾವ ಸಿನಿಮಾದಲ್ಲೇ ಬರಲಿ ಆ ಸಿನಿಮಾ ಸಖತ್ ರೆಸ್ಪಾನ್ಸ್ ಹುಟ್ಟಿಸುತ್ತೆ. ಸಿನಿಮಾ ಹಿಟ್ ಆಗುತ್ತೋ ಬಿಡುತ್ತೋ, ಪಾನಿಪುರಿ ಸೀನ್‌ಗಳು ಪ್ಲಾಪ್ ಆದ ಉದಾಹರಣೆ ಇಲ್ಲ. ಇದಕ್ಕೆ ಕಾರಣ ಮತ್ತೇನಿಲ್ಲ, ಪಾನಿಪುರಿ ಜೊತೆಗೆ ಜನ ಕನೆಕ್ಟ್ ಆಗೋ ರೀತಿ. ಲವ್ ಮಾಕ್‌ಟೇಲ್ ಸಿನಿಮಾದಲ್ಲಿ ಹೀರೋಯಿನ್‌ಗೆ ಪಾನಿಪುರಿ ಅಂದರೆ ಜೀವ. ರಬ್‌ ನೆ ಬನಾ ದೆ ಜೋಡಿ ಸಿನಿಮಾದಲ್ಲಿ ಶಾರೂಖ್‌ ಖಾನ್, ಅನುಷ್ಕಾ ಬೀದಿ ಬದಿ ಪಾನಿಪುರಿ ತಿನ್ನೋ ಸೀನ್‌ಗೆ ಮನ ಸೋಲದವರಿಲ್ಲ. ಹೀಗಾಗಿ ಸಾಲು ಸಾಲು ಸಿನಿಮಾಗಳಲ್ಲಿ ಗೋಲ್ಗೊಪ್ಪ ಸೀನ್ ಬಂದಿದೆ, ಫೇಮಸ್ ಆಗಿದೆ.

Health Tips: ಕಾಫಿ ಅಡಿಕ್ಷನ್ ನಿಮಗಿದ್ಯಾ? ಹೆಲ್ತ್‌ ಹಾಳಾಗ್ಬಾರ್ದು ಅಂದ್ರೆ ಈ ರೀತಿ ಮಾಡಿ ಕುಡೀರಿ

ಟೊಳ್ಳಾದ ಪುರಿ ಅದರೊಳಗೆ ಬೇಯಿಸಿದ ಆಲೂಗಡ್ಡೆ, ಕಡಲೆ, ಬಟಾಣಿ, ಮಸಾಲೆ ಕರಿ ರಗ್ಡಾ, ಬೂಂದಿ ಹಾಗೂ ಕಾಳುಗಳ ಸ್ಟಫಿಂಗ್. ಇದನ್ನು ಸಿಹಿ(Sweet) ಹಾಗೂ ಹುಳಿ ಮಿಶ್ರಿತ ದ್ರವದಲ್ಲಿ ಅದ್ದಿ ನೀಡಲಾಗುತ್ತದೆ. ಪಾನಿ ಎಂಬ ಹೆಸರಿನಿಂದ ಕರೆಯುವ ಈ ದ್ರವ ರೂಪದ ಪದಾರ್ಥ ಕೂಡ ತನ್ನ ಸುವಾಸನೆಯಿಂದ ಮನಸೆಳೆಯುತ್ತದೆ. ಎಲ್ಲೇ ಹೋದರೂ ಪಾನಿಪುರಿ ತನ್ನದೇ ಆದ ಸುವಾಸನೆ ಹಾಗೂ ರುಚಿಯಿಂದ ಪ್ರಸಿದ್ಧಿ ಪಡೆದಿದೆ.ಅಂದ ಹಾಗೆ ಈ ಪಾನಿಪುರಿ ಹಿನ್ನೆಲೆ(History) ಏನು? ಇದು ಯಾವಾಗಿಂದ ಸ್ಟ್ರೀಟ್ ಫುಡ್ ಆಗಿ ಫೇಮಸ್(Famous) ಆಯ್ತು ಅಂದರೆ ಕರೆಕ್ಟಾಗಿ ಉತ್ತರ ಹೇಳೋದು ಕಷ್ಟ. ಆದರೆ ಮೊಘಲ್ ಯುಗದಲ್ಲಿ ಈ ಫುಡ್(Food) ಸಖತ್ ಫೇಮಸ್ ಆಯ್ತು ಅನ್ನೋದನ್ನು ಇತಿಹಾಸಕಾರರೂ ಒಪ್ಪುತ್ತಾರೆ. ಇದನ್ನು ಉತ್ತರ ಭಾರತದ ದೇವಸ್ಥಾನಗಳಲ್ಲಿ ಪ್ರಸಾದ ರೂಪದಲ್ಲಿ ನೀಡುತ್ತಿದ್ದರು ಅನ್ನುವ ಮಾತುಗಳೂ ಇವೆ.

ಆದರೆ ಮಹಾಭಾರತ ಕಾಲದಲ್ಲೂ ಪಾನಿಪುರಿ(Panipuri) ಚಾಲ್ತಿಯಲ್ಲಿತ್ತು ಅನ್ನೋ ಮಾತಿದೆ. ದ್ರೌಪದಿ ಇದನ್ನು ಪಾಂಡವರಿಗೆ ಮಾಡಿಕೊಡುತ್ತಿದ್ದಳಂತೆ. ತರಕಾರಿಗಳನ್ನು ಬೇಯಿಸಿ, ಗೋಧಿಯ ಗಟ್ಟಿ ಚೂರಿನೊಳಗೆ ಸಿಹಿ ಹುಳಿ ಬೆರೆಸಿದ ನೀರಲ್ಲದ್ದಿ ಕೊಡುತ್ತಿದ್ದಳಂತೆ. ಇದು ಪಾಂಡವರಿಗೆಲ್ಲ ಬಹಳ ಇಷ್ಟವಾದ ತಿನಿಸಾಗಿತ್ತು ಅನ್ನೋ ಮಾತೂ ಇದೆ. ಇದು ಪುರಾಣ(Myth) ಆಗಿರೋ ಕಾರಣ ಇದೇ ಸತ್ಯ ಅಂತಲೋ, ಇದು ಸುಳ್ಳು ಅಂತಲೋ ಹೇಳೋದು ಕಷ್ಟ. ಆದರೆ ಪಾನಿಪುರಿ ಘನತೆ ಮಾತ್ರ ದೊಡ್ಡದು.

10 ನಿಮಿಷದಲ್ಲಿ ಬಾಯಲ್ಲಿ ನೀರೂರುವ ಮಾವಿನ ಉಪ್ಪಿನಕಾಯಿ ಮಾಡಿದ ನಟಿ Aditi Prabhudeva

Follow Us:
Download App:
  • android
  • ios