Hindu Rituals: ಮಹಿಳೆಯರೇಕೆ ಸ್ಮಶಾನಕ್ಕೆ ಹೋಗಬಾರದು?

ಸಾಮಾನ್ಯವಾಗಿ ಕುಟುಂಬ ಸದಸ್ಯರು ಅಥವಾ  ಸಂಬಂಧಿಗಳು ಸತ್ತಾಗ, ಮನೆಯ ವಿಧಿವಿಧಾನದ ಬಳಿಕ ಅಂತ್ಯಸಂಸ್ಕಾರಕ್ಕಾಗಿ ಪಾರ್ಥಿವ ಶರೀರವನ್ನು ಸ್ಮಶಾನಕ್ಕೆ ಕೊಂಡೊಯ್ಯಲಾಗುತ್ತದೆ. ಹೀಗೆ ಹೆಣ ಹೂಳುವಲ್ಲಿಗೆ ಅಥವಾ ಸುಡುವಲ್ಲಿಗೆ ಹಿಂದೂ ಮಹಿಳೆಯರಿಗೆ ಹೋಗಲು ಅನುಮತಿ ಇಲ್ಲ. ಇದಕ್ಕೇನು ಕಾರಣ?

Why women should not go to cremation Scripture says these 4 reasons skr

ಹಿಂದೂ ಸಂಪ್ರದಾಯದ ಪ್ರಕಾರ, ಕುಟುಂಬದ ಸದಸ್ಯರು ಸತ್ತಾಗ ಸ್ಮಶಾನದಲ್ಲಿ ಅವರ  ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಆದರೆ ಇಲ್ಲಿಗೆ ಮಹಿಳೆಯರು ಸ್ಮಶಾನಕ್ಕೆ ಹೋಗಬಾರದು ಎಂದು ನಿಯಮವಿದೆ. ಮಹಿಳೆಯರು, ಮಕ್ಕಳನ್ನು, ವೃದ್ಧರನ್ನು ಮನೆಯಲ್ಲಿಯೇ ಬಿಟ್ಟು ಗಂಡಸರು ಮಾತ್ರ ಅಂತ್ಯಸಂಸ್ಕಾರ ಪೂರೈಸಿ ಬರುತ್ತಾರೆ. ಇದರ ಹಿಂದಿನ ಕಾರಣ ಏನು ಗೊತ್ತಾ? 

ಹಿಂದೂ ಸಂಸ್ಕೃತಿಯಲ್ಲಿ, ಮಗು ಜನಿಸಿದಾಗಿನಿಂದ ಸಾಯುವವರೆಗೆ ಒಟ್ಟು 16 ವಿಧದ ವಿಧಿಗಳನ್ನು ಹೇಳಲಾಗುತ್ತದೆ. ಕೊನೆಯ ವಿಧಿ ಅಂತ್ಯಕ್ರಿಯೆ. ಸಾಮಾನ್ಯವಾಗಿ ಅಂತ್ಯಕ್ರಿಯೆಯನ್ನು ಹೊಳೆ ಬದಿಗಳಲ್ಲಿ ನೆರವೇರಿಸಲಾಗುತ್ತದೆ. ಇದರಿಂದಾಗಿ ಬೂದಿಯನ್ನು ಅಂತ್ಯಕ್ರಿಯೆಯ ನಂತರ ವಿಲೇವಾರಿ ಮಾಡುವುದು ಸುಲಭವಾಗುತ್ತದೆ.  ಮನೆಯಲ್ಲಿ ಯಾವುದೇ ಪುರುಷ ಅಥವಾ ಮಹಿಳೆ ಸತ್ತರೆ, ಮನೆಯ ಮಹಿಳೆಯರು ಅಂಗಳದವರೆಗೆ ಹೋಗುತ್ತಾರೆ. ಪುರುಷರು ಮಾತ್ರ ಸ್ಮಶಾನಕ್ಕೆ ಹೋಗುತ್ತಾರೆ. ಹಾಗಂಥ ಇದು ಧಾರ್ಮಿಕ ಕಟ್ಟುಪಾಡಲ್ಲ.  ಮಹಿಳೆಯರು ಬಯಸಿದಲ್ಲಿ ಸ್ಥಳಕ್ಕೆ ಭೇಟಿ ನೀಡಬಹುದು. ಆದರೆ, ಕೆಲ ಪ್ರಾಯೋಗಿಕ ಕಾರಣಗಳಿಗಾಗಿ ಮಹಿಳೆಯರನ್ನು ಸ್ಮಶಾನಕ್ಕೆ ಬರದಂತೆ ತಡೆಯಲಾಗುತ್ತದೆ. ಆ ಕಾರಣಗಳೇನು ನೋಡೋಣ. 

ಮಹಿಳೆಯರು ತುಂಬಾ ಭಾವನಾತ್ಮಕವಾಗಿರುತ್ತಾರೆ. ಮರಣವು ಅವರಿಗೆ ಹೆಚ್ಚು ದುಃಖವನ್ನು ಉಂಟು ಮಾಡುತ್ತದೆ. ಅಂತಹ ಸಂದರ್ಭದಲ್ಲಿ, ಸತ್ತ ವ್ಯಕ್ತಿಯನ್ನು ಸ್ಮಶಾನದಲ್ಲಿ ಸುಡುವುದನ್ನು ನೋಡುವುದು ಅವರಿಗೆ ಹೆಚ್ಚಿನ ತೊಂದರೆ ಉಂಟು ಮಾಡಬಹುದು. ಪ್ರೀತಿಪಾತ್ರರು ಸುಟ್ಟು ಹೋಗುವುದು ಅಥವಾ ಮಣ್ಣಲ್ಲಿ ಮುಚ್ಚು ಹೋಗುವುದನ್ನು ಸಹಿಸುವುದು ಅವರಿಂದ ಕಷ್ಟಸಾಧ್ಯ. ಇದು ಬಹಳಷ್ಟು ಕಾಲದವರೆಗೆ ಅವರನ್ನು ಕಾಡುವುದು. ಅಲ್ಲದೆ, ಅವರ ಕೂಗು ಸತ್ತವರ ಆತ್ಮವನ್ನು ತೊಂದರೆಗೊಳಿಸುತ್ತದೆ ಎಂಬುದು ಮಹಿಳೆಯರು ಸ್ಮಶಾನಕ್ಕೆ ಹೋಗಬಾರದೆಂಬುದಕ್ಕೆ ಒಂದು ಕಾರಣ.

ಮಹಿಳೆಯರೇ ಸೇರಿ ಆಚರಿಸುವ Attukal Pongala 2023.. ಏನೀ ಆಚರಣೆಯ ಹಿನ್ನೆಲೆ?

ಮತ್ತೊಂದು ಕಾರಣವೆಂದರೆ, ಮೃತದೇಹವನ್ನು ಸುಡುವಾಗ ಹಲವು ವಿಷಕಾರಿ ಸೂಕ್ಷ್ಮಾಣುಗಳು ವಾತಾವರಣದಲ್ಲಿ ಬೆರೆತು ಹೋಗುತ್ತವೆ. ಆದ್ದರಿಂದ ಪುರುಷರು ತಲೆ ಬೋಳಿಸಿಕೊಂಡು ಮತ್ತು ನದಿಯಲ್ಲಿ ಸ್ನಾನ ಮಾಡುವ ಮೂಲಕ ಶುದ್ಧರಾಗುತ್ತಾರೆ. ಆದರೆ ಹಿಂದೂ ಧರ್ಮದಲ್ಲಿ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಹಾಗಾಗಿ, ಅವರು ಪುರುಷರಷ್ಟು ಶುದ್ಧವಾಗುವುದು ಕಷ್ಟ.

ಮೂರನೇ ಕಾರಣವೆಂದರೆ, ಸ್ಮಶಾನವು ಅತೃಪ್ತ ಶಕ್ತಿಗಳ ವಾಸನೆಯನ್ನು ಹೊಂದಿದೆ ಎಂದು ನಂಬಲಾಗಿದೆ. ಮಹಿಳೆಯರು ಮೃದು ಹೃದಯದವರಾಗಿರುವುದರಿಂದ, ಈ ಶಕ್ತಿಗಳು ಶೀಘ್ರವಾಗಿ ಅವರ ಮೇಲೆ ಪ್ರಾಬಲ್ಯ ಸಾಧಿಸಬಹುದು, ಇದು ಮಹಿಳೆಯರಲ್ಲಿ ಅಜ್ಞಾತ ಕಾಯಿಲೆಗಳಿಗೆ ಕಾರಣವಾಗಬಹುದು. ಅದರಲ್ಲೂ ಕನ್ಯೆಯರನ್ನು ಪ್ರೇತಗಳು, ದುಷ್ಟಶಕ್ತಿಗಳು ಮತ್ತು ಉಗ್ರ ದೇವತೆಗಳು ತಮ್ಮ ನಿಯಂತ್ರಣಕ್ಕೆ ಬೇಗ ತೆಗೆದುಕೊಳ್ಳುತ್ತವೆ ಎಂಬ ನಂಬಿಕೆ ಇದೆ. ಆದ್ದರಿಂದ ಮಹಿಳೆಯರಿಗೆ ಸ್ಮಶಾನಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ.

ಸೂರ್ಯ, ಶನಿ, ಬುಧ ಕುಂಭದಲ್ಲಿ; 4 ರಾಶಿಗಳಿಗೆ ತ್ರಿಗ್ರಹ ಯೋಗದಿಂದ ಕಾರ್ಯ ಸಿದ್ಧಿ

ನಾಲ್ಕನೆಯ ಕಾರಣವೆಂದರೆ, ಅಂತಿಮ ಸಂಸ್ಕಾರದ ಎಲ್ಲಾ ಜವಾಬ್ದಾರಿಯನ್ನು ಪುರುಷರು ಹೊರುತ್ತಾರೆ. ಅದಕ್ಕೂ ಮುನ್ನ ಮನೆಯಲ್ಲಿ ಶವ ಇರಿಸಲಾಗಿಸಿರುತ್ತದೆ. ಇದರಿಂದ ಮನೆಯಲ್ಲಿ ಬ್ಯಾಕ್ಟೀರಿಯಾ, ನಕಾರಾತ್ಮಕತೆ ಹೆಚ್ಚಿರುತ್ತದೆ. ಹಾಗಾಗಿ, ಪುರುಷರು ಅಂತ್ಯಸಂಸ್ಕಾರ ಮುಗಿಸಿ ಬರುವ ವೇಳೆಗೆ ಮಹಿಳೆಯರು ಮನೆಯಲ್ಲಿಯೇ ಇದ್ದು ಮನೆಯ ಶುಚಿಗೊಳಿಸುವಿಕೆ ಪೂರೈಸಿ ಆಹಾರ ತಯಾರಿಕೆ ಇತ್ಯಾದಿಗಳನ್ನು ಒಳಗೊಂಡಂತೆ ಮನೆಯ ಕೆಲಸ ಮಾಡಬೇಕು. ಇದರಿಂದ ಸಂಸ್ಕಾರ ಮುಗಿಸಿ ಬಂದವರು ಶುದ್ಧರಾಗಲು ಸಹಾಯವಾಗುತ್ತದೆ. ಮತ್ತು  ಶವವಿದ್ದಾಗ ಬಹಳ ಸಮಯದವರೆಗೆ ಎಲ್ಲರೂ ಹಸಿದಿರುತ್ತಾರೆ. ಅವರು ಶುದ್ಧ ಆಹರ ಸೇವಿಸಲು ಕೂಡಾ ಆಗುತ್ತದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios