Vastu Tips : ಧನ ಹಾನಿಗೆ ಕಾರಣವಾಗುತ್ತೆ ಮನೆಯಲ್ಲಿರುವ ಇನ್ವರ್ಟರ್

ಅಗತ್ಯವಿದೆ ಅಂತಾ ಮನೆಗೊಂದಿಷ್ಟು ವಸ್ತುಗಳನ್ನು ತಂದಿರ್ತೇವೆ. ಯಾವುದು ಎಲ್ಲಿ ಹೊಂದುತ್ತೆ ನೋಡಿ ಅದನ್ನು ಜೋಡಿಸ್ತೇವೆ. ಆದ್ರೆ ಆ ವಸ್ತುವಿಟ್ಟ ಜಾಗ ತಪ್ಪಾಗಿದ್ರೆ ಅನೇಕ ಸಮಸ್ಯೆ ಕಾಡಲು ಶುರುವಾಗುತ್ತದೆ. ಬೇರೆ ಎಲ್ಲ ವಿಷ್ಯ ನೋಡುವು ನಾವು, ಈ ಸಮಸ್ಯೆಗೆ ವಾಸ್ತು ಕಾರಣ ಎಂಬುದನ್ನು ಅರಿಯೋದೇ ಇಲ್ಲ.  
 

Vastu Tips For Inverter where to keep it

ಮನೆ (Home) ಅಂದ್ಮೇಲೆ ಒಂದಿಷ್ಟು ಎಲೆಕ್ಟ್ರಿಕ್ (Electric) ವಸ್ತುಗಳು ಇರ್ಲೇಬೇಕು. ಆದ್ರೆ ಈ ಎಲೆಕ್ಟ್ರಿಕ್ ವಸ್ತುಗಳು ಓಡೋದೇ ವಿದ್ಯುತ್(Electricity) ನಿಂದ. ಹಿಂದಿನ ಕಾಲದಲ್ಲಿ ದಿನಗಟ್ಟಲೆ ಕರೆಂಟ್ ಇಲ್ಲದೆ ಜನ ಇರ್ತಿದ್ದರು. ಆದ್ರೆ ಒಂದರ್ಥ ಗಂಟೆ ಕರೆಂಟ್ ಇಲ್ಲದೆ ಇರೋದು ನಮಗೆ ಕಷ್ಟ. ಅಡುಗೆ ಮನೆಯ ಪ್ರತಿಯೊಂದು ಕೆಲಸವೂ ಕರೆಂಟ್ ನಲ್ಲಿ ನಡೆಯುತ್ತದೆ. ಇದಲ್ಲದೆ ಇಂಟರ್ನೆಟ್, ಟಿವಿ,ಲ್ಯಾಪ್ ಟಾಪ್ ಹೀಗೆ ಅಗತ್ಯವಾದ ಪ್ರತಿಯೊಂದಕ್ಕೂ ವಿದ್ಯುತ್ ಬೇಕು. ಗಂಟೆಗಟ್ಟಲೆ ಕರೆಂಟ್ ಇಲ್ಲವೆಂದ್ರೆ ಎಲ್ಲ ಕೆಲಸಗಳು ನಿಲ್ಲೋದು ಸ್ವಾಭಾವಿಕ. ಅದನ್ನು ತಪ್ಪಿಸಲು ಇತ್ತೀಚಿನ ದಿನಗಳಲ್ಲಿ ಜನರು ಬ್ಯಾಕ್ ಅಪ್ ಮೊರೆ ಹೋಗ್ತಾರೆ. ಹಾಗಾಗಿಯೇ ಎಲ್ಲರೂ ಇನ್ವರ್ಟರ್ ಇಟ್ಟುಕೊಂಡಿರ್ತಾರೆ. ಅನಿವಾರ್ಯ ಕಾರಣಕ್ಕೆ ಇನ್ವರ್ಟರ್ ಬಳಕೆ ತಪ್ಪಲ್ಲ. ಆದ್ರೆ ಅದನ್ನು ಮನೆಯಲ್ಲಿ ಎಲ್ಲಿಡಬೇಕು ಎಂಬುದು ಮುಖ್ಯವಾಗುತ್ತದೆ. ಮನೆಯಲ್ಲಿರುವ ಪ್ರತಿಯೊಂದು ವಸ್ತುವೂ ವಾಸ್ತು ಜೊತೆ ಸಂಬಂಧ ಹೊಂದಿದೆ. ಎಲ್ಲ ವಸ್ತುಗಳನ್ನು ಎಲ್ಲೆಂದರಲ್ಲಿ ಇಡಲು ಸಾಧ್ಯವಿಲ್ಲ. ಆಯಾ ದಿಕ್ಕು, ಆಯಾ ಜಾಗದಲ್ಲಿ ಸರಿಯಾಗಿ ಇಟ್ಟರೆ ಮಾತ್ರ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಲು ಸಾಧ್ಯ. ಒಂದ್ವೇಳೆ ಮನೆಯಲ್ಲಿ ತಪ್ಪಾದ ಜಾಗದಲ್ಲಿ ನೀವು ಇನ್ವರ್ಟರ್ ಇಟ್ಟರೆ ಅದ್ರಿಂದ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಮಾನಸಿಕ, ದೈಹಿಕ ಹಾಗೂ ಆರ್ಥಿಕ ಸಮಸ್ಯೆಗಳು ನಿಮ್ಮನ್ನು ಕಾಡ್ತವೆ.  

ಹಗಲಿರುಳು ಕೆಲಸ ಮಾಡಿರ್ತೇವೆ. ಆದ್ರೆ ಆರ್ಥಿಕ ವೃದ್ಧಿ ಮಾತ್ರ ಆಗೋದೇ ಇಲ್ಲ. ಕೈಗೆ ಬಂದ ಹಣ ನಿಲ್ಲುವುದಿಲ್ಲ. ವ್ಯಾಪಾರದಲ್ಲಿ ಲಾಭ ಸಿಗುವುದಿಲ್ಲ. ಉದ್ಯೋಗದಲ್ಲಿ ಬಡ್ತಿ ಸಿಗೋದಿಲ್ಲ. ಹೀಗೆ ಕೆಲಸಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆ ಕಾಡುತ್ತದೆ. ಹಣದ ವಿಚಾರದಲ್ಲಿ ಸದಾ ಹಿನ್ನಡೆ ಅನುಭವಿಸಬೇಕಾಗುತ್ತದೆ. ಪ್ರಗತಿ ಕುಂಟಿತವಾಗಲು ಕಾರಣವೇನು ಎಂಬುದು ನಿಮ್ಮ ಅರಿವಿಗೆ ಬರೋದಿಲ್ಲ. ಈ ಸಂದರ್ಭದಲ್ಲಿ ಮನೆಯ ಯಾವ ಜಾಗದಲ್ಲಿ ಇನ್ವರ್ಟರ್ ಇಟ್ಟಿದ್ದೀರಿ ಎಂಬುದನ್ನು ನೋಡಿ. ನೀವು ಇನ್ವರ್ಟರ್ ಇಟ್ಟ ಜಾಗ ನಿಮ್ಮ ಯಶಸ್ವಿಗೆ ಅಡ್ಡಿಯಾಗ್ತಿರಬಹುದು. ಮನೆಯಲ್ಲಿ ಉತ್ತರದಿಂದ ಈಶಾನ್ಯ ದಿಕ್ಕಿನ ಮಧ್ಯದಲ್ಲಿ ಇನ್ವರ್ಟರ್ ಇಡಬಾರದು. 

ಅನೇಕ ಬಾರಿ ನಮಗೆ ಸಾಮರ್ಥ್ಯವಿದ್ದರೂ ನಾವು ಬೇರೆಯವರನ್ನು ಆಶ್ರಯಿಸಿರುತ್ತೇವೆ. ವೃತ್ತಿ ಜೀವನದಲ್ಲಿ ಬೇರೊಬ್ಬರ ಮೇಲೆ ಅವಲಂಬನೆ ಅನಿವಾರ್ಯವಾಗುತ್ತದೆ. ಅಂಥ ಸಂದರ್ಭದಲ್ಲೂ ನೀವು ಇನ್ವರ್ಟರ್ ಇಟ್ಟ ದಿಕ್ಕಿನ ಬಗ್ಗೆ ಗಮನ ಹರಿಸಿ. ಉತ್ತರ ಮತ್ತು ಈಶಾನ್ಯದ ನಡುವೆ ಇನ್ವರ್ಟರ್ ಇಡಲಾಗಿದೆಯೇ ಎಂಬುದನ್ನು ನೋಡಿ. ಒಂದ್ವೇಳೆ ಅಲ್ಲಿ ಇನ್ವರ್ಟರ್ ಇದ್ದರೆ ತಕ್ಷಣ ಅದನ್ನು ಬದಲಿಸಿ. 

ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಸಂಬಳ ಉತ್ತರದಿಂದ ಬರುತ್ತದೆ ಮತ್ತು ಈಶಾನ್ಯದಿಂದ ನಿಮ್ಮ ಸಂಪರ್ಕ ಹೆಚ್ಚಾಗುತ್ತದೆ ಹಾಗೂ ಉತ್ಪಾದನೆ ಹೆಚ್ಚಾಗುತ್ತದೆ. ಇದು ನಿಮ್ಮ ಬುದ್ಧಿವಂತಿಕೆಗೂ ಸಂಬಂಧಿಸಿದೆ. ನಾವು ಮೊದಲು ಅರ್ಥ ಮಾಡಿಕೊಳ್ಳಬೇಕಾದ ವಿಷ್ಯವೆಂದ್ರೆ ನಾವು ಎಂದೂ ಬೇರೆಯವರನ್ನು ಅವಲಂಭಿಸಿರಬಾರದು.  ಇನ್ನೊಬ್ಬರ ಸಲಹೆ ಮೇಲೆ ಕೆಲಸ ಮಾಡ್ತಿದ್ದರೆ, ಇನ್ನೊಬ್ಬರ ಬುದ್ಧಿವಂತಿಕೆ ಬಳಸುತ್ತಿದ್ದರೆ ಅದು ಶಾಶ್ವತವಲ್ಲ. ನಿಮ್ಮ ಕಾಲ್ಮೇಲೆ ನೀವು ನಿಲ್ಲಬೇಕೆಂದ್ರೆ  ಉತ್ತರದಿಂದ ಈಶಾನ್ಯದ ಪ್ರದೇಶವು ಅತ್ಯಂತ ಮಹತ್ವದ್ದಾಗಿದೆ. ಉತ್ತರವು ಕುಬೇರನ ದಿಕ್ಕಾಗಿದೆ. ಕುಬೇರ ಅಂದರೆ ದೇವತೆಗಳ ಭಂಡಾರ.

ಈ ZODIAC SIGN ಅವರು ಮದುವೆ ಬಳಿಕ ಸಂಗಾತಿಗೆ ಮೋಸ ಮಾಡಬಹುದು!

ಇನ್ವರ್ಟರ್ ಮುಖ್ಯವಾಗಿ ಬ್ಯಾಟರಿಯನ್ನು ಒಳಗೊಂಡಿರುತ್ತದೆ. ಚಾರ್ಜ್ ಮಾಡುವಾಗ, ಆಸಿಡ್ ಅಲ್ಲಿ ಕುದಿಯುತ್ತಲೇ ಇರುತ್ತದೆ ಮತ್ತು ಮಾರಣಾಂತಿಕ ಹೊಗೆಗಳು ಬೀಸುತ್ತಲೇ ಇರುತ್ತವೆ. ಇದು ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿದ್ದಾಗ  ಮಾರಕ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ಸೈದ್ಧಾಂತಿಕ ಪರಿಕಲ್ಪನೆಗಳನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ. ಇದು ನಿಮ್ಮ ವೃತ್ತಿ ಮತ್ತು ಆರೋಗ್ಯ ಮತ್ತು ಮನೋವಿಜ್ಞಾನದ ಮೇಲೆ ಪರಿಣಾಮ ಬೀರುತ್ತದೆ. ಮದುವೆಯಾಗಿ ಹಲವು ವರ್ಷಗಳಾದರೂ ಮಗುವನ್ನು ಪಡೆಯದಿದ್ದರೆ ಅಥವಾ ಮಗುವಿಗೆ ಸಂಬಂಧಿಸಿದ ಯಾವುದೇ ಒತ್ತಡವಿದ್ದರೆ ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ ಇನ್ವರ್ಟರ್  ಇಡಬೇಡಿ.

ಮಗುವಿನ ಜನ್ಮರಾಶಿಗೆ ತಕ್ಕ ಹೆಸರು ಆರಿಸುವುದು ಹೀಗೆ?

ಇನ್ವರ್ಟರ್ ಎಲ್ಲಿ ಇಡಬೇಕು ? : ಇನ್ವರ್ಟರ್‌ಗಳನ್ನು ಉತ್ತರದಿಂದ ಪಶ್ಚಿಮ ದಿಕ್ಕಿನ ಮಧ್ಯೆ ಇಡಬೇಕು. ಇಲ್ಲವೆ ಪಶ್ಚಿಮದಿಂದ ವಾಯುವ್ಯಕ್ಕೆ ಇರಿಸಬಹುದು. ಏಕೆಂದರೆ ಇದು ಸಹಕಾರದ ಕ್ಷೇತ್ರವಾಗಿದೆ. ಬೇರೆ ಯಾವುದೇ ಸಮಸ್ಯೆ ಇಲ್ಲವೆಂದಾದ್ರೆ ನೀವು ಇನ್ವರ್ಟರನ್ನು ಪಶ್ಚಿಮ ದಿಕ್ಕಿನಲ್ಲೂ ಇಡಬಹುದು. ಉತ್ತರ ದಿಕ್ಕಿನಲ್ಲಿ ಇಡುವುದು ಅನಿವಾರ್ಯ ಎನ್ನುವವರು, ಇನ್ವರ್ಟರ್ ಅನ್ನು ಟ್ರಾಲಿ ಬಾಕ್ಸ್ ನಲ್ಲಿ ಇಡಬೇಕು. ಇದರ ಬಣ್ಣ ಕೆನೆ ಅಥವಾ ಹಸಿರಾಗಿರಬೇಕು. ಅದು ಕೆಂಪು ಬಣ್ಣದ್ದಾಗಿರಬಾರದು. ಟ್ರಾಲಿಯು ಚಕ್ರಗಳನ್ನು ಹೊಂದಿರಬೇಕು. 
 

Latest Videos
Follow Us:
Download App:
  • android
  • ios