Asianet Suvarna News Asianet Suvarna News

ತೆಂಗಿನಕಾಯಿ ಚಿಪ್ಪಿನಲ್ಲಿ ಸಿದ್ಧವಾಗುತ್ತೆ ಇಡ್ಲಿ, ರುಚಿ ಹೇಗಿರ್ಬಹುದು ಗೆಸ್ ಮಾಡಿ!

ಇನ್ಸ್ಟಾಗ್ರಾಮ್, ಯುಟ್ಯೂಬ್, ಫೇಸ್ಬುಕ್ ನಲ್ಲಿ ನಾವು ಈಗ ಆಹಾರ, ಅಡುಗೆ, ರೆಸ್ಟೋರೆಂಟ್ ಗೆ ಸಂಬಂಧಿಸಿದ ಅನೇಕ ವಿಡಿಯೋಗಳನ್ನು ನೋಡ್ಬಹುದು. ಆಹಾರ ಪ್ರೇಮಿಗಳು ಆ ಜಾಗ ಹುಡುಕಿ ಅಲ್ಲಿನ ತಿಂಡಿ ಹೇಗಿದೆ ಅಂತಾ ಪರೀಕ್ಷೆ ಕೂಡ ಮಾಡ್ತಾರೆ. ಈಗ ಮತ್ತೊಂದು ಜಾಗ ವೈರಲ್ ಆಗಿದ್ದು, ನೀವೂ ಅಲ್ಲಿನ ಇಡ್ಲಿ ಟ್ರೈ ಮಾಡ್ಬಹುದು. 
 

Coconut Idli Made In Coconut Shell In Bengaluru Video Went Viral roo
Author
First Published Oct 9, 2023, 12:15 PM IST

ಇಡ್ಲಿ ಸಾಂಬಾರ್.. ದಕ್ಷಿಣ ಭಾರತದ ಫೇಮಸ್ ಆಹಾರಗಳಲ್ಲಿ ಒಂದು. ಮನೆಯಲ್ಲಿ ಇಡ್ಲಿ ಸಾಂಬಾರ್ ಎಷ್ಟೇ ಬಾರಿ ತಿಂದಿದ್ರೂ ಜನರು ಹೊಟೇಲ್ ಗೆ ಹೋದಾಗಾ ಆರ್ಡರ್ ಮಾಡೋದು ಅದನ್ನೆ. ಕರ್ನಾಟಕದಲ್ಲಿ ಇಡ್ಲಿ ಪ್ರೇಮಿಗಳ ಸಂಖ್ಯೆ ಸಾಕಷ್ಟಿದೆ. ಹಾಗಾಗಿಯೇ ದಿನೇ ದಿನೇ ಹೊಸ ಹೊಸ ಇಡ್ಲಿ ರೆಸ್ಟೋರೆಂಟ್ ಬಾಗಿಲು ತೆರೆಯುತ್ತಿದೆ. ಹೊಟೇಲ್, ರೆಸ್ಟೋರೆಂಟ್ ನಲ್ಲಿ ಮಾತ್ರವಲ್ಲ ರಸ್ತೆ ಬದಿಗಳಲ್ಲಿ ನೀವು ಬೆಳಿಗ್ಗೆ ಸಾಕಷ್ಟು ಇಡ್ಲಿ ಸ್ಟಾಲ್ ಗಳನ್ನು ನೋಡ್ಬಹುದು. ಬರೀ ಒಂದೇ ಶೈಲಿಯ ಇಡ್ಲಿ ಮಾತ್ರವಲ್ಲ ನಾನಾ ವೆರೈಟಿಯ ಇಡ್ಲಿಗಳು ನಮ್ಮಲ್ಲಿ ಲಭ್ಯವಿದೆ. ಗ್ರಾಹಕರನ್ನು ಸೆಳೆಯಲು ರುಚಿಯಾದ, ಭಿನ್ನ ಇಡ್ಲಿಗಳನ್ನು ಜನರು ಮಾರಾಟ ಮಾಡ್ತಿದ್ದಾರೆ.

ತಟ್ಟೆ ಇಡ್ಲಿ (Idli) , ಪುಡಿ ಇಡ್ಲಿ, ಪ್ಲೇನ್ ಇಡ್ಲಿ, ರಾಗಿ ಇಡ್ಲಿ, ಮಸಾಲಾ ಇಡ್ಲಿ, ರವಾ ಇಡ್ಲಿ, ಮಲ್ಲಿಗೆ ಇಡ್ಲಿ ಹೀಗೆ ಹೇಳ್ತಾ ಹೋದ್ರೆ ದೊಡ್ಡ ಇಡ್ಲಿ ಪಟ್ಟಿಯನ್ನು ನಾವು ತಯಾರಿಸ್ಬಹುದು. ಇಡ್ಲಿ ಇಷ್ಟವಾಗುವ ಜನರು ಎಲ್ಲಿ ರುಚಿಯಾದ ಇಡ್ಲಿ ಮಾಡ್ತಾರೆ ಅಂತಾ ಹುಡುಕಿಕೊಂಡು ಹೋಗ್ತಾರೆ. ವೀಕೆಂಡ್ (Weekend) ನಲ್ಲಿ ಇಡ್ಲಿ ತಿನ್ನೋದಕ್ಕಾಗಿಯೇ ಬೆಂಗಳೂರಿಂದ ರಾಮನಗರಕ್ಕೆ ಹೋಗುವ ಜನರಿದ್ದಾರೆ. ಇಡ್ಲಿ ಪ್ರೇಮಿಗಳಿಗೆ ಮತ್ತೊಂದು ವಿಶೇಷ ಇಡ್ಲಿ ಸವಿಯೋಕೆ ಸಿದ್ಧವಾಗಿ ನಿಂತಿದೆ. ಈ ಇಡ್ಲಿಯನ್ನು ತೆಂಗಿನಕಾಯಿ ಚಿಪ್ ನಲ್ಲಿ ತಯಾರಿಸ್ತಾರೆ. ಅದೆಲ್ಲಿದೆ ಎನ್ನುವ ಮಾಹಿತಿ ಇಲ್ಲಿದೆ. ತೆಂಗಿನಕಾಯಿ (Coconut) ಚಿಪ್ಪಿನಿಂದ ತಯಾರಾಗುತ್ತೆ ಇಡ್ಲಿ : ಸಾಮಾನ್ಯವಾಗಿ ತಟ್ಟೆಯಲ್ಲಿ ಇಲ್ಲವೆ ಬಿದಿರಿನ ಪ್ಲೇಟ್ ನಲ್ಲಿ, ಬಾಳೆ ಎಲೆಯಲ್ಲಿ ಇಡ್ಲಿ ತಯಾರಿಸೋದನ್ನು ನಾವು ನೋಡಿದ್ದೇವೆ. ಆದ್ರೆ ಇಲ್ಲಿ ತೆಂಗಿನಕಾಯಿ ಚಿಪ್ಪಿನಲ್ಲಿ ಇಡ್ಲಿ ತಯಾರು ಮಾಡ್ತಾರೆ. 

ಮಿಲ್ಕ್ ಟೀ ಕುಡಿಯೋದು ಬಿಡೋಕೆ ಆಗ್ತಿಲ್ವಾ? ಅದೂ ಚಟ ಸ್ವಾಮಿ

ಬೆಂಗಳೂರಿನ ವರ್ತೂರಿನಲ್ಲಿರುವ ಶ್ರೀಕೆಸಿ ಮೆಸ್ ರೆಸ್ಟೊರೆಂಟ್‌ ನಲ್ಲಿ ತೆಂಗಿನಕಾಯಿ ಚಿಪ್ಪಿನಲ್ಲಿ ಇಡ್ಲಿ ತಯಾರಿಸುತ್ತಾರೆ. ನಾವೆಲ್ಲ ತೆಂಗಿನ ಚಿಪ್ಪನ್ನು ಕಸಕ್ಕೆ ಹಾಕ್ತೇವೆ. ಆದ್ರೆ ಇವರು ಚಿಪ್ಪಿನಲ್ಲಿರುವ ತೆಂಗನ್ನು ಮಶಿನ್ ಸಹಾಯದಿಂದ ಮೊದಲು ಕ್ಲೀನ್ ಮಾಡ್ತಾರೆ. ನಂತ್ರ ಅದಕ್ಕೆ ಇಡ್ಲಿ ಮಿಕ್ಸ್ ಹಾಕಿ ಬೇಯಿಸ್ತಾರೆ. ಅದನ್ನು ಗ್ರಾಹಕರಿಗೆ ಸರ್ವ್ ಮಾಡ್ತಾರೆ. Bangalorefoodiee ಹೆಸರಿನ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಕೊಕನಟ್ ಇಡ್ಲಿ, ಶ್ರೀಕೆಸಿ ಮೆಸ್, 17#1 ವರ್ತೂರು, ಬಳಗೆರೆ ರಸ್ತೆ, ಬೆಂಗಳೂರು ಎಂದು ಶೀರ್ಷಿಕೆ ಹಾಕಲಾಗಿದೆ.

ಹೃದಯ, ಮೂಳೆ ಸ್ಟ್ರಾಂಗ್ ಆಗಬೇಕು ಅಂದ್ರೆ ಬ್ರೇಕ್ ಫಾಸ್ಟ್ ಗೆ ಇವನ್ನ ತಿನ್ನಿ

ತೆಂಗಿನಕಾಯಿ ಇಡ್ಲಿ ತಯಾರಿಸೋದು ಹೇಗೆ? : ಮೊದಲು ತೆಂಗಿನಕಾಯಿ ಹಾಗೂ ಚಿಪ್ಪನ್ನು ಬೇರ್ಪಡಿಸಬೇಕು. ಚಿಪ್ಪಿನಲ್ಲಿ ತೆಂಗಿನಕಾಯಿ ಇರದಂತೆ ಯಂತ್ರದ ಸಹಾಯದಿಂದ ಮೊದಲು ಕ್ಲೀನ್ ಮಾಡಲಾಗುತ್ತದೆ. ನಂತ್ರ ತೆಂಗಿನ ಚಿಪ್ಪಿಗೆ, ಸಣ್ಣ ಕ್ಯಾರೆಟ್ ಪೀಸ್ ಹಾಕಲಾಗುತ್ತದೆ. ಅದರ ಮೇಲೆ ಇಡ್ಲಿ ಹಿಟ್ಟನ್ನು ಹಾಕಲಾಗುತ್ತದೆ. ಅದನ್ನು ಆವಿಯಲ್ಲಿಟ್ಟು ಬೇಯಿಸಲಾಗುತ್ತದೆ.  
ಇಡ್ಲಿ ಬೆಂದ ಮೇಲೆ ಅದಕ್ಕೆ ತುಪ್ಪ ಮತ್ತು ಮಸಾಲೆ ಹಾಕಲಾಗುತ್ತದೆ.  ತೆಂಗಿನಕಾಯಿ ಇಡ್ಲಿಯನ್ನು ಚಿಪ್ಪಿನಲ್ಲೇ ಇಟ್ಟು ಸರ್ವ್ ಮಾಡಲಾಗುತ್ತದೆ. ಚಿಪ್ಪಿನಲ್ಲಿರುವ ಇಡ್ಲಿ ಜೊತೆ ನಿಮಗೆ ಸಾಂಬಾರ್ ಮತ್ತು ಚಟ್ನಿಯನ್ನು ನೀಡಲಾಗುತ್ತದೆ.

ವೈರಲ್ ವಿಡಿಯೋ ಬಗ್ಗೆ ನೆಟ್ಟಿಗರು ಹೇಳಿದ್ದೇನು? : ಈ ವಿಡಿಯೋವನ್ನು ಇದುವರೆಗೆ ಸುಮಾರು 6 ಕೋಟಿ 1 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಒಂದು ಲಕ್ಷಕ್ಕಿಂತ ಹೆಚ್ಚು ಲೈಕ್ಸ್ ಪಡೆದಿದೆ ವಿಡಿಯೋ. ಜನರು ಸಾಕಷ್ಟು ಕಾಮೆಂಟ್ ಕೂಡ ಮಾಡುತ್ತಿದ್ದಾರೆ.  ತುಂಬಾ ರುಚಿಕರವಾಗಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇಡ್ಲಿಗಿಂತ ಇಡ್ಲಿಗೆ ಹಾಕಿದ ತುಪ್ಪದ ಬಗ್ಗೆ ಕಮೆಂಟ್ ಮಾಡಿದ್ದಾರೆ. ಇಡ್ಲಿಗೆ ಇಷ್ಟೆಲ್ಲ ತುಪ್ಪ ಯಾಕೆ ಹಾಕ್ಬೇಕಿತ್ತು ಎಂದು ಪ್ರಶ್ನೆ ಮಾಡಿದ್ದಾರೆ. 
 

Follow Us:
Download App:
  • android
  • ios