Asianet Suvarna News Asianet Suvarna News

Zodiacs And Food Habits: ವೃಷಭಕ್ಕೆ ಅಡುಗೆ ಮಾಡೋದಿಷ್ಟ, ಕನ್ಯಾ ರಾಶಿಗೆ ತಿನ್ನೋದಿಷ್ಟ, ನಿಮಗೇನಿಷ್ಟ?

ಆಹಾರದ ವಿಷಯಕ್ಕೆ ಬಂದರೆ ಎಲ್ಲರಿಗೂ ಅವರದೇ ಆದ ಇಷ್ಟ ಕಷ್ಟಗಳಿರುತ್ತವೆ. ಯಾವ ರಾಶಿಯವರ ಫುಡ್ ಹ್ಯಾಬಿಟ್ ಹೇಗಿರುತ್ತದೆ ಗೊತ್ತಾ?

What Your Zodiac Sign Says About Your Food Habits skr
Author
Bangalore, First Published Dec 28, 2021, 12:41 PM IST

ಮೇಷ(Aries)
ಮೇಷ ರಾಶಿಯವರು ಯಾವಾಗಲೂ ಬ್ಯುಸಿಯಾಗಿರುವವರು ಹಾಗೂ ವೇಗವಾಗಿ ಮುಂದುವರಿಯುವವರು. ಗಂಟೆಗಟ್ಟಲೆ ಅಡುಗೆ ಮಾಡುತ್ತಾ ಕೂರುವುದೆಂದರೆ ಇವರಿಗಾಗುವುದಿಲ್ಲ. ಹಾಗಾಗಿ, ಬೇಗ ತಯಾರಾಗುವ ಅಡುಗೆಗಳನ್ನು ಮಾಡಿ ತಿನ್ನುತ್ತಾರೆ. ಅಡುಗೆಯಲ್ಲಿ ಪ್ರಯೋಗಗಳೇನೋ ಇಷ್ಟ. ಆದರೆ, ಅವು ಹೆಚ್ಚು ಸಮಯ ಬೇಡದ ರೆಸಿಪಿಗಳಾಗಿರಬೇಕು ಎಂದು ಬಯಸುವವರಿವರು. ಬಿಸಿಯಾದ, ಖಾರವಾದ ಆಹಾರ, ಪ್ರೋಟೀನ್ ರಿಚ್(protein-rich) ಅಡುಗೆ ಇವರಿಗಿಷ್ಟ. 

ವೃಷಭ(Taurus)
ವೃಷಭ ರಾಶಿಯವರಿಗೆ ಅಡುಗೆಮನೆಯಲ್ಲಿ ಪ್ರಯೋಗಗಳನ್ನು ಮಾಡುವುದಿಷ್ಟ. ಹಸಿವೂ ಜೋರು, ತಿನ್ನುವುದನ್ನೂ ಅಷ್ಟೇ ಎಂಜಾಯ್ ಮಾಡುತ್ತಾರೆ. ಆರಾಮಾಗಿ ಕುಳಿತು ನಿಧಾನವಾಗಿ ಆಹಾರದ ರುಚಿ ಅನುಭವಿಸುತ್ತಾ ತಿನ್ನುವುದು ಇವರಿಗಿಷ್ಟ. ಆಹಾರದ ವಿಷಯದಲ್ಲಿ ಖರ್ಚಿಗೆ ಹೆದರುವುದಿಲ್ಲ, ಗುಣಮಟ್ಟದ ಆಹಾರ ಇವರ ಪ್ರಾಶಸ್ತ್ಯ. ಡಯಟ್ ಬಗ್ಗೆ ತಲೆ ಕೆಡಿಸಿಕೊಳ್ಳುವವರಲ್ಲ. 

ಮಿಥುನ(Gemini)
ಮಿಥುನ ರಾಶಿಯವರಿಗೆ ತಿನ್ನುವುದರಲ್ಲಿ ಹೆಚ್ಚು ಆಸಕ್ತಿ ಇಲ್ಲ. ಆದರೆ, ಊಟಕ್ಕೆ ಕೂತಾಗ ಕಂಪನಿ ಬೇಕು, ಅವರೊಂದಿಗೆ ಹರಟುತ್ತಿರಬೇಕು ಎಂಬುದು ಇವರ ಇಷ್ಟ. ತಿನ್ನುವುದರಲ್ಲಿ ಆಸಕ್ತಿ ಕಮ್ಮಿಯಾದರೂ ಚೆನ್ನಾಗಿ ಅಡುಗೆ ಮಾಡಬಲ್ಲರು. ಹೊಸ ರೆಸಿಪಿ ಹುಟ್ಟು ಹಾಕಬಲ್ಲರು. ಮೂರು ಹೊತ್ತಿನ ಊಟಕ್ಕಿಂತ ಆಗಾಗ ಏನಾದರೂ ಕುರುಕಲು ತಿನ್ನುತ್ತಿರುವುದು ಇವರಿಗಿಷ್ಟ. 

ಅತ್ತೆ-ಸೊಸೆ ಜಗಳ ಹೆಚ್ಚಾಗಿದ್ರೆ ಈ Vaastu Tips ಪಾಲಿಸಿ ನೋಡಿ..

ಕಟಕ(Cancer)
ಇವರು ನಳಪಾಕ ತಯಾರಿಸಬಲ್ಲರು. ಇವರಿಗೆ ಹೊರಗಿನ ಆಹಾರಕ್ಕಿಂತ ಮನೆಯ ಅಡುಗೆಗಳೇ ಇಷ್ಟ. ಅದರಲ್ಲೂ ತಮ್ಮ ಹಿರಿಯರಿಂದ ಕಲಿತ ರೆಸಿಪಿಗಳೇ ಬೆಸ್ಟ್ ಎಂದು ನಂಬಿರುವವರು. ಆಹಾರದ ಗುಣಮಟ್ಟ ಚೆನ್ನಾಗಿರಬೇಕು, ಆರೋಗ್ಯಕರವಾಗಿರಬೇಕು ಎಂಬುದು ಕಟಕದ ನಿರೀಕ್ಷೆ. ಇನ್ನೊಬ್ಬರಿಗಾಗಿ ಅಡುಗೆ ಮಾಡುವುದನ್ನು ಇಷ್ಟ ಪಡುವವರು. 

ಸಿಂಹ(Leo)
ಸಿಂಹ ರಾಶಿಯವರಿಗೆ ಅಡುಗೆ ಮಾಡುವುದೆಂದರೆ ಅಷ್ಟಕ್ಕಷ್ಟೇ. ಅಷ್ಟು ಚೆನ್ನಾಗಿ ಅಡುಗೆ ಮಾಡುವವರೂ ಅಲ್ಲ. ಆದರೆ, ತಿನ್ನುವುದು ಮಾತ್ರ ಬಹಳ ಇಷ್ಟ. ಪ್ರತಿ ದಿನವೂ ಹೊಸ ರುಚಿ ತಿನ್ನುವ ಬಯಕೆ ಇವರದು. ಅಪರೂಪಕ್ಕೆ ನೆಂಟರು ಬಂದಾಗ ಅಡುಗೆ ಮನೆಗೆ ಎಂಟ್ರಿ ಕೊಡುತ್ತಾರೆ. ದುಡ್ಡಿದೆ ಎಂದರೆ ತಿನ್ನಲು ಹಾಕಲು ಹೆದರುವವರಲ್ಲ. ಯಾರು ಯಾವ ರೆಸ್ಟೋರೆಂಟ್ ಚೆನ್ನಾಗಿದೆ ಎಂದರೂ ಅಲ್ಲಿ ಹೋಗಿ ತಿನ್ನುವವರು. 

Weight Loss : ಉಪವಾಸ ಮಾಡಿ ತೂಕ ಇಳಿಸಿಕೊಳ್ಳಲು ಮುಂದಾಗಿದ್ರೆ ಎಚ್ಚರ..!

ಕನ್ಯಾ(Virgo)
ಇವರು ಹುಟ್ಟಾ ಉತ್ತಮ ಅಡುಗೆಕಾರರು. ಆಹಾರ ಪದಾರ್ಥ ಎಸೆಯುವುದೆಂದರೆ ಇವರಿಗಾಗುವುದಿಲ್ಲ. ಉಳಿದ ಪದಾರ್ಥದಲ್ಲೂ ರುಚಿಕಟ್ಟಾದ ಅಡುಗೆ ಮಾಡಬಲ್ಲ ತಾಕತ್ತು ಇವರದು. ಆಹಾರವನ್ನು ಕಣ್ಣಿಗೆ ಹಬ್ಬ ಮಾಡಿ ಕೊಡಬಲ್ಲ ಪ್ರತಿಭೆ ಇವರಿಗಿದೆ. ತಮಗೆ ಮಾತ್ರ ಲೈಟಾದ, ಬೇಗ ಜೀರ್ಣವಾಗುವ ಆಹಾರ, ಹಣ್ಣು, ತರಕಾರಿಗಳನ್ನೇ ಇವರು ಬಯಸುತ್ತಾರೆ. 

ತುಲಾ(Libra)
ತುಲಾ ರಾಶಿಯವರು ಒಳ್ಳೆ ಆಹಾರ ಪ್ರಿಯರು. ಇವರಿಗೆ ಅಡುಗೆ ಮಾಡುವುದಿಷ್ಟ. ಹೊಸ ಹೊಸ ರೆಸಿಪಿ ಟ್ರೈ ಮಾಡುವುದಿಷ್ಟ. ತಮ್ಮ ಅಡುಗೆ ಶೈಲಿ(cooking method)ಯನ್ನು ಬದಲಾಯಿಸಿಕೊಳ್ಳಲೂ ಯೋಚಿಸುವವರಲ್ಲ. ಕೆಲವೊಮ್ಮೆ ಅಡುಗೆ ರುಚಿಗಿಂತ ನೋಡಲು ಹೇಗಿದೆ ಎಂಬುದೇ ಇವರಿಗೆ ಮುಖ್ಯವಾಗುತ್ತದೆ. ಎಲ್ಲವನ್ನೂ ಚೂರು ಚೂರು ತಿಂದು ಹೊಟ್ಟೆ ತುಂಬಿಸಿಕೊಳ್ಳುವವರಿವರು. ಊಟದ ಬಳಿಕ ಒದು ಫ್ಯಾನ್ಸಿ ಡ್ರಿಂಕ್ ಇದ್ದರೆ ಉತ್ತಮ ಎನ್ನುವವರು. 

ವೃಶ್ಚಿಕ(Scorpio)
ವೃಶ್ಚಿಕದವರಿಗೆ ಅಡುಗೆ ಮಾಡುವುದು ಅಷ್ಟಕ್ಕಷ್ಟೇ. ಆದರೆ, ಮಾಡಿದರೆ ತುಂಬಾ ರುಚಿಯಾಗಿಯೇ ಪದಾರ್ಥಗಳನ್ನು ತಯಾರಿಸುತ್ತಾರೆ. ಹಸಿವಾದಾಗ ಆರೋಗ್ಯಕ್ಕೆ ಹಿತವಾದುದನ್ನೇ ತಿನ್ನಬೇಕೆನ್ನುವವರು ಇವರು. ತಿನ್ನದೆ ಹೆಚ್ಚು ಕಾಲ ಇರಬಲ್ಲರು. ಖಾರವಾದ ಆಹಾರ, ಚೈನೀಸ್ ಫುಡ್ ಇವರಿಗಿಷ್ಟ. 

ಧನು(Sagittarius)
ಧನು ರಾಶಿಯವರು ಅಡುಗೆ ಮನೆಯಲ್ಲೇ ಯಾವ ಸಾಹಸ ಬೇಕಿದ್ದರೂ ಮಾಡಬಲ್ಲರು. ಯಾವುದೇ ರೀತಿಯ ರೆಸಿಪಿ ಟ್ರೈ ಮಾಡಬಲ್ಲರು. ಅಪರೂಪಕ್ಕೆ ಕಿಚನ್‌ಗೆ ಹೋದರೂ ಹೊಸ ರೀತಿಯ ಆಹಾರ ತಯಾರಿಸುವರು. 

ಮಕರ(Capricorn)
ಮಕರ ರಾಶಿಯವರು ಆಹಾರದ ವಿಷಯಕ್ಕೆ ಬಂದರೆ ಸಾಂಪ್ರದಾಯಿಕ ಅಡುಗೆಗಳನ್ನಿಷ್ಟ ಪಡುವವರು. ರೆಸ್ಟೋರೆಂಟ್‌ಗೆ ಹೋದರೂ ಮೀಲ್ಸ್ ಆರ್ಡರ್ ಮಾಡುವವರು. ಕೊನೆಯಲ್ಲೊಂದು ಮಜ್ಜಿಗೆ ಅನ್ನ ಉಣ್ಣದೆ ಇವರಿಗೆ ಸಮಾಧಾನವಿರುವುದಿಲ್ಲ. ಸಿಹಿತಿನಿಸುಗಳು ಇಷ್ಟ. ಅಡುಗೆಯನ್ನು ತಾಳ್ಮೆಯಿಂದ ತಯಾರಿಸಬಲ್ಲರು. 

ಕುಂಭ(Aquarius)
ಇವರಿಗೆ ಅಡುಗೆ ಮಾಡುವುದೆಂದರೆ ಅಷ್ಟಕ್ಕಷ್ಟೇ. ತಮ್ಮ ಊಟವನ್ನು ಸಂತೋಷದಿಂದ ಹಂಚಿಕೊಳ್ಳಬಲ್ಲರು. ಹೆಚ್ಚು ಬಾರಿ ಇವರು ಸಸ್ಯಾಹಾರವನ್ನೇ ಬಯಸುತ್ತಾರೆ. ಹಣ್ಣು, ತರಕಾರಿ, ಪ್ರೋಟೀನ್ ಯುಕ್ತ ಆಹಾರ ಇವರಿಗಿಷ್ಟ. 

ಮೀನ(Pisces)
ಬಹಳ ರುಚಿಕಟ್ಟಾದ ಅಡುಗೆ ಮಾಡಬಲ್ಲರು. ಆದರೆ, ಹೊಸ ರೆಸಿಪಿ ಟ್ರೈ ಮಾಡಲು ಹೆದರುತ್ತಾರೆ. ಮನೆಗೆ ಬಂದವರಿಗೆ ಎಷ್ಟು ಅಡುಗೆ ಮಾಡಿ ಹಾಕಿದರೂ ಸಾಲದೆಂಬ ಮನೋಧರ್ಮ ಇವರದು. ಹಾಗಾಗಿ ಅತಿಥಿ ಸತ್ಕಾರ ಜೋರಾಗಿ ಮಾಡುತ್ತಾರೆ. ಸಿಹಿ ಪದಾರ್ಥಗಲು ಇವರಿಗಿಷ್ಟ.
 

Follow Us:
Download App:
  • android
  • ios