ಮಹಿಳೆಯರೇ ಸೇರಿ ಆಚರಿಸುವ Attukal Pongala 2023.. ಏನೀ ಆಚರಣೆಯ ಹಿನ್ನೆಲೆ?

ಜಾಗತಿಕವಾಗಿ ಪ್ರಸಿದ್ಧವಾದ ಯಾತ್ರಾ ಸ್ಥಳ ಅಟ್ಟುಕಲ್‌ನ್ನು 'ಮಹಿಳೆಯರ ಶಬರಿಮಲೆ' ಎಂದೇ ಕರೆಯಲಾಗುತ್ತದೆ. ಇಲ್ಲಿನ ಭಗವತಿ ದೇವಸ್ಥಾನ ವಾರ್ಷಿಕ ಪೊಂಗಲ ಹಬ್ಬಕ್ಕೆ ಹೆಸರುವಾಸಿಯಾಗಿದೆ. 

Attukal Pongala 2023 Find history significance and why the festival is important to women skr

ಅಟ್ಟುಕಲ್ ಭಗವತಿ ದೇವಸ್ಥಾನದಲ್ಲಿ ಪೊಂಗಲ್ ಹಬ್ಬದ ಸಿದ್ಧತೆ ಪೂರ್ಣಗೊಂಡಿದೆ. ಅಟ್ಟುಕಲ್ ಪೊಂಗಲ ಈ ಬಾರಿ ಮಾರ್ಚ್ 7 ರಂದು ಆಚರಣೆಯಾಗುತ್ತಿದೆ. ಸೋಮವಾರ, ಉತ್ಸವವು ದೇವಿಯ ಸ್ನಾನದೊಂದಿಗೆ 4:30 ಕ್ಕೆ ಪ್ರಾರಂಭವಾಗುತ್ತದೆ. ಮಾ.7ರಂದು ದೇಗುಲದ ಮುಂಭಾಗದ ಪಂದಳದಲ್ಲಿ ಕನ್ನಕೀ ಚರಿತಂನಲ್ಲಿ ಪಾಂಡ್ಯರಾಜನ ಮರಣಾನಂತರ ವಿಜಯಶ್ರೀ ಲಲಿತಾ ಮಾತೆಯ ಭಾಗವತಿಕೆಯೊಂದಿಗೆ ಪೊಂಗಲ ಕಾರ್ಯಕ್ರಮಗಳು ಆರಂಭವಾಗಲಿವೆ.

ದೇವಸ್ಥಾನದ ಒಲೆಗೆ ಬೆಂಕಿ ಹಚ್ಚಿದ ಬಳಿಕ, ಲಕ್ಷಾಂತರ ಭಕ್ತರು ಪೊಂಗಲ್ ದೀಪಗಳನ್ನು ಬೆಳಗುತ್ತಾರೆ. ಮಧ್ಯಾಹ್ನ 2.30ಕ್ಕೆ ಪೊಂಗಲ್ ನೈವೇದ್ಯ ಸಮಾರಂಭ ನಡೆಯಲಿದೆ.

ಏನಿದು ಅಟ್ಟಕಲ್ ಪೊಂಗಲ?
ಕೇರಳದ ತಿರುವನಂತಪುರಂನಲ್ಲಿರುವ ಜಾಗತಿಕವಾಗಿ ಪ್ರಸಿದ್ಧವಾದ ಯಾತ್ರಾ ಸ್ಥಳ ಅಟ್ಟುಕಲ್ - ಭಗವತಿ ದೇವಸ್ಥಾನ ಮತ್ತು ವಾರ್ಷಿಕ ಪೊಂಗಲ ಹಬ್ಬಕ್ಕೆ ಹೆಸರುವಾಸಿಯಾಗಿದೆ. ಅಟ್ಟುಕಲ್ ಪೊಂಗಲವು ಕೇರಳದ ತಿರುವನಂತಪುರಂನಲ್ಲಿ ಮಹಿಳೆಯರು ಮಾತ್ರ ಆಚರಿಸುವ ಹಬ್ಬವಾಗಿದೆ. ಈ ಹಬ್ಬವನ್ನು ಅಟ್ಟುಕಲ್ ಭಗವತಿಗೆ ಸಮರ್ಪಿಸಲಾಗಿದೆ. ಈಕೆಯನ್ನು ದೇವಿ ಕನ್ನಕಿ ಅಥವಾ ಭದ್ರಕಾಳಿ ಎಂದೂ ಕರೆಯಲಾಗುತ್ತದೆ. ಇದು ಅಟ್ಟುಕಲ್ ಭಗವತಿ ದೇವಸ್ಥಾನದಲ್ಲಿ 10 ದಿನಗಳ ಕಾಲ ನಡೆಯುವ ಉತ್ಸವವಾಗಿದೆ. ಇದು ಮಲಯಾಳಂ ಕ್ಯಾಲೆಂಡರ್ ಪ್ರಕಾರ ಕುಂಭಂ ತಿಂಗಳಲ್ಲಿ ಪ್ರಾರಂಭವಾಗುತ್ತದೆ. ಪ್ರತಿ ವರ್ಷ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಬರುತ್ತದೆ. 

ಶ್ರೀಮಂತರಾಗೋಕೆ ಏನ್ ಮಾಡ್ಬೇಕು? Neem Karoli Baba ನೀಡಿದ ಟಿಪ್ಸ್ ಇಲ್ಲಿವೆ..

ಅಟ್ಟುಕಲ್ ಪೊಂಗಲ ಆಚರಣೆಯು ಮಹಿಳಾ ಭಕ್ತಾದಿಗಳ ಬೃಹತ್ ಸಮಾವೇಶಕ್ಕೆ ಸಾಕ್ಷಿಯಾಗಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರಿದೆ. ಪ್ರತಿ ವರ್ಷ ಅಟ್ಟುಕಲ್ ದೇವಿಗೆ ಮಣ್ಣಿನ ಮಡಕೆಗಳಲ್ಲಿ ಸಿಹಿಯನ್ನು ಅರ್ಪಿಸಲು ಅಟ್ಟುಕಲ್ ದೇವಸ್ಥಾನದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. 

ಇತಿಹಾಸ ಮತ್ತು ಮಹತ್ವ
ಕನ್ನಕಿ ದೇವಿಯು ಜ್ಞಾನದ ದೇವತೆಯಾದ ಸರಸ್ವತಿ, ಸಂಪತ್ತಿನ ಅಧಿದೇವತೆ ಲಕ್ಷ್ಮಿ ಮತ್ತು ಶಕ್ತಿ ಮತ್ತು ಇಚ್ಛೆಯ ದೇವತೆಯಾದ ಕಾಳಿಯ ಶಕ್ತಿಯನ್ನು ಸಂಯೋಜಕ ರೂಪ. ಕನ್ನಕಿ ದೇವಿಯು ತನ್ನ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಪರಮ ದೇವಿ.

ಈ ವಿಶೇಷ ದಿನದಂದು ಭಕ್ತರು ಕನ್ನಕಿ ದೇವಿಗೆ ಬಳೆಗಳನ್ನು ಅರ್ಪಿಸುತ್ತಾರೆ. ಪೂರಂ ಎಂದು ಕರೆಯಲ್ಪಡುವ ಒಂಬತ್ತನೇ ದಿನದಂದು, ದೇವಾಲಯವು ಸಮುದ್ರೋಪಾದಿಯಲ್ಲಿ ಹರಿದು ಬಂದು ಹಲವಾರು ಆಚರಣೆಗಳು ಮತ್ತು ವಿಧಿಗಳನ್ನು ಮಾಡುವ ಮಹಿಳಾ ಭಕ್ತರಿಗೆ ಸಾಕ್ಷಿಯಾಗುತ್ತದೆ. ಅಂದು ಅಕ್ಕಿ, ಬೆಲ್ಲ, ತುಪ್ಪ ಮತ್ತು ತೆಂಗಿನಕಾಯಿಯಿಂದ ಮಾಡಿದ ಸಿಹಿ ಖಾದ್ಯವಾದ ಪೊಂಗಲವನ್ನು ಮಹಿಳಾ ಭಕ್ತರೆಲ್ಲರೂ ದೇವಾಲಯದಲ್ಲಿ ಮಣ್ಣಿನ ಮಡಕೆಗಳಲ್ಲಿ ತಯಾರಿಸುತ್ತಾರೆ.

ದಾಖಲೆ ಬರೆದಿದ್ದ ಉತ್ಸವ
1997 ಮತ್ತು 2009ರಲ್ಲಿ, ಈ ಅಟ್ಟುಕಲ್ ಪೊಂಗಲ ಆಚರಣೆಗಳು ಮಹಿಳಾ ಭಕ್ತರ ಬೃಹತ್ ಸಮಾವೇಶಕ್ಕಾಗಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅನ್ನು ಪ್ರವೇಶಿಸಿದವು. 1997ರಲ್ಲಿ, ಸುಮಾರು 1.5 ದಶಲಕ್ಷ ಮಹಿಳೆಯರು ಪೊಂಗಲ ತಯಾರಿಕೆಯಲ್ಲಿ ಭಾಗವಹಿಸಿದ್ದರು. 2009ರಲ್ಲಿ ಸುಮಾರು 2.5 ಮಿಲಿಯನ್ ಭಕ್ತೆಯರು ಬಹುನಿರೀಕ್ಷಿತ ಉತ್ಸವಕ್ಕೆ ಹಾಜರಾಗಿ ದಾಖಲೆ ನಿರ್ಮಿಸಿದರು.

Holi 2023: ಈ ಹೋಳಿ ಹಬ್ಬದಲ್ಲಿ ನಿಮ್ಮ ರಾಶಿಗೆ ತಕ್ಕ ಬಣ್ಣ ಬಳಸಿ, ಅದೃಷ್ಟ ಹೆಚ್ಚಿಸಿ..

ಅಟ್ಟುಕಲ್ ದೇವಾಲಯವು ಸುಮಾರು 300 ವರ್ಷಗಳ ಹಿಂದೆ ಒಂದು ಪ್ರಮುಖ ಯಾತ್ರಾ ಕೇಂದ್ರವಾಗಿತ್ತು. ತಿರುವನಂತಪುರಂ ಪ್ರದೇಶವು ಹಿಂದಿನ ತಿರುವಾಂಕೂರು ಸಾಮ್ರಾಜ್ಯದ ರಾಜಧಾನಿಯಾದ ಸಮಯದಲ್ಲಿ ಅಂದರೆ, 18ನೇ ಶತಮಾನದ ಅಂತ್ಯದ ವೇಳೆಗೆ ಪೊಂಗಲ ಆಚರಣೆ ಮತ್ತು ದೇವಾಲಯದ ಕಾರಣಕ್ಕಾಗಿ ಜನಪ್ರಿಯವಾಯಿತು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios