ಬಹುತೇಕ ದೇವಸ್ಥಾನಗಳೇಕೆ ಬೆಟ್ಟದ ಮೇಲೆಯೇ ಇರುತ್ತೆ?
ಹಿಂದೂ ಧರ್ಮದಲ್ಲಿ ದೇವಾನುದೇವತೆಗಳಿಗೆ ಕೊರತೆ ಇಲ್ಲ. ಭಕ್ತರು ಪ್ರತಿಯೊಂದು ದೇವರನ್ನು ಭಕ್ತಿಯಿಂದ ಪೂಜಿಸ್ತಾರೆ. ಅದೆಷ್ಟೇ ಕಷ್ಟವಾದ್ರೂ ಬೆಟ್ಟ ಹತ್ತಿ ದೇವರ ದರ್ಶನ ಮಾಡ್ತಾರೆ. ಪರ್ವತ ಏರಿ ದೇವಿ ಪ್ರಸಾದ ಸ್ವೀಕರಿಸುವ ನಿಮಗೆ ಇದು ಗೊತ್ತಾ?
ಭಾರತ ಅಂದ್ರೆ ಅದು ದೇವರ ಮನೆ. ಭಾರತದಲ್ಲಿ ಲಕ್ಷಾಂತರ ದೇವಸ್ಥಾನಗಳಿವೆ. ಹಿಂದೂ ಧರ್ಮದಲ್ಲಿ ಸಾವಿರಾರು ದೇವಾನುದೇವತೆಗಳಿವೆ. ಭಕ್ತರು ತಮ್ಮ ಜಾತಿ, ಧರ್ಮ, ಜನಾಂಗದ ಹಾಗೂ ನಂಬಿಕೆ ಪ್ರಕಾರ ಬೇರೆ ಬೇರೆ ದೇವರ ಆರಾಧನೆ ಮಾಡ್ತಾರೆ. ವಾರದ ಪ್ರತಿ ದಿನ ಒಂದೊಂದು ದೇವರಿಗೆ ಮೀಸಲಾಗಿದೆ. ಹಾಗೆಯೇ ವರ್ಷದಲ್ಲಿ ಬರುವ ಪ್ರತಿಯೊಂದು ಹಬ್ಬದಲ್ಲಿ ದೇವಸ್ಥಾನಗಳು ತುಂಬಿರುತ್ತವೆ. ಜೀವನದಲ್ಲಿ ಒಮ್ಮೆಯಾದ್ರೂ ತಮ್ಮಿಷ್ಟದ ದೇವಸ್ಥಾನಕ್ಕೆ ಹೋಗಿ ಬರಬೇಕೆಂದು ಆಸೆ ಹೊಂದಿರುವವರು ಎಷ್ಟೋ ಜನರಿದ್ದಾರೆ. ಜಾತ್ರೆ ಸಂಭ್ರಮವನ್ನು ಕೂಡ ನಾವು ನೋಡ್ಬಹುದು. ದೇವಸ್ಥಾನದ ವಿಷ್ಯಕ್ಕೆ ಬಂದಾಗ ನಾವು ಒಂದು ಮುಖ್ಯವಾದ ಅಂಶವನ್ನು ಗಮನಿಸಬೇಕು. ಭಾರತದಲ್ಲಿ ದೇವತೆಗಳ ದೇವಸ್ಥಾನಗಳು ಬೆಟ್ಟದ ಮೇಲೆ, ಪರ್ವತಗಳ ಮೇಲೆ ಇರೋದನ್ನು ನೀವು ನೋಡಿರಬಹುದು. ಬಹುತೇಕ ದೇವಿ ದೇವಸ್ಥಾನಗಳು ಬೆಟ್ಟದ ಮೇಲೆ ಇರಲು ಕಾರಣವೇನು ಎಂಬುದನ್ನು ನಾವಿಂದು ಹೇಳ್ತೇವೆ.
ಜಮ್ಮು (Jammu) ವಿನ ಮಾತಾ ವೈಷ್ಣೋ ದೇವಿಯ ದೇವಾಲಯ (Temple), ಗುವಾಹಟಿಯ ಮಾ ಕಾಮಾಖ್ಯ ದೇವಸ್ಥಾನ, ಮೈಸೂರಿನ ಚಾಮುಂಡಿ (Chamundi) ದೇವಸ್ಥಾನ ಹೀಗೆ ಬಹುತೇಕ ತಾಯಿಯ ದೇವಸ್ಥಾನಗಳು ಬೆಟ್ಟದ ಮೇಲಿವೆ. ಭಕ್ತರು (Devotees) ಅದೆಷ್ಟೆ ಕಷ್ಟವಾದ್ರೂ ಈ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆಯುತ್ತಾರೆ.
ಬೆಳಿಗ್ಗೆ ಎದ್ದು ಮನೆ ಗುಡಿಸುತ್ತೀರಾ? ಹಾಗಿದ್ರೆ ನೀವಿದನ್ನು ಓದಿ
ದೇವಿ ದೇವಸ್ಥಾನ ಬೆಟ್ಟದ ಮೇಲಿರಲು ಕಾರಣ :
ದೇವಿ ಸರ್ವೋಚ್ಚ : ಭೂಮಿ ಪಂಚಭೂತಗಳಿಂದ ಮಾಡಲ್ಪಟ್ಟಿದೆ. ಭೂಮಿಯ ಆರಂಭ ಹಾಗೂ ವಿಲೀನ ಎರಡೂ ಪಂಚ ಭೂತಗಳಲ್ಲಿ (Five Elements) ಆಗಲಿದೆ ಎಂದು ಹಿಂದೂ ಧರ್ಮದ ಪುರಾಣ, ವೇದಗಳಲ್ಲಿ ಹೇಳಲಾಗಿದೆ. ಹಿಂದೂ ಧರ್ಮದ ಪ್ರಕಾರ ಈ ಪಂಚ ತತ್ವಗಳನ್ನು ದೇವರಿಗೆ ಹೋಲಿಕೆ ಮಾಡಲಾಗಿದೆ. ನಿಮಗೆ ತಿಳಿದಂತೆ ಜಲ, ಗಾಳಿ, ಬೆಂಕಿ, ಪೃಥ್ವಿ ಮತ್ತು ಆಕಾಶ ಪಂಚ ಭೂತಗಳಾಗಿವೆ. ಜಲ ದೇವರು ಎಂದು ಗಣೇಶನನ್ನು, ಅಗ್ನಿ ದೇವರು ಅಗ್ನಿದೇವ ಮತ್ತು ಆಕಾಶದ ದೇವರು ಸೂರ್ಯ ಎಂದು ನಂಬಲಾಗಿದೆ. ಅಲ್ಲದೆ ಪೃಥ್ವಿ ದೇವರು ಈಶ್ವರನಾದ್ರೆ ವಾಯು ದೇವರು ವಿಷ್ಣುವಾಗಿದ್ದಾನೆ. ಇನ್ನು ತಾಯಿ ಪಾರ್ವತಿಯನ್ನು ಸರ್ವೋಚ್ಚ ಎಂದು ಪರಿಗಣಿಸಲಾಗಿದೆ. ಪರ್ವತವನ್ನು ಭೂಮಿ ಮುಕುಟ ಹಾಗೂ ಸಿಂಹಾಸನ ಎಂದೂ ನಂಬಲಾಗಿದೆ. ಹಾಗಾಗಿ ಬಹುತೇಕ ದೇವತೆಗಳ ಸ್ಥಾನ ಪರ್ವತದ ಮೇಲಿರುತ್ತದೆ.
ಶಾಂತತೆ ಮುಖ್ಯ (To maintain Silence) : ದೇವತೆಗಳ ದೇವಸ್ಥಾನ ಪರ್ವತದ ಮೇಲಿರಲು ಇನ್ನೊಂದು ಕಾರಣ ಶಾಂತಿ. ಹಿಂದಿನ ಕಾಲದಲ್ಲಿ ಸನ್ಯಾಸಿಗಳು ಶಾಂತ ಸ್ಥಳದ ಹುಡುಕಾಟ ನಡೆಸುತ್ತಿದ್ದರು. ಭೂಮಿಯ ಸಮತಟ್ಟಾದ ಜಾಗವನ್ನು ಮನುಷ್ಯ ಎಂದೂ ಬಿಡಲಾರ ಎಂಬ ಭಯ ಅವರಿಗಿತ್ತು. ಮನುಷ್ಯನಿರುವ ಜಾಗದಲ್ಲಿ ಶಾಂತಿ ಸಿಗಲಾರದು ಹಾಗೆಯೇ ಅಲ್ಲಿ ಧ್ಯಾನ, ಜಪ ಮಾಡಲು ಸಾಧ್ಯವಿಲ್ಲ ಎಂದು ಋಷಿಗಳು ಭಾವಿಸಿದರು. ಏಕಾಂತ, ಶಾಂತಿಗಾಗಿ ಪರ್ವತ ಪ್ರದೇಶವನ್ನು ದೇವತೆಗಳ ಸ್ಥಳ ಮಾಡುವುದು ಸೂಕ್ತವೆಂದು ಅವರು ಭಾವಿಸಿದ್ರು. ಪರ್ವತದಲ್ಲಿ ವಾತಾವರಣ ಶುದ್ಧವಾಗಿರುತ್ತದೆ. ಅಲ್ಲಿಗೆ ಹೋದ ವ್ಯಕ್ತಿ ಸಕಾರಾತ್ಮಕ ಅನುಭವ ಪಡೆಯುತ್ತಾನೆ. ಯಾವುದೇ ಜಪಕ್ಕೆ ಇಲ್ಲಿ ಭಂಗ ಬರಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಪರ್ವತದ ಮೇಲೆ ದೇವತೆಗಳ ದೇವಸ್ಥಾನ ನೆಲೆಗೊಂಡಿದೆ.
ನೀವು ಸಾಯುವ ಕನಸು ಕಂಡರೆ, ಅದು ಒಳ್ಳೆಯದು ಅಥವಾ ಕೆಟ್ಟದ್ದೇ?
ಪರ್ವತದ ಮೇಲಿರುವ ಪ್ರಸಿದ್ಧ ದೇವಸ್ಥಾನಗಳು : ಮೈಸೂರಿನ ಚಾಮುಂಡಿಯಲ್ಲದೆ ಜಮ್ಮುವಿನಲ್ಲಿರುವ ಮಾತಾ ವೈಷ್ಣೋದೇವಿಯ ದೇವಾಲಯ, ಗುವಾಹಟಿಯ ಕಾಮಾಖ್ಯ ದೇವಿ ದೇವಾಲಯ, ಹರಿದ್ವಾರದಲ್ಲಿರುವ ಮಾತಾ ಮಾನಸ ದೇವಾಲಯ, ಹಿಮಾಚಲ ಪ್ರದೇಶದ ತಾರಾ ದೇವಿ ದೇವಸ್ಥಾನ, ಆಂಧ್ರಪ್ರದೇಶದ ಕನಕ ದುರ್ಗಾ ದೇವಸ್ಥಾನ, ರಾಜಸ್ಥಾನದ ಅಧರ್ ದೇವಿ ದೇವಸ್ಥಾನ ಹೀಗೆ ಅನೇಕ ಪ್ರಸಿದ್ಧ ದೇವಸ್ಥಾನಗಳು ಬೆಟ್ಟದ ಮೇಲಿವೆ.