ಮೇಷ
ಇವರು ಚಿನ್ನಾಭರಣಗಳಲ್ಲಿ ಹಣ ಹೂಡಿಕೆ ಮಾಡಬಹುದು. ಇತರ ಸೇವಿಂಗ್ಸ್‌ಗಳು ಇವರಿಗೆ ಸೂಕ್ತವಲ್ಲ. ಚಿನ್ನದ ಬೆಲೆಯು ವರ್ಷ ವರ್ಷವೂ ಏರುತ್ತಲೇ ಇರುವುದರಿಂದ, ಇರುವ ಹಣಕ್ಕಂತೂ ಯಾವ ಮೋಸವೂ ಆಗದು ಹಾಗೂ ಸಾಕಷ್ಟು ರಿಟರ್ನ್ ಕೂಡ ಬರುವುದು ನಿಶ್ಚಿತ.

ವೃಷಭ
ಇವರ ರಿಯಾಲ್ಟಿ ಕ್ಷೇತ್ರದಲ್ಲಿ ಹಣ ತೊಡಗಿಸುವುದು ಸೂಕ್ತ. ಯಾಕೆಂದರೆ ಇವರಿಗೆ ಸ್ಥಿರ ರಾಶಿಯಲ್ಲಿ ಗ್ರಹಗಳು ಹೆಚ್ಚಾಗಿ ಇರುತ್ತವೆ ಮತ್ತು ಸ್ಥಿರ ಆಸ್ತಿಯ ಮೇಲೆ ಹೆಚ್ಚಿನ ಹಣ ಹೂಡುವುದರಿಂದ ಲಾಭ ಆಗುವುದು. ಇದರಲ್ಲಿ ಇವರ ಜಾಣ್ಮೆಯೂ ಹೆಚ್ಚಿನದಾಗಿ ಕೆಲಸ ಮಾಡುತ್ತದೆ.

ಮಿಥುನ
ಇವರು ಬ್ಯಾಂಕ್‌ನಲ್ಲಿ ಸೇವಿಂಗ್ಸ್ ಖಾತೆಯಲ್ಲು ಹಣ ಇಡುವುದಕ್ಕಿಂತಲೂ ಸ್ಥಿರ ಠೇವಣಿಗಳಲ್ಲಿ ಹಣ ಇಡುವುದು ಸೂಕ್ತ. ಅಥವಾ ಪಿಪಿಎಫ್, ಪಿಎಫ್ ಮುಂತಾದ ಪಿಂಚಣಿ ಯೋಜನೆಗಳಲ್ಲಿ ಹಣ ಇಟ್ಟರೆ ಹೆಚ್ಚು ಬಡ್ಡಿ ಬರುತ್ತದೆ ಹಾಗೂ ವೃದ್ಧಾಪ್ಯವನ್ನು ಸಂತೋಷದಿಂದ ಕಳೆಯಬಹುದು.

ಕಟಕ
ಇವರ ಕೈಯಲ್ಲಿ ಹಣ ನಿಲ್ಲುವುದಿಲ್ಲ. ಹಾಗಾಗಿ ಮನೆಯಂಥ ಸ್ಥಿರ ಆಸ್ತಿಗಳಲ್ಲಿ ಆದಷ್ಟು ಬೇಗನೇ ಹಣ ತೊಡಗಿಸಿ ಬಿಡುವುದು ವಾಸಿ, ಯಾಕೆಂದರೆ ವೃದ್ಧಾಪ್ಯದ ಸಂದರ್ಭದಲ್ಲಿ ಮನೆ ಕಟ್ಟಿಸಬೇಕು ಎಂದರೆ ಕೆಲಸವೂ ಇರವುದಿಲ್ಲ, ಆದಾಯವೂ ಇರುವುದಿಲ್ಲ ಆದ್ದರಿಂದ ಮನೆ ಕಟ್ಟಿಸಲು ಸಾಧ್ಯವಿಲ್ಲದಾದೀತು.

ಮೇ ತಿಂಗಳಲ್ಲಿ ಹುಟ್ಟಿದವರ ಸ್ವಭಾವ ಹೀಗಿರುತ್ತೆ ನಿಮಗೆ ಗೊತ್ತೆ? ...

ಸಿಂಹ
ನೀವು ಹೆಚ್ಚಾಗಿ ಬ್ಯುಸಿನೆಸ್ ಮೇಲೆ ಹಣ ಹಾಕುವುದು ಒಳ್ಳೆಯದು. ಹಣ ಹಾಕಿ ಹಣ ತೆಗೆಯುವ ಕೆಲಸಗಳು, ಬ್ಯುಸಿನೆಸ್ ಇತ್ಯಾದಿಗಳು ನಿಮಗೆ ಹೆಚ್ಚು ಚೆನ್ನಾಗಿ ಸೂಟ್ ಆಗುತ್ತವೆ. ಮೊದಲಿಗೆ ಲಾಸ್ ಆದರೂ ನಂತರ ಲಾಭಗಳು ಬರುತ್ತ ಹೋಗಬಹುದು. ಹಣ ತೊಡಗಿಸುವ ಮುನ್ನ ಜಾತಕದ ವಿವರವಾದ ಪರಿಶೀಲನೆ ಅಗತ್ಯ.

ಕನ್ಯಾ
ನೀವು ಹೋಟೆಲ್ ಮುಂತಾದ ಆತಿಥ್ಯದ ಯೋಜನೆಗಳಲ್ಲಿ ಹಣ ತೊಡಗಿಸಿದರೆ ಸೂಕ್ತವಾದೀತು. ರೆಸಾರ್ಟ್, ಹೋಮ್‌ಸ್ಟೇ ಮಾಡಿದರೂ ಲಾಭವಾದೀತು. ಕೆಲವೊಮ್ಮೆ ಕೃಷಿಭೂಮಿಗೆ ಸಂಬಂಧಿಸಿದ ಯೋಜನೆಗಳಲ್ಲಿ ಹಣ ಹೂಡಿದರೂ ಬಡ್ಡಿ ಸಮೇತ ವಾಪಸು ಬರಬಹುದು. ಆದರೆ ಪರಿಶ್ರಮ ಅಗತ್ಯ.

ಮಕ್ಕಳ ವಿದ್ಯಾಭ್ಯಾಸದ ಒತ್ತಡವನ್ನು ಕಡಿಮೆ ಮಾಡಲು ವಾಸ್ತು ...

ತುಲಾ
ನೀವು ಸರಕಾರಿ ಬಾಂಡ್‌ಗಳಲ್ಲಿ ಹಣ ಹೂಡುವುದು ಅಗತ್ಯ. ಸರಕಾರಿ ಬಾಂಡ್‌ಗಳು ಸುಲಭವಾಗಿ ಸಿಗುವುದಿಲ್ಲವಾದರೂ ಹೆಚ್ಚಿನ ಮತ್ತು ನಿಶ್ಚಿತ ಆದಾಯವನ್ನು ತರುತ್ತವೆ. ನೀವು ಹಣ ತೊಡಗಿಸುವಲ್ಲಿ ಯಾವುದೇ ಹೆಚ್ಚಿನ ರಿಸ್ಕ್ ಇರುವ ಸಟ್ಟ ವ್ಯವಹಾರ ಇತ್ಯಾದಿಗಳಿಗೆ ಹೋಗುವುದು ಅಪಾಯಕರ.

ವೃಶ್ಚಿಕ
ನೀವು ನಿಜಕ್ಕೂ ಷೇರುಪೇಟೆಯಲ್ಲಿ ಹಣ ತೊಡಗಿಸಬಹುದು. ಆದರೆ ಸುಭದ್ರವಾದ ಕಂಪನಿ ಷೇರುಗಳಲ್ಲಿ ಹಣ ಹೂಡಿ. ಇನ್ಶೂರೆನ್ಸ್, ಮೆಡಿಕಲ್ ಮುಂತಾದ ಕಂಪನಿಗಳಲ್ಲಿ ಹಣ ಹೂಡಿದರೆ ಒಂದೆರಡೇ ವರ್ಷದಲ್ಲಿ ಅದು ದುಪ್ಪಟ್ಟಾಗಿ ನಿಮಗೆ ಸಿಗುವ ಎಲ್ಲ ಸಾಧ್ಯತೆಯೂ ಇದೆ.

ಧನು
ಸರ್ವಿಸ್ ಸೆಕ್ಟರ್ ಅಥವಾ ಸೇವಾ ವಲಯವನ್ನು ನಂಬಿಕೊಂಡ ಕಂಪನಿಗಳಲ್ಲಿ ನೀವು ಹಣ ತೊಡಗಿಸಬಹುದು. ಅಂದರೆ ಐಟಿ ಕಂಪನಿಗಳ ಷೇರುಗಳಲ್ಲಿ ಹಣ ಹೂಡಿದರೆ ನಿಮ್ಮ ಪಾಲಿಗೆ ಹೆಚ್ಚು ಲಾಭದಾಯಕ. ಆದರೂ ನಿಮಗೆ ಸಾಂಪ್ರದಾಯಿಕವಾದ ಸೇವಿಂಗ್ಸ್ ಕೂಡ ಒಲಿಯುತ್ತದೆ.

ಯಾವ ದೇವರಿಗೆ ಯಾವ ಹೂವಿನ ಅರ್ಚನೆ ಅಚ್ಚುಮೆಚ್ಚು? ಅರ್ಚಿಸಿದರೆ ಹೆಚ್ಚು ಪ್ರಿಯ? ...

ಮಕರ
ಸಾಂಪ್ರದಾಯಿಕವಾದ ಉಳಿತಾಯ ಪದ್ಧತಿಗಳಾದ ಸೇವಿಂಗ್ಸ್, ಡೆಪಾಸಿಟ್, ಚಿನ್ನಾಭರಣ ಖರೀದಿ ಮುಂತಾದ ಹೂಡಿಕೆಗಳೆಲ್ಲ ನಿಮಗೆ ಒಲಿಯುತ್ತವೆ. ಇದೆಲ್ಲ ಸರ್ವೇಸಾಧಾರಣ ಎಂದು ನಿಮಗೆ ಅನಿಸಬಹುದು. ಆದರೆ ಇತರರು ರಿಸ್ಕಿ ವ್ಯವಹಾರದಲ್ಲಿ ಹಣ ಕಳೆದುಕೊಂಡಾಗ ನಿಮಗೆ ನಿಮ್ಮ ಆಯ್ಕೆಯೇ ಚೆನ್ನಾಗಿತ್ತು ಅನಿಸಲಿದೆ.

ಕುಂಭ
ರಿಯಾಲ್ಟಿ ಕ್ಷೇತ್ರದಲ್ಲಿ ಅರ್ಧಪಾಲು, ಸಾಂಪ್ರದಾಯಿಕ ಹೂಡಿಕೆಯಲ್ಲಿ ಕಾಲುಭಾಗ, ಬ್ಯುಸಿನೆಸ್‌ನಲ್ಲಿ ಕಾಲುಭಾಗ- ಹೀಗೆ ನಿಮ್ಮ ಹೂಡಿಕೆಯನ್ನು ಪಾಲು ಮಾಡಿ ತೊಡಗಿಸಿಕೊಳ್ಳುವುದು ಸೂಕ್ತ. ಯಾಕೆಂದರೆ ನಿಮ್ಮ ಪಾಲಿಗೆ ಈ ಮೂರೂ ಕ್ಷೇತ್ರಗಳೂ ರಿಸ್ಕಿಯಾಗಿವೆ ಹಾಗೇ ಲಾಭದಾಯಕವೂ ಆಗಿವೆ.

ಮೀನ
ನೀವು ಷೇರುಪೇಟೆಯಲ್ಲಿ ಹಣ ತೊಡಗಿಸಿ ಆಡಬಹುದು. ಆದರೆ ಖಾತ್ರಿ ಕಂಪನಿಗಳಲ್ಲಿ ಹೂಡಬೇಕು. ಹಾಗೇ ರಿಯಾಲ್ಟಿ, ಚಿನ್ನಾಭರಣ ಮುಂತಾದ ಇತರ ಸಾಧ್ಯತೆಗಳನ್ನೂ ಕಡೆಗಣಿಸಬೇಡಿ. ಉಳಿತಾಯದ ಹಲವು ಸಾಧ್ಯತೆಗಳನ್ನು ಗಮನಿಸಿ ಅವುಗಳನ್ನು ಸದುಪಯೋಗ ಮಾಡಿಕೊಳ್ಳಿರಿ.

ಅಂದ ಹಾಗೆ ಇಲ್ಲಿ ನೀಡಿರುವ ಸೂಚನೆಗಳು ಖಚಿತ ಮಾದರಿಗಳನ್ನು ಮುಂದಿಟ್ಟುಕೊಂಡು ನೀಡಿದ್ದಲ್ಲ. ಆದ್ದರಿಂದ ಹಣ ಹೂಡುವ ಮುನ್ನ ನಿಮ್ಮ ಜಾತಕ ಹಾಗೂ ಅದರಲ್ಲಿ ಗ್ರಹಗಳ ಜೋಡಣೆಯ ವಿವರವಾದ ಪರಿಶೀಲನೆ ಅಗತ್ಯವಾದೀತು.