ಭೌತಿಕ ಜೀವನದ ಲಕ್ಷುರಿಗಳಿಗೆ ಕಾರಣನಾಗುವ ಶುಕ್ರನು ಮಾ.31ರಂದು ರಾಶಿ ಬದಲಿಸಲಿದ್ದಾನೆ. ಶುಕ್ರನ ಈ ಸಂಚಾರದಿಂದ ನಾಲ್ಕು ರಾಶಿಗಳ ಅದೃಷ್ಟ ಚಿನ್ನದಂತೆ ಹೊಳೆಯಲಿದೆ.
ಶುಕ್ರ(venus)ನು ಸೌಂದರ್ಯ, ಸಂಪತ್ತು, ಪ್ರೀತಿ, ಸಂತೋಷ, ಸಮೃದ್ಧಿಗಳ ಅಧಿಪತಿ. ಆತನ ಕೃಪಾಕಟಾಕ್ಷ ಇದ್ದರೆ ಜೀವನದಲ್ಲಿ ಲಕ್ಷುರಿ ಅನುಭವಿಸಬಹುದು. ಹಾಗಾಗಿಯೇ ಶುಕ್ರನ ರಾಶಿ ಚಕ್ರ ಬದಲಾವಣೆಗೆ ಜ್ಯೋತಿಷ್ಯದಲ್ಲಿ ಮಹತ್ವ ಹೆಚ್ಚು. ಶುಕ್ರನು ವೃಷಭ ಮತ್ತು ತುಲಾ ರಾಶಿಯ ಅಧಿಪತಿ ಆಗಿದ್ದಾನೆ.
ಈ ಬಾರಿ ಶುಕ್ರನು ಮಾರ್ಚ್ 31ರಂದು ಮಕರ ರಾಶಿಯಿಂದ ಕುಂಭ(Aquarius) ರಾಶಿಗೆ ಪ್ರವೇಶಿಸುತ್ತಿದ್ದಾನೆ. ಇಲ್ಲಿಯೇ ಏಪ್ರಿಲ್(April) 27ರವರೆಗೆ ಇರಲಿದ್ದಾನೆ. ಇದರಿಂದ ಎಲ್ಲ ರಾಶಿಗಳ(Zodiac signs) ಮೇಲೂ ಸಾಕಷ್ಟು ಪರಿಣಾಮಗಳಾಗಲಿವೆ. ಆದರೆ ನಾಲ್ಕು ರಾಶಿಗಳ ಅದೃಷ್ಟ ಮಾತ್ರ ಚಿನ್ನದಂತೆ ಹೊಳೆಯಲಿದೆ. ಶುಕ್ರನ ಕೃಪಾದೃಷ್ಟಿ ಈ ನಾಲ್ಕು ರಾಶಿಗಳ ಮೇಲೆ ಹೇರಳವಾಗಿ ಬೀಳಲಿದೆ. ಇದರಿಂದ ಬದುಕಲ್ಲಿ ಸಾಕಷ್ಟು ಶುಭ ಸಂಭವಿಸಲಿದೆ. ಯಾವೆಲ್ಲ ರಾಶಿಗಳು ಶುಕ್ರನ ಪ್ರೀತಿಗೆ ಪಾತ್ರವಾಗುತ್ತವೆ ನೋಡೋಣ.
ಮೇಷ(Aries)
ಹಣಕಾಸಿನ ದೃಷ್ಟಿಯಿಂದ ನೋಡಿದಾಗ ಈ ಸಮಯವು ಮೇಷಕ್ಕೆ ಸಾಕಷ್ಟು ಲಾಭಗಳನ್ನು ತರಲಿದೆ. ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯ ಗಳಿಸುವ ಸಾಧ್ಯತೆಗಳು ಹೆಚ್ಚಿವೆ. ಜೀವನದಲ್ಲಿ ಸಂಪತ್ತು, ಸಮೃದ್ಧಿಯ ಆಗಮನವಾಗಲಿದೆ. ಉದ್ಯಮಿಗಳಿಗೆ(business) ಯಶಸ್ಸು ಲಭಿಸಲಿದೆ. ಪಾಲುದಾರಿಕೆ ವ್ಯವಹಾರಗಳಲ್ಲಿರುವವರಿಗೆ ಈ ಸಂದರ್ಭ ಯಶಸ್ಸಿನ ರುಚಿ ತೋರಿಸಲಿದೆ. ಹೊಸ ದಿಕ್ಕಿನಲ್ಲಿ ವೃತ್ತಿ ಆರಂಭಿಸಲು ಸಾಕಷ್ಟು ಅವಕಾಶಗಳು ಲಭಿಸುತ್ತವೆ.
ಮಿಥುನ(Gemini)
ಉದ್ಯೋಗ ಸ್ಥಳದಲ್ಲಿ ಈ ಸಂದರ್ಭ ಚಂದ್ರನಂತೆ ಹೊಳೆಯುವಿರಿ. ನಿಮ್ಮ ಕೆಲಸದ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ, ಪ್ರಶಂಸೆಗಳು ಕೇಳಿ ಬರುತ್ತವೆ. ಈ ಸಂದರ್ಭದಲ್ಲಿ ನಿಮಗೆ ಗೌರವ, ಹೆಸರು ಹುಡುಕಿ ಬರಲಿವೆ. ಕೆಲಸ ಬದಲಿಸಲು ಯೋಜಿಸುತ್ತಿದ್ದಲ್ಲಿ, ಈ ಸಮಯದಲ್ಲಿ ಹೊಸ ಕೆಲಸ ಸಿಗಲಿದೆ. ಪಾಲುದಾರಿಕೆ ಕೆಲಸಗಳಲ್ಲಿ ಸಾಕಷ್ಟು ಲಾಭಗಳನ್ನು ಗಳಿಸುವಿರಿ. ಹಣವು ನಿಮ್ಮನ್ನೇ ಹುಡುಕಿಕೊಂಡು ಬಂದಂತೆ ಬರುತ್ತದೆ. ಹಳೆಯ ಹರಕೆಗಳನ್ನು ಮೊದಲು ತೀರಿಸಿ, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ.
ತುಲಾ(Libra)
ವೃತ್ತಿಯ ವಿಷಯಕ್ಕೆ ಬಂದರೆ ನಿಮಗೆ ಬಹಳಷ್ಟು ಶುಭವಾಗಿದೆ ಈ ಸಮಯ. ನಿಮ್ಮ ಕೆಲಸ ವಿಸ್ತರಣೆಗೆ ಬಹಳಷ್ಟು ಅವಕಾಶಗಳು ಅರಸಿ ಬರಲಿವೆ. ಹೊಸ ಕೆಲಸ ಆರಂಭಿಸಲು ಯೋಜಿಸುತ್ತಿರುವವರಿಗೆ, ಈ ಸಮಯ ಸರಿಯಾಗಿದೆ. ಉದ್ಯಮಗಳಲ್ಲಿ ಉತ್ತಮ ಲಾಭ ಗಳಿಸುವಿರಿ. ಬಹಳಷ್ಟು ಮೂಲಗಳಿಂದ ಹಣ ದೊರೆಯಲಿದೆ. ಆಸ್ತಿಪಾಸ್ತಿ ಖರೀದಿಗೆ ಮುಂದಾಗುವಿರಿ. ನಿಮ್ಮ ಆಸ್ತಿ ಮಾರಾಟಕ್ಕಿಟ್ಟಿದ್ದರೆ ಹೆಚ್ಚಿನ ಲಾಭಕ್ಕೆ ಮಾರಾಟ ಸಾಧ್ಯವಾಗುತ್ತದೆ.
ಮಕರ(Capricorn)
ಈ ಸಮಯವು ಉದ್ಯಮಿಗಳಿಗೆ ಬಹಳ ಚೆನ್ನಾಗಿರುತ್ತದೆ. ಬಹಳ ಸಮಯದಿಂದ ಎಲ್ಲೋ ಸಿಲುಕಿಕೊಂಡ ಹಣ ಅನಾಯಾಸವಾಗಿ ಕೈ ಸೇರುತ್ತದೆ. ಮನೆಯ ಇತರ ಸದಸ್ಯರೂ ದುಡಿಮೆ ಆರಂಭಿಸಿ ಆದಾಯ ಹೆಚ್ಚಲಿದೆ. ಹೊಸ ಹೊಸ ಒಪ್ಪಂದಗಳು, ವ್ಯವಹಾರಗಳು ಕೈಗೂಡಲಿವೆ. ಉದ್ಯೋಗಿಗಳಿಗೆ ಎಣಿಸಿದ್ದಕ್ಕಿಂತ ಹೆಚ್ಚಿನ ಮೊತ್ತದಲ್ಲಿ ಸಂಬಳ ಹೆಚ್ಚಳವಾಗುತ್ತದೆ. ಬಡ್ತಿ ಅವಕಾಶಗಳೂ ಹೆಚ್ಚಿವೆ. ಸಹೋದ್ಯೋಗಿಗಳಿಂದ ಸಂಪೂರ್ಣ ಸಹಕಾರ ಸಿಗಲಿದೆ.
ವೃಷಭ(Taurus)
ಶುಕ್ರ ಗ್ರಹವನ್ನು ವೃಷಭ ರಾಶಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಈ ಶುಕ್ರ ಸಂಕ್ರಮಣದಿಂದ ನೀವು ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಬೆಳವಣಿಗೆ ಪಡೆಯಬಹುದು. ಕಚೇರಿಯಲ್ಲಿ ಬಡ್ತಿ(promotion) ಅವಕಾಶಗಳಿವೆ. ಸಂಬಳ ಹೆಚ್ಚಳವಾಗಲಿದೆ. ಈ ಸಮಯದಲ್ಲಿ, ನೀವು ಕೈಗೊಳ್ಳುವ ಕೆಲ ಸುಧಾರಣೆಗಳು ಬಹಳಷ್ಟು ಪ್ರಗತಿಗೆ ಕಾರಣವಾಗುತ್ತವೆ. ಕಚೇರಿಯಲ್ಲಿ ಜವಾಬ್ದಾರಿಗಳು(Responsibilities) ಹೆಚ್ಚಾಗಬಹುದು. ಹೊಸ ವಾಹನ ಯೋಗವಿದೆ. ಕೌಟುಂಬಿಕ ಜೀವನದಲ್ಲಿ ಪ್ರೀತಿ ಹೆಚ್ಚಲಿದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
