ಬೆಂಗಳೂರು ಐಕಿಯಾ ಫುಡ್‌ ಕೋರ್ಟ್‌ ಎಡವಟ್ಟು, ಆಹಾರ ತಿನ್ನೋ ಟೇಬಲ್‌ ಮೇಲೆ ಸತ್ತ ಇಲಿ!

ಹೊಟೇಲ್‌, ರೆಸ್ಟೋರೆಂಟ್‌ಗಳಲ್ಲಿ ಸರ್ವ್‌ ಮಾಡೋ ಆಹಾರದಲ್ಲಿ ನೊಣ, ಸತ್ತ ಜಿರಳೆ, ಹಲ್ಲಿ ಮೊದಲಾದವು ಸಿಗೋದು ತುಂಬಾ ಕಾಮನ್ ಆಗಿದೆ. ಈ ಫೋಟೋಗಳನ್ನು ಕ್ಲಿಕ್ಕಿಸಿ ಜನರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾರೆ. ಆದ್ರೆ ಬೆಂಗಳೂರಿನ ಫುಡ್ ಕೋರ್ಟ್ ಒಂದರಲ್ಲಿ ಇದ್ಯಾವುದೂ ಅಲ್ಲ ಹೊಟೇಲ್‌ನ ಟೇಬಲ್‌ನಲ್ಲಿ ಸತ್ತ ಇಲಿಯೇ ಸಿಕ್ಕಿದ್ದು, ಜನರು ಹೌಹಾರುವಂತೆ ಮಾಡಿದೆ.
 

Bengaluru IKEA Apologises After Customers Viral Tweet Shows Dead Rat on Food Court Table Vin

ಸಾಮಾನ್ಯವಾಗಿ ಫುಡ್ ಕೋರ್ಟ್‌ನಲ್ಲಿ ಆಹಾರ ಸೇವಿಸಲು ಜನರು ಇಷ್ಟಪಡುತ್ತಾರೆ. ಎಲ್ಲಾ ರೀತಿಯ ಆಹಾರ ಒಂದೇ ಕಡೆ ಸಿಗುವ ಕಾರಣ ಇಂಥಾ ಜಾಗಗಳು ಇಷ್ಟವಾಗುತ್ತವೆ. ಆದರೆ ಇಲ್ಲಿ ಫುಡ್ ಸಿಕ್ಕಾಪಟ್ಟೆ ಕಾಸ್ಲ್ಲೀಯಾಗಿರುತ್ತೆ ಹೌದು. ಹಾಗೆಯೇ ಇಲ್ಲಿನ ಫುಡ್ ರುಚಿಕಯಾಗಿರುತ್ತೆ, ಹೈಜೀನ್ ಆಗಿರುತ್ತೆ ಅಂತ ಹೇಳುವಂತಿಲ್ಲ. ಹೊಟೇಲ್‌, ರೆಸ್ಟೋರೆಂಟ್‌ಗಳಲ್ಲಿ ಸರ್ವ್‌ ಮಾಡೋ ಆಹಾರದಲ್ಲಿ ನೊಣ, ಸತ್ತ ಜಿರಳೆ, ಹಲ್ಲಿ ಮೊದಲಾದವು ಸಿಗೋದು ತುಂಬಾ ಕಾಮನ್ ಆಗಿದೆ. ಈ ಫೋಟೋಗಳನ್ನು ಕ್ಲಿಕ್ಕಿಸಿ ಜನರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾರೆ. ಆದ್ರೆ ಬೆಂಗಳೂರಿನ ಫುಡ್ ಕೋರ್ಟ್ ಒಂದರಲ್ಲಿ ಇದ್ಯಾವುದೂ ಅಲ್ಲ ಹೊಟೇಲ್‌ನ ಟೇಬಲ್‌ನಲ್ಲಿ ಸತ್ತ ಇಲಿಯೇ ಸಿಕ್ಕಿದ್ದು, ಜನರು ಹೌಹಾರುವಂತೆ ಮಾಡಿದೆ.

ಇತ್ತೀಚೆಗೆ, ಬೆಂಗಳೂರಿನ ಜನಪ್ರಿಯ ಪೀಠೋಪಕರಣ ಸ್ಟೋರ್‌ ಐಕಿಯಾಗೆ ಭೇಟಿ ನೀಡಿದ್ದ ಮಹಿಳೆಯೊಬ್ಬರು ಇಲ್ಲಿನ ಫುಡ್ ಕೋರ್ಟ್‌ನಲ್ಲಿ ಊಟವನ್ನು ಆನಂದಿಸುತ್ತಿದ್ದಾಗ ಸೀಲಿಂಗ್‌ನಿಂದ ಇಲಿಯು ಟೇಬಲ್‌ ಮೇಲೆ ಬಿದ್ದಿದ್ದಾಗಿ ಹೇಳಿಕೊಂಡರು. ಟ್ವಿಟರ್ ಬಳಕೆದಾರರು @Sharanyashettyy ಘಟನೆಯ ಆಘಾತಕಾರಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ,. ಮೇಜಿನ ಮೇಲೆ ಸತ್ತ ಇಲಿಯನ್ನು ತಮ್ಮ ತಿಂಡಿಗಳೊಂದಿಗೆ ತೋರಿಸಿದ್ದಾರೆ. 'Wtf.. IKEA ನಲ್ಲಿ ನಮ್ಮ ಆಹಾರದ ಮೇಜಿನ ಮೇಲೆ ಏನಾಯಿತು ಎಂದು ಊಹಿಸಿ, ನನಗೆ ಸಾಧ್ಯವಿಲ್ಲ. ನಾವು ತಿನ್ನುತ್ತಿದ್ದೆವು ಮತ್ತು ಈ ಇಲಿ ಈಗಷ್ಟೇ ಸತ್ತು ಬಿದ್ದಿತ್ತು... ಅತ್ಯಂತ ವಿಲಕ್ಷಣ ಕ್ಷಣ' ಎಂದು ಈ ಪೋಸ್ಟ್‌ಗೆ ಶೀರ್ಷಿಕೆಯನ್ನು ಸಹ ನೀಡಿದ್ದಾರೆ. 

ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಆಹಾರದಲ್ಲಿ ಉಗುರು ಪತ್ತೆ, IRCTCಯಿಂದ ಅಡುಗೆ ಮಾಡಿದಾತನಿಗೆ ದಂಡ

ಮಹಿಳೆ ಬೆಂಗಳೂರಿನ ನಾಗಸಂದ್ರದಲ್ಲಿರುವ ಐಕೆಇಎ ಸ್ಟೋರ್‌ಗೆ ಇಬ್ಬರು ಸ್ನೇಹಿತರು ಮತ್ತು ಒಬ್ಬ ಸ್ನೇಹಿತನ ಮಗನೊಂದಿಗೆ ಹೋಗಿದ್ದರು. ಬೆಳಿಗ್ಗೆ 11:30 ರ ಸುಮಾರಿಗೆ ಅಂಗಡಿಯನ್ನು ತಲುಪಿದ ನಂತರ ಅವರು ಸ್ವಲ್ಪ ಶಾಪಿಂಗ್ ಮಾಡಿದರು. ಆಕೆಯ ಸ್ನೇಹಿತರೊಬ್ಬರು ಫುಡ್ ಕೋರ್ಟ್‌ನಿಂದ ಸಿಹಿತಿಂಡಿಗಳನ್ನು ಪಡೆಯಲು ಹೋದಾಗ, ಮಹಿಳೆ ಟೇಬಲ್ ಆರಿಸಿ ಕುಳಿತರು. ಈ ಕ್ಷಣದಲ್ಲಿ ಇಲಿ ಚಾವಣಿಯಿಂದ ಬಿದ್ದಿದ್ದು, ಅಸ್ತವ್ಯಸ್ತ ಪರಿಸ್ಥಿತಿ ನಿರ್ಮಾಣವಾಗಿದೆ. ಐಕಿಯಾದಲ್ಲಿ ಇಂಥಾ ಘಟನೆ ನಡೆದಿರೋದು ಮೊದಲ ಬಾರಿಗೆ ಎಂದು ವರದಿಯಾಗಿದೆ.

ವೈರಲ್ ಆದ ಪೋಸ್ಟ್‌ಗೆ ನೆಟ್ಟಿರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.. 'ಇದು ತುಂಬಾ ಹಾರಿಬಲ್ ಆಗಿದೆ' ಎಂದು ಓರ್ವ ವ್ಯಕ್ತಿ ಹೇಳಿದರು. ಇನ್ನೊಬ್ಬ ಬಳಕೆದಾರರು, 'ಇದು ಟೇಬಲ್ ಬದಲು ನಿಮ್ಮ ಪ್ಲೇಟ್‌ನಲ್ಲಿದ್ದರೆ ಏನಾಗುತ್ತಿತ್ತು ಯೋಚಿಸಿ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಐಕಿಯಾದಲ್ಲಿ ಫರ್ನೀಚರ್‌ ಚೆನ್ನಾಗಿದೆ ಎಂದರು, ಫುಡ್ ಕೋರ್ಟ್ ಚೆನ್ನಾಗಿದೆ ಎಂದು ಹೇಳಿಲ್ಲ; ಎಂದು ವ್ಯಂಗ್ಯವಾಗಿ ತಿಳಿಸಿದ್ದಾರೆ.

ಸಂಜೀವ್ ಕಪೂರ್‌ಗೆ ಕೆಟ್ಟ ಆಹಾರ ನೀಡಿ ಇಕ್ಕಟ್ಟಿಗೆ ಸಿಲುಕಿದ ಏರ್ ಇಂಡಿಯಾ

'ಇಲಿ ಟೇಬಲ್‌ ಮೇಲೆ ಬಿದ್ದಿದ್ದನ್ನು ನೋಡಿ ನಾವು ತಕ್ಷಣ ಅಲ್ಲಿದ್ದವರ ಗಮನಕ್ಕೆ ತಂದರೂ ತಕ್ಷಣ ಕ್ರಮ ತೆಗೆದುಕೊಳ್ಳಲ್ಲಿಲ್ಲ. ಅವರು ಟೇಬಲ್ ಕ್ಲೀನ್ ಮಾಡಲು ಇನ್ನೊಬ್ಬರನ್ನು ಕರೆಯಲು ಹೋದರು. ಈ ಸಂದರ್ಭದಲ್ಲಿ ಜನರು ಸಹ ಇದಕ್ಕೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡದ್ದು ಅಚ್ಚರಿಯಾಗಿತ್ತು. ಎಲ್ಲರೂ ಅಲ್ಲಿ ಏನೂ ಆಗೇ ಇಲ್ಲವೆಂಬಂತೆ ತಮ್ಮ ತಮ್ಮ ಟೇಬಲ್ ಕುಳಿತು ಆಹಾರವನ್ನು ತಿನ್ನುತ್ತಿದ್ದರು. ತುಂಬಾ ಹೊತ್ತಿನ ನಂತರ ಟೇಬಲ್ ಕ್ಲೀನ್ ಮಾಡಲಾಯಿತು' ಎಂದು ಮಹಿಳೆ ತಿಳಿಸಿದ್ದಾರೆ. 

ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಿದ್ದಂತೆ, IKEA ಕ್ಷಮೆಯಾಚಿಸಿದೆ. 'ಐಕಿಯಾ ನಾಗಸಂದ್ರದಲ್ಲಿ ನಡೆದ ಅಹಿತಕರ ಘಟನೆಗೆ ನಾವು ಕ್ಷಮೆಯಾಚಿಸುತ್ತೇವೆ. ನಾವು ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.  ಆಹಾರ ಸುರಕ್ಷತೆ ಮತ್ತು ನೈರ್ಮಲ್ಯವು ನಮ್ಮ ಪ್ರಮುಖ ಆದ್ಯತೆಗಳಾಗಿವೆ ಮತ್ತು ನಮ್ಮ ಗ್ರಾಹಕರಿಗೆ IKEA ನಲ್ಲಿ ಅತ್ಯುತ್ತಮ ಶಾಪಿಂಗ್ ಅನುಭವವನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ' ಎಂದು ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದೆ.

Latest Videos
Follow Us:
Download App:
  • android
  • ios