ಇದೆಂಥಾ ವಿಚಿತ್ರ, ಮದ್ವೆಗೆ ಬನ್ನಿ, ಹೊಟ್ಟೆ ತುಂಬಾ ತಿನ್ನಿ, ಬಿಲ್ ಪೇ ಮಾಡಿ !
ಮದ್ವೆ ಅನ್ನೋದು ಖುಷಿಯ ಸಮಾರಂಭ ಹೌದು. ಆದ್ರೆ ಒಂದು ಮದುವೆಯನ್ನು ನಡೆಸಲು ಲಕ್ಷಾಂತರ ರೂಪಾಯಿ ಖರ್ಚಾಗುತ್ತೆ. ಡೆಕೊರೇಷನ್, ಉಡುಪುಗಳು, ಊಟ ಎಂದು ಲೆಕ್ಕವಿಲ್ಲದಷ್ಟು ಹಣ ವ್ಯಯಿಸಬೇಕಾಗುತ್ತೆ. ಹೀಗಾಗಿಯೇ ಈ ಮದ್ವೆಯಲ್ಲಿ ವು-ವರರು ತಮ್ಮ ಮದ್ವೆಗೆ ಬರೋ ಜನರು ಪೇ ಮಾಡಿ ಊಟ ಮಾಡಿ ಅಂತ ಹೇಳಿದ್ದಾರೆ. ಸದ್ಯ ಈ ವಿಚಾರ ಎಲ್ಲೆಡೆ ವೈರಲ್ ಆಗ್ತಿದೆ.
ಮದುವೆ ಅನ್ನೋದು ಜೀವನದಲ್ಲಿ ಅತ್ಯಂತ ಖುಷಿಯ ಕ್ಷಣ. ಆದ್ರೆ ಮದುವೆಯೆಂದ ಅದ್ಧೂರಿತನಕ್ಕೆ ಖರ್ಚಾಗುವ ಹಣದ ಮೊತ್ತ ಅಷ್ಟಿಷ್ಟಲ್ಲ. ಹಲ್ದೀ, ಸಂಗೀತ್, ಮದ್ವೆ, ಔತಣಕೂಟ ಎಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತೆ. ಮದುಮಕ್ಕಳು, ಸಂಬಂಧಿಕರಿಗೆ ಬಟ್ಟೆಬರೆ, ಡೆಕೊರೇಷನ್, ಊಟ ಡ್ರಿಂಕ್ಸ್ ಎಂದು ಲೆಕ್ಕವಿಲ್ಲದಷ್ಟು ದುಡ್ಡು ಖರ್ಚಾಗುತ್ತಾ ಹೋಗುತ್ತದೆ. ದುಡ್ಡಿದ್ದವರು ಹೇಗೋ ಖರ್ಚು ಮಾಡುತ್ತಾ ಹೋಗುತ್ತಾರೆ. ಆದ್ರೆ ಮಧ್ಯಮ ವರ್ಗದವರು ಅದ್ಧೂರಿ ಮದುವೆ ಎಂದಾಕ್ಷಣ ದುಡ್ಡು ಖರ್ಚು ಮಾಡಲು ಪರದಾಡುವಂತಾಗುತ್ತೆ. ಇದ್ದಲ್ಲೆಲ್ಲಾ ಸಾಲ ಮಾಡಿ ಹೈರಾಣಾಗುತ್ತಾರೆ. ಹೀಗಾಗಿಯೇ ಇಲ್ಲೊಂದು ಜೋಡಿ ತಮ್ಮ ಮದುವೆಯಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ತನ್ನ ಮದುವೆಯ ವೆಚ್ಚವನ್ನು ಭರಿಸಲಾಗದೆ ಚಿಂತೆಗೀಡಾದ ವಧು (Bride) ಫೇಸ್‌ಬುಕ್‌ಗೆ ತೆರಳಿ ಜನರ ಸಲಹೆ ಕೇಳಿದ್ದಾಳೆ. ಪೋಸ್ಟ್‌ನ ಸ್ಕ್ರೀನ್‌ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral) ಆಗಿದೆ. ವಧು ಸೂಕ್ತವಾಗಿ ಬಜೆಟ್ ಮಾಡಲು ವಿಫಲರಾಗಿದ್ದಾರೆ, ಆಕೆಯ ಅತಿಥಿಗಳು ತನ್ನ ಸ್ವಾಗತಕ್ಕಾಗಿ ಪಾವತಿಸಬೇಕೆಂದು ಬಯಸುತ್ತಾರೆ ಎಂದು ರೆಡ್ಡಿಟ್ ಪೋಸ್ಟ್ ನಲ್ಲಿ ತಿಳಿಸಲಾಗಿದೆ.
ಮೊದಲ ರಾತ್ರಿಯೇ ಗರ್ಲ್ ಫ್ರೆಂಡ್ ಫೋಟೋ ತೋರಿಸಿ, ಹೆಣ್ಣಿನ ಬಾಳಲ್ಲಿ ಆಟವಾಡಿದ ಪತಿರಾಯ!
ಮದುವೆಗೆ (Marriage) ಎಲ್ಲಾ ಅತಿಥಿಗಳು ಬರಬೇಕು. ಆದ್ರೆ ಅವರು ಯಾರೂ ಉಡುಗೊರೆ (Gift)ಯನ್ನು ತರುವುದು ಬೇಡ. ಬದಲಾಗಿ ಹಣ ಪಾವತಿಸಿ ಊಟ ಮಾಡಿ ಹೋಗಬಹುದು ಎಂದು ವಧು-ವರರು ಹೇಳಿಕೊಂಡಿದ್ದಾರೆ ಎಲ್ಲವೂ ದುಬಾರಿಯಾಗಿರುವ ಕಾಲ ಇದು. ಹೀಗಾಗಿ ಯಾವ ವಿಚಾರಕ್ಕೂ ಅತಿಯಾಗಿ ಖರ್ಚು ಮಾಡಲು ಸಾಧ್ಯವಿಲ್ಲ. ಹೀಗಾಗಿಯೇ ನಾವು ಮದುವೆಗೆ ಬರುವ ಅತಿಥಿಗಳಲ್ಲಿ ಹಣ ಪಾವತಿಸಿ ಊಟ ಮಾಡಲು ಹೇಳುತ್ತಿದ್ದೇವೆ ಎಂದು ಅವರು ಹೇಳಿದರು.
ನೆಟಿಜನ್‌ಗಳು ವಧುವಿನ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ, ಅತಿಥಿಗಳು ಅವರಿಂದ ಉಡುಗೊರೆಗಳನ್ನು ನಿರೀಕ್ಷಿಸದಿದ್ದರೆ ಅವರ ಊಟಕ್ಕೆ ಪಾವತಿಸುವುದು ಸಮಂಜಸವಾಗಿದೆ ಎಂದು ಹಲವರು ಹೇಳಿದ್ದಾರೆ. ಒಬ್ಬ ಬಳಕೆದಾರರು 'ಉಡುಗೊರೆಗಳ ಬದಲಿಗೆ ನನ್ನ ಆಹಾರಕ್ಕಾಗಿ ಪಾವತಿಸಲು ನನ್ನನ್ನು ಕೇಳಿದರೆ ನಾನು ಅದರಲ್ಲಿ ನಿಜವಾಗಿಯೂ ಸಂತೋಷಪಡುತ್ತೇನೆ' ಎಂದಿದ್ದಾರೆ. ಪೇ ಆಂಡ್ ಈಟ್ ಎಂಬ ಆಫರ್‌ಗೆ ಜನರಿಂದ ಯಾವುದೇ ರೀತಿಯ ನೆಗೆಟಿವ್ ಪ್ರತಿಕ್ರಿಯೆ ಬಂದಿಲ್ಲ ಎಂದು ವಧುವರರು ತಿಳಿಸಿದ್ದಾರೆ. ಮತ್ತೊಬ್ಬರು, ಊಟವು ಸಮಂಜಸವಾದ ಬೆಲೆಯ ವ್ಯಾಪ್ತಿಯಲ್ಲಿದ್ದರೆ ಮತ್ತು ಉಡುಗೊರೆಗಳನ್ನು ನಿರೀಕ್ಷಿಸದಿದ್ದಲ್ಲಿ ವಧು ವರರು ಮಾಡುತ್ತಿರುವುದು ಸರಿಯಾದ ವಿಷಯ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಮೂರನೇ ಬಳಕೆದಾರರು ಹೇಳಿದರು, 'ನನ್ನ ತಂದೆ ಅವರ ಮದುವೆಯಲ್ಲಿ ಮಾಡಿದ್ದು ಅದನ್ನೇ, ಆಮಂತ್ರಣದಲ್ಲಿ ಉಡುಗೊರೆಗಳಿಲ್ಲ ಆದರೆ ದಯವಿಟ್ಟು ನಿಮ್ಮ ಊಟಕ್ಕೆ ಪಾವತಿಸಿ' ಎಂದರು.
ಮದುವೆಯ ಮೊದಲು ಹೀಗಿರಲ್ಲಿಲ್ಲ, ಮ್ಯಾರೀಡ್ ಲೈಫ್ ಕಷ್ಟ ಅನಿಸೋದ್ಯಾಕೆ ?
ಗಂಡ ಕಪ್ಪು ಎಂದು ಹಸಮಣೆಯಲ್ಲಿ ಮದ್ವೆ ಬೇಡ ಎಂದ ವಧು
ಭಾರತದಲ್ಲಿ ಪ್ರಸ್ತುತ ನಡೆಯುವ ಮದುವೆಗಳು ಯಾವ ಕಾರಣಕ್ಕೆ ಕೊನೆ ಕ್ಷಣದಲ್ಲಿ ನಿಲ್ಲುತ್ತವೆ ಎಂದು ಹೇಳಲಾಗದು. ಇತ್ತೀಚೆಗೆ ಬಹುತೇಕ ವಧುಗಳು ಮದುವೆಗೆ ಎಲ್ಲ ಸಿದ್ಧತೆಗಳು ನಡೆದು ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಮದುವೆ ಬೇಡ ಎಂದು ಹೇಳಲು ಶುರು ಮಾಡಿದ್ದಾರೆ. ಈಗ ಅಂತಹದ್ದೇ ಘಟನೆಯೊಂದು ಉತ್ತರಪ್ರದೇಶದ (Uttar Pradesh) ಇಟಾವಾದಲ್ಲಿ (Etawah) ನಡೆದಿದೆ. ಸಪ್ತಪದಿ ತುಳಿಯುತ್ತಿರುವ ವೇಳೆ ವಧು ವರನಿಗೆ ಶಾಕ್ ನೀಡಿದ್ದಾರೆ. ಏಳು ಹೆಜ್ಜೆಯಲ್ಲಿ ಎರಡು ಹೆಜ್ಜೆ ಇಡುವ ವೇಳೆ ವಧು ತನಗೆ ಈ ಗಂಡ (Husband) ಬೇಡ ಆತ ಕಪ್ಪು ಎಂದು ಹೇಳಿದ್ದಾಳೆ. ವಧು ನೀತಾ ಯಾದವ್ ಎಂಬಾಕೆಯೇ ಹೀಗೆ ಕೊನೆ ಕ್ಷಣದಲ್ಲಿ ಮದುವೆ ಬೇಡ ಎಂದ ವಧು, ನೀತಾ ಯಾದವ್ (Neeta Yadav) ಮದುವೆ ವರ ರವಿ ಯಾದವ್ ಜೊತೆ ನಿಶ್ಚಯವಾಗಿತ್ತು. ವರನ ಕಡೆಯವರು ದಿಬ್ಬಣ ಮೂಲಕ ವಧುವಿನ ನಿವಾಸಕ್ಕೆ ಬಂದ ನಂತರ ಪರಿಸ್ಥಿತಿ ಎಲ್ಲವೂ ಬದಲಾಗಿದೆ.
ಮದುವೆ (wedding) ಆರಂಭವಾಗುತ್ತಿದ್ದಂತೆ ವಧು ವರರು ಹೂ ಹಾರವನ್ನು (garlands) ಬದಲಾಯಿಸಿಕೊಂಡಿದ್ದಾರೆ. ಇದಾದ ನಂತರ ಸಪ್ತಪದಿ ತುಳಿಯುವ ವೇಳೆ ವರಸೆ ಬದಲಿಸಿದ ನೀತಾ ತನಗೆ ಮದುವೆ ಬೇಡ ಎಂದು ಹೇಳಿದ್ದಾಳೆ. ಆಕೆಯ ಪ್ರಕಾರ ಆಕೆಗೆ ತೋರಿಸಿದ ಹುಡುಗನೇ ಬೇರೆ ಈಗ ಮದುವೆಗೆ ವರನಾಗಿ ಬಂದಿರುವ ಹುಡುಗನೇ ಬೇರೆ ಎಂದು ವಧು ಆರೋಪಿಸಿದ್ದಾಳೆ. ಅಲ್ಲದೇ ಆತನ ಬಣ್ಣ ನನಗೆ ಇಷ್ಟವಾಗಲಿಲ್ಲ ಎಂದು ಆಕೆ ಹೇಳಿದ್ದಾಳೆ.