ಉತ್ತರ ಕರ್ನಾಟಕದ ಪ್ರಸಿದ್ಧ ಜಾನುವಾರು ಜಾತ್ರೆಯ ಮೇಲೆ ಬರದ ಕರಿನೆರಳು, ರೈತರಿಗೆ ಶಾಕ್!

ಉತ್ತರ ಕರ್ನಾಟಕದಲ್ಲಿಯೇ ಅತಿ ದೊಡ್ಡ ಜಾನುವಾರುಗಳ ಜಾತ್ರೆ ನಡೆಯೋದು ವಿಜಯಪುರ ಜಿಲ್ಲೆಯಲ್ಲಿ ಆದ್ರೆ ಈ ಬಾರಿ ಬರಗಾಲದಿಂದ ದನಗಳ ಜಾತ್ರೆಯ ಚಿತ್ರಣವೇ ಬದಲಾಗಿದೆ.

Vijayapura Siddarameshwara cattle festival gow

ವರದಿ: ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ (ಜ.16): ಉತ್ತರ ಕರ್ನಾಟಕದಲ್ಲಿಯೇ ಅತಿ ದೊಡ್ಡ ಜಾನುವಾರುಗಳ ಜಾತ್ರೆ ನಡೆಯೋದು ವಿಜಯಪುರ ಜಿಲ್ಲೆಯಲ್ಲಿ. ಜಿಲ್ಲೆಯ ಜನರ ಆರಾಧ್ಯ ದೈವ ಸಿದ್ದರಾಮೇಶ್ವರ ಜಾತ್ರೆಯ ಅಂಗವಾಗಿ ದನಗಳ ಜಾತ್ರೆ ನಡೆಯುತ್ತೆ. ಈ ಜಾತ್ರೆಯಲ್ಲಿ ಲಕ್ಷಕ್ಕು ಅಧಿಕ ಜಾನುವಾರು ಸೇರೋದು ವಾಡಿಕೆ. ಆದ್ರೆ ಈ ಬಾರಿ ಬರಗಾಲದಿಂದ ದನಗಳ ಜಾತ್ರೆಯ ಚಿತ್ರಣವೇ ಬದಲಾಗಿದೆ.

ಉ. ಕರ್ನಾಟಕದ ಅತಿ ದೊಡ್ಡ ಜಾನುವಾರು ಜಾತ್ರೆ
ವಿಜಯಪುರದ ಗ್ರಾಮ ದೇವರು ಸಿದ್ದರಾಮೇಶ್ವ ಜಾತ್ರೆ ಪ್ರತಿ ವರ್ಷವೂ ವಿಜೃಂಭಣೆಯಿಂದ ನಡೆಯುತ್ತೆ.‌ ಜಾತ್ರೆ ಸಂಕ್ರಾಂತಿ ಸಮಯದಲ್ಲೆ ನಡೆಯುವ ಕಾರಣ ನಮ್ಮೂರ ಸಂಕ್ರಾಂತಿ ಜಾತ್ರೆ ಅಂತಲೂ ಸಿದ್ದರಾಮೇಶ್ವರ ಜಾತ್ರೆ ಪ್ರಸಿದ್ಧಿ ಪಡೆದಿದೆ. ಈ ಜಾತ್ರೆಯನ್ನ ಕಣ್ತುಂಬಿ‌ ಕೊಳ್ಳಲು ದೇಶದ ನಾನಾ ಮೂಲೆಗಳಿಂದ ಭಕ್ತರು ಬರೋದು ವಾಡಿಕೆ. ಹಾಗೇ ವಿಶೇಷ ಅಂದ್ರೆ ಜಾನುವಾರುಗಳಿಗಾಗಿಯೇ ಇಲ್ಲಿ ಪ್ರತ್ಯೇಕ ಜಾತ್ರೆಯು ನಡೆಯುತ್ತದೆ. ಈ ಜಾನುವಾರು ಜಾತ್ರೆಯಲ್ಲಿ ನೆರೆ ರಾಜ್ಯ ಸೇರಿದಂತೆ ಹಲವು ಜಿಲ್ಲೆಗಳ ರೈತರು ತಮ್ಮ ಜಾನುವಾರುಗಳನ್ನ ಕರೆತರುತ್ತಾರೆ. ಜನೇವರಿ 12 ರಿಂದ ಶುರುವಾಗುವ ಜಾನುವಾರುಗಳ ಜಾತ್ರೆ 20 ನೇ ತಾರೀಕು ಅಂದ್ರೆ 8 ದಿನಗಳ ಕಾಲ ಜಾನುವಾರುಗಳ ಜಾತ್ರೆ ನಡೆಯುತ್ತೆ. ಆದ್ರೆ ಈ ಬಾರಿ ತಲೆದೂರಿಸುವ ಬರದ ಎಫೆಕ್ಟ್ ಜಾನುವಾರು ಜಾತ್ರೆಯ ಮೇಲೆಯು ಬಿದ್ದಿದೆ.

ರಾಮ ಮಂದಿರ ಉದ್ಘಾಟನೆಗೆ ಶಂಕರ ಮಠಗಳ ವಾದಕ್ಕೆ ಶೃಂಗೇರಿ ಕಿರಿಯ ಜಗದ್ಗುರು ಸ್ಪಷ್ಟನೆ

ದನಗಳ ಜಾತ್ರೆ ಮೇಲೆ ಬರದ ಎಫೆಕ್ಟ್
ಯಸ್, ಈ ಬಾರಿ ಅಂದುಕೊಂಡಂತೆ ಮಳೆಯಾಗಿಲ್ಲ. ಪರಿಣಾಮ ರಾಜ್ಯದಲ್ಲಿ ಬರ ಆವರಿಸಿದೆ. ಇನ್ನೂ ಬೇಸಿಗೆ ಶುರುವಾಗ್ತಿದ್ದು, ದಿನದಿಂದ‌ ದಿನಕ್ಕೆ ಬರದ ಎಫೆಕ್ಟ್ ಜಾಸ್ತಿಯಾಗುತ್ತಲೆ ಹೋಗುತ್ತದೆ. ಈ ಬರದ ಎಫೆಕ್ಟ್ ಜಾನುವಾರು ಜಾತ್ರೆಯ ಮೇಲು ಬಿದ್ದಿದೆ.‌ ಪ್ರತಿ ವರ್ಷವೂ ದನಗಳ ಜಾತ್ರೆಯಲ್ಲಿ ಲಕ್ಷಕ್ಕು ಅಧಿಕ ಜಾನುವಾರುಗಳು ಸೇರುತ್ತಿದ್ದವು. ಆದ್ರೆ ಈ ಬಾರಿ ಬರದ ಎಫೆಕ್ಟ್ ನಿಂದಾಗಿ ಜಾನುವಾರುಗಳ ಸಂಖ್ಯೆಯಲ್ಲಿ ಬಾರಿ ಇಳಿಕೆ ಕಂಡಿದೆ. ಲಕ್ಷ ಇರಬೇಕಿದ್ದ ದನಗಳ‌ ಸಂಖ್ಯೆ ಸಾವಿರದ ಲೆಕ್ಕಕ್ಕೆ‌ ಸೀಮಿತವಾಗಿದೆ. ಕೇವಲ 5 ರಿಂದ 6 ಸಾವಿರ ಜಾನುವಾರುಗಳು ಮಾತ್ರ ದನಗಳ ಜಾತ್ರೆಯಲ್ಲಿ ಸೇರಿವೆ. ಇದು ರೈತರಲ್ಲಿ ಹಾಗೂ ಆಯೋಜಕರಲ್ಲು ನಿರಾಶೆ ಮೂಡಿಸಿದೆ.

ಬರದ ನಡುವೆ ರೈತರ ನಿರಾಸಕ್ತಿ, ಖರೀದಿದಾರ ಸಂಖ್ಯೆಯು ಕಡಿಮೆ
ಅಷ್ಟಕ್ಕು ಜಾನುವಾರು ಜಾತ್ರೆಯಲ್ಲಿ ಜಾನುವಾರುಗಳ‌ ಸಂಖ್ಯೆಯಲ್ಲಿ ಈ ರೀತಿ ಏಕಾಏಕಿ ಇಳಿಕೆ ಕಾಣಲು ಕಾರಣವು ಇದೆ. ಮೊದಲೇ ಬರಗಾಲದಿಂದ ತತ್ತರಿಸಿರುವ ರೈತನಲ್ಲಿ ಜಾನುವಾರು ಜಾತ್ರೆಯಲ್ಲಿ ಪಾಲ್ಗೊಳ್ಳುವ ಉತ್ಸಾಹವಿಲ್ಲ. ಸಂಪೂರ್ಣ ವಿಜಯಪುರ ಜಿಲ್ಲೆಯಲ್ಲಿ ಬರ ಘೋಷಣೆಯಾಗಿದೆ. ನೆರೆಯ ಬೆಳಗಾವಿ, ಕಲಬುರ್ಗಿ, ಬಾಗಲಕೋಟೆ, ಬೀದರ್, ಗದಗ, ಕೊಪ್ಪಳ, ಯಾದಗಿರಿ ಸೇರಿ ನೆರೆ ಜಿಲ್ಲೆಗಳಲ್ಲು ಇದೆ ಪರಿಸ್ಥಿತಿ ಇದೆ. ಇನ್ನೂ ನೆರೆಯ ಮಹಾರಾಷ್ಟ್ರ ರಾಜ್ಯದಲ್ಲು ಮಳೆ‌ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಇದೆಲ್ಲ ಕಾರಣಕ್ಕೆ ಜಾನುವಾರುಗಳನ್ನ ಜಾತ್ರೆಗೆ ತರುವ ಉತ್ಸಾಹ, ಆಸಕ್ತಿಯನ್ನ ಬಹುತೇಕ ರೈತರು ತೋರಿಸಿಲ್ಲ.

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ, ಹಿರೇಮಗಳೂರಿನ ಕೋದಂಡ ರಾಮ ಸ್ವಾಮಿ ದೇಗುಲ ಶುಚಿ ಕಾರ್ಯ

ಮೇವಿನ ಕೊರತೆ, ನೀರಿಗು ತತ್ವಾರದ ಭಯ
ಇನ್ನೂ ಜಾನುವಾರುಗಳನ್ನ ಜಾತ್ರೆಗೆ ಕರೆತಂದರೆ ಜೊತೆಗೆ ಮೇವು ಬೇಕಾಗುತ್ತದೆ. ಕನಿಷ್ಟ ಐದಾರು ದಿನಗಳಾದ್ರು ಜಾತ್ರೆಯಲ್ಲಿ ದನಗಳ ಜೊತೆಗೆ ರೈತರು ಕಳೆಯಬೇಕಾಗುವ ಕಾರಣ ದನಗಳಿಗೆ ಮೇವನ್ನ ಖರೀದಿ ಮಾಡಬೇಕಾಗುತ್ತದೆ. ಸಧ್ಯ ಬರದ ಎಫೆಕ್ಟ್ ನಿಂದಾಗಿ ರೈತರಿಗೆ ಮೇವು ಖರೀದಿ ಮಾಡಿ ದನಗಳಿಗೆ ಹಾಕುವ ಶಕ್ತಿ ಉಳಿದಿಲ್ಲ. ಇತ್ತ ಬರದ ನಡುವೆ ಜಾನುವಾರುಗಳಿಗೆ ಜಾತ್ರೆಯಲ್ಲಿ ನೀರಿನ ಕೊರತೆ ಆದ್ರೆ ಎನ್ನುವ ಆತಂಕ ರೈತರನ್ನ ಜಾತ್ರೆಯಿಂದ ದೂರ ಉಳಿಯುವ ಹಾಗೇ ಮಾಡಿದೆ. ಇನ್ನು ಇದಕ್ಕು ಮುಖ್ಯ ಕಾರಣ ಎಂದರೆ ದನಗಳ ಖರೀದಿದಾರರ ಸಂಖ್ಯೆಯೇ ಕಡಿಮೆ. ಬರದ ನಡುವೆ ಜಾನುವಾರು ಖರೀದಿಸಿ ಸಾಕುವ ಸಾಹಸಕ್ಕೆ ರೈತರು ಮುಂದಾಗುತ್ತಿಲ್ಲ. ಜಮೀನುಗಳಲ್ಲಿ ಹಸಿರು ಮೇವಿಲ್ಲ, ಮಳೆ ಇಲ್ಲದೆ ರೈತರು ಮನೆಯಲ್ಲಿರೋ‌ ದನಗಳಿಗೆ ಮೇವಿನ ವ್ಯವಸ್ಥೆ ಮಾಡಲು ರೈತರು ಒದ್ದಾಡುವಂತಾಗಿದೆ. ಹೀಗಾಗಿ ಸಹಜವಾಗಿಯೇ ರೈತರು ದನಗಳನ್ನ ಖರೀದಿ ಮಾಡೋ ಗೋಜಿಗೆ ಹೋಗಿಲ್ಲ. ಇದೆಲ್ಲ ಕಾರಣಗಳು ಜಾನುವಾರು ಜಾತ್ರೆಯನ್ನ ಡಲ್ ಹೊಡೆಯುವಂತೆ ಮಾಡಿವೆ..

ಜಾತ್ರೆಯಲ್ಲಿ ಜಾನುವಾರುಗಳ ದರ ಕುಸಿತ, ರೈತರು ಶಾಕ್
ಇನ್ನೂ ದನಗಳ ಜಾತ್ರೆಯಲ್ಲಿ ಜಾನುವಾರುಗಳ ದರ ಕುಸಿತ ಕಂಡಿದೆ.‌ ಇದಕ್ಕು ಕಾರಣವಾಗಿದ್ದು ಬರದ ಹೊಡೆತ, ಬರದ ನಡುವೆ ದನಗಳ ಖರೀದಿಗೆ ಆಸಕ್ತಿ ತೋರಿಸದ ರೈತರು ಕಡಿಮೆ ದರಕ್ಕೆ ಜಾನುವಾರುಗಳನ್ನ ಕೇಳಿದ್ದು ಇದೆ.. 1.20 ಲಕ್ಷಕ್ಕೆ‌ ಮಾರಾಟವಾಗುವ ಜಾನುವಾರುಗಳನ್ನ ಕೇವಲ 60 ಸಾವಿರ, 80 ಸಾವಿರಕ್ಕೆ ಖರೀದಿದಾರರು ಕೇಳಿದ್ದಾರಂತೆ. ಇನ್ನೂ ಬರದಿಂದಾಗಿ ಲಕ್ಷ ಲಕ್ಷ ಬೆಲೆ ಬಾಳುವ ದನಗಳನ್ನು ರೈತರು ಕೇವಲ 60 ಸಾವಿರಕ್ಕೆ ಮಾರಾಟ‌ ಮಾಡಿದ್ದಾರೆ.  ಒಟ್ಟಿನಲ್ಲಿ ಬರದ ಹೊಡೆತ ಉತ್ತರ ಕರ್ನಾಟಕದ ಪ್ರಸಿದ್ಧ ಜಾನುವಾರು ಜಾತ್ರೆಯ ಮೇಲೆ‌ ಪರಿಣಾಮ ಬೀರಿದೆ.

Latest Videos
Follow Us:
Download App:
  • android
  • ios