ವರಮಹಾಲಕ್ಷ್ಮಿ ಪೂಜಿಸುವ ಹೂವು, ಹಣ್ಣಿನ ಮೇಲೆ ವಕ್ರದೃಷ್ಟಿ ಬೀರಿದಳೇ ಧನಲಕ್ಷ್ಮಿ: ಗಗನಕ್ಕೇರಿದ ಬೆಲೆಗಳು

ಬೆಂಗಳೂರಿನಲ್ಲಿ ಹೂವು, ಹಣ್ಣು ಹಾಗೂ ಇತರೆ ಪೂಜಾ ಸಾಮಗ್ರಿಗಳ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಉಂಟಾಗಿದೆ. ಇನ್ನು ವರಮಹಾಲಕ್ಷ್ಮಿ ಪೂಜೆಗೆ ಧನಲಕ್ಷ್ಮಿ ಕೃಪಾಕಟಾಕ್ಷವೂ ಹೆಚ್ಚು ಬೇಕಾಗುತ್ತದೆ. 

Varamahalakshmi worshiped flower and fruit prices hiked in Bengaluru Markets sat

ಬೆಂಗಳೂರು (ಆ.24): ದೇಶಾದ್ಯಂತ ವರಲಮಹಾಲಕ್ಷ್ಮೀ ಪೂಜೆಯನ್ನು ವಿಜೃಂಭಣೆಯಿಂದ ಶುಕ್ರವಾರ ಆಚರಣೆ ಮಾಡಲಾಗುತ್ತದೆ. ಆದರೆ, ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಹೂವು, ಹಣ್ಣು ಹಾಗೂ ಇತರೆ ಪೂಜಾ ಸಾಮಗ್ರಿಗಳ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಉಂಟಾಗಿದೆ. ಇನ್ನು ವರಮಹಾಲಕ್ಷ್ಮಿ ಪೂಜೆಗೆ ಧನಲಕ್ಷ್ಮಿ ಕೃಪಾಕಟಾಕ್ಷವೂ ಹೆಚ್ಚು ಬೇಕಾಗುತ್ತದೆ. 

ವರಮಹಾಲಕ್ಷ್ಮೀ ಹಬ್ಬಕ್ಕೆ ಸಿಲಿಕಾನ್ ಸಿಟಿ ಜನರ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆ.ಆರ್. ಮಾರುಕಟ್ಟೆ, ಬಸವನಗುಡಿ, ಮಲ್ಲೇಶ್ವರ, ಯಶವಂತಪುರ, ಕಲಾಸಿಪಾಳ್ಯ ಸೇರಿ ವಿವಿಧ ಮಾರುಕಟ್ಟೆಗಳಲ್ಲಿ ಜನರ ಖರೀದಿ ಭರಾಟೆಯೂ ಹೆಚ್ಚಾಗಿದೆ. ಆದರೆ, ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬೆನ್ನಲ್ಲೇ ಜೇಬು ಸುಟ್ಟುಕೊಂಡಿರುವ ಜನಸಾಮಾನ್ಯರಿಗೆ ವರಮಹಾಲಕ್ಷ್ಮೀ ಹಬ್ಬದ ವೇಳೆ ಎಲ್ಲ ಪೂಜಾ ಸಾಮಗ್ರಿಗಳ ದರವೂ ಕೂಡ ಹೆಚ್ಚಳವಾಗಿದ್ದು, ಜನಸಾಮಾನ್ಯರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವುದಂತೂ ಖಚಿತವಾಗಿದೆ.

ವರಮಹಾಲಕ್ಷ್ಮೀ ಹಬ್ಬಕ್ಕೆ ಸ್ತ್ರೀಯರಿಗೆ ದೇಗುಲಗಳಲ್ಲಿ ಹಳದಿ-ಕುಂಕುಮ: ಧಾರ್ಮಿಕ ದತ್ತಿ ಇಲಾಖೆ ಸೂಚನೆ

ಬೆಂಗಳೂರಿನ ಕೆ.ಆರ್.ಮಾರ್ಕೆಟ್ ನಲ್ಲಿ ಹಬ್ಬದ ಸಾಮಗ್ರಿಗಳ ಖರೀದಿ ಜೋರಿದೆ. ಹಬ್ಬದ ಹಿನ್ನೆಲೆಯಲ್ಲಿ ಹಣ್ಣು, ಹೂವಿನ ದರ ಗಗನಕ್ಕೇರಿದೆ. ಹಬ್ಬದ ಸಂಭ್ರಮದಲ್ಲಿದ್ದವರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ ತಟ್ಟಿದೆ. ಹಬ್ಬಕ್ಕೆ ಬಜೆಟ್ ನೋಡಿಕೊಂಡು ಖರೀದಿಗೆ ಮುಂದಾದ ಜನ. ಆದರೂ, ದುಬಾರಿ ಮಧ್ಯೆಯೂ ಖರೀದಿ ಭರಾಟೆಗೆ ಮಾತ್ರ ಹೆಚ್ಚಿನ ಹೊಡೆತ ಬಿದ್ದಿಲ್ಲ. ನಾಳಿನ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿ ಜೋರಾಗಿದ್ದು, ಹೂವು ಹಣ್ಣುಗಳ ದರ ಮಾಹಿತಿ ಇಲ್ಲಿದೆ ನೋಡಿ. ಈ ದರದ ಬಜೆಟ್‌ಗೆ ಹೊಂದಿಕೊಂಡು ನೀವು ಕೂಡ ಖರೀದಿ ಮಾಡಿ. 

ಬೆಂಗಳೂರು ಮಾರುಕಟ್ಟೆಯಲ್ಲಿರುವ ಹೂವಿನ ದರ
ಮಲ್ಲಿಗೆ ಕೆ.ಜಿ.ಗೆ 600 ರಿಂದ 800 ರೂ
ಕನಕಾಂಬರ- ಕೆ.ಜಿ.ಗೆ 1,200 ರಿಂದ 1,500
ಗುಲಾಬಿ-150 ರಿಂದ 200 ರೂ.
ಚಿಕ್ಕ ಹೂವಿನ ಹಾರ-150ರಿಂದ 200 ರೂ.
ದೊಡ್ಡ ಹೂವಿನ ಹಾರ-300 ರಿಂದ 500 ರೂ.
ಮರಳೆ ಹೂವು- 600-700
ಸೇವಂತಿಗೆ-250 ರಿಂದ 300 ರೂ.
ತಾವರೆ ಹೂ-ಜೋಡಿ-50 ರಿಂದ 100 ರೂ.

Chandrayaan-3 Mission: ಲ್ಯಾಂಡರ್‌ನಿಂದ ಯಶಸ್ವಿಯಾಗಿ ಕೆಳಗಿಳಿದ ರೋವರ್‌, ಚಂದ್ರನ ಮೇಲೆ ನಡೆದಾಡಿದ ಭಾರತ

  • ಹಬ್ಬಕ್ಕೆ ಗಗನಕ್ಕೇರಿದ ಹಣ್ಣುಗಳು (ಪ್ರತಿ ಕೆ.ಜಿ. ಹಣ್ಣುಗಳಿಗೆ)
  • ಏಲಕ್ಕಿ ಬಾಳೆ-120 ರಿಂದ 140 ರೂ.
  • ಸೀಬೆ-120 ರೂ.
  • ಸೇಬು-200-300 ರೂ.
  • ಕಿತ್ತಲೆ-150 ರಿಂದ 200 ರೂ.
  • ದ್ರಾಕ್ಷಿ-180-200 ರೂ.
  • ಪೈನಾಪಲ್-80ರೂ.ಗೆ 1 ಹಣ್ಣು
  • ದಾಳಿಂಬೆ-150-200 ರೂ.

ಇತರೆ ವಸ್ತುಗಳ ಬೆಲೆ
ಬಾಳೆ ಕಂಬ -ಜೋಡಿಗೆ-50 ರೂ.
ಮಾವಿನ ತೋರಣ-20 ರೂ.
ವಿಳ್ಯದೆಲೆ-100 ಕ್ಕೆ 150 ರೂ.
ತೆಂಗಿನಕಾಯಿ-5ಕ್ಕೆ 100 ರೂ.

Latest Videos
Follow Us:
Download App:
  • android
  • ios