ಮಹಾಲಕ್ಷ್ಮೀ ಯೋಗ ಈ ಮೂರು ರಾಶಿಗಳಿಗೆ ಬಂಪರ್ ಲಾಭ!
ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವ ಪ್ರಕಾರ ವ್ಯಕ್ತಿಯ ಜಾತಕದಿಂದ ಭವಿಷ್ಯದ ವಿಚಾರಗಳುನ್ನು ತಿಳಿಯುವುದಷ್ಟೇ ಅಲ್ಲದೇ ಗ್ರಹಗಳ ಸ್ಥಾನ ಮತ್ತು ಸ್ಥಿತಿಯಿಂದ ಅದೃಷ್ಟ ಮತ್ತು ಯೋಗಗಳ ಬಗ್ಗೆ ಸಹ ತಿಳಿಯಬಹುದಾಗಿದೆ. ಇದೇ ಜೂನ್ 18ರಂದು ಮೂರು ರಾಶಿಯವರಿಗೆ ಮಹಾಲಕ್ಷ್ಮೀ ಯೋಗದಿಂದ ಲಾಭ ಉಂಟಾಗಲಿದೆ. ಇದರ ಬಗ್ಗೆ ಇನ್ನಷ್ಟು ತಿಳಿಯೋಣ..
ಗ್ರಹಗಳಿಂದ (Planet) ಅನೇಕ ಯೋಗಗಳು ಉಂಟಾಗುತ್ತದೆ ಎಂಬುದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಉಲ್ಲೇಖಿಸಲಾಗಿದೆ. ಇದರಿಂದಾಗಿ ವ್ಯಕ್ತಿಯ ಜೀವನದಲ್ಲಿ ಸುಖ ಮತ್ತು ಸಮೃದ್ಧಿಗಳು ನೆಲೆಸುತ್ತವೆ. ರಾಶಿ (Zodiac), ನಕ್ಷತ್ರ (Star), ಗ್ರಹಗಳ ಸ್ಥಾನ ಮತ್ತು ಸ್ಥಿತಿಯು ವ್ಯಕ್ತಿಯ ಜೀವನದಲ್ಲಾಗುವ ಏರುಪೇರಿಗೆ ಕಾರಣವಾಗುತ್ತವೆ. ವ್ಯಕ್ತಿಯ ಜಾತಕದಲ್ಲಿ (Horoscope) ಗ್ರಹಗಳು ಉಚ್ಛ ಸ್ಥಿತಿಯಲ್ಲಿದ್ದರೆ ಉತ್ತಮ ಫಲಗಳು ದೊರೆಯುತ್ತವೆ. ಅದೇ ಗ್ರಹಗಳು ನೀಚ ಸ್ಥಿತಿಯಲ್ಲಿದ್ದರೆ ಅಥವಾ ಶತ್ರು ಗ್ರಹಗಳ ಕೆಟ್ಟದೃಷ್ಠಿಗೆ ಒಳಗಾಗಿದ್ದರೆ ವ್ಯಕ್ತಿಗೆ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ. ಹಾಗಾಗಿ ಗ್ರಹಗಳ ಸ್ಥಿತಿಯು ವ್ಯಕ್ತಿಯನ್ನು ಶ್ರೀಮಂತನನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಬುದ್ಧಿ ಮತ್ತು ವಾಣಿಗೆ ಕಾರಕ ಗ್ರಹವಾಗಿರುವ ಬುಧ (Mercury) ಗ್ರಹ ಹಾಗೂ ಸುಖ –ಸಮೃದ್ಧಿಯ ಕಾರಕವಾದ ಶುಕ್ರ (Venus) ಗ್ರಹವಾಗಿದೆ. ಈ ಎರಡು ಗ್ರಹಗಳು ವೃಷಭ (Taurus) ರಾಶಿಯಲ್ಲಿ ಯುತಿಯಾದಾಗ ಮಹಾಲಕ್ಷ್ಮೀ ಯೋಗ (Maha Lakshmi Yoga) ಉಂಟಾಗುತ್ತದೆ. ಜಾತಕದ ಒಂದೇ ಮನೆಯಲ್ಲಿ ಎರಡು ಉಚ್ಛ ಸ್ಥಿತಿಯಲ್ಲಿರುವ ಗ್ರಹಗಳು ಸ್ಥಿತವಾಗಿದ್ದರೆ ಅದಕ್ಕೆ ಯುತಿ (Yuti) ಎಂದು ಕರೆಯುತ್ತಾರೆ. ಈ ಮಹಾಲಕ್ಷ್ಮೀ ಯೋಗದಿಂದಾಗಿ ಈ ಬಾರಿ ಮೂರು ರಾಶಿಯವರಿಗೆ ಒಳಿತಾಗಲಿದ್ದು, ಆರ್ಥಿಕ (Economy) ಸ್ಥಿತಿ ಮತ್ತಷ್ಟು ಬಲವಾಗಲಿದೆ.
ಇದೇ ತಿಂಗಳ 18ನೇ ತಾರೀಖಿನಂದು ಶುಕ್ರ ಗ್ರಹವು ಸ್ವರಾಶಿಯಾದ ವೃಷಭ ರಾಶಿಗೆ ಪ್ರವೇಶಿಸಲಿದೆ. ಇದೇ ರಾಶಿಯಲ್ಲಿ ಬುಧ ಗ್ರಹವು ಸ್ಥಿತವಾಗಿರುವ ಕಾರಣ ಮಹಾಲಕ್ಷ್ಮೀ ಯೋಗ ನಿರ್ಮಾಣವಾಗಲಿದೆ. ಇದರಿಂದಾಗಿ ವೃಷಭ ರಾಶಿಯ ವ್ಯಕ್ತಿಗಳಿಗೆ ಒಳಿತಾಗಲಿದೆ. ಆದರೆ ಈ ಯೋಗದಿಂದ ಹೆಚ್ಚಿನ ಲಾಭ ಉಂಟಾಗುವುದು ಈ ಮೂರೂ ರಾಶಿಯವರಿಗೆ. ಹಾಗಾಗಿ ಮಹಾಲಕ್ಷ್ಮೀ ಯೋಗದ ಪ್ರಭಾವದಿಂದ ಯಾವ್ಯಾವ ರಾಶಿಯವರಿಗೆ ಲಾಭ (Benefit) ಉಂಟಾಗಲಿದೆ ಎಂಬುದನ್ನು ತಿಳಿಯೋಣ....
ಪದೆ ಪದೇ ಉಪ್ಪು ಚೆಲ್ಲುತ್ತಿದ್ದೀರಾ? ಅಪಶಕುನದ ಸೂಚನೆ ಇರಬಹುದು ಇದು!
ಸಿಂಹ ರಾಶಿ (Leo)
ಮಹಾಲಕ್ಷ್ಮೀ ಯೋಗವು ಸಿಂಹ ರಾಶಿಯ ವ್ಯಕ್ತಿಗಳಿಗೆ ಹೆಚ್ಚಿನ ಲಾಭವನ್ನು ತಂದು ಕೊಡಲಿದೆ. ಈ ಯೋಗವು ಸಿಂಹ ರಾಶಿಯವರಿಗೆ ಶುಭ ಪರಿಣಾಮವನ್ನು ನೀಡಲಿದೆ. ಉದ್ಯೋಗ (Job), ವ್ಯಾಪಾರ (Business) ಮತ್ತು ಯಾವುದೇ ಕಾರ್ಯ ಕ್ಷೇತ್ರವಾಗಲಿ, ಅದರಲ್ಲಿ ಉತ್ತಮ ಅವಕಾಶಗಳು (Opportunities) ಒದಗಿ ಬರಲಿದೆ. ಅಷ್ಟೇ ಅಲ್ಲದೇ ಉದ್ಯೋಗದಲ್ಲಿ ಪ್ರಮೋಷನ್ (Promotion) ಜೊತೆಗೆ ವೇತನವೂ ಹೆಚ್ಚಾಗುವ (Increment) ಸಾಧ್ಯತೆ ಇದೆ. ವ್ಯಾಪಾರಸ್ಥರು ಈ ಯೋಗವಿರುವ ಸಮಯದಲ್ಲಿ ಉತ್ತಮ ಲಾಭವನ್ನು ಪಡೆಯಲಿದ್ದಾರೆ.
ಕರ್ಕಾಟಕ ರಾಶಿ (Cancer)
ಕರ್ಕಾಟಕ ರಾಶಿಯವರಿಗೆ ಮಹಾಲಕ್ಷ್ಮೀ ಯೋಗದಿಂದ ಗೌರವ – ಪ್ರತಿಷ್ಠೆ (Respect) ಹೆಚ್ಚಲಿದೆ. ತುಂಬಾ ಸಮಯದಿಂದ ಅರ್ಧಕ್ಕೆ ನಿಂತಿರುವ ಯೋಜನೆಗಳು ಮತ್ತು ಕೆಲಸಗಳು ಈ ಬಾರಿ ಕೈಗೂಡಲಿದ್ದು ಅದರಲ್ಲಿ ಸಫಲತೆ ಸಹ ಸಿಗಲಿದೆ. ಉದ್ಯೋಗದಲ್ಲಿ ಉನ್ನತ ಪದವಿ ಸಿಗುವ ಸಾಧ್ಯತೆ ಇದೆ. ದೂರ ಪ್ರಯಾಣ ಮತ್ತು ಲಾಭದಾಯಕ ಯಾತ್ರೆಯ (Journey) ಸಲುವಾಗಿ ಪ್ರಯಾಣ ಬೆಳೆಸುವ ಸಾಧ್ಯತೆ ಇರುತ್ತದೆ. ದೊಡ್ಡ, ದೊಡ್ಡ ಖರ್ಚುಗಳು (Expenses) ನಿಯಂತ್ರಣವಾಗುವುದಲ್ಲದೇ (Control), ಸಾಲಗಳಿಂದ ಸಹ ಮುಕ್ತಿ ದೊರೆಯಲಿದೆ.
ರಾಹು ಸೇರಿ ಸಂಕಷ್ಟ ಪರಿಹಾರಕ್ಕೆ 'ಉದ್ದಿನಕಾಳು' ಪರಿಹಾರ!
ವೃಶ್ಚಿಕ ರಾಶಿ (Scorpio)
ಮಹಾಲಕ್ಷ್ಮೀ ಯೋಗವು ವೃಶ್ಚಿಕ ರಾಶಿಯವರಿಗೆ ಶುಭ ಫಲವನ್ನು ನೀಡುತ್ತದೆ. ಆದಾಯದವು (Income) ಮೂಲಗಳು ಹೆಚ್ಚಲಿವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭ ಸಿಗುವ ಸ್ಥಿತಿ ನಿರ್ಮಾಣ ಆಗಲಿದೆ. ಈ ರಾಶಿಯವರ ಪ್ರೇಮ (Love) ಸಂಬಂಧಗಳು ಈ ಯೋಗದ ಸಮಯದಲ್ಲಿ ಫಲಪ್ರದವಾಗಲಿದೆ. ಸಂಗಾತಿಯೊಂದಿಗೆ (Partner) ಮಧುರವಾದ ಸಮಯವನ್ನು (Romantic) ಕಳೆಯುವ ಸಂದರ್ಭ ಒದಗಿ ಬರಲಿದೆ. ಸ್ನೇಹಿತರು (Friends) ಮತ್ತು ಸಂಬಂಧಿಕರ (Relatives) ಸಹಕಾರದಿಂದ ಸಂಬಂಧಗಳು ಮತ್ತಷ್ಟು ಗಟ್ಟಿಗೊಳ್ಳಲಿದೆ.