Asianet Suvarna News Asianet Suvarna News

ವೇಣೂರು ಬಾಹುಬಲಿ ಸ್ವಾಮಿಯ ಮಹಾ ಮಸ್ತಕಾಭಿಷೇಕ ಇಂದಿನಿಂದ ಪ್ರಾರಂಭ

ವೇಣೂರಿನ ಬಾಹುಬಲಿ ಮೂರ್ತಿಯ ಮೂರನೇ ಮಹಾ ಮಸ್ತಕಾಭಿಷೇಕ ಸಂಭ್ರಮ ಇಂದಿನಿಂದ ಆರಂಭವಾಗಿದೆ.

venur bahubali swamy mahamastakabhisheka utsav suh
Author
First Published Feb 22, 2024, 5:24 PM IST

ಬೆಳ್ತಂಗಡಿ : ವೇಣೂರಿನ ಬಾಹುಬಲಿ ಮೂರ್ತಿಯ ಮೂರನೇ ಮಹಾ ಮಸ್ತಕಾಭಿಷೇಕ ಸಂಭ್ರಮ ಇಂದಿನಿಂದ ಆರಂಭವಾಗಿದೆ.  ಯುಗಳಮುನಿ ಶ್ರೀ ಅಮೋಘ ಕೀರ್ತಿ ಮಹಾರಾಜರು ಹಾಗೂ ಪರಮಪೂಜ್ಯ 108 ಶ್ರೀ ಅಮರ ಕೀರ್ತಿ ಮಹಾರಾಜರ ಸಾನ್ನಿಧ್ಯದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಆರಂಭವಾಗಿದೆ.

 9 ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರತಿದಿನ ಸಂಜೆ  ಮಾ.1ರ ತನಕ 6.45ರ ಬಳಿಕ ವಿವಿಧ ದ್ರವ್ಯಗಳಿಂದ ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿಷೇಕ ಜರುಗಲಿದೆ.ಜಲ, ಸೀಯಾಳ, ಹಾಲು, ಇಕ್ಷುರಸ, ಕಲ್ಕರಸ, ಅರಿಶಿಣ ಹುಡಿ, ಕಷಾಯ, ಗಂಧ, ಕೇಸರಿ, ಚಂದನ, ಅಶ್ವಗಂಧ ಮೊದಲಾದ ದ್ರವ್ಯಗಳ ಅಭಿಷೇಕದ ಬಳಿಕ ಪುಷ್ಪವೃಷ್ಠಿ ನಡೆಯಲಿದೆ.

ಗುರು ಪುಷ್ಯ ಯೋಗದಿಂದ ಈ ರಾಶಿ ಆದಾಯ ಹೆಚ್ಚಳ

ಫೆ.25ರಂದು ಬೆಳಗ್ಗೆ 7 ಗಂಟೆಯಿಂದ ವಿಶೇಷ ಮಹಾ ಮಸ್ತಕಾಭಿಷೇಕ ಹಾಗೂ ಸಂಜೆ ಎಂದಿನಂತೆ ಅಭಿಷೇಕ ಇರುತ್ತದೆ. ಪ್ರಥಮ ನಾಲ್ಕು ದಿನ 108 ಕಲಶ, ಬಳಿಕ ಮೂರು ದಿನ 216 ಕಲಶ, ಎಂಟನೇ ದಿನ 504 ಕಲಶಗಳಿಂದ ಮಹಾಮಸ್ತಕಾಭಿಷೇಕ ಮಾಡಲಾಗುತ್ತದೆ. 9ನೇ ದಿನ 1,008 ಕಲಶಗಳೊಂದಿಗೆ ಸಮಿತಿ ವತಿಯಿಂದ ಮಹಾಮಸ್ತಕಾಭಿಷೇಕ ಮಾಡಲಾಗುತ್ತದೆ. ಇದರ ಜತೆ ಪ್ರತಿದಿನ ಸುಮಾರು 20 ಸಾವಿರ ಮಂದಿಗೆ ಊಟೋಪಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

12 ವರ್ಷಗಳ ಬಳಿಕ ನಡೆಯಲಿರುವ ಈ ಮಹೋತ್ಸವಕ್ಕೆ ಜನರು ಹೆಚ್ಚು ಉತ್ಸುಕರಾಗಿದ್ದಾರೆ. ಕ್ರಿ.ಶ. 1604ರಲ್ಲಿ 35 ಅಡಿ ಎತ್ತರದ ಏಕಶಿಲಾ ಬಾಹು ಬಲಿ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿದ್ದು. ಮೊದಲು ಅಜಿಲ ಅರಸರಾದ ತಿಮ್ಮಣ್ಣಾಜಿಲರು ಮೂರ್ತಿಯನ್ನು ಪ್ರತಿಷ್ಠಾಪಿಸಿ ಪ್ರಥಮ ಮಹಾ ಮಸ್ತಕಾಭಿಷೇಕ ನೆರವೇರಿಸಿದ್ದರು ನಂತರ 1928, 1956 ರಲ್ಲಿ ಮಹಾ ಮಜ್ಜನ ನೆರವೇರಿತ್ತು.21ನೇ ಶತಮಾನದಲ್ಲಿ 2000, 2012ರಲ್ಲಿ ಜರಗಿ ಈಗ ಈ ಶತಮಾನದ 3ನೇ ಮಹಾಮಸ್ತಕಾಭಿಷೇಕ ನಡೆಯುತ್ತಿದೆ.420 ವರ್ಷಗಳ ಇತಿಹಾಸದಲ್ಲಿ 6ನೇ ಮಹಾಮಜ್ಜನ ಇದಾಗಿದೆ 35 ಅಡಿ ಎತ್ತರದ ವಿಗ್ರಹಕ್ಕೆ 9 ದ್ರವ್ಯಗಳ ಮೂಲಕ ನಡೆಯುವ ವರ್ಣಮಯ ಮಹಾಮಜ್ಜನ ಎಂಬ ಹೆಸರು ಪಡೆದಿದೆ.
 

Follow Us:
Download App:
  • android
  • ios