ಯಾದಗಿರಿ: ಅದ್ಧೂರಿಯಾಗಿ ನಡೆದ ಪವಾಡ ಪುರುಷನ ಜಾತ್ರೆ‌, ವಿಶ್ವರಾಧ್ಯರ ದರ್ಶನ ಪಡೆದು ಪುನೀತರಾದ ಭಕ್ತರು..!

ಕಲ್ಯಾಣ ಕರ್ನಾಟಕದಲ್ಲಿಯೇ ಪ್ರಸಿದ್ಧ ಜಾತ್ರೆಯಾದ ಸುಕ್ಷೇತ್ರ ಅಬ್ಬೆತುಮಕೂರಿನ ಸಿದ್ಧಿಪುರುಷ ವಿಶ್ವಾರಾಧ್ಯರ ರಥೋತ್ಸವವು ಸಾವಿರಾರು ಭಕ್ತರು ಜೈ ವಿಶ್ವರಾಧ್ಯ ಮಹಾರಾಜ್ ಕೀ ಜೈ ಎಂಬ ಜಯಘೋಷದೊಂದಿಗೆ ಬಹಳ ಸಡಗರ-ಸಂಭ್ರಮದಿಂದ ನಡೆಯಿತು. 

Vishwaradhya Swamy Fair Held in Yadgir grg

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ

ಯಾದಗಿರಿ(ಮಾ.16): ನಮ್ಮ ದೇಶವು ಮಹಾನ್ ಸಾಧು-ಸಂತರು, ಸಿದ್ಧಿಪುರುಷರು, ಪವಾಡ ಪುರಷರನ್ನು ಹೊಂದಿದೆ. ಅಂತಹ ಪ್ರಖ್ಯಾತ ಮಹಾಮಾಂತಕ ಸಿದ್ಧಿಪುರುಷ, ಭಾವೈಕತೆಯ ಭಾವವನ್ನು ಹೊಂದಿರುವ ಅಬ್ಬೆತುಮಕೂರಿನ ವಿಶ್ವರಾಧ್ಯರ ಭವ್ಯ ರಥೋತ್ಸವವು ಡಾ.ಗಂಗಾಧರ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಾವಿರಾರು ಭಕ್ತರ ನಡುವೆ ಬಹಳ ಅದ್ದೂರಿಯಾಗಿ ನಡೆಯಿತು.

ವಿಶ್ವರಾಧ್ಯ ಅಜ್ಜರ ಜಾತ್ರೆಗೆ ಸಾವಿರಾರು ಭಕ್ತರ ಆಗಮನ..!

ಕಲ್ಯಾಣ ಕರ್ನಾಟಕದಲ್ಲಿಯೇ ಪ್ರಸಿದ್ಧ ಜಾತ್ರೆಯಾದ ಸುಕ್ಷೇತ್ರ ಅಬ್ಬೆತುಮಕೂರಿನ ಸಿದ್ಧಿಪುರುಷ ವಿಶ್ವಾರಾಧ್ಯರ ರಥೋತ್ಸವವು ಸಾವಿರಾರು ಭಕ್ತರು ಜೈ ವಿಶ್ವರಾಧ್ಯ ಮಹಾರಾಜ್ ಕೀ ಜೈ ಎಂಬ ಜಯಘೋಷದೊಂದಿಗೆ ಬಹಳ ಸಡಗರ-ಸಂಭ್ರಮದಿಂದ ನಡೆಯಿತು. ಬಿರು ಬೇಸಿಗೆಯಲ್ಲಿಯೂ ವಿಶ್ವರಾಧ್ಯರ ದರ್ಶನಕ್ಕಾಗಿ ತಂಡೋಪತಂಡವಾಗಿ ಅಬ್ಬೆತುಮಕೂರಿನೆಡೆಗೆ ಬಂದಿದ್ದರು. ಕಲ್ಯಾಣ ಕರ್ನಾಟಕದ ಅತ್ಯಂತ ಪ್ರತಿಷ್ಠಿತ ಆಧ್ಯಾತ್ಮಿಕ ಕೇಂದ್ರ ಜಾಗೃತ ಸ್ಥಾನವೆಂದು ಖ್ಯಾತವಾದ ಸಿದ್ಧ ಸಂಸ್ಥಾನದ ವಿಶ್ವಾರಾಧ್ಯರ ಜಾತ್ರೆಯೆಂದರೆ ಕರ್ನಾಟಕ ಮಾತ್ರವಲ್ಲ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತೇಲಂಗಾಣ ಮತ್ತು ಮಹಾರಾಷ್ಟ್ರಗಳಿಂದಲೂ ಸಾವಿರಾರು ಭಕ್ತರು ಆಗಮಿಸಿ ವಿಶ್ವರಾಧ್ಯರ ದರ್ಶನ ಪಡೆದರು. ಜೊತೆಗೆ ವಿಶ್ವರಾಧ್ಯರ ರಥೋತ್ಸವದಲ್ಲಿ ಸಾವಿರಾರು ಭಕ್ತರು ಸೇರಿದಂತೆ ನಾಡಿನ ಹರಗುರು ಚರಮೂರ್ತಿಗಳು, ರಾಜಕೀಯ ಮುತ್ಸದ್ಧಿಗಳು, ಅನುಭಾವಿಗಳು ಪಾಲ್ಗೊಂಡು ರಥೋತ್ಸವಕ್ಕೆ ಸಾಕ್ಷಿಯಾದರು‌. ಶ್ರೀಮಠದ ಕೈಲಾಸ ಕಟ್ಟೆಯ ಬಳಿ ಪೀಠಾಧಿಪತಿ ಡಾ.ಗಂಗಾಧರ ಸ್ವಾಮೀಜಿ ನೂರಾರು ಸಾಧು ಸಂತರ ಮಧ್ಯೆ ಧುನಿ ಪೂಜೆ ನೆರವೇರಿಸುವುದರೊಂದಿಗೆ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಅಲ್ಲಿ ನೆರೆದ ಎಲ್ಲಾ ಸಾಧು ಸಂತರಿಗೆ ಶ್ರೀಗಳು ಕಪನಿಗಳನ್ನು ನೀಡಿದರು.

ಸಂವಿಧಾನ ವಿಷಯಕ್ಕೆ ಬಂದ್ರೆ ಅನಂತಕುಮಾರ್‌ ಅಡ್ರೆಸ್ ಇರಲ್ಲಾ: ಮಾಜಿ ಸಚಿವ ರಾಜೂಗೌಡ

ಮೊಳಗಿದ ವಿಶ್ವರಾಧ್ಯ ಮಹಾರಾಜ್ ಜಯಘೋಷ..!

ಇನ್ನು ಅಬ್ಬೆತುಮಕೂರಿನ ಪವಾಡ ಪುರುಷನ ಜಾತ್ರೆಗೆ ಹಲವು ಭಕ್ತರು ಪಾದಯಾತ್ರೆಯ ಮೂಲಕ ಆಗಮಿಸಿದ್ದರು. ಜೊತೆಗೆ ಹಲವರು ಬೈಕ್‌, ಬಸ್‌, ಕಾರು, ಜೀಪು ಮತ್ತು ಆಟೋಗಳಲ್ಲಿ ಬಂದಿದ್ದರು. ಇಳಿಹೊತ್ತು ಸೂರ್ಯ ಮುಳುಗುವ ಸಂದರ್ಭದಲ್ಲಿ ಸುಕ್ಷೇತ್ರ ಅಬ್ಬೆತುಮಕೂರಿನ ಶ್ರೀ ಮಠದ ಆವರಣದಲ್ಲಿ ಸಾವಿರಾರು ಭಕ್ತರು ವಿಶ್ವಾರಾಧ್ಯರ ರಥೋತ್ಸವವನ್ನು ಕಣ್ತುಂಬಿಕೊಂಡರು. ಪೀಠಾಧಿಪತಿ ಡಾ.ಗಂಗಾಧರ ಸ್ವಾಮೀಜಿ ಸರಿಯಾಗಿ ಸಂಜೆ 6.30 ಗಂಟೆಗೆ ರಥವನ್ನೇರಿ ಚಾಲನೆ ನೀಡುವುದೇ ತಡ, ಭಕ್ತ ವೃಂದ ‘ವಿಶ್ವಾರಾಧ್ಯ ಮಹಾರಾಜ ಕೀ ಜೈ’, ‘ಗಂಗಾಧರ ಮಹಾರಾಜ ಕೀ ಜೈ’ ಎಂಬ ಜಯಘೋಷಗಳು ಮುಗಿಲು ಮುಟ್ಟಿದವು. ಸಾವಿರಾರು ಭಕ್ತರು ವಿಶ್ವರಾಧ್ಯರ ರಥವನ್ನು ಎಳೆದು ಪುನೀತರಾದರು. ನೆರೆದ ಭಕ್ತ ಸಮೂಹ ಕಾರಿಕಾ, ಉತ್ತುತ್ತಿ, ಬಾಳೆಹಣ್ಣುಗಳನ್ನು ರಥದ ಮೇಲೆ ಎಸೆದು, ಭಕ್ತಿಯಿಂದ ಕೈ ಜೋಡಿಸಿ, ನಮಿಸಿ, ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಂಡರು. 

ZP ಆಗಲು ಹೋದವನು ಹೋಂ ಮಿನಿಸ್ಟರ್ ಆದೆ: ಪವಾಡ ನೆನೆದ ಭಕ್ತ

ವಿಶ್ವರಾಧ್ಯರು ಪವಾಡಗಳಿಂದಲೇ ಭಕ್ತರ ಮನ ಗೆದ್ದವರು. ವಿಶ್ವರಾಧ್ಯರ ಪವಾಡ ಒಂದಲ್ಲ, ಎರಡಲ್ಲ ಹಲವು ಪವಾಡಗಳನ್ನು ಹಲವು ಭಕ್ತರು ಕಂಡಿದ್ದಾರೆ. ಅದಕ್ಕಾಗಿ ಪವಾಡ ಪುರುಷ ಎಂದು ಕರೆಯುತ್ತಾರೆ. ಇನ್ನು ಮಹಾರಾಷ್ಟ್ರದ ಮೇತ್ರೆ ಕುಟುಂಬವು ವಿಶ್ವರಾಧ್ಯ ಮಹಾರಾಜರನ್ನು ಸದಾ ಪೂಜಿಸುವ,  ನೆನೆಯುವ ಕುಟುಂಬ‌‌. ಸಿದ್ದರಾಮ್ ಮೇತ್ರೆ ಎಂಬ ವ್ಯಕ್ತಿಯು ಪೀಠಾದಿಪತಿ ಡಾ.ಗಂಗಾಧರ ಶ್ರೀಗಳ ಬಳಿ ಬಂದು ನಾನು ZP ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ನಂತೆ. ಆಗ ಗಂಗಾಧರ ಶ್ರೀಗಳು ನಾಮಪತ್ರವನ್ನು ಹರಿದು ಹಾಕಿದ್ರಂತೆ. ಯಾಕಂದ್ರೆ ನೀನು ZP ಆಗಲಾರದು MLA ಆಗ್ತೀಯಾ ಹೋಗು ಅಂದ್ರಂತೆ. ಅದರಂತೆ ಸಿದ್ದರಾಮ್ ಮೇತ್ರೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕನಾದನು. ಸತತ ನಾಲ್ಕು ಬಾರಿ ಗೆದ್ದು ಮಹಾರಾಷ್ಟ್ರದ ಹೋಂ ಮಿನಿಸ್ಟರ್ ಸಹ ಆಗಿದೀನಿ ಎಂದ ತನ್ನ ಜೀವನದಲ್ಲಾ ವಿಶ್ವರಾಧ್ಯ ಮಹಾರಾಜರ ಪವಾಡವನ್ನು ನೆನೆದನು.

Latest Videos
Follow Us:
Download App:
  • android
  • ios