ರುದ್ರಾಕ್ಷಿಯು ಶಿವನ ಕಣ್ಣೀರಿನಿಂದ ಉದ್ಭವ ಆದದ್ದೆಂದು ಹೇಳಲಾಗುತ್ತದೆ. ರುದ್ರಾಕ್ಷಿಯಲ್ಲಿ ಅನೇಕ ವಿಧಗಳಿವೆ ಅವುಗಳಲ್ಲಿ ಗಣೇಶ ರುದ್ರಾಕ್ಷಿ ಸಹ ಒಂದು. ಏಕಾಗ್ರತೆ ಮತ್ತು ಸ್ಮರಣ ಶಕ್ತಿ ಹೆಚ್ಚಿಸಲು ಈ ರುದ್ರಾಕ್ಷಿಯನ್ನು ಧರಿಸಬೇಕು. ಹಾಗಾದರೆ ಗಣೇಶ ರುದ್ರಾಕ್ಷಿ ಇನ್ನಿತರ ಲಾಭಗಳ ಬಗ್ಗೆ ತಿಳಿಯೋಣ.

ರುದ್ರಾಕ್ಷಿ (Rudraksha) ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ. ಇದನ್ನು ಧರಿಸುವುದರಿಂದ ಅನೇಕ ರೀತಿಯ ಪ್ರಯೋಜನಗಳು ಇವೆ. ಇದರ ಬಗ್ಗೆ ಪುರಾಣಗಳಲ್ಲಿಯೂ ಸಹ ಉಲ್ಲೇಖಿಸಲಾಗಿದೆ. ಸ್ಕಂದ ಪುರಾಣ (Skanda Purana), ಲಿಂಗ ಪುರಾಣ (Linga Purana) ಹಾಗೂ ಶಿವ ಪುರಾಣ (Shiva Purana) ಸೇರಿದಂತೆ ಹಲವು ಪುರಾಣಗಳಲ್ಲಿ ಇವುಗಳ ಮಹತ್ವ, ಪ್ರಾಮುಖ್ಯತೆ (Important) ಬಗ್ಗೆ ವಿವರಿಸಲಾಗಿದೆ. ಒಟ್ಟು 14 ಪ್ರಕಾರಗಳ ರುದ್ರಾಕ್ಷಿಗಳು ಇವೆ. ಅದರಲ್ಲಿ ಗಣೇಶ ರುದ್ರಾಕ್ಷಿ ಸಹ ಒಂದು.

ಈ ಗಣೇಶ ರುದ್ರಾಕ್ಷಿಗೆ ಭಾರಿ ಮಹತ್ವವಿದೆ. ಇದನ್ನು ಧರಿಸುವುದರಿಂದ ಅದೃಷ್ಟವನ್ನು ಪಡೆಯುವ, ಬದಲಾಯಿಸಿಕೊಳ್ಳುವ ಶಕ್ತಿಯನ್ನು ಪಡೆದುಕೊಳ್ಳಬಹುದು. ಈ ರುದ್ರಾಕ್ಷಿಯನ್ನು ಧಾರಣೆ ಮಾಡುವುದರಿಂದ ಪಾಸಿಟಿವ್ (Positive) ಅಂಶಗಳು ನಿಮ್ಮದಾಗುತ್ತವೆ. ಉತ್ತಮ ಫಲಗಳನ್ನು ಹಾಗೂ ಲಾಭಗಳನ್ನು (Profit) ಪಡೆಯಬಹುದಾಗಿದೆ. ರುದ್ರಾಕ್ಷಿ ಬಗ್ಗೆ ಹಿಂದೂಧರ್ಮದಲ್ಲಿ ವಿಶೇಷ ಮಹತ್ವ ಹಾಗೂ ಮನ್ನಣೆಯನ್ನು ಕೊಡಲಾಗಿದೆ. ಶಿವನ (Lord Shiva) ಕಣ್ಣೀರಿನಿಂದ ಬಿದ್ದ ಬಿಂದುವಿನಿಂದ ರುದ್ರಾಕ್ಷಿಗಳು ಉದ್ಭವ ಆಗಿದೆ ಎಂಬ ನಂಬಿಕೆ ಇದೆ. ಹೀಗಾಗಿ ಸಮಸ್ಯೆಗಳನ್ನು ದೂರ ಮಾಡುವುದಲ್ಲದೆ, ಪಾಸಿಟಿವ್ ಶಕ್ತಿಯನ್ನು ಹೆಚ್ಚಿಸಲಿದೆ. ಅಲ್ಲದೆ, ಪಾರ್ವತಿ ಸುತ ಅಂದರೆ ವಿಘ್ನೇಶ್ವರ ಹಾಗೂ ಶಿವನ ಕೃಪೆಗೂ ಪಾತ್ರರಾಗಬಹುದಾಗಿದೆ. ಗಣೇಶ ರುದ್ರಾಕ್ಷಿ (Ganesha Rudraksha) ಧಾರಣೆಯ ಲಾಭಗಳ ಬಗ್ಗೆ ತಿಳಿಯೋಣ.

ಇದನ್ನು ಓದಿ: Chanakya Neeti: ಸುಖ ದಾಂಪತ್ಯಕ್ಕೆ ಮುಳುವಾಗುವ ಮುಖ್ಯ ಕಾರಣಗಳು

ಲಾಭಗಳ ಬಗ್ಗೆ ತಿಳಿಯೋಣ (Profit)
• ಗಣೇಶ ರುದ್ರಾಕ್ಷಿ ಧಾರಣೆಯು ಓದಿನಲ್ಲಿ ಪ್ರಗತಿ ಸಾಧಿಸಲು ಏಕಾಗ್ರತೆ ಕೊಡುತ್ತದೆ. 
• ಈ ರುದ್ರಾಕ್ಷಿ ಧರಿಸಿದವರು ಜೀವನದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಜಯಗಳಿಸುವ ಆಶೀರ್ವಾದವನ್ನು (Blessings) ಪಡೆಯುತ್ತಾರೆ. 
• ಕೇತು ಗ್ರಹದ ಅಶುಭ ಪ್ರಭಾವದಿಂದ ಪಾರಾಗಬಹುದು. 
• ಗಣೇಶ ರುದ್ರಾಕ್ಷಿಯನ್ನು ಧರಿಸುವುದರಿಂದ ನೆನಪಿನ ಶಕ್ತಿ ಹೆಚ್ಚುವುದಲ್ಲದೆ, ವಿದ್ಯಾರ್ಥಿಗಳ ಏಳ್ಗೆಗೆ ಸಹಕಾರಿಯಾಗುತ್ತದೆ. 
• ರಾಶಿಯ ಅಧಿಪತಿ ಬುಧಗ್ರಹವಾಗಿದ್ದರೆ ಅಂಥವರು ಗಣೇಶ ರುದ್ರಾಕ್ಷಿ ಧಾರಣೆ ಮಾಡಬೇಕು. ಹೀಗೆ ಮಾಡುವುದರಿಂದ ಜಾತಕದಲ್ಲಿ (Horoscope) ಬುಧಗ್ರಹ ನೀಚ ಸ್ಥಿತಿಯಲ್ಲಿ ಇದ್ದರೆ ಉಚ್ಛ ಸ್ಥಿತಿಗೆ ಬರಲಿದೆ. ಹಾಗಾಗಿ ಬುಧನ ವಿಶೇಷವಾದಂತಹ ಕೃಪೆಗೆ ಪಾತ್ರರಾಗಬಹುದು. 
• ಗಣೇಶ ರುದ್ರಾಕ್ಷಿ ಧಾರಣೆ ಮಾಡಿದವರ ರಕ್ಷಣೆಗೆ ಸ್ವತಃ ಗಣೇಶನೇ ಇರುತ್ತಾನೆ. 
• ಮಾನಸಿಕ ಸಮಸ್ಯೆಯಿಂದ (Mental problem) ಬಳಲುತ್ತಿದ್ದವರು, ಪ್ರತಿ ನಡೆಗೂ ಟೆನ್ಶನ್ ಮಾಡಿಕೊಳ್ಳುವವರು ಗಣೇಶನ ರುದ್ರಾಕ್ಷಿ ಧರಿಸಿದರೆ ಸಮಸ್ಯೆ ನಿವಾರಣೆಯಾಗುತ್ತದೆ. ಜೊತೆಗೆ ಡಿಪ್ರೆಶನ್ ನಲ್ಲಿದ್ದವರು ಸಹ ಇದನ್ನು ಧರಿಸಬಹುದಾಗಿದೆ. 

ಗಣೇಶ ಚತುರ್ಥಿ (Ganesh Chaturthi) ದಿನ ಧಾರಣೆ ಒಳ್ಳೆಯದು
ಈ ಗಣೇಶ ರುದ್ರಾಕ್ಷಿಯನ್ನು ಯಾವ ಸಂದರ್ಭದಲ್ಲಿ ಧಾರಣೆ ಮಾಡಬೇಕು? ಯಾವ ಸಂದರ್ಭದಲ್ಲಿ ಧರಿಸಿದರೆ ಉತ್ತಮ, ಶುಭ ಫಲ ಸಿಗಲಿದೆ ಎಂಬುದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಸೋಮವಾರದಂದು ಗಣೇಶ ರುದ್ರಾಕ್ಷಿಯನ್ನು ಕೆಂಪು ದಾರದಿಂದ ಅಥವಾ ಬಂಗಾರ, ಬೆಳ್ಳಿಯ ಜೊತೆ ಧರಿಸಬಹುದು. ಇನ್ನು ಗಣೇಶ ಚತಿರ್ಥಿಯಂದು ಈ ರುದ್ರಾಕ್ಷಿಯನ್ನು ಧರಿಸಿದರೆ ಬಹುಳ ಒಳ್ಳೆಯದು, ಶುಭಕಾರಕ ಎಂದು ಹೇಳಲಾಗುತ್ತದೆ. ಇನ್ನು ಇದನ್ನು ಧಾರಣೆ ಮಾಡದೆ ಬೇರೆ ಉಪಾಯ ಇದೆಯೇ ಎಂದು ನೋಡುವುದಾದರೆ ಅದಕ್ಕೂ ಶಾಸ್ತ್ರದಲ್ಲಿ ಅವಕಾಶ ಇದೆ. ಪೂಜಾ ಸ್ಥಳದಲ್ಲಿ ಈ ರುದ್ರಾಕ್ಷಿಯನ್ನು ಸ್ಥಾಪನೆ ಮಾಡಿ ಪೂಜೆ ಮಾಡಿದರೂ ಬಹಳ ಒಳ್ಳೆಯದಾಗುತ್ತದೆ. ಮನೆಯಲ್ಲಿನ ಪೂಜಾ ಸ್ಥಳದಲ್ಲಿ ಸ್ಥಾಪನೆ ಮಾಡಿದ್ದೇ ಆದರೆ ಅದಕ್ಕೆ ಪ್ರತಿ ದಿನ ಪೂಜೆ ಮಾಡಬೇಕು. 

ಇದನ್ನು ಓದಿ: ರಾಶಿಯನುಸಾರ ನಿಮಗೆ ಯಾವ ಪ್ರಾಣಿ – ಪಕ್ಷಿಗಳಿಂದ ಅದೃಷ್ಟ?

ಗಣೇಶ ರುದ್ರಾಕ್ಷಿ ಹೀಗೆ ಕಾಣಿಸುತ್ತದೆ
ಗಣೇಶ ರುದ್ರಾಕ್ಷಿಯನ್ನು ನೋಡಲು ತೀರಾ ವಿಭಿನ್ನವಾಗಿ ಇರುವುದಿಲ್ಲ. ಅದು ಎಂದಿನ ರುದ್ರಾಕ್ಷಿಯಂತೆಯೇ ಇದ್ದು, ಗಣೇಶನ ಸೊಂಡಿಲ ಆಕಾರವು ಪ್ರತ್ಯೇಕವಾಗಿ ಮೂಡಿರುತ್ತದೆ. ನೋಡಲು ಗಣೇಶನಂತೆಯೇ ಇರಲಿದೆ. ಇದನ್ನು ಧರಿಸುವುದರಿಂದ ಅದೃಷ್ಟ ಸಿಗುತ್ತದೆ.