ಸಂಖ್ಯಾಶಾಸ್ತ್ರದ ಪ್ರಕಾರ 2024ರ ಭವಿಷ್ಯ ಹೇಗಿರುತ್ತೆ? ನಿಮಗೆ ತರುತ್ತಾ ಲಕ್?

2024ನೇ ವರ್ಷ ಸಂಖ್ಯಾಶಾಸ್ತ್ರದ ಪ್ರಕಾರ ಏನು, ಅದರಿಂದಾಗುವ ಪರಿಣಾಮಗಳು, ಪ್ರಭಾವಗಳು ಏನು ಎನ್ನುವುದನ್ನು ಅರಿತುಕೊಳ್ಳುವುದು ಉತ್ತಮ. ಈ ಬಾರಿ, ಉತ್ತಮ ಅವಕಾಶಗಳು ದೊರೆಯುವ ಜತೆಗೇ ಹಲವು ರೀತಿಯಲ್ಲಿ ಪಾಠ ಕಲಿಸುವ ವರ್ಷವೂ ಆಗಿರುವುದರಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ.
 

What is the effect of 2024 as per Numerology, why its is important sum

ಸಂಖ್ಯೆಗಳ ಮೂಲಕ ಜಗತ್ತನ್ನು ನೋಡುವ ಸಂಖ್ಯಾಶಾಸ್ತ್ರವು ಅಂಕಿಅಂಶಗಳ ವಿಶ್ಲೇಷಣೆ, ವ್ಯಾಖ್ಯಾನ ಮತ್ತು ಅರ್ಥವಿವರಣೆಗಳ ಮೂಲಕ ನಮ್ಮ ಜೀವನವನ್ನು ನಿರ್ದಿಷ್ಟವಾಗಿ “ಹೀಗೆಯೇ’ ಎಂದು ವಿವರಿಸಬಲ್ಲದು.  ಸಂಖ್ಯಾಶಾಸ್ತ್ರವೆಂದರೆ, ಸಂಖ್ಯೆಗಳ ವಿಜ್ಞಾನ. ಜನರ ವ್ಯಕ್ತಿತ್ವ, ಭವಿಷ್ಯ ಹಾಗೂ  ಜೀವನಕ್ಕೆ ಸಂಬಂಧಿಸಿದ ಹಲವಾರು ವಿಷಯಗಳು ಮತ್ತು ಸನ್ನಿವೇಶಗಳು ಸಂಖ್ಯೆಗಳೊಂದಿಗೆ ಸಂಬಂಧ ಹೊಂದಿವೆ ಎಂದು ಸಂಖ್ಯಾಶಾಸ್ತ್ರಜ್ಞರು ಹೇಳುತ್ತಾರೆ. ಜತೆಗೆ, ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಂದೂ ವರ್ಷವೂ ನಿರ್ದಿಷ್ಟ ಹಾಗೂ ವಿಶಿಷ್ಟ ಸಂಖ್ಯೆಯನ್ನು ಹೊಂದಿದ್ದು, ಅದರದ್ದೇ ಆದ ಶಕ್ತಿ, ಪ್ರಭಾವ ಬೀರುತ್ತವೆ. ಇನ್ನು ಕೆಲವೇ ದಿನಗಳಲ್ಲಿ 2024ರ ವರ್ಷ ಆಗಮಿಸುತ್ತಿದೆ. ಸಂಖ್ಯಾಶಾಸ್ತ್ರದ ಪ್ರಕಾರ 2024 ಯಾವ ರೀತಿ ಪ್ರಭಾವ ಹೊಂದಿದೆ, 2024ನ್ನು ಹೇಗೆ ವಿಶ್ಲೇಷಿಸಲಾಗುತ್ತದೆ, ಅದು ನಮ್ಮ ಜೀವನದ ಮೇಲೆ ಬೀರುವ ಪರಿಣಾಮವೇನು ಎನ್ನುವುದನ್ನು ಅರಿಯೋಣ. ಬಹಳಷ್ಟು ಜನ ಸಂಖ್ಯೆ 8ನ್ನು ಯಶಸ್ಸು, ಅಧಿಕಾರ ಮತ್ತು ಬೇಕಾದಷ್ಟು ಅವಕಾಶ ನೀಡುವ ಸಂಖ್ಯೆಯನ್ನಾಗಿ ನೋಡುತ್ತಾರೆ. ಇದು ವಸ್ತುವಿನ್ಯಾಸ ಮತ್ತು ಅಭಿವ್ಯಕ್ತಿಯ ಸಾಮರ್ಥ್ಯ ಹೊಂದಿದ ಸಂಖ್ಯೆಯಾಗಿದೆ. 
2024ರ ಸಂಖ್ಯೆಯಲ್ಲಿ 2, 0, 2, 4 ಸಂಖ್ಯೆಗಳಿವೆ. ಈ ಸಂಖ್ಯೆಗಳೂ (Numbers) ಸಹ ತಮ್ಮದೇ ಪ್ರಭಾವ (Effects), ಸಂಕೇತ, ವೈಶಿಷ್ಟ್ಯ (Unique) ಹೊಂದಿರುವಂಥವು. ಇವುಗಳ ಪ್ರಭಾವವೂ ಈ ವರ್ಷ (Year) ನಮ್ಮ ಮೇಲೆ ಉಂಟಾಗುವುದರಲ್ಲಿ ಅನುಮಾನವಿಲ್ಲ.

ಸಂಖ್ಯೆ 2
ಇದು ಚಂದ್ರನನ್ನು (Moon) ಪ್ರತಿನಿಧಿಸುತ್ತದೆ. 2024ರಲ್ಲಿ ಎರಡು ಬಾರಿ 2 ಬಂದಿರುವುದರಿಂದ ಈ ವರ್ಷ ಧನ, ಕೆಲಸ, ಉದ್ಯೋಗ, ಸಂಪತ್ತು, ನಿಧಿ, ಭಾವನೆಗಳನ್ನು ತರಬಲ್ಲದು ಮತ್ತು ಭಾವುಕತೆಯನ್ನು (Emotions) ಹೆಚ್ಚಿಸಬಲ್ಲದು. ಈ ಅಂಶಗಳ ಮೇಲೆ ಇದರ ಪ್ರಭಾವ ಅಧಿಕವಾಗಿರುತ್ತದೆ ಎನ್ನುವುದು ನಿಶ್ಚಿತ. 

 

ಈ ಕೆಲಸ ಮಾಡಿದ್ರೆ ಮುಂದಿನ ದಿನಗಳು ಅಚ್ಚೇ ದಿನ್ ಆಗಲಿವೆ…

ಸಂಖ್ಯೆ 4
4ನೇ ಸಂಖ್ಯೆ ರಾಹುವಿಗೆ (Rahu) ಸಂಬಂಧಿಸಿದೆ. ರಾಹು ಹೊಸತನದ ಪ್ರತಿನಿಧಿ. ಹೀಗಾಗಿ, ತಂತ್ರಜ್ಞಾನ, ಹೊಸ ವಿಚಾರಗಳು, ಯೋಜನೆಗಳು, ಇದ್ದಕ್ಕಿದ್ದ ಹಾಗೆ ಲಾಭವಾಗುವ ಸನ್ನಿವೇಶಗಳು ಈ ಬಾರಿ ಹೆಚ್ಚು. ಹೊಸ ಅವಕಾಶಗಳೂ ಅಧಿಕವಾಗುತ್ತವೆ. ಜನ್ಮಕುಂಡಲಿಯಲ್ಲಿ ರಾಹುವಿನ ಸ್ಥಾನ ಉತ್ತಮವಾಗಿರುವವರಿಗೆ ಈ ವರ್ಷ ಅತ್ಯುತ್ತಮ ಲಾಭವಿದೆ.  

ಸಂಖ್ಯೆ 8
8 ಶನಿಗೆ (Shani) ಮೀಸಲಾಗಿದೆ. ಇದು ಕಠಿಣ ಪರಿಶ್ರಮ, ಕರ್ಮ, ಕಾರ್ಯ, ಕರ್ಮಫಲಗಳನ್ನು ಸೂಚಿಸುತ್ತದೆ. ಈ ಬಾರಿ ಸಾಕಷ್ಟು ಉದ್ಯೋಗಾವಕಾಶ ಹೆಚ್ಚಲಿರುವುದನ್ನು ತಿಳಿಸುತ್ತದೆ. 8 ಸಮೃದ್ಧಿ (Abundance) ಅಥವಾ ಹೇರಳ ಅವಕಾಶಗಳನ್ನೂ ಪ್ರತಿನಿಧಿಸುವ ಸಂಖ್ಯೆ. ಈ ನಿಟ್ಟಿನಲ್ಲಿ 2024ರಲ್ಲಿ ಹಣಕಾಸಿನ ಸಮೃದ್ಧಿಗೆ ಅವಕಾಶವಾಗುವ ಸನ್ನಿವೇಶಗಳು ಹೆಚ್ಚುತ್ತವೆ.  ಹೀಗಾಗಿ, ಜಾಣತನದಿಂದ ಹಣಕಾಸು (Financial) ಯೋಜನೆಗಳನ್ನು ಕೈಗೊಳ್ಳಬಹುದು. ಭವಿಷ್ಯದಲ್ಲಿ ಇದರಿಂದ ಬಹುದೊಡ್ಡ ಕೊಡುಗೆ ದೊರೆಯಲಿದೆ. 

ನಮ್ಮ ಜೀವನ ನಮಗೇ!
ಸಂಖ್ಯೆ 8 ಸಾಮರ್ಥ್ಯ, ಸಂದರ್ಭಗಳನ್ನು ಉತ್ತಮವಾಗಿ ನಿರ್ವಹಣೆ ಮಾಡುವಂಥ ನಾಯಕತ್ವದ (Leadership) ಗುಣವನ್ನು ಪ್ರತಿನಿಧಿಸುತ್ತದೆ. ಹೀಗಾಗಿ, ನಾಯಕತ್ವದ ಪಾತ್ರ ನಿಭಾಯಿಸಲು, ನಮ್ಮ ಜೀವನದ (Life) ಹೊಣೆಯನ್ನು ನಾವೇ ಹೊರಲು ಸಾಧ್ಯವಾಗುವಂತೆ ಪ್ರೇರಣೆ ಪಡೆದುಕೊಳ್ಳಲು ಇದು ಸರಿಯಾದ ಸಮಯ.

ರಾಹು- ಕೇತು ಕಾಟ ಕೊಡೋದು ಮಾತ್ರವಾ? ಈ ಗ್ರಹಗಳ ಧನಾತ್ಮಕ ಮುಖ ತಿಳಿದರೆ ಆಶ್ಚರ್ಯಪಡ್ತೀರಿ!

ಕರ್ಮಫಲವೂ ಉಂಟು
ಸಂಖ್ಯೆ 8 ಅತ್ಯಂತ ಸ್ಪಷ್ಟವಾಗಿ ಕರ್ಮದ (Karma) ಜತೆಗಿನ ನಂಟನ್ನು ತಿಳಿಸುತ್ತದೆ. ನಮ್ಮ ಕರ್ಮಫಲಗಳಲ್ಲಿ ಧನಾತ್ಮಕ ಹಾಗೂ ನಕಾರಾತ್ಮಕ ಪರಿಣಾಮಗಳೂ ಉಂಟು ಎಂದು ಹೇಳುತ್ತದೆ. ಹೀಗಾಗಿ, 2024ರಲ್ಲಿ ಸಮತೋಲನದ, ಮೌಲ್ಯಾಧಾರಿತ (Value) ಜೀವನ ನಿರ್ವಹಣೆಗೆ ಆದ್ಯತೆ ನೀಡುವುದು ಉತ್ತಮ. ಉತ್ತಮ ಕರ್ಮವನ್ನು ಆಕರ್ಷಿಸಲು ಉತ್ತಮ ಕಾರ್ಯಗಳನ್ನೇ ಮಾಡಬೇಕು.

ಮಹತ್ವಾಕಾಂಕ್ಷೆ
ಗುರಿಗಳನ್ನು ತಲುಪಲು ಇಚ್ಛೆ ಮತ್ತು ಮಹತ್ವಾಕಾಂಕ್ಷೆಯನ್ನು ನೀಡುವ ಸಂಖ್ಯೆ 8. ಗುರಿ ಸಾಧನೆಗೆ ಅಗತ್ಯ ಪರಿಶ್ರಮ ವಹಿಸಲು ಇದು ಸಕಾಲ. ಹಾಗೆಯೇ, ಇದು ಅವಕಾಶಗಳನ್ನು ನೀಡುವ ಜತೆಗೆ, ಅನೇಕ ಅಡೆತಡೆಗಳನ್ನೂ ಒಡ್ಡಬಲ್ಲದು. ಸಂಪನ್ಮೂಲಗಳ ಬಳಕೆಗೆ ಕಡಿವಾಣ (Control) ಹಾಕಿಕೊಳ್ಳುವುದು ಅಗತ್ಯ, ಅತಿಯಾದ ಬದ್ಧತೆಯಿಂದ (Over Commit) ದೂರವುಳಿಯಿರಿ. 

Latest Videos
Follow Us:
Download App:
  • android
  • ios