ಬೀದಿಬದಿಯಲ್ಲಿ ಡಾಕ್ಟರ್‌ ಫುಡ್‌ ಸ್ಟಾಲ್‌ ! ಜಸ್ಟ್‌ 40 ರೂ. ಸಿಗುತ್ತೆ ವೆರೈಟಿ ಊಟ

ದುಬಾರಿ ದುನಿಯಾ ಇದು. ಎಲ್ಲವೂ ದುಬಾರಿ (Costly)ಯಾಗಿರುವುದರ ಜತೆಗೆ ತಿನ್ನುವ ಆಹಾರದ (Food) ಬೆಲೆಯೂ ಕಡಿಮೆಯೇನಿಲ್ಲ. ಕೈ ತುಂಬಾ ಕಾಸಿಲ್ಲದೆ ಹೊಟೇಲ್‌ (Hotel)ಗೆ ಹೋಗುವುದು ಕಷ್ಟ. ಸಾಮಾನ್ಯ ಊಟ ಮಾಡ್ಬೇಕು ಅಂದ್ರು 50,100 ರೂ. ಆಗುತ್ತೆ. ಸ್ಪಲ್ಪ ಜಾಸ್ತಿ ಐಟಂ ಇದ್ರೆ ಮತ್ತೆ ಹೇಳೋದೆ ಬೇಡ. ಆದ್ರೆ ಇಲ್ಲೊಬ್ರು ಜಸ್ಟ್‌ 40 ರೂಪಾಯಿಗೆ ಹೊಟ್ಟೆತುಂಬಾ ಊಟ ಕೊಡ್ತಾರೆ. ಯಾರವರು ತಿಳಿದುಕೊಳ್ಳೋಣ.

Doctor Selling Fresh Homemade Food For Low Price Wins The Heart Of The Internet Vin

ಇವತ್ತಿನ ಕಾಲದಲ್ಲಿ ಹೊಟೇಲ್‌ (Hotel), ರೆಸ್ಟೋರೆಂಟ್‌ಗೆ ಹೋಗುವಾಗ ಜೇಬು ತುಂಬಾ ದುಡ್ಡಂತೂ ಇರಲೇಬೇಕು. ಮನೇಲಿ ತಿನ್ನೋ ಸಾದಾ ಆಹಾರ (Food) ವನ್ನೇ ಸ್ಟೈಲಿಶ್ ಆಗಿ ಅಲಂಕರಿಸಿ ತಂದು 200, 300 ರೂ. ಎಂದು ಹೇಳಿಬಿಡುತ್ತಾರೆ. ಅಷ್ಟೆಲ್ಲಾ ದುಡ್ಡು ಕೊಟ್ರೂ ಹೊಟ್ಟೆ ತುಂಬಾ ತಿನ್ನುವಷ್ಟು ಆಹಾರವಂತೂ ಅದರಲ್ಲಿರಲ್ಲ. ಹೀಗಾಗಿ ಜನಸಾಮಾನ್ಯರು ಹೆಚ್ಚಾಗಿ ದೊಡ್ಡ ದೊಡ್ಡ ಹೊಟೇಲ್‌, ರೆಸ್ಟೋರೆಂಟ್‌ಗಳ ಸಹವಾಸಾನೇ ಬೇಡ ಅಂತ ಸ್ಟ್ರೀಟ್‌ ಫುಡ್‌ (Street Food) ಮೊರೆ ಹೋಗ್ತಾರೆ. ಕಡಿಮೆ ದುಡ್ಡಿಗೆ ಹೊಟ್ಟೆ ತುಂಬಾ ತಿನ್ನಲು ಸಾಧ್ಯವಾಗುತ್ತದೆ. ಹೆಚ್ಚು ರುಚಿಕರವೂ ಆಗಿರುತ್ತದೆ. ಹೀಗೆಯೇ ಇಲ್ಲೊಬ್ಬರು ರಸ್ತೆಬದಿಯಲ್ಲಿ ಆಹಾರವನ್ನು ಮಾರಾಟ ಮಾಡುತ್ತಿದ್ದಾರೆ. ಅದು ಕೇವಲ 40 ರೂಪಾಯಿಗೆ.

ಆಶ್ಚರ್ಯ ಪಡುವ ವಿಚಾರ ಏನಪ್ಪಾ ಅಂದ್ರೆ ಈ ರೀತಿ ಕಡಿಮೆ ಬೆಲೆಗೆ ರುಚಿಕರವಾಗಿ ಆಹಾರ ಪೂರೈಕೆ ಮಾಡುತ್ತಿರೋದು ವೃತ್ತಿಯಲ್ಲಿ ಡಾಕ್ಟರ್‌ (Doctor). ಈ ವೈದ್ಯರು ಮನೆಯಲ್ಲಿ ತಯಾರಿಸಿದ ತಾಜಾ ಆಹಾರವನ್ನು ಮಾರಾಟ ಮಾಡಲು ಕಾರಣವೇನು ಎಂದು ನೀವು ಯೋಚಿಸುತ್ತಿದ್ದರೆ, ಕಾರಣವೇನು ನಾವು ಹೇಳುತ್ತೇವೆ.

ಹಾಲು ಬೇಡ ಅನ್ನೋರು ಪೌಷ್ಠಿಕಾಂಶಕ್ಕಾಗಿ ಈ ಬದಲಿ ಆಹಾರ ಸೇವಿಸಿ

ಬೀದಿ ಬದಿಯಲ್ಲಿ ಸಿಗುವ ಊಟ ಕಡಿಮೆ ಬೆಲೆಗೂ ಸಿಗುತ್ತದೆ ಮತ್ತು ಹೊಟ್ಟೆಯೂ ತುಂಬುತ್ತದೆ. ಇದೇ ಉದ್ದೇಶವನ್ನು ಇಟ್ಟುಕೊಂಡು ಹಸಿದವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಮನೆಯಲ್ಲಿಯೇ ಮಾಡಿದ ರುಚಿಕರವಾದ ಊಟ ನೀಡುವ ಮಹತ್ತರವಾದ ಕಾರ್ಯವನ್ನು ಮುಂಬೈನಲ್ಲಿ ಡಾ. ಸುನೀತಾ ಎಂಬುವವರು ಮಾಡುತ್ತಿದ್ದಾರೆ. ವೈದ್ಯರು ಬೀದಿ ಬದಿಯಲ್ಲಿ ಆಹಾರ ಮಾರುತ್ತಿದ್ದಾರಾ..? ಎಂದು ನಿಮಗೆ ಆಶ್ಚರ್ಯವಾಗಬಹುದು, ಆದರೆ ಇದು ನಿಜ. ಸುನೀತಾ ಅವರು ವೈದ್ಯ ವೃತ್ತಿಯೊಂದಿಗೆ ಹಲವಾರು ವರ್ಷಗಳಿಂದ ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂ ಫುಡ್‌ ಬ್ಲಾಗರ್ @the_temptaionally ಅಪ್‌ಲೋಡ್ ಮಾಡಿದ ವೀಡಿಯೊ (Video)ದಲ್ಲಿ, 55 ವರ್ಷ ವಯಸ್ಸಿನ ಡಾ. ಸುನೀತಾ ಅವರು ತಮ್ಮ ಪತಿಯೊಂದಿಗೆ ಕಳೆದ 30 ವರ್ಷಗಳಿಂದ ಆಹಾರ ಮಳಿಗೆಯನ್ನು ನಡೆಸುತ್ತಿದ್ದಾರೆ ಎಂದು ಅವರು ಹೇಳುತ್ತಾರೆ. ಅವರು ಪೌಷ್ಟಿಕತಜ್ಞ ಮತ್ತು ಆಹಾರ ತಜ್ಞರಾಗಿದ್ದಾರೆ. ಯಾರು ಬೇಕಾದರೂ ನಾಲ್ಕು ಕೆಲಸಗಳನ್ನು ನಿಭಾಯಿಸಬಲ್ಲರು ಎಂಬುದು ಆಕೆಯ ತತ್ವ, ಹಾಗಾಗಿ ವೃತ್ತಿಯ ಜೊತೆಗೆ ಆಹಾರದ ಅಂಗಡಿಯನ್ನೂ ನಡೆಸುತ್ತಾರೆ. ಇನ್ಸ್ಟಾಗ್ರಾಮ್ ಆಹಾರ ಬ್ಲಾಗರ್ ಅವರು ಆಹಾರ ಮಳಿಗೆಯಲ್ಲಿ ಕೆಲಸ ಮಾಡುವ ವೀಡಿಯೊವನ್ನು ಅಪ್ಲೋಡ್ ಮಾಡಿದ್ದಾರೆ. ವೀಡಿಯೊದಲ್ಲಿ, ಅವಳು ಮೇಜಿನ ಹಿಂದೆ ನಿಂತಿರುವುದನ್ನು ಮತ್ತು ಅವr ಮುಂದೆ ಆಹಾರ ತುಂಬಿದ ಪಾತ್ರೆಗಳನ್ನು ನೋಡಬಹುದು. 

ಕಡಿಮೆ ಬೆಲೆಗೆ ತಾಜಾ ಮನೆಯಲ್ಲಿ ತಯಾರಿಸಿದ ಆಹಾರವನ್ನು ಮಾರಾಟ ಮಾಡುವ ವೈದ್ಯರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ. ಇತ್ತೀಚಿಗೆ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಸುದ್ದಿ ಮಾಡಿದ್ದು, ವೈದ್ಯರು ರುಚಿಕರವಾದ ಮನೆಯಲ್ಲಿ ತಯಾರಿಸಿದ ಆಹಾರವನ್ನು ಮಾರಾಟ ಮಾಡುವುದನ್ನು ಮತ್ತು ತಯಾರಿಸುವುದನ್ನು ವಿಡಿಯೋದಲ್ಲಿ ನೋಡಬಹುದು.

ಅಡುಗೆ ಎಣ್ಣೆ ಎರಡನೇ ಸಲ ಕುದಿಸುವ ತಪ್ಪು ಮಾಡಲೇಬೇಡಿ ! 

ವೈದ್ಯೆ ಸುನೀತಾ ಅವರು ನೀಡುವ ಊಟದ ಬೆಲೆ ಕೇವಲ 40 ರೂ ಆಗಿದೆ. ಕಡಿಮೆ ಬೆಲೆಯಲ್ಲಿ ಅನ್ನ, ಸಾರು ಅಷ್ಟೇ ಕೊಡಬಹುದು ಎಂದು ನೀವು ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಕೇವಲ 40 ರೂಪಾಯಿಯ ಕಡಿಮೆ ಬೆಲೆಯಲ್ಲಿ ಅವರು ದಾಲ್, ಅನ್ನ, ರೊಟ್ಟಿ, ಸಬ್ಜಿ, ಪೂರಿ, ಉಪ್ಪಿನಕಾಯಿ ಮತ್ತು ಪಾಪಡ್ ಅನ್ನು ನೀಡುತ್ತಿದ್ದಾರೆ. ಮನೆಯೂಟದ ರುಚಿಯನ್ನು ಸವಿಯಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಇಲ್ಲಿ ಊಟ ಮಾಡುತ್ತಾರೆ ಎಂದು ಫುಡ್ ಬ್ಲಾಗರ್ ಹೇಳಿದ್ದಾರೆ.

ಈ ವಿಡಿಯೊವನ್ನು ಅಪ್ಲೋಡ್ ಮಾಡಿದಾಗಿನಿಂದ ಇದನ್ನು 3 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, 27 ಸಾವಿರಕ್ಕೂ ಅಧಿಕ ಲೈಕ್ಸ್ ಮತ್ತು ಬಳಕೆದಾರರಿಂದ ಹಲವಾರು ಕಾಮೆಂಟ್‌ಗಳು ಆಕೆಯ ಶ್ರಮವನ್ನು ಶ್ಲಾಘಿಸಿವೆ. 

Latest Videos
Follow Us:
Download App:
  • android
  • ios