Asianet Suvarna News

ರಾಷ್ಟ್ರೀಯ ಪ್ರಾಣಿ, ಪಕ್ಷಿ, ಹೂ ಗೊತ್ತು, ಆದರೆ ರಾಷ್ಟ್ರೀಯ ತಿನಿಸು?

ರಾಷ್ಟ್ರೀಯ ಪ್ರಾಣಿ, ರಾಷ್ಟ್ರೀಯ ಪಕ್ಷಿ ಬಗ್ಗೆ ತಿಳಿದುಕೊಂಡಿರ್ತೀರಿ, ರಾಷ್ಟ್ರೀಯ ಹೂವು ಕೂಡಾ ಕೇಳಿದೊಡನೆ ಮುಖ ಕಮಲ ಅರಳುತ್ತೆ, ಆದ್ರೆ ರಾಷ್ಟ್ರೀಯ ತಿನಿಸು? ಈ ಬಗ್ಗೆ ಕೇಳಿದರೆ ಬಹುತೇಕರು ಬೆಬ್ಬೆಬ್ಬೆ ಎನ್ನುತ್ತಾರೆ. 

France to US did you know what national dish of these countries are
Author
Bengaluru, First Published Nov 6, 2019, 3:12 PM IST
  • Facebook
  • Twitter
  • Whatsapp

ರಾಷ್ಟ್ರೀಯ ಮಾನ್ಯತೆ ಪಡೆದ ವಸ್ತುಗಳು, ಜೀವಿಗಳು ಒಂದೇ ದೇಶದ ಸಂಸ್ಕೃತಿಯ ಪ್ರತೀಕ. ಆ ದೇಶದಲ್ಲಿ ಬಹುವಾಗಿ ಸಿಗುವ, ಅಥವಾ ಆ ದೇಶಕ್ಕೆ ವಿಶಿಷ್ಠವೆನಿಸುವ ಸಂಗತಿಗಳಿಗೆ ರಾಷ್ಟ್ರೀಯ ಮಾನ್ಯತೆ ನೀಡಲಾಗುತ್ತದೆ. ಹಾಗೆಯೇ ರಾಷ್ಟ್ರೀಯ ತಿನಿಸು ಕೂಡಾ ದೇಶದ ಆಹಾರ ಸಂಸ್ಕೃತಿಯ ಪ್ರತಿಬಿಂಬ. ಸ್ಥಳೀಯ ಸಂಪತ್ತನ್ನು ಬಳಸಿ ಸಾಂಪ್ರದಾಯಿಕವಾಗಿ ತಯಾರಿಸುವ, ಆ ಆಹಾರವಿಲ್ಲದೆ ದೇಶದ ತಿನಿಸುಗಳನ್ನು ಕಲ್ಪನೆಯೂ ಮಾಡಿಕೊಳ್ಳಲಾಗಲ್ಲ ಎಂತಿರುವ, ಹೆಸರು ಕೇಳಿದೊಡನೆ ಅದು ನಮ್ಮದೇ ಎನಿಸುವಂಥ ತಿಂಡಿ ರಾಷ್ಟ್ರೀಯ ತಿನಿಸು ಎನಿಸಿಕೊಳ್ಳುತ್ತದೆ. ರಾಷ್ಟ್ರೀಯ ತಿನಿಸನ್ನು ಮತದಾನದ ಮೂಲಕ ಸಂಬಂಧಿಸಿದ ಸಂಸ್ಥೆಗಳು ತೀರ್ಮಾನಿಸುತ್ತವೆ. ಭಾರತ ಹಾಗೂ ಇತರೆ ರಾಷ್ಟ್ರಗಳ ರಾಷ್ಟ್ರೀಯ ತಿನಿಸುಗಳ ಬಗ್ಗೆ ಮಾಹಿತಿ ಇಲ್ಲಿದೆ...

ಭಾರತ
ಅಕ್ಕಿ ಹಾಗೂ ಕಾಳುಗಳನ್ನು ಬಳಸಿ ತಯಾರಿಸುವ ಕಿಚಡಿಗೆ ನಮ್ಮ ರಾಷ್ಟ್ರೀಯ ತಿನಿಸು ಎಂಬ ಹೆಗ್ಗಳಿಕೆ ಇದೆ. ಇದು ಮಕ್ಕಳಿಂದ ಹಿಡಿದು ಮುದುಕರವರೆಗೆ ಆರಾಮಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವಂಥ ಆಹಾರವಾಗಿದ್ದು, ಇದೇ ಕಾರಣಕ್ಕೆ ಬಹುಜನ ಪ್ರಿಯವಾಗಿದೆ. ಸೂಪರ್ ಹೆಲ್ದೀ ಆಹಾರ ಎನಿಸಿಕೊಂಡಿರುವ ಕಿಚಡಿಯು ಹೆಚ್ಚಿನ ಶಕ್ತಿ ನೀಡುತ್ತದೆ. 

ಅಫ್ಘಾನಿಸ್ತಾನ
ಉದ್ದುದ್ದ ಬಾಸುಮತಿ ಅಕ್ಕಿಯನ್ನು ಮೀಟ್ ಬ್ರೋತ್‌ನಲ್ಲಿ ಸ್ಟ್ರೀಮ್ ಮಾಡಿ, ಕಾಳುಗಳು, ಕುರಿ ಮಾಂಸ, ಡ್ರೈಫ್ರೂಟ್ಸ್, ಕ್ಯಾರೆಟ್ ಸೇರಿಸಿ ತಯಾರಿಸುವ ಕಾಬುಲಿ ಪುಲಾವ್ ಅಫ್ಘಾನಿಸ್ಥಾನದ ರಾಷ್ಟ್ರೀಯ ತಿನಿಸಾಗಿದೆ.

ಆಸ್ಟ್ರೇಲಿಯಾ
ಮುಷ್ಠಿ ಗಾತ್ರದ ಮೈದಾದಿಂದ ಬೇಕ್ ಮಾಡಿದ ತಿನಿಸೊಳಗೆ ಚೀಸ್ ಹಾಗೂ ಗ್ರೌಂಡ್ ಮೀಟ್ ಗ್ರೇವಿ ಹಾಕಿ ತಯಾರಿಸುವ ಮೀಟ್ ಪೈ ಆಸ್ಟ್ರೇಲಿಯಾದ ರಾಷ್ಟ್ರೀಯ ತಿನಿಸು. ಇದರಲ್ಲಿ ಈರುಳ್ಳಿ ಹಾಗೂ ಅಣಬೆ ಸೇರಿಸಲಾಗುತ್ತದೆ. ಟೊಮ್ಯಾಟೋ ಕೆಚಪ್‌ನೊಂದಿಗೆ ಸೇವಿಸಲಾಗುತ್ತದೆ. 

ಭಾನುವಾರದ ಬಾಯಿ ರುಚಿಗೆ ಪಲಾವ್

ಫ್ರಾನ್ಸ್
ಪಾಟ್-ಔ-ಫ್ಯು ಎಂಬುದು ಫ್ರಾನ್ಸ್ನ ರಾಷ್ಟ್ರೀಯ ಆಹಾರವಾಗಿದ್ದು, ತರಕಾರಿಗಳು ಹಾಗೂ ಮಾಂಸವನ್ನು ನಿಧಾನವಾಗಿ ಬೇಯಿಸಿ ತಯಾರಿಸಲಾಗುತ್ತದೆ.

ಜಪಾನ್
ಕಟ್ಸುದಾನ್ ಎಂಬ ಜಪಾನಿ ಖಾದ್ಯವನ್ನು ಅನ್ನದ ಬಟ್ಟಲ ಮೇಲೆ ಪೋರ್ಕ್ ಕಟ್ಲೆಟ್, ಮೊಟ್ಟೆಗಳು ಹಾಗೂ ತರಕಾರಿಗಳೊಂದಿಗೆ ನೀಡಲಾಗುತ್ತದೆ. 

ಬ್ರೆಜಿಲ್
ಕಿಡ್ನಿ ಬೀನ್ಸನ್ನು ಬೀಫ್ ಹಾಗೂ ಪೋರ್ಕ್ ಜೊತೆ ಬೇಯಿಸಿ ತಯಾರಿಸುವ ಫೆಜೋಡಾ ಬ್ರೆಜಿಲ್‌ನ ನ್ಯಾಶನಲ್ ಡಿಶ್. ಕೆಲವೊಮ್ಮೆ ಇದರೊಂದಿಗೆ ಟೊಮ್ಯಾಟೋ, ಆಲೂಗಡ್ಡೆ, ಕ್ಯಾರೆಟ್‌ಗಳನ್ನೂ ಸೇರಿಸಲಾಗುತ್ತದೆ. 

ಇಂಗ್ಲೆಂಡ್
ಹುರಿದ ಬೀಫ್ ಹಾಗೂ ಯೋರ್ಕ್‌ಶೈರ್ ಪುಡ್ಡಿಂಗ್ ಇಂಗ್ಲೆಂಡ್‌ನ ಸಾಂಪ್ರದಾಯಿಕ ಆಹಾರ. ಇದನ್ನು ಮ್ಯಾರಿನೇಟೆಡ್ ಬೀಫ್ ಬಳಸಿ ತಯಾರಿಸಲಾಗುತ್ತದೆ. ರೋಸ್ಟ್ ಮಾಡಿದ ಆಲೂಗಳೊಂದಿಗೆ ಸರ್ವ್ ಮಾಡಲಾಗುತ್ತದೆ. 

ಯುನೈಟೆಡ್ ಸ್ಟೇಟ್ಸ್
ಹ್ಯಾಂಬರ್ಗರ್ ಅಮೆರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರೀಯ ತಿನಿಸು. ಸಾಮಾನ್ಯವಾಗಿ ನಾವಿದನ್ನು ಬರ್ಗರ್ ಎನ್ನುತ್ತೇವೆ. ಬನ್ ಅಥವ ಕತ್ತರಿಸಿದ ಬ್ರೆಡ್ ರೋಲ್‌ನಿಂದ ತಯಾರಿಸುವ ಸ್ಯಾಂಡ್‌ವಿಚ್ ಇದಾಗಿದ್ದು, ಬೇಯಿಸಿದ ಬೀಫ್ ಪ್ಯಾಟೀಸ್‌, ತರಕಾರಿಗಳು ಹಾಗೂ ಸಾಸ್‌ನ್ನು ಇದರ ಮಧ್ಯೆ ಇಡಲಾಗುತ್ತದೆ. ನಂತರ ಗ್ರಿಲ್ ಮಾಡಿ ಸೇವಿಸಲಾಗುತ್ತದೆ. 

ಟೊಮ್ಯಾಟೋ ಸೇವ್ ಮಾಡೋದು ಹೀಗೆ...

ಕೆನಡಾ
ಪೌಟಿನ್ ಎಂಬ ಈ ತಿನಿಸು ಚೀಸ್ ತುಂಬಿದ ಫ್ರೆಂಚ್ ಫ್ರೈಸ್ ಹೊಂದಿದ್ದು, ಮೇಲಿನಿಂದ ಚಿಕನ್ ಅಥವಾ ಟರ್ಕಿಯ ಬ್ರೌನ್ ಗ್ರೇವಿ ಹಾಕಲಾಗಿರುತ್ತದೆ. ಇದನ್ನು ಚೀಸ್ ಡಿಪ್‌ನೊಂದಿಗೆ ಸರ್ವ್ ಮಾಡಲಾಗುತ್ತದೆ. 

ಚೀನಾ
ಚೇಳಿನಿಂದ ಹಿಡಿದು ನಾಯಿಯವರೆಗೆ ಚೀನೀಯರು ಸೇವಿಸುವಾಗ ಅವರ ರಾಷ್ಟ್ರೀಯ ಆಹಾರ ಯಾವುದೆಂಬುದು ಕುತೂಹಲ ಹುಟ್ಟಿಸುವುದು ಹೌದು. ಪೆಂಕಿಂಗ್ ಡಕ್ ಎಂಬ ಖಾದ್ಯವನ್ನು ಚೀನಾದ ರಾಷ್ಟ್ರೀಯ ತಿನಿಸಾಗಿ ಘೋಷಿಸಲಾಗಿದೆ. ಓವನ್‌ನಲ್ಲಿ ಮಾಲ್ಟೋಸ್ ಸಿರಪ್ ಗ್ಲೇಜ್ಡ್ ಡಕ್ಕನ್ನು ರೋಸ್ಟ್ ಮಾಡಲಾಗುತ್ತದೆ. ಬಳಿಕ ಚರ್ಮವನ್ನು ಸಕ್ಕರೆ ಹಾಗೂ ಬೆಳ್ಳುಳ್ಳಿ ಸಾಸ್‌ನೊಂದಿಗೆ ನೀಡಿದರೆ ಮಾಂಸವನ್ನು ಸ್ವೀಟ್ ಬೀನ್ ಸಾಸ್‌ನೊಂದಿಗೆ ಸರ್ವ್ ಮಾಡಲಾಗುತ್ತದೆ. ಸ್ಪ್ರಿಂಗ್ ಆನಿಯನ್ಸ್, ಪಾನ್‌ಕೇಕ್ ಹಾಗೂ ಸೌತೆಕಾಯಿ ಸ್ಟಿಕ್‌ನೊಂದಿಗೆ ನೀಡಲಾಗುತ್ತದೆ. 

ಥೈಲ್ಯಾಂಡ್
ಪಾಡ್ ಥೈ ಎಂಬ ಫ್ರೈಡ್ ರೈಸ್ ನೂಡಲ್ಸ್ ಥೈಲ್ಯಾಂಡ್‌ನ ರಾಷ್ಟ್ರೀಯ ತಿನಿಸು. ಇದಕ್ಕೆ ಮೊಟ್ಟೆ, ಮೀನಿನ ಸಾಸ್, ಹುಣಸೆಹುಳಿ ಪಲ್ಪ್, ಮೊಳಕೆ ಬರಿಸಿದ ಬೀನ್ಸ್, ಹುರಿದು ಪುಡಿ ಮಾಡಿದ ಕಡಲೆಕಾಳು, ಚಿಕನ್ ಬಿಟ್ಸ್ ಹಾಗೂ ಯಾವುದಾದರೂ ಸೀಫುಡ್ ಸೇರಿಸಲಾಗಿರುತ್ತದೆ. 

ವಿವಿಧ ದಾಲ್ ಕಮಾಲ್ ಮಾಡೋದು ಹೀಗೆ...

Follow Us:
Download App:
  • android
  • ios