ಬೊಂಬಾಟ್ ಮಸಾಲೆ ದೋಸೆ ಎಂದಿದ್ದ ಕಮಿಷನರ್‌ಗೆ ವಡಾಪಾವ್ ಮೋಡಿ!
ಈ ಟ್ವೀಟ್ ಕ್ಷಣಮಾತ್ರದಲ್ಲಿ ವೈರಲ್ ಆಗಿದ್ದು ನಾಗರಿಕರು ಟೇಸ್ಟ್ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ರಿಟ್ ಮಾಡಿರುವವರು ದಕ್ಷಿಣ ಭಾರತ ಮತ್ತು ಉತ್ತರ ಭಾರತದ ಬಗೆ ಬಗೆಯ ಖಾದ್ಯಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಮುಂಬೈ(ಸೆ. 12) ಮಸಾಲೆ ದೋಸೆ ಬೊಂಬಾಟ್ ಗುರು ಎಂದಿದ್ದ ಬ್ರಿಟಿಷ್ ಹೈ ಕಮಿಷನರ್ ಈಗ ವೋಡಾ ಪಾವ್ ರುಚಿಗೆ ಮಾರು ಹೋಗಿದ್ದಾರೆ. ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಏಲಿಸ್ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಸ್ವಾದ ಹಂಚಿಕೊಂಡಿದ್ದಾರೆ.
ಮಸಾಲೆ ದೋಸೆಯ ಮೂಲ ಹುಡುಕುತ್ತ ಹೊರಟರೆ ಅದು ನಮ್ಮ ಮೈಸೂರಿಂದು ಎನ್ನುವ ದಾಖಲೆ ಸಿಗುತ್ತದೆ. ದೋಸೆ ಎನ್ನುವ ಕಲ್ಪನೆ ಶುರುವಾಗಿದ್ದೆ ಮೈಸೂರು ಜಿಲ್ಲೆ ಹುಣಸೂರಿನಲ್ಲಿ. ಸಾವಿರ ವರ್ಷಗಳ ಹಿಂದೆಯೇ ಮಂಗರಸ ಕವಿ ಇಡ್ಲಿ ಹಾಗೂ ದೋಸೆ ಸೃಷ್ಟಿಸಿದ ಎನ್ನುತ್ತದೆ ಇತಿಹಾಸ. ಮುಂದೆ ಮೈಸೂರಿನ ಅಗ್ರಹಾರದಲ್ಲಿದ್ದ ನೆಹರು ಲಂಚ್ ಹೋಂ ಸಾದಾ ದೋಸೆಯನ್ನು ಜನಪ್ರಿಯಗೊಳಿಸಿತು. ಬಳಿಕ ಇದೇ ಮೈಸೂರು ಮಸಾಲೆ ಎಂದು ಖ್ಯಾತಿ ಪಡೆದುಕೊಂಡಿತು. ದಾವಣಗೆರೆ ಬೆಣ್ಣೆ ದೋಸೆ ಮತ್ತೊಂದು ಹೆಸರು.
ಬೆಂಗಳೂರಿನಲ್ಲಿ ಮಸಾಲೆ ದೋಸೆ ಸವಿಯಲೇಬೇಕಾದ ಜಾಗಗಳು
ಮುಂಬೈ ಸ್ಟ್ರೀಟ್ ಫುಡ್ ಸ್ವಾದದ ಬಗ್ಗೆ ಬರೆದುಕೊಂಡಿದ್ದಾರೆ. ಮುಂಬೈನಲ್ಲಿ ವಡಾಪಾವ್ ತಿನ್ನಲು ಸಮಯವೊಂದನ್ನು ಮೀಸಲಿಡಿ ಎಂದು ಕೇಳಿಕೊಂಡಿದ್ದಾರೆ. ಈ ಟ್ವೀಟ್ ಕ್ಷಣಮಾತ್ರದಲ್ಲಿ ವೈರಲ್ ಆಗಿದ್ದು ನಾಘರಿಕರು ಟೇಸ್ಟ್ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ರಿ ಟ್ವೀಟ್ ಮಾಡಿರುವವರು ದಕ್ಷಿಣ ಭಾರತ ಮತ್ತು ಉತ್ತರ ಭಾರತದ ಬಗೆ ಬಗೆಯ ಖಾದ್ಯಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಮುಂಬೈ ಯುಎಸ್ ಕಾನ್ಸುಲೇಟ್ ಸಹ ರೀ ಟ್ವೀಟ್ ಮಾಡಿದ್ದು ಮುಂದಿನ ಸಾರಿ ಮುಂಬೈಗೆ ಬಂದಾಗ ನಾವೆಲ್ಲ ಜತೆಯಾಗಿ ವಡಾಪಾವ್ ಸವಿಯೋಣ ಎಂದಿದೆ. ವಡಾಪಾವ್ ಸಹ ಎಷ್ಟೋ ಮಂದಿಯ ಒಂದು ದಿನದ ಆಹಾರ. ವಡಾಪಾವ್ ತಿಂದು ಮಹಾನಗರ ಮುಂಬೈನಲ್ಲಿ ಬದುಕು ಕಟ್ಟಿಕೊಂಡವರ ಉದಾಹರಣೆಯೂ ಸಾಕಷ್ಟಿದೆ.