ಕ್ಯಾಂಡಿ ಕ್ರಶ್‌ ಆಟ ಗೊತ್ತು ಪರೋಟಾ ಗೊತ್ತಾ... ಇಲ್ಲಿದೆ ನೋಡಿ

  • ದೆಹಲಿಯ ಜನಪ್ರಿಯ ಗಲ್ಲಿಯಲ್ಲಿ ಸಿಗುತ್ತೆ ಕ್ಯಾಂಡಿಕ್ರಶ್‌ ಪರೋಟಾ
  • ಪರೋಟಾ ತಿಂದು ಹೇಗಿದೆ ಎಂದ ಫುಡ್‌ ಬ್ಲಾಗರ್
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
Food blogger eat famous candy crush parota watch her reaction akb

ದೆಹಲಿ: ನೀವು ಕ್ಯಾಂಡಿ ಕ್ರಶ್‌ ಆಟ ಕೇಳಿರಬಹುದು ಆದರೆ ಪರೋಟಾ ಬಗ್ಗೆ ಗೊತ್ತಾ..? ದೆಹಲಿಯ ಜನಪ್ರಿಯ ಪರಾಟೆ ವಾಲೆ ಗಲ್ಲಿಯ ಫುಡ್‌ ಸ್ಟಾಲ್‌ ವೊಂದರಲ್ಲಿ ಫೇಮಸ್‌ ಕ್ಯಾಂಡಿ ಕ್ರಶ್‌ ಪರೋಟಾ ಮಾಡಲಾಗುತ್ತಿದೆ. ಫುಡ್‌ ಬ್ಲಾಗರ್ ಒಬ್ಬರು ಇನ್ಸ್ಟಾಗ್ರಾಮ್‌ನಲ್ಲಿ ಈ ಕ್ಯಾಂಡಿಕ್ರಶ್‌ ಪರೋಟಾ ತಿಂದು ಹೇಗಿದೆ ಎಂದು ಹೇಳುತ್ತಿರುವ ವಿಡಿಯೋ ಇದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

ಇನ್ನು ಈ ಪರಾಟೆ ವಾಲಿ ಗಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಚಾಂದಿನಿ ಚೌಕ್‌ ಬಳಿ ಇದ್ದು, ಭಿನ್ನ ವಿಭಿನ್ನ ಪರೋಟಗಳಿಗೆ ಇದು ಫೇಮಸ್‌ ಆಗಿದೆ.  ಇಲ್ಲಿ ನೀವು ನೂರಾರು ಬಗೆಯ ಪರೋಟಾಗಳನ್ನು ಕಾಣಬಹುದು ಹಾಗೂ ರುಚಿ ನೋಡಬಹುದು. ಖಾರವಾದ ಮಿರ್ಚಿ ಪರೋಟಾದಿಂದ ಹಿಡಿದು ಸವೊರಿ ಪಪಡ್ ಪರೋಟಾ, ಬಿಂಡಿ ಪರೋಟಾ, ಮವಾ ಪರೋಟಾದವರೆಗೆ ಇಲ್ಲಿ ಸಿಗುವ ಪರೋಟಾಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇಲ್ಲಿನ ಶಾಪ್‌ಗಳು  ಅಲೂಗಡ್ಡೆ ಕರಿಯೊಂದಿಗೆ ಬಿಸಿ ಬಿಸಿಯಾದ ಪರೋಟಾಗಳನ್ನು ನೀಡುತ್ತವೆ.

ಈ ಕಾರಣಕ್ಕೆ ಈ ಪರಾಟೆ ವಾಲಿ ಗಲ್ಲಿ ನೂರಾರು ಪ್ರವಾಸಿಗರನ್ನ ಆಕರ್ಷಿಸುತ್ತಿದೆ. ಇಲ್ಲಿಗೆ ದಿವೊಂದಕ್ಕೆ ಸಾವಿರಾರು ಮಂದಿ ಆಗಮಿಸುತ್ತಿರುತ್ತಾರೆ. ಈ ಟ್ರೆಂಡ್‌ನಿಂದಾಗಿ ಇನ್ಸ್ಟಾಗ್ರಾಮ್‌ನಲ್ಲಿ ಚಾಟ್‌ ಆನಂದ್‌ ಎಂದು ಖಾತೆ ಹೊಂದಿರುವ  ಫುಡ್‌ ಬ್ಲಾಗರ್‌ ಒಬ್ಬರು ವಿಭಿನ್ನವಾದುದರ ರುಚಿ ನೋಡಲು ಈ ಸ್ಥಳಕ್ಕೆ ಭೇಟಿ ನೀಡಿದ್ದರು. 

Sugar Tips: ಶುಗರ್ ಇದ್ಯಾ? ನಿಶ್ಚಿಂತೆಯಿಂದ ಇವುಗಳನ್ನು ಸೇವಿಸಿ

ಇಲ್ಲಿ ಫುಡ್‌ ಬ್ಲಾಗರ್‌ ಕ್ಯಾಂಡಿ ಕ್ರಶ್‌ ಪರೋಟಾವನ್ನು ತಿಂದಿದ್ದು, ಇದರಲ್ಲಿ ಬಣ್ಣ ಬಣ್ಣದ ಕ್ಯಾಂಡಿಗಳು ಹಾಗೂ ಜುಜುಬಿಗಳಿದ್ದವು. ಅಲ್ಲದೇ ಇದನ್ನು ಡೀಪ್‌ ಆಗಿ ಫ್ರೈ ಮಾಡಲಾಗಿತ್ತು.  ನೋಡುವುದಕ್ಕೆ ಇದು ಕಲಜೊನ್‌(calzone) ತರ ಕಾಣಿಸುತ್ತಿದೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ಕ್ಯಾಂಡಿ ಕ್ರಷ್ ಪರೋಟಾವನ್ನು ತಿನ್ನಲು ಬಯಸುವ ಯಾರೊಂದಿಗಾದರೂ ಈ ವಿಡಿಯೋವನ್ನು ಶೇರ್‌ ಮಾಡಿ. ಅವರಿಗೆ ಇದರ ಬಗ್ಗೆ ಐಡಿಯಾ ಸಿಗುವುದು. ಮಕ್ಕಳಿಗೆ ಇದು ಇಷ್ಟವಾಗಬಹುದು ಎಂದು ಬರೆದುಕೊಂಡಿದ್ದಾರೆ. 

Kids Health: ಮಕ್ಕಳಿಗೆ 2 ವರ್ಷ ತುಂಬುವ ಮೊದಲು ಸಕ್ಕರೆಯನ್ನು ಕೊಡಲೇಬೇಡಿ

ಈ ವಿಡಿಯೋವನ್ನು 4 ಲಕ್ಷಕ್ಕೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ. ಸಾವಿರಾರು ಕಾಮೆಂಟ್‌ ಮಾಡಿದ್ದಾರೆ. ಈ ಸ್ವೀಟ್ ಪರೋಟ ಜೊತೆ ಅಲೂಗ್ಡೆ ಪಲ್ಯ ಇದ್ದರೆ ವಿಭಿನ್ನವಾಗಿರುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.  ಪರೋಟಾಗಳಿಗೆ ವರ್ಣರಂಜಿತ ಮಿಠಾಯಿಗಳನ್ನು ಸೇರಿಸುವ ಕಲ್ಪನೆ ಎಲ್ಲರಿಗೂ ಇಷ್ಟವಾಗದು. ನಾನು ಅದನ್ನು ಎಂದಿಗೂ ತಿನ್ನುವುದಿಲ್ಲ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
 

Latest Videos
Follow Us:
Download App:
  • android
  • ios