ಆಯುರ್ವೇದದಲ್ಲಿ ಆಮ್ಲವನ್ನು ಸೂಪರ್‌ಫುಡ್ ಎಂದೇ ಪರಿಗಣಿಸಲಾಗುತ್ತದೆ. ಹಲವಾರು ಔಷಧಿಗಳಲ್ಲಿ ನೆಲ್ಲಿಕಾಯಿ ಬಳಕೆ ಮಾಡಲಾಗುತ್ತದೆ. ಅಸ್ಕೋರ್ಬಿಕ್ ಆ್ಯಸಿಡ್ ಹಾಗೂ ವಿಟಮಿನ್ ಸಿಗಳ ಪವರ್‌ಹೌಸ್ ಆಗಿರುವ ನೆಲ್ಲಿಕಾಯಿ ರೋಗ ನಿರೋಧಕ ವ್ಯವಸ್ಥೆ ಬಲಗೊಳಿಸಿ, ದೇಹದಲ್ಲಿ ಕೊಲಾಜನ್ ಉತ್ಪಾದನೆ ಹೆಚ್ಚಿಸುತ್ತದೆ. 100 ಗ್ರಾಂನಷ್ಟು ನೆಲ್ಲಿಕಾಯಿಯಲ್ಲಿ 41.6 ಗ್ರಾಂನಷ್ಟು ವಿಟಮಿನ್ ಸಿ ನೇ ಇರುತ್ತದೆ ಎಂದರೆ ಅದು ರೋಗ ನಿರೋಧಕವಾಗಿ, ತ್ವಚೆಯ ಹಾಗೂ ಕೂದಲಿನ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ನೀವೇ ಕಲ್ಪಿಸಿಕೊಳ್ಳಿ. ಇದರ ಹೊರತಾಗಿ ಆಮ್ಲದಲ್ಲಿ ಹಲವಾರು ಮಿನರಲ್ಸ್ ಹಾಗೂ ವಿಟಮಿನ್ಸ್ ಇದ್ದು, ಬ್ಲಡ್ ಶುಗರ್ ಹಾಗೂ ಕೊಲೆಸ್ಟೆರಾಲ್ ಮಟ್ಟ ನಿಯಂತ್ರಿಸುವಲ್ಲಿ ಅವು ಸಹಕರಿಸುತ್ತವೆ. 

ಇಂಥ ಈ ನೆಲ್ಲಿಕಾಯಿಯನ್ನು ಹಾಗೆಯೇ ಉಪ್ಪು ಹಾಕಿಕೊಂಡು ತಿನ್ನುವ, ಒಪ್ಪಿನೊಂದಿಗೆ ಒಣಗಿಸಿ ಸೇವಿಸುವ ರುಚಿಯ ಮಜಾದ ಅನುಭವ ನಿಮಗಿರಬಹುದು. ಇದರ ಜೊತೆಗೆ, ನೆಲ್ಲಿಕಾಯಿಯಿಂದ ಹಲವಾರು ರುಚಿಕರ ಅಡುಗೆ ಪದಾರ್ಥಗಳನ್ನೂ ತಯಾರಿಸಬಹುದು. 

ಆಮ್ಲ ಫ್ರೆಶನರ್
ನೆಲ್ಲಿಕಾಯಿಯ ರಸ ತೆಗೆದು ಅದನ್ನು ತಾಜಾ ನಿಂಬೆ ಹಾಗೂ ಶುಂಠಿಯ ರಸದೊಂದಿಗೆ ಸೇರಿಸಿ. ಇದಕ್ಕೆ ಹುರಿದ ಜೀರಿಗೆ ಹಾಕಿ. ಸ್ವಲ್ಪ ಉಪ್ಪು, ಸಕ್ಕರೆ ಹಾಗೂ ಪುದೀನಾ ಎಲೆಗಳನ್ನು ಹಾಕಿ ಚೆನ್ನಾಗಿ ಬೆರೆಸಿ. ಸಕ್ಕರೆ ಬದಲಿಗೆ ಜೇನುತುಪ್ಪವನ್ನು ಕೂಡಾ ಸೇವಿಸಬಹುದು. ಇದೊಂದು ಬಹಳ ರಿಫ್ರೆಶಿಂಗ್ ಆದ ಪಾನೀಯವಾಗುವುದರಲ್ಲಿ ಅನುಮಾನವಿಲ್ಲ. 

ಈಗ ದಿನಾ ದಿನ ಮಾಡಿ ಪುದೀನಾ ಸ್ಪೆಷಲ್, ಬೇಸಿಗೆಗೆ ಬೆಸ್ಟ್ ಮದ್ದು...
ಮಾವು ಹಾಗೂ ನೆಲ್ಲಿ ರೈಸ್
ಅನ್ನಕ್ಕೆ ಸಣ್ಣದಾಗಿ ಹೆಚ್ಚಿದ ಅಥವಾ ತುರಿದ ಮಾವಿನಕಾಯಿ ಮತ್ತು ನೆಲ್ಲಿಕಾಯಿಗಳನ್ನು ಸೇರಿಸಿ, ಸ್ವಲ್ಪ ಉಪ್ಪು ಹಾಕಿ ಕಲಸಿ. ಇದಕ್ಕೆ ಉದ್ದು, ಕಡ್ಲೆಬೇಳೆ, ಸಾಸಿವೆ ಹಾಗೂ ಕರಿಬೇವಿನ ಎಲೆಗಳನ್ನು ಹಾಕಿದ ಒಗ್ಗರಣೆ ಸೇರಿಸಿ. ಹುಳಿಹುಳಿಯಾಗಿ ನಾಲಿಗೆಗೆ ತಾಕುವ ಈ ರೈಸ್ ಗರ್ಭಿಣಿಯರಿಗೆ, ಜ್ವರದಿಂದ ನಾಲಿಗೆ ರುಚಿ ಕಳೆದುಕೊಂಡವರಿಗೆ ಹೇಳಿ ಮಾಡಿಸಿದ್ದು. ನೆಲ್ಲಿಯ ಸತ್ವಗಳನ್ನು ದೇಹಕ್ಕೆ ನೀಡಲು ಇದೊಂದು ಉತ್ತಮ ವಿಧಾನ.

ಆಮ್ಲ ಮುರಬ್ಬಾ
ಮುರಬ್ಬಾ ಎಂಬುದು ತಾಜಾ ನೆಲ್ಲಿಕಾಯಿಯಿಂದ ತಯಾರಿಸುವ ಉಪ್ಪಿನಕಾಯಿ. ನೆಲ್ಲಿಕಾಯಿಗಳನ್ನು ಉಪ್ಪುನೀರಿನಲ್ಲಿ ಕೆಲ ದಿನಗಳ ಕಾಲ ನೆನೆಸಿಡಲಾಗುತ್ತದೆ. ನಂತರ ಅವು ಮೆತ್ತಗಾಗುವವರೆಗೆ ಬೇಯಿಸಲಾಗುತ್ತದೆ. ಶುಗರ್ ಸಿರಪ್‌ನೊಂದಿಗೆ ಈ ಆಮ್ಲ ಉಪ್ಪಿನಕಾಯಿಯನ್ನು ಕೊಡಲಾಗುತ್ತದೆ. ಅಲ್ಪ ಪ್ರಮಾಣದಲ್ಲಿ ಸೇವಿಸಲು ಇವು ಬಲು ರುಚಿ.

ರೆಸ್ಟೋರೆಂಟ್‌ಗಳಲ್ಲಿ ಟುಡೇಸ್ ಸ್ಪೆಷಲ್ ಬೋರ್ಡ್ ಏಕಿರುತ್ತೆ ಗೊತ್ತಾ?...

ನೆಲ್ಲಿಕಾಯಿ ಚಟ್ನಿ
ನೆಲ್ಲಿಕಾಯಿಯನ್ನು ಬೇಯಿಸಿ, ಅದನ್ನು ಮೆಂತ್ಯೆಯೊಂದಿಗೆ ಹುರಿದು, ಕೊತ್ತಂಬರಿ ಪುಡಿ, ಕೆಂಪು ಮೆಣಸಿನ ಹುಡಿ, ತುಳಸಿ ಎಲೆಗಳು ಹಾಗೂ ಉಪ್ಪು ಸೇರಿಸಲಾಗುತ್ತದೆ. ಈ ಎಲ್ಲವನ್ನೂ ಒಟ್ಟಿಗೇ ಬ್ಲೆಂಡ್ ಮಾಡಿ ಪೇಸ್ಟ್ ರೂಪಕ್ಕೆ ತಂದರೆ ನೆಲ್ಲಿಕಾಯಿ ಚಟ್ನಿ ಸಿದ್ಧ.