Asianet Suvarna News Asianet Suvarna News

ಎಳನೀರು, ಕಬ್ಬಿನ ಹಾಲು ಈಗ ಪೌಡರ್‌ ರೂಪದಲ್ಲಿ!

  • ಎಳನೀರು, ಕಬ್ಬಿನ ಹಾಲು ಈಗ ಪೌಡರ್‌ ರೂಪದಲ್ಲಿ!
  • ಮಿಲ್‌ಕ್ ಪೌಡರ್‌ ರೀತಿ ಹೊಸ ಪೌಡರ್‌ ಆವಿಷ್ಕಾರ
  • ನೀರಲ್ಲಿ ಪೌಡರ್‌ ಬೆರೆಸಿದರೆ ಎಳನೀರು, ಕಬ್ಬಿನ ರಸ ಸೃಷ್ಟಿ
  •  ಜಾಗತಿಕ ಹೂಡಿಕೆ ಸಮಾವೇಶದಲ್ಲಿ ಅನಾವರಣ
coconut water sugarcane milk now in powder form rav
Author
First Published Nov 3, 2022, 3:36 AM IST

ಲಿಂಗರಾಜು ಕೋರಾ

ಬೆಂಗಳೂರು (ನ.3) : ಹಾಲಿನಲ್ಲಿನ ನೀರಿನ ಅಂಶವನ್ನು ಸಂಪೂರ್ಣ ಇಂಗಿಸಿ ಹಾಲಿನ ಪೌಡರ್‌ ತಯಾರಿಸುವುದು ಎಲ್ಲರಿಗೂ ಗೊತ್ತು. ಆದರೆ, ಇಲ್ಲೊಂದು ಸಂಸ್ಥೆ ಆಧುನಿಕ ತಂತ್ರಜ್ಞಾನ ಬಳಸಿ ಎಳನೀರು, ಕಬ್ಬಿನ ಹಾಲಿನ ಪೌಡರ್‌ ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿರುವುದು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಗಮನ ಸೆಳೆಯುತ್ತಿದೆ.

ಎದೆ ಗಾತ್ರ ಹೆಚ್ಚಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮಾಡಿಸೋ ಬದಲು ಈ ಫುಡ್ ಸೇವಿಸಿ ನೋಡಿ!

ಅಷ್ಟೇ ಅಲ್ಲ, ಮೊಳಕಾಲ್ಮುರು, ಇಳಕಲ್‌ ಸೀರೆ, ಉಡುಪಿ ಸೀರೆ, ಗುಳೇದಗುಡ್ಡ ಖಣ- ಹೀಗೆ ಅನೇಕ ಬಗೆಯ ಉಡಪುಗಳನ್ನು ತಯಾರಿಸುವ ಕೈಮಗ್ಗ ತಂತ್ರಜ್ಞಾನದ ಯಂತ್ರಗಳು, ಬಾಹ್ಯಾಕಾಶ ತಂತ್ರಜ್ಞಾನ, ನೀರಾವರಿ, ಆಟೋಮೊಬೈಲ್ಸ್‌, ತೈವಾನ್‌ ಮೂಲದ ಪೇಪರ್‌ ಬಾಟಲ್‌ ಉತ್ಪಾದನೆ ಸೇರಿದಂತೆ ಅನೇಕ ತಂತ್ರಜ್ಞಾನಗಳು ಸಮಾವೇಶದಲ್ಲಿ ಅನಾವರಣಗೊಂಡಿವೆ.

ಎಳನೀರು, ಕಬ್ಬಿನ ರಸದ ಪೌಡರ್‌:

ಅರಮನೆ ಮೈದಾನದಲ್ಲಿ ಆರಂಭವಾಗಿರುವ ಮೂರು ದಿನಗಳ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಫುಡಿಯೋ ಫಿಟ್‌ ಎಂಬ ವಿವಿಧ ಆಹಾರೋತ್ಪಾದನ ಸಂಸ್ಥೆ ಫ್ರೀಜ್‌ ಡ್ರೈನ್‌ ತಂತ್ರಜ್ಞಾನ ಬಳಸಿ ಎಳನೀರು, ಕಬ್ಬಿನ ಹಾಲಿನ ಪೌಡರ್‌ ಉತ್ಪಾದಿಸಿ ಅದನ್ನು ಕನಿಷ್ಠ 15 ಗ್ರಾಂ.ನಿಂದ ನೂರಿನ್ನೂರು ಗ್ರಾಂ ವರೆಗಿನ ಪ್ಯಾಕ್‌ಗಳನ್ನು ಮಾಡಿ ಮಾರಾಟ ಮಾಡುತ್ತಿದೆ. ಈ ಪೌಡರ್‌ ಬಳಸಿ ಐದೇ ನಿಮಿಷದಲ್ಲಿ ಮತ್ತೆ ಎಳನೀರು, ಕಬ್ಬಿನ ಹಾಲು ತಯಾರಿಸಿ ಕುಡಿಯಬಹುದು.

ಪ್ರತಿ 15 ಗ್ರಾಂ. ಪ್ಯಾಕ್‌ನಲ್ಲಿನ ಎಳನೀರು ಪೌಡರ್‌ಗೆ 200 ಮಿ.ಲೀಟರ್‌ ನೀರು ಬೆರೆಸಿದರೆ ಎಳನೀರು ರೆಡಿಯಾಗುತ್ತದೆ. ಅದೇ ರೀತಿ ಕಬ್ಬಿನ ಹಾಲಿನ ಪೌಡರ್‌ಗೂ ನೀರು ಬೆರೆಸಿದರೆ ಕಬ್ಬಿನ ಹಾಲು ಸಿದ್ಧವಾಗುತ್ತದೆ ಎನ್ನುತ್ತಾರೆ ಈ ಸಂಸ್ಥೆಯ ಮುಖ್ಯಸ್ಥೆ ಅಪೂರ್ವ ಗುರುರಾಜ್‌ ತಿಳಿಸಿದರು.

ಇದೇ ಮೊದಲು:

ಫ್ರೀಸ್‌ ಡ್ರೈನ್‌ ತಂತ್ರಜ್ಞಾನ ಬಳಸಿ ಈಗಾಗಲೇ ವಿವಿಧ ಹಣ್ಣು, ತರಕಾರಿ, ಸೂಫ್‌, ಕಾಫಿ ಪೌಡರ್‌ ಉತ್ಪಾದನೆ ಆಗುತ್ತಿದೆ. ಆದರೆ, ಎಳನೀರು ಮತ್ತು ಕಬ್ಬಿನ ಹಾಲಿನ ಪೌಡರ್‌ ಉತ್ಪಾದಿಸುತ್ತಿರುವುದು ನಮ್ಮ ಸಂಸ್ಥೆಯೇ ಮೊದಲು. ಆದರೆ, ಈ ತಂತ್ರಜ್ಞಾನದ ಮೂಲಕ ಎಳನೀರಿನಲ್ಲಿರುವ ನೀರಿನ ಅಂಶ ತೆಗೆದು ಉಳಿದ ಸೋಡಿಯಂ, ಪೊಟ್ಯಾಷಿಯಂ, ಉಪ್ಪಿನ ಅಂಶಗಳನ್ನು ಹಾಗೇ ಉಳಿಸಿ ಪ್ಯಾಕ್‌ಮಾಡಲಾಗುತ್ತದೆ. ಒಂದು ಎಳನೀರನ್ನು ಈ ತಂತ್ರಜ್ಞಾನದಲ್ಲಿ ಶೋಧಿಸಿದಾಗ ಸುಮಾರು 15 ಗ್ರಾಂ.ನಷ್ಟುಪೌಡರ್‌ ಸಿಗಲಿದೆ. ಇದಕ್ಕೆ 200 ಮಿಲಿ ಲೀಟರ್‌ ನೀರು ಮಿಕ್ಸ್‌ ಮಾಡಿದಾಗ ಮತ್ತೆ ಎಳನೀರು ಆಗುತ್ತದೆ. ನಾವು ಇದರ ಉತ್ಪಾದನೆ ಆರಂಭಿಸಿ ಒಂದು ವರ್ಷವಾಗುತ್ತಿದೆ. ಆದರೆ, ಇನ್ನೂ ಹೆಚ್ಚು ಪ್ರಚಾರ ಸಿಕ್ಕಿಲ್ಲ. ಹಾಗಾಗಿ ಜನರಿಗೆ ಅಷ್ಟುತಿಳಿದಿಲ್ಲ ಎಂದು ಅವರು ವಿವರಿಸಿದರು.

ಬೇಕಾದ ಮಾದರಿ ಸೀರೆ ನೇಯ್ಗೆಯ ಯಂತ್ರ:

ಕೋಲಾರದ ಉದಯರವಿ ಕ್ರಿಯೇಷನ್ಸ್‌ ಆಧುನಿಕ ತಂತ್ರಜ್ಞಾನ ಬಳಸಿ ತಯಾರಿಸಿರುವ ಟಿನ್ನೆಸ್ಟ್‌ ಜಾಕಾರ್‌್ಡ ಎಂಬ ಹೊಸ ಕೈಮಗ್ಗ ಯಂತ್ರದಲ್ಲಿ ಗ್ರಾಹಕರು ತಮಗೆ ಬೇಕಾದ ಬಗೆ, ಬಣ್ಣದ ಸೀರೆಯನ್ನು ತಂದು ತೋರಿಸಿದರೆ ಸಾಕು. ಅದೇ ರೀತಿಯ ಸೀರೆ ನೇಯ್ಗೆ ಮಾಡಬಹುದಾಗಿದೆ. ಈ ಹೊಸ ಯಂತ್ರವನ್ನು 10 ಇಂಚಿನ ಎತ್ತರದ ಮನೆಗಳಲ್ಲೂ ಅಳವಡಿಸಬಹುದಾಗಿದೆ. ಅಲ್ಲದೆ, ಬಹುಮಹಡಿ ಕಟ್ಟಡಗಳಲ್ಲೂ ಈ ಯಂತ್ರ ಅಳವಡಿಸಿದರೂ ಯಾವುದೇ ಶಬ್ದ ಬರುವುದಿಲ್ಲ. ಇದೇ ಮಾದರಿಯಲ್ಲಿ ಪವರ್‌ಲೂಮ್‌ ಯಂತ್ರ ಕೂಡ ಲಭ್ಯವಿದೆ ಎಂದು ಸಂಸ್ಥೆಯ ಸಿಬ್ಬಂದಿ ಸುರೇಶ್‌ ಮಾಹಿತಿ ಮಾಹಿತಿ ನೀಡಿದರು. ಅದೇ ರೀತಿ ಮೊಳಕಾಲ್ಮುರು, ಇಳಕಲ್‌ ಸೀರೆ, ಉಡುಪಿ ಸೀರೆ, ಗುಳೇದಗುಡ್ಡ ಖಣ- ಮತ್ತಿತರ ಉತ್ಪನಗಳ ಕೈಮಗ್ಗ ತಂತ್ರಜ್ಞಾನಗಳು ಇಲ್ಲಿ ಅನಾವರಣಗೊಂಡಿವೆ.

ಜಿಮ್‌ನಲ್ಲಿ 300ಕ್ಕೂ ಹೆಚ್ಚು ಮಳಿಗೆ

ಸಮಾವೇಶದಲ್ಲಿ ಜವಳಿ, ತಂತ್ರಜ್ಞಾನ, ಪ್ರವಾಸೋದ್ಯಮ, ಬ್ಯಾಂಕಿಂಗ್‌, ಆಹಾರ ಸಂಸ್ಕರಣೆ, ವೈಮಾನಿಕ ಕ್ಷೇತ್ರ, ಕೃಷಿ, ಪೀಠೋಪಕರಣ, ನೀರಾವರಿ, ಆಟೋ ಮೊಬೈಲ್‌, ಶಿಕ್ಷಣ ಸಂಸ್ಥೆ, ರಿಯಲ್‌ ಎಸ್ಟೇಟ್‌ ಕಂಪನಿ, ಪ್ಯಾಕೇಜಿಂಗ್‌ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ವ್ಯವಹರಿಸುತ್ತಿರುವ ಒಟ್ಟು 300ಕ್ಕೂ ಹೆಚ್ಚು ಸಂಸ್ಥೆಗಳು ತಮ್ಮ ಮಳಿಗೆಗಳನ್ನು ತೆರೆದಿವೆ. ಈ ಮಳಿಗೆಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

Tender Coconut Jelly: ಎಳನೀರು ಜೆಲ್ಲಿ ತಿನ್ನಬೇಕೆ? ಬನ್ನಿ ಮಡಿಕೇರಿಯ ದೇವರಕೊಲ್ಲಿಗೆ

ಬಹುತೇಕ ಮಳಿಗೆಗಳಲ್ಲಿ ಕಂಪನಿಯ ಸಿಬ್ಬಂದಿ, ಅಧಿಕಾರಿಗಳು ತಮ್ಮ ಉತ್ಪನ್ನಗಳು, ತಂತ್ರಜ್ಞಾನಗಳ ಮಾಹಿತಿ ನೀಡುತ್ತಿದ್ದಾರೆ ಅವಶ್ಯವಿದ್ದಲ್ಲಿ ಗ್ರಾಹಕರ ಮಾಹಿತಿ ಪಡೆದು ಸಮಾವೇಶದ ನಂತರ ಉತ್ಪನ್ನಗಳನ್ನು ಡೆಲಿವರಿ ಮಾಡುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಮಾವೇಶಕ್ಕೆ ಪಾಸ್‌ ಪಡೆದುಕೊಂಡಿರುವವರು ಮಾತ್ರವೇ ಮಳಿಗೆಗಳಿಗೆ ಭೇಟಿ ನೀಡಿ ತಮ್ಮ ಕಂಪನಿಗಳಿಗೆ ಅವಶ್ಯವಾದ ಉತ್ಪನ್ನಗಳ ಆರ್ಡರ್‌ ನೀಡುತ್ತಿದ್ದಾರೆ. ಉದ್ಯಮಿಗಳು ಪ್ರಾಂಚೈಸಿಗಳನ್ನು ಖರೀದಿಸುವುದಕ್ಕೆ ಹಾಗೂ ಕಂಪನಿಗಳ ಮೇಲೆ ಬಂಡವಾಳ ಹೂಡಿಕೆ ಮಾಡುವ ಮಾಹಿತಿಯನ್ನು ಪಡೆದುಕೊಂಡರು.

Follow Us:
Download App:
  • android
  • ios