Asianet Suvarna News Asianet Suvarna News

ಗಣೇಶ ವಿಸರ್ಜನೆ,ಮಹಿಳಾಮಣಿಗಳ ದೇಶಿ ನೃತ್ಯಕ್ಕೆ ಮನಸೋತ ಶಾಸಕ ಯತ್ನಾಳ್

ವಿಜಯಪುರದಲ್ಲಿ ಮಹಿಳೆಯರೆ ಡಿಫರೆಂಟ್ ಆಗಿ ವಿಘ್ನೇಶ್ವರ ನನ್ನ ಬೀಳ್ಕೊಟ್ಟಿದ್ದಾರೆ. 10 ವರ್ಷದ ಬಾಲಕಿಯರಿಂದ ಹಿಡಿದು 60 ವರ್ಷದ ವೃದ್ಧೆಯರು ಕಲರ್‌ ಕಲರ್‌  ಸೀರೆಯುಟ್ಟು ವಾರಕರಿ ಸಂಪ್ರದಾಯ ತಾಳ ವಾದ್ಯ, ಲೇಜಿಮ್‌ ಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು

Vijayapura women performed in Ganesh Visarjan suh
Author
First Published Sep 26, 2023, 5:20 PM IST

ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ  : ಗಣೇಶನ ವಿಸರ್ಜನೆ ವೇಳೆ  ಯುವಕರದ್ದು ಕಾರುಬಾರು. ಅದ್ರಲ್ಲೂ ಗಣೇಶನ ಬೀಳ್ಕೊಡುಗೆ ದಿನ ಯುವಕರು ಡಿಜೆ ಹಾಕಿ, ಅಬ್ಬರಿಸುವ ಸದ್ದಿಗೆ ಸ್ಟೆಪ್ ಹಾಕುವುದು ಕಾಮನ್.‌‌ ಆದ್ರೆ ವಿಜಯಪುರದಲ್ಲಿ ಈ ಬಾರಿ ಮಹಿಳೆಯರೆ ಡಿಫರೆಂಟ್ ಆಗಿ ವಿಘ್ನೇಶ್ವರ ನನ್ನ ಬೀಳ್ಕೊಟ್ಟಿದ್ದಾರೆ. 10 ವರ್ಷದ ಬಾಲಕಿಯರಿಂದ ಹಿಡಿದು 60 ವರ್ಷದ ವೃದ್ಧೆಯರು ಕಲರ್‌ ಕಲರ್‌  ಸೀರೆಯುಟ್ಟು ವಾರಕರಿ ಸಂಪ್ರದಾಯ ತಾಳ ವಾದ್ಯ, ಲೇಜಿಮ್‌ ಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು

ಗಮನ ಸೆಳೆದ ವಾರಕರಿ ಸಂಪ್ರದಾಯದ ತಾಳ ವಾದ್ಯ..!

ಗಣೇಶ ವಿಸರ್ಜನೆ ಅಂದರೆ ನೆನಪಿಗೆ ಬರೋದು ಡಿಜೆ ಸದ್ದು, ಹುಚ್ಚೆದ್ದು ಕುಣಿಯುವ ಹುಡುಗರ ಗುಂಪು. ಆದರೆ ವಿಜಯಪುರದ ಶಂಕರಲಿಂಗ ದೇಗುಲದ ಸಿದ್ದಿವಿನಾಯಕ ಗಣೇಶ ಮಂಡಳಿ ವಿನೂತನ ರೀತಿಯಲ್ಲಿ ಗಣೇಶನಿಗೆ ಬೀಳ್ಕೊಡುಗೆ ಕೊಟ್ಟಿದೆ. ಗಣೇಶ ವಿಸರ್ಜನೆಯಲ್ಲಿ ಮಹಿಳೆಯರು ವಾರಕರಿ ಸಂಪ್ರದಾಯದಂತೆ ಸೀರೆಯುಟ್ಟು ಕಯ್ಯಲ್ಲಿ ತಾಳ ಹಿಡಿದು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ವಾರಕರಿ ಸಂಪ್ರದಾಯದಂತೆ ತಾಳ ನುಡಿಸಿ ಕುಣಿದು ಕುಪ್ಪಳಿಸಿದರು. 20 ವರ್ಷದಿಂದ 50 ವರ್ಷದ ಮಹಿಳೆಯರು ವಾರಕರಿ ಸಂಪ್ರದಾಯದ ತಾಳ ಹಿಡಿದು ಕುಣಿದಿದ್ದು ಜನರಲ್ಲಿ ಭಕ್ತಿಭಾವಗಳನ್ನ ಇಮ್ಮಡಿಗೊಳಿಸಿತು.

ಲೇಜಿಮ್‌ ನುಡಿಸಿದ ಬಾಲಕಿಯರು-ವೃದ್ಧೆಯರು..!

ಯುವತಿಯರ ಮತ್ತೊಂದು ತಂಡ ಲೇಜಿಂ ಬಾರಿಸುತ್ತ ಸ್ಟೆಪ್‌ ಹಾಕಿದ್ದು ಜನರನ್ನ ಆಕರ್ಷಿಸಿತು. ಶಂಕರಲಿಂಗ ದೇಗುಲದ ಎದುರು ಗಣೇಶ ಮೂರ್ತಿ ವಿಸರ್ಜನೆಗೆ ಹೊರ ಬರುತ್ತಿದ್ದಂತೆ ಲೇಜಿಮ್ ಹಿಡಿದ ಯುವತಿಯರು ಡೋಲ್ ನಾದಕ್ಕೆ ತಕ್ಕಂತೆ ನುಡಿಸಿದರು. ಈ ತಂಡದಲ್ಲಿ 10 ವರ್ಷದ ಬಾಲಕಿಯರಿಂದ ಹಿಡಿದು ವೃದ್ದೆಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಅದೃಷ್ಟದ ವಿಷಯದಲ್ಲಿ ಅತೀ ಶ್ರೀಮಂತರು ಈ ರಾಶಿಯ ಮಹಿಳೆಯರು

 

ಡಿಜೆ ಬಿಟ್ಟು ಸಂಸ್ಕೃತಿಯತ್ತ..!

ಗಣೇಶ ವಿಸರ್ಜನೆಯಲ್ಲಿ ಗಂಡು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು ವಾಡಿಕೆ. ಯುವಕರೆ ಡಿಜೆ ಹಾಕಿಕೊಂಡು ಗಣೇಶನ ವಿಸರ್ಜನೆ ಮಾಡಿ ಬರುತ್ತಿದ್ದರು.  ಪಂಡರಾಪುರ ವಿಠ್ಠಲ ಹಾಗೂ ಗಣೇಶನ ಭಕ್ತಿ ಗೀತೆಗೆ ತಕ್ಕಂತೆ ವಾರಕರಿಗೆ ಮಹಿಳೆಯರು ಸಂಪ್ರದಾಯದ ತಾಳ ನುಡಿಸಿದ್ದು ಗಮನಸೆಳೆಯಿತು.  ವಿಶೇಷ ಅಂದ್ರೆ ಡಿಜೆ ಬದಿಗಿಟ್ಟು ನಮ್ಮ ಸಂಸ್ಕೃತಿ, ಸಂಪ್ರದಾಯದಂತೆ ವಾದ್ಯ, ಸಂಗೀತಕ್ಕೆ ಇಲ್ಲಿ ಮಹತ್ವ ಕೊಟ್ಟಿದ್ದು ಜನರ ಮೆಚ್ಚುಗೆ ಪಡೆಯಿತು.

ಗೃಹಿಣಿಯರು, ನೌಕರಿಯಲ್ಲಿರೋ ಮಹಿಳೆಯರೆ ಭಾಗಿ..!

ಶಂಕಲಿಂಗ ಸಿದ್ದಿವಿನಾಯಕ ಗಣೇಶ ಮಂಡಳಿ ಪ್ರತಿ ವರ್ಷ ಗಣೇಶನ ವಿಸರ್ಜನೆಗೆ ಮಹಾರಾಷ್ಟ್ರದ ಪೂನಾ, ಸೊಲ್ಲಾಪುರ, ಬಾಂಬೆ ಸೇರಿದಂತೆ ಇತರೆಡೆಗಳಿಂದ ಮನರಂಜನೆಗಾಗಿ ವಿವಿಧ ತಂಡಗಳನ್ನು ಕರೆಸಲಾಗುತ್ತಿತ್ತು. ಜೊತೆಗೆ ಹೆಚ್ಚಿನ ಹಣವನ್ನೂ ಖರ್ಚು ಮಾಡಲಾಗುತ್ತಿತ್ತು. ಆದರೆ ಇದಕ್ಕೆ ಹೊರತಾಗಿ ಇಲ್ಲಿನ ಮಹಿಳೆಯರು ತಾವು ವಾರಕರಿ ನೃತ್ಯ ಕಲಿತು ಪ್ರದರ್ಶನ ನೀಡಿದ್ದಾರೆ. ಇಲ್ಲಿ ಪಾಲ್ಗೊಂಡವರಲ್ಲಿ ಯಾರೂ ಸಹ ಕಲಾವಿದರಲ್ಲ, ಗೃಹಿಣಿಯರು, ಉದ್ಯೋಗಸ್ಥ ಮಹಿಳೆಯರು ಇಲ್ಲಿ ಕಲಿತು ಪ್ರದರ್ಶನ ನೀಡಿದ್ದಾರೆ‌.

ಸ್ಥಳೀಯ ನೃತ್ಯ ಕಲಾವಿದ ರಾಕೇಶ್‌ರಿಂದ 15 ದಿನಗಳ ತರಬೇತಿ..!

ನಗರದ ನೃತ್ಯ ಕಲಾವಿದ ರಾಕೇಶ್‌ ಕೇವಲ 15 ದಿನಗಳಲ್ಲಿ ಎರಡು ಮಹಿಳಾ ತಂಡಗಳಿಗೆ ತರಬೇತಿ ಕೊಟ್ಟಿದ್ದಾರೆ. ಪ್ರತಿ ದಿನ ಸಾಯಂಕಾಲ 7 ಗಂಟೆಯಿಂದ 9 ಗಂಟೆಯ ವರೆಗೆ ತರಬೇತಿ ನೀಡಲಾಗಿದೆ. ಕೇವಲ 15 ದಿನಗಳಲ್ಲಿ ಮಹಿಳೆಯರು ವಾದ್ಯ ಹಾಗೂ ಡಾನ್ಸ್ ಕಲಿತು ಪ್ರದರ್ಶನ ನೀಡಿದ್ದಾರೆ.

ರಾತ್ರಿ ಈ ಕನಸು ಕಂಡಿದ್ರೆ, ಯಾರಿಗೂ ಹೇಳಬೇಡಿ; ಹಣ ಕಳ್ಕೊತ್ತೀರಿ

ಶಾಸಕ ಯತ್ನಾಳರಿಂದಲು ಶ್ಲಾಘನೆ.!

ಶಂಕರಲಿಂಗ ದೇಗುಲಕ್ಕೆ ಭೇಟಿ ನೀಡಿದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಂಡಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು.. ವಾರಕರಿ ತಾಳ ಬಾರಿಸುವ ಮೂಲಕ ನೃತ್ಯಕ್ಕೆ ಚಾಲನೆ ನೀಡಿದರೆ, ಲೇಜಿಮ್ ಬಾರಿಸುವ ಮೂಲಕ ಲೇಜಿಂ ಯುವತಿಯರ ತಂಡದ ಪ್ರದರ್ಶನಕ್ಕೆ ಚಾಲನೆ ನೀಡಿದರು. ಎರಡು ತಂಡಗಳ ಕಲಾ ಪ್ರದರ್ಶನ ವೀಕ್ಷಿಸಿದ ಶಾಸಕ ಬಸನಗೌಡ ಯತ್ನಾಳ್‌ ಮಹಿಳೆಯರ ಪ್ರಯತ್ನವನ್ನ ಶ್ಲಾಘಿಸಿದ್ದಾರೆ.

Follow Us:
Download App:
  • android
  • ios