Asianet Suvarna News Asianet Suvarna News

ಯಾದಗಿರಿ: ಕೊಡೇಕಲ್ ರಾಚೇಶ್ವರ ಶ್ರೀಗಳ ಪ್ರವಚನಕ್ಕೆ ಜಿಲ್ಲಾಡಳಿತ ನಿರ್ಬಂಧ, ಪ್ರತಿಭಟನೆಗಿಳಿದ ಸ್ವಾಮೀಜಿ..!

ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಿದ್ದು, ಇದರಿಂದಾಗಿ ಗೊಂದಲ ಸೃಷ್ಠಿಯಾಗಿತ್ತು. ಈಗ ಸ್ವಾಮೀಜಿಗಳು ಇದರ ವಿರುದ್ಧ ಪ್ರತಿಭಟನೆಗಿಳಿದಿದ್ದಾರೆ.

Yadgir District Administration Ban Kodekal Racheswara Shri's Preaching  grg
Author
First Published Aug 18, 2023, 10:57 PM IST

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ(ಆ.18):  ಅಮವಾಸ್ಯೆಯಿಂದ ನಾಡಿನಾದ್ಯಂತ ಶ್ರಾವಣ ಮಾಸ ಆರಂಭಗೊಂಡಿದೆ. ಶ್ರಾವಣ ಮಾಸದಲ್ಲಿ ಹಲವು ಹಳ್ಳಿಗಳಲ್ಲಿ ಪುರಾಣ-ಪ್ರವಚನಗಳು ನಡೆಯುತ್ತವೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ರಾಚೇಶ್ವರ ಮಹಾ ಶಿವಯೋಗಿಗಳ 555ನೇ ಪುಣ್ಯಸ್ಮರಣೆ ಹಾಗೂ ಶ್ರಾವಣ ಮಾಸ ಹಿನ್ನೆಲೆ ಪ್ರವಚನಕ್ಕೆ ಸಿದ್ಧತೆ ಮಾಡಿಕೊಂಡಿದ್ರು. ಆದ್ರೆ ಇದಕ್ಕೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ತಹಸೀಲ್ದಾರ್ ಅವ್ರು ನೀಲಕಂಠ ಅವರು ಪುರಾವೆಯಿಲ್ಲದೆ ರಾಚೇಶ್ವರ ಶ್ರೀಗಳ ಹೆಸರಿನಲ್ಲಿ ಮೋಸ ಮಾಡ್ತಿದ್ದಾರೆ ಅಂತ ದೂರು ನೀಡಿದ್ದರು. ಇದರಿಂದಾಗಿ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಿದ್ದು, ಇದರಿಂದಾಗಿ ಗೊಂದಲ ಸೃಷ್ಠಿಯಾಗಿತ್ತು. ಈಗ ಸ್ವಾಮೀಜಿಗಳು ಇದರ ವಿರುದ್ಧ ಪ್ರತಿಭಟನೆಗಿಳಿದಿದ್ದಾರೆ.

ರಾಚೇಶ್ವರ ಶ್ರೀಗಳ ಪ್ರವಚನಕ್ಕೆ ಬ್ರೇಕ್..!

ಅದು ಶ್ರಾವಣ ಮಾಸದ ದಿನಗಳಲ್ಲಿ ಅಂದ್ರೆ ಒಂದು ತಿಂಗಳುಗಳ ಕಾಲ ನಿರಂತರವಾಗಿ ವಿವಿಧ ಗ್ರಾಮಗಳಿಗೆ ತೆರಳಿ ಸ್ವಾಮೀಜಿಗಳು ಪ್ರವಚನ ನೀಡುವ ಕಾರ್ಯಕ್ರಮ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ನ ವೀರಕ್ತಮಠದ ನೀಲಕಂಠ ಸ್ವಾಮೀಜಿಗಳು ಪ್ರವಚನಕ್ಕೆ ಮುಂದಾಗಿದ್ದರು. ಮಾರನಾಳ, ಹಗರಟಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ, ಸಸಿ ನೆಡುವ ಕಾರ್ಯಕ್ರಮ, ತಾಯಂದಿರ ಪಾದಪೂಜೆ, ಮುತ್ತೈದೆಯರಿಗೆ ಹುಡಿ ತುಂಬುವುದು ಹಾಗೂ ರಾತ್ರಿ ವೇಳೆಗೆ ವಿವಿಧ ಸ್ವಾಮೀಜಿಗಳಿಂದ ಪುರಾಣ-ಪ್ರವಚನ ಮಾಡುವ ಕಾರ್ಯಕ್ರಮವನ್ನು ಹಾಕಿಕೊಂಡಿದ್ದರು. ಆದ್ರೆ ಇವೆಲ್ಲ ಕಾರ್ಯಕ್ರಮದ ನೇತೃತ್ವ ವಹಿಸಿರುವ ನೀಲಕಂಠ ಅವರು ಪುರಾವೆಯಿಲ್ಲದ ರಾಚೇಶ್ವರರ ಹೆಸರಿನಲ್ಲಿ ಮೋಸ ಮಾಡುತ್ತಿದ್ದಾರೆ. ನೀಲಕಂಠ ಎರಡು ಮದುವೆಯಾಗಿದ್ದು, ವಿರಕ್ತದ ಯಾವುದೇ ನಿಯಮ ಪಾಲನೆ ಮಾಡಿಲ್ಲ. ಜನರಿಗೆ ಮೋಸ ಮಾಡ್ತಿದ್ದಾರೆ. ನೀಲಕಂಠ ಅವರ ಪ್ರವಚನಕ್ಕೆ ಅವಕಾಶ ಕೊಡಬೇಡಿ ಅಂತ ತಹಸೀಲ್ದಾರ್ ಬಸಲಿಂಗಯ್ಯ ಅವ್ರಿಗೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ದೂರು ನೀಡಿದೆ. ಈ ದೂರನ್ನು ಆಧರಸಿ ಪ್ರವಚನಕ್ಕೆ ನಿರ್ಬಂಧ ಹೇರಲಾಗಿದೆ. ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಅವರ ಗಮನಕ್ಕೆ ತಂದು ಐದು ಗ್ರಾಮಗಳಾದ ಬೂದಿಹಾಳ, ಹಗರಟಗಿ, ರಾಜನಕೊಳೂರು, ಯಣ್ಣಿ ವಡಗೇರ ಹಾಗೂ ಕೊಡೇಕಲ್ ಗ್ರಾಮದಲ್ಲಿನ ಪ್ರವಚನಕ್ಕೆ ನಿರ್ಬಂಧ ವಿಧಿಸಲಾಗಿದೆ. ಚುನಾವಣೆಗೂ ಮುನ್ನ ಕೊಡೇಕಲ್ ಗ್ರಾಮದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಪರಸ್ಪರ ಕಲ್ಲುತೂರಾಟ ನಡೆದಿತ್ತು. ಮುಂಜಾಗ್ರತಾ ಕ್ರಮವಾಗಿ ಒಂದು ತಿಂಗಳುಗಳ ಕಾಲ ನಿಷೇದಾಜ್ಞೆ ಮಾಡಲಾಗಿದೆ. 

'ಮುಸ್ಲಿಮರ ವೋಟು ಬೇಡ' ಎಂಬ ಕೆಲವರ ತೆವಲಿಗೆ 30% ವೋಟುಗಳೂ ಹೋದ್ವು: ಛಲವಾದಿ

ಧರ್ಮ ನಾಶ ಮಾಡಲು ಬಂದವರು ನಾಶವಾಗಿದ್ದಾರೆ: ಡಾ.ಗುರುಲಿಂಗ ಶ್ರೀ

ರಾಚೇಶ್ವರ ಶ್ರೀಗಳ ಧಾರ್ಮಿಕ ಹಾಗೂ ಪ್ರವಚನ ಕಾರ್ಯಕ್ರಮಕ್ಕೆ 144 ಸೆಕ್ಷನ್ ಜಾರಿ ಖಂಡಿಸಿ ವಿವಿಧ ಸ್ವಾಮೀಜಿಗಳು ಹಾಗೂ ಭಕ್ತರು ಹುಣಸಗಿ ತಹಸಿಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಹಾವೇರಿಯ ಅಕ್ಕಿಮಠದ ಪೀರಾಧಿಪತಿ ಡಾ.ಗುರುಲಿಂಗಸ್ವಾಮಿಗು ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ಯಪಡಿಸಿದರು. ಇದೊಂದು ವಿಶೇಷ ಹಾಗೂ ವಿಭಿನ್ನ ಕಾರ್ಯಕ್ರಮ. ಸರ್ಕಾರದ ಈ‌ ನಿರ್ಧಾರ ಸನಾತನ ಧರ್ಮವನ್ನು ಬಲಿ ಕೊಡಬಾರದು. ಕಾಣದ ಕೈಗಳು ಕಳ್ಳರಂತೆ ತಡೆಯುವ ಕೆಲಸ ಮಾಡಬಾರದು. ಮಂಗ್ಯಾನಂತ ಬುದ್ಧಿ ಇಟ್ಟುಕೊಂಡು ಈ ತರಹ ಕೆಲಸ ಮಾಡ್ತಿದ್ದಾರೆ‌. ಧರ್ಮವನ್ನು ನಾಶ ಮಾಡಲು ಬಂದವರು ನಾಶವಾಗಿದ್ದಾರೆ‌. ಆದೇಶ ಮಾಡಿದವರು ಕ್ಷಮೆ ಕೋರಬೇಕು ಜೊತೆಗೆಅ ಅನುಮತಿ ನೀಡಬೇಕು. ತಡೆಯುವ ಕೆಲಸ ಮಾಡಿದವರಿಗೆ ಅಧಿಕಾರದಿಂದ ಪದಚ್ಯತಿಗೊಳಿಸುವ ಕೆಲಸ ಮಾಡುತ್ತೇವೆ. ಇವತ್ತು ಮಾರನಾಳ ಗ್ರಾಮದಲ್ಲಿ ಕಾರ್ಯಕ್ರಮವಿತ್ತು. ಆದರೆ, ಬೇಲಿಯೇ ಎದ್ದು ಹೋಲ ಮೆಯ್ದಂತೆ ನಮ್ಮವರೇ ನಮಗೆ ಮುಳ್ಳು ಆಗಿದ್ದಾರೆ. ಕೂಡಲಸಂಗಮದಿಂದ ಜ್ಯೋತಿಯನ್ನು ತರಲಾಗಿದೆ. 144 ಸೆಕ್ಷನ್ ಜಾರಿ ಯಾಕೆ ಮಾಡಬೇಕು..? ಯಾವುದೇ ಗಲಾಟೆ-ಕೋಲುಗಲಭೆ ನಡೆದಾಗ 144 ಸೆಕ್ಷನ್ ಜಾರಿ ಆಗ್ತದೆ.  ಪ್ರವಚನ ನಡೆಸುವ ಕಾರ್ಯಕ್ರಮಕ್ಕೆ 144 ಸೆಕ್ಷನ್ ಜಾರಿ ತಂದ್ರೆ ಹೇಗೆ..? ಅನಾಮಿಕ ವ್ಯಕ್ತಿ ಸಂಘಟನೆ ಮೂಲಕ ಈ ರೀತಿಯಾಗಿದೆ. ವಿದ್ಯಾವಂತ ಅಧಿಕಾರಿಗಳು ಏಕಮುಖಿಯಾಗಿ ಹೀಗೆ ಮಾಡಿದ್ದಾರೆ. ಸರ್ಕಾರ ಮಾಡುವ ಕೆಲಸವನ್ನು ಮಠಾಧೀಶರು ಸಮಾಜ ಉಳಿಸುವ ಕೆಲಸ ಮಾಡ್ತಿದ್ದಾರೆ. ವೈಯುಕ್ತಿಕ ದ್ವೇಷದಿಂದ ಈ ತರಹ ಮಾಡುವುದು ಸರಿಯಲ್ಲ. ಧರ್ಮಕ್ಕೆ ಅಪಚಾರ ಮಾಡಿದ್ರೆ, ಕೊಡೇಕಲ್ ಬಸವಣ್ಣ ಪಾಠ ಕಲಿಸ್ತಾನೆ ಎಂದು ಡಾ.ಗುರಲಿಂಗ ಶ್ರೀಗಳು ಕಿಡಿ ನುಡಿಗಳನ್ನಾಡಿದರು.

ಸ್ವಾಮೀಜಿ ಹಾಗೂ ಭಕ್ತರ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ

ರಾಚೇಶ್ವರ ಶ್ರೀಗಳ ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ 144 ಸೆಕ್ಷನ್ ಜಾರಿಗೊಳಸಿರುವುದನ್ನು ಖಂಡಿಸಿ ಹುಣಸಗಿ ತಹಸೀಲ್ ಆಫೀಸ್ ಮುಂದೆ ಪ್ರತಿಭಟನೆ ನಡೆಸಲು ಶ್ರೀಗಳು ಹಾಗೂ ಭಕ್ತರು ನಿರ್ಧರಿಸಿದರು. ಗುಳೇದಗುಡ್ಡ ನಾಗಭೂಷಣ ಸ್ವಾಮೀಜಿ, ಹಾವೇರಿಯ ಅಕ್ಕಿ ಮಠದ ಡಾ.ಗುರಲಿಂಗ ಸ್ವಾಮೀಜಿಗಳು ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಶ್ರೀಗಳ ಪ್ರತಿಭಟನೆಗೆ ಸುರಪುರ ಮಾಜಿ ಶಾಸಕ ರಾಜುಗೌಡ ಸಹೋದರ ಬಬ್ಲುಗೌಡ ಸಾಥ್ ನೀಡಿದರು. ಪ್ರತಿಭಟನೆಯಲ್ಲಿಯೂ ಸಹ ನೂರಾರು ಭಕ್ತರು ಭಾಗವಹಿಸಿದರು. ಸ್ವಾಮೀಜಿಗಳು ಹಾಗೂ ಭಕ್ತರು ನಡೆಸಿದ ನಿರಂತರ ಪ್ರತಿಭಟನೆಗೆ ಯಾದಗಿರಿ ಜಿಲ್ಲಾಡಳಿತ ಮಣಿಯಿತು. ಇದರಿಂದಾಗಿ 144 ಸೆಕ್ಷನ್ ಜಾರಿ ತಂದು ನಿಷೇದಾಜ್ಞೆ ಮಾರ್ಪಾಡು ಮಾಡಿ ಎಸಿ ಹಂಪಣ್ಣ ಸಜ್ಜನ್ ಆದೇಶ ಹೊರಡಿಸಿದರು. 

ಕೊಡೇಕಲ್ ಗ್ರಾಮ ಹೊರತುಪಡಿಸಿ ಉಳಿದ ಐದು ಗ್ರಾಮಗಳಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಿಸಲು ಷರತ್ತುಬದ್ಧ ಅನುಮತಿ ನೀಡಲಾಗಿದೆ. ಸುಮಾರು 6 ಷರತ್ತು ಹಾಕಿ ಧಾರ್ಮಿಕ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿದೆ. ಆದ್ರೆ ಕೊಡೇಕಲ್ ವಿರಕ್ತಮಠದಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ.

Follow Us:
Download App:
  • android
  • ios