Asianet Suvarna News Asianet Suvarna News

Food News : ನಾಲ್ಕು ಕೆ. ಜಿ ತೂಕದ ಈ ಮ್ಯಾಂಗೋ ಒಮ್ಮೆ ತಿಂದು ನೋಡಿ

Noor Jahan Mango Weight: ಮಾರುಕಟ್ಟೆ ತುಂಬೆಲ್ಲ ಹಣ್ಣುಗಳ ರಾಜ ಮಾವಿನ ಆರ್ಭಟ. ಎಲ್ಲಿ ನೋಡಿದ್ರೂ ಮಾವಿನ ಹಣ್ಣುಗಳು ಗಮನ ಸೆಳೆಯುತ್ತವೆ. ಅದ್ರ ಸುವಾಸನೆ ಬಾಯಲ್ಲಿ ನೀರು ತರಿಸುತ್ತದೆ. ಹಿಂಗಿರುವಾಗ, ಒಂದು ಅಡಿ ಉದ್ದದ ಮಾವು ಕೈಗೆ ಸಿಕ್ಕಿದ್ರೆ…
 

4 Kg Of Mango Found In The Kattiwada Region Of Madhya Pradesh Noorjahan Mango
Author
Bangalore, First Published May 5, 2022, 5:36 PM IST

ಎಲ್ಲರ ಫೆವರೆಟ್ ಮಾವಿನ ಹಣ್ಣು (Mango fruit ). ಅದ್ರಲ್ಲೂ ಸಿಹಿ (Sweet) ಯಾದ ಹಾಗೂ ದೊಡ್ಡ ಹಣ್ಣು ಕೈಗೆ ಸಿಕ್ಕಿದ್ರೆ ಕೇಳ್ಬೇಕಾ? ಪ್ರಪಂಚ ಮರೆತು ಮಾವಿನ ಹಣ್ಣು ತಿನ್ನುವವರಿದ್ದಾರೆ.  ಮಾವಿನ ಮಾಲೀಕ ಎಂದೇ ಜನಪ್ರಿಯವಾಗಿರುವ 'ನೂರ್ ಜಹಾನ್' (Noor Jahan) ತಳಿಯ ರುಚಿ ನೋಡಿದ್ರೆ ಜನರು ಬಿಡೋದಿಲ್ಲ. ನೂರ್ ಜಹಾನ್ ಮಾವಿನ ಪ್ರಿಯರಿಗೆ ಸಿಹಿ ಸುದ್ದಿಯೊಂದಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ  ಈ ಬಾರಿ ಕೇವಲ ಒಂದು ಹಣ್ಣಿನ ಗರಿಷ್ಠ ತೂಕ ನಾಲ್ಕು ಕಿಲೋಗ್ರಾಂ (Kilogram) ಗಳಿಗಿಂತ ಹೆಚ್ಚಾಗಲಿದೆ. ನೂರ್ ಜಹಾನ್ ಮಾವಿನ ತಳಿ ಬೆಳೆಯುತ್ತಿರುವ ರೈತ (Farmer) ನೊಬ್ಬ ಈ ಮಾಹಿತಿಯನ್ನು ನೀಡಿದ್ದಾನೆ.

ಎಲ್ಲಿ ಬೆಳೆಯುತ್ತೆ ನೂರ್ ಜಹಾನ್ ? : ಮಧ್ಯಪ್ರದೇಶ (Madhya Pradesh)ದ ಕತ್ತಿವಾಡ (Kattiwada) ಪ್ರದೇಶದಲ್ಲಿ ಕಂಡುಬರುತ್ತದೆ. ಅಫ್ಘಾನ್ ಮೂಲದ ಈ ನೂರ್ ಜಹಾನ್ ಮಾವಿನ ತಳಿಯ ಕೆಲವು ಮರಗಳು ಮಧ್ಯಪ್ರದೇಶದ ಅಲಿರಾಜಪುರ (Alirajpur) ಜಿಲ್ಲೆಯ ಕತ್ತಿವಾಡ ಪ್ರದೇಶದಲ್ಲಿ ಕಂಡುಬರುತ್ತವೆ. ಈ ಪ್ರದೇಶವು ಗುಜರಾತ್‌ (Gujarat) ಗೆ ಹೊಂದಿಕೊಂಡಿದೆ. ಇಂದೋರ್ (Indore ) ನಿಂದ 250 ಕಿಲೋಮೀಟರ್ ದೂರದಲ್ಲಿರುವ ಕತ್ತಿವಾಡದಲ್ಲಿ ನೂರ್ ಜಹಾನ್ ಮಾವನ್ನು ಬೆಳೆಯಲಾಗುತ್ತದೆ. ಈ ತಳಿಯ ಮರಗಳನ್ನು ಹೊಂದಿರುವ ಬೆಳೆಗಾರ ಶಿವರಾಜ್ ಸಿಂಗ್ ಜಾಧವ್ (Shivraj Singh Jadhav ) ಈ ಬಾರಿ ಖುಷಿ (Enjoy) ಸುದ್ದಿ ನೀಡಿದ್ದಾರೆ. ನನ್ನ ತೋಟ (Garden) ದಲ್ಲಿ ಈ ಬಾರಿ ನೂರ್ ಜಹಾನ್ ಮಾವಿನ ಮೂರು ಮರಗಳಲ್ಲಿ ಒಟ್ಟು 250 ಕಾಯಿ ಬಿಟ್ಟಿದೆ. ಈ ಹಣ್ಣುಗಳು ಜೂನ್ 15 ರೊಳಗೆ ಮಾರಾಟಕ್ಕೆ ಸಿದ್ಧವಾಗಲಿದ್ದು, ಒಂದು ಹಣ್ಣಿನ ಗರಿಷ್ಠ ತೂಕ ಸುಮಾರು ನಾಲ್ಕು ಕೆಜಿಗಿಂತ ಹೆಚ್ಚಿರಬಹುದೆಂದು ನಾನು ಅಂದಾಜಿಸಿದ್ದೇನೆ ಎಂದಿದ್ದಾರೆ ಶಿವರಾಜ್. ಹವಾಮಾನ ವೈಪರಿತ್ಯದಿಂದಾಗಿ ನೂರ್ ಜಹಾನ್ ಕಾಯಿಗಳು ಉದುರಿದೆಯಂತೆ. ಕಳೆದ ವರ್ಷ ನೂರ್ ಜಹಾನ್ ಒಂದು ಹಣ್ಣಿನ ಸರಾಸರಿ ತೂಕ 3.80 ಕೆಜಿ ಇತ್ತು ಎಂದು ಶಿವರಾಜ್ ಹೇಳಿದ್ದಾರೆ.  

ಈಗ್ಲೇ ಬರ್ತಿದೆ ಆರ್ಡರ್ : ನೂರ್ ಜಹಾನ್ ಮಾವು ಹಣ್ಣಾಗಲು ಇನ್ನೂ ಒಂದುವರೆ ತಿಂಗಳು ಬೇಕು. ಆದ್ರೆ ಈಗ್ಲೇ ಅನೇಕರು ಕರೆ ಮಾಡ್ತಿದ್ದಾರಂತೆ. ನೂರ್ ಜಹಾನ್ ಬೆಳೆ ಹೇಗಿದೆ ಎಂದು ಕೇಳ್ತಿದ್ದಾರಂತೆ. ಹಣ್ಣಿಗೆ ಈಗ್ಲೇ ಆರ್ಡರ್ ಬರುತ್ತಿದೆಯಂತೆ. ಆದ್ರೆ ಇನ್ನೂ ಒಂದುವರೆ ತಿಂಗಳಿದೆ, ಹವಾಮಾನದಲ್ಲಿ ಸಾಕಷ್ಟು ಬದಲಾವಣೆಯಾಗ್ತಿದೆ. ಕಾಯಿ ಬಲಿಯುವ ಮುನ್ನವೇ ಉದುರುವ ಅಪಾಯವಿದೆ. ಹಾಗಾಗಿ ಹೆಚ್ಚಿನ ಆರ್ಡರ್ ಪಡೆದಿಲ್ಲ ಎನ್ನುತ್ತಾರೆ ಬೆಳೆಗಾರ. 

MUSCLE BUILDING: ಸುಪುಷ್ಟ ದೇಹ ಸಸ್ಯಾಹಾರಿಗಳಿಗೂ ಸಾಧ್ಯ

ಒಂದು ಮಾವಿನ ಹಣ್ಣಿನ ಬೆಲೆ ಎಷ್ಟು ಗೊತ್ತಾ ? : ಒಂದು ಮಾವಿನ ಹಣ್ಣಿನ ತೂಕವೇ 4 ಕೆಜಿ ಇದೆ ಅಂದ್ಮೇಲೆ ಅದ್ರ ಬೆಲೆ ಎಷ್ಟಿರಬಹುದು ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಕಳೆದ ವರ್ಷ ಮೂರುವರೆ ಕೆಜಿಯಿದ್ದ ಮಾವಿನ ಹಣ್ಣನ್ನು 500 ರಿಂದ 1500 ರೂಪಾಯಿಗೆ ಮಾರಾಟ ಮಾಡಲಾಗಿತ್ತಂತೆ. ಈ ಬಾರಿ ಒಂದು ಮಾವಿನ ಹಣ್ಣಿನ ಬೆಲೆ 1000 ದಿಂದ 2000 ರೂಪಾಯಿಗೆ ಮಾರಾಟ ಮಾಡುವ ಪ್ಲಾನ್ ನಲ್ಲಿದ್ದೇನೆ ಎನ್ನುತ್ತಾರೆ ಶಿವರಾಜ್.  

Kitchen Tips : ಮಡಿಕೆ ನೀರು ತಣ್ಣಗಿರಲು ಈ ಟಿಪ್ಸ್ ಫಾಲೋ ಮಾಡಿ

ನೂರ್ ಜಹಾನ್ ಮಾವಿನ ವಿಶೇಷ : ನೂರ್ ಜಹಾನ್ ಮಾವಿನ ಮರಗಳು ಸಾಮಾನ್ಯವಾಗಿ ಜನವರಿ-ಫೆಬ್ರವರಿಯಿಂದ ಹೂ ಬಿಡಲು ಪ್ರಾರಂಭಿಸುತ್ತವೆ.  ಜೂನ್ ತಿಂಗಳಲ್ಲಿ ಹಣ್ಣು ಶುರುವಾಗುತ್ತದೆ. ಜೂನ್ 15ರೊಳಗೆ ಹಣ್ಣುಗಳು ಮಾರಾಟಕ್ಕೆ ಸಿದ್ಧವಾಗುತ್ತವೆ. ನೂರ್ ಜಹಾನ್ ಮಾವಿನ ಹಣ್ಣು ಒಂದು ಅಡಿ ಉದ್ದದವರೆಗೆ ಬೆಳೆಯುತ್ತದೆ ಎಂದು ತಜ್ಞರು ಹೇಳ್ತಾರೆ. 

Follow Us:
Download App:
  • android
  • ios