ಕೊತ್ತಂಬರಿ ಸೊಪ್ಪನ್ನು ಸುಲಭವಾಗಿ ಬಿಡಿಸೋದು ಹೇಗೆ ? ವೈರಲ್ ಆದ ವೀಡಿಯೋಗೆ 147 ಮಿಲಿಯನ್ ವೀಕ್ಷಣೆ
ತಿನ್ನೋದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದ್ರೆ ಅಡುಗೆ (Cooking) ಮಾಡೋದು ಅಂದ್ರೆ ಸಾಕು ಮುಖ ಸಿಂಡರಿಸ್ತಾರೆ. ಅದರಲ್ಲೂ ಕಿಚನ್‌ನ (Kitchen) ಕೆಲವು ಸಣ್ಣಪುಟ್ಟ ಕೆಲಸಗಳು ಎಂಥವರಿಗೂ ತಲೆನೋವು ಬಂದುಬಿಡುತ್ತೆ. ಅದ್ರಲ್ಲೂ ಕೊತ್ತಂಬರಿ ಸೊಪ್ಪು (Coriander Leaves) ಬಿಡಿಸೋ ಕೆಲ್ಸವನ್ನಂತೂ ಹೆಚ್ಚಿನವರು ಹೇಟ್ ಮಾಡ್ತಾರೆ. ಹೀಗಿರುವಾಗ ಈಝಿಯಾಗಿ ಕೊತ್ತಂಬರಿ ಸೊಪ್ಪು ಬಿಡಿಸೋದು ಹೇಗೆ ಅನ್ನೋ ವೀಡಿಯೋ ಸಖತ್ ವೈರಲ್ (Viral) ಆಗಿದೆ.
ಭಾರತೀಯ ಅಡುಗೆಮನೆ (Kitchen)ಯಲ್ಲಿ ಕೊತ್ತಂಬರಿ ಸೊಪ್ಪನ್ನು (Coriander Leaves) ಪ್ರಮುಖವಾಗಿ ಬಳಸಲಾಗುತ್ತದೆ. ಯಾವುದೇ ಆಹಾರ (Food)ವನ್ನು ಅಲಂಕರಿಸಲು ಧನಿಯಾ ಅಥವಾ ಕೊತ್ತಂಬರಿ ಅತ್ಯಗತ್ಯ. ಇದು ಆಹಾರವನ್ನು ಇನ್ನಷ್ಟು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಆದ್ರೆ ಕೊತ್ತಂಬರಿ ಸೊಪ್ಪನ್ನು ಬಿಡಿಸೋದು ಮಾತ್ರ ಹಲವರಿಗೆ ತಲೆನೋವು ತರುವ ವಿಷಯ. ಹೀಗಿರುವಾಗ ಕೊತ್ತಂಬರಿ ಸೊಪ್ಪಿನ ವಿಡಿಯೋವೊಂದು ವೈರಲ್ (Viral) ಆಗಿದೆ.
ವೀಡಿಯೋದಲ್ಲಿ ಕಾಂಡದಿಂದ ಕೊತ್ತಂಬರಿ ಸೊಪ್ಪನ್ನು ಸುಲಭವಾಗಿ ಬಿಡಿಸುವುದು ಹೇಗೆಂದು ಸರಳವಾಗಿ ತಿಳಿಸಲಾಗಿದೆ. ಈ ವಿಡಿಯೋ 147 ಮಿಲಿಯನ್ ವೀವ್ಸ್ ಗಳಿಸಿದ್ದು, ಎಲ್ಲರೂ ಇದನ್ನು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ.
ಸೋಷಿಯಲ್ ಮೀಡಿಯಾ (Social Media)ದಲ್ಲಿ ಅಟ್ರ್ಯಾಕ್ಟಿವ್, ಈಝಿ ಎನಿಸುವ ಯಾವುದೇ ವಿಚಾರಗಳನ್ನು ಪೋಸ್ಟ್ ಮಾಡಿದರೂ ಅದು ಶೀಘ್ರವಾಗಿ ವೈರಲ್ (Viral) ಆಗುತ್ತದೆ. ವೈರಲ್ ಆಗುವ ವಿಡಿಯೋಗಳಲ್ಲಿ ಏನಾದರೂ ಹೊಸತನ ಇದ್ದೇ ಇರುತ್ತದೆ. ಈಗ ಕೊತ್ತಂಬರಿ ಸೊಪ್ಪಿನ (Coriander Leaves) ವಿಡಿಯೋ ವೈರಲ್ ಆಗಿದೆ.
ಹಸಿ ಕೊತ್ತಂಬರಿ ಸೊಪ್ಪನ್ನು ತೊಳೆದು, ಅದರ ಎಲೆಗಳನ್ನು ಕಿತ್ತು ಕಡಿಯುವ ಪ್ರಕ್ರಿಯೆ ನಿಜಕ್ಕೂ ಬೋರಿಂಗ್ ಕೆಲಸ. ಕೊತ್ತಂಬರಿ ಸೊಪ್ಪನ್ನು ಕಾಂಡದಿಂದ ತೆಗೆದುಹಾಕಲು ಸುಲಭವಾದ ಹ್ಯಾಕ್ ಇದೆ ಎಂದು ನಾವು ನಿಮಗೆ ಹೇಳಿದರೆ ಅದು ನಿಮ್ಮ ಅಮೂಲ್ಯ ಸಮಯವನ್ನು ಉಳಿಸಬಹುದಲ್ಲವೇ ? ಹೀಗಾಗಿಯೇ ಜನರು ಈ ಕೊತ್ತಂಬರಿ ಸೊಪ್ಪನ್ನು ಬಿಡಿಸುವ ವೀಡಿಯೋವನ್ನು ಮೆಚ್ಚಿಕೊಂಡಿದ್ದಾರೆ.
ನಿಂಬೆ ಬೆಲೆ ಏರಿಕೆಯಾಯ್ತು ಅಂತ ತಲೆ ಕೆಡಿಸ್ಕೋಬೇಡಿ, ಪರ್ಯಾಯವಾಗಿ ಅಡುಗೆಯಲ್ಲಿ ಇದನ್ನು ಬಳಸಿ
ಒಂದು ಅದ್ಭುತವಾದ ಹ್ಯಾಕ್ ಇತ್ತೀಚೆಗೆ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಇದು ಕೊತ್ತಂಬರಿ ಸೊಪ್ಪನ್ನು ಅದರ ಕಾಂಡದಿಂದ ಸೆಕೆಂಡುಗಳಲ್ಲಿ ಸುಲಭವಾಗಿ ತೆಗೆದುಹಾಕಲು ನಿಮಗೆ ಸಹಾಯ ಮಾಡುತ್ತದೆ. ಕೊತ್ತಂಬರಿ ಸೊಪ್ಪನ್ನು ತೆಗೆಯುವ ಅದ್ಭುತ ಹ್ಯಾಕ್ ಅನ್ನು Instagram ರೀಲ್ಸ್‌ನಲ್ಲಿ @earthtalant ಎಂಬ ಪೇಜ್‌ನಿಂದ ಹಂಚಿಕೊಳ್ಳಲಾಗಿದೆ. ಈ ವೈರಲ್ ಹ್ಯಾಕ್‌ನಿಂದ ಕೊತ್ತಂಬರಿ ಸೊಪ್ಪನ್ನು ಸೆಕೆಂಡುಗಳಲ್ಲಿ ಸಿಪ್ಪೆ ತೆಗೆಯಬಹುದು ಎಂದು ತಿಳಿಸಲಾಗಿದೆ. ವೀಡಿಯೊ ವೈರಲ್ ಆಗಿದ್ದು, 147 ಮಿಲಿಯನ್ ವೀಕ್ಷಣೆಗಳು ಮತ್ತು 4.5 ಮಿಲಿಯನ್ ಲೈಕ್‌ಗಳನ್ನು ಗಳಿಸಿದೆ.
ಕೊತ್ತಂಬರಿ ಸೊಪ್ಪಿನ ಕ್ಲಿಪ್‌ನಲ್ಲಿ, ನಾವು ಅಡುಗೆಮನೆ ಚಿತ್ರಣ ನೋಡಬಹುದು. ವ್ಯಕ್ತಿ ಮೇಜಿನ ಮೇಲೆ ಪ್ಲಾಸ್ಟಿಕ್ ಬುಟ್ಟಿಯೊಂದಿಗೆ ಕುಳಿತಿದ್ದಾನೆ.ಹಣ್ಣುಗಳು ಮತ್ತು ತರಕಾರಿಗಳನ್ನು ಖರೀದಿಸುವಾಗ ನಾವು ಸಾಮಾನ್ಯವಾಗಿ ಬಳಸುವ ರೀತಿಯ ಬುಟ್ಟಿ ಅದು. ಅವನು ಒಂದು ಕೊತ್ತಂಬರಿ ಸೊಪ್ಪನ್ನು ತೆಗೆದುಕೊಂಡು, ನಂತರ ಅದನ್ನು ಬುಟ್ಟಿಯಲ್ಲಿನ ರಂಧ್ರಗಳ ಮೂಲಕ ಹಾಕಿ ಇನ್ನೊಂದು ತುದಿಯಿಂದ ಹೊರತೆಗೆಯುತ್ತಾನೆ. ಹೀಗಾಗಿ, ಎಲ್ಲಾ ಎಲೆಗಳನ್ನು ಕೊತ್ತಂಬರಿಯಿಂದ ತೆಗೆದುಹಾಕಲಾಗುತ್ತದೆ ಮತ್ತು ನೇರವಾಗಿ ಬುಟ್ಟಿಗೆ ಬೀಳುತ್ತದೆ. ಕೊತ್ತಂಬರಿ ಕಾಂಡವನ್ನು ನಂತರ ಹಾಕಬಹುದು ಮತ್ತು ಎಸೆಯಬಹುದು ಅಥವಾ ಇತರ ಪಾಕವಿಧಾನಗಳಲ್ಲಿ ಬಳಸಬಹುದು.
ನೈಸರ್ಗಿಕ ಉತ್ಪನ್ನ ಅಂತ ಕಿಚನ್‌ನಲ್ಲಿ ಸಿಕ್ಕಿದ್ದೆಲ್ಲಾ ಮುಖಕ್ಕೆ ಹಚ್ಬೇಡಿ, ಅಪಾಯ ತಪ್ಪಿದ್ದಲ್ಲ
ಈ ಹ್ಯಾಕ್ ಸರಳವಾಗಿ ಅದ್ಭುತ ಅಲ್ಲವೇ? ನಮ್ಮ ಎಲ್ಲಾ ಪಾಕವಿಧಾನಗಳಿಗೆ ಕೊತ್ತಂಬರಿ ಸೊಪ್ಪನ್ನು ತ್ವರಿತವಾಗಿ ರೆಡಿ ಮಾಡಲು ನಾವು ನಮ್ಮ ಅಡುಗೆಮನೆಯಲ್ಲಿ ಇದನ್ನು ಪ್ರಯತ್ನಿಸಬಹುದು. Instagram ಬಳಕೆದಾರರು ಕೂಡ ಕೊತ್ತಂಬರಿ ಹ್ಯಾಕ್‌ನಿಂದ ಪ್ರಭಾವಿತರಾಗಿದ್ದಾರೆ. ಸೋಮಾರಿಯಾದ ವ್ಯಕ್ತಿಗೆ ಯಾವಾಗಲೂ ಕಠಿಣ ಕೆಲಸವನ್ನು ನೀಡಿ ಏಕೆಂದರೆ ಅವನು ಅದನ್ನು ಮಾಡಲು ಸುಲಭವಾದ ಮಾರ್ಗವನ್ನು ಕಂಡುಕೊಳ್ಳುತ್ತಾನೆ" ಎಂದು ಒಬ್ಬ ಬಳಕೆದಾರರು ಕಮೆಂಟಿಸಿದ್ದಾರೆ.