ತವರಿಗೆ ಕರ್ಕೊಂಡೋಗಿಲ್ಲ ಅಂತ ಹೆಂಡ್ತಿ ಸಿಟ್ಟಾಗಿದ್ದಾಳೆ; ಹೋಳಿ ಹಬ್ಬಕ್ಕೆ 10 ದಿನ ರಜೆ ಕೇಳಿದ ಪೊಲೀಸಪ್ಪ..!
ಉತ್ತರ ಪ್ರದೇಶದ ಫರೂಕಾಬಾದ್‌ನ ಇನ್ಸ್‌ಪೆಕ್ಟರ್ ಒಬ್ಬರು ಜಿಲ್ಲಾ ಎಸ್ಪಿ ಅಶೋಕ್ ಮೀನಾ ಅವರಿಗೆ ಈ ಪತ್ರ ಬರೆದಿದ್ದು, ಮಾಹಿತಿಯ ಪ್ರಕಾರ ರಜೆಗಾಗಿ ಅರ್ಜಿ ಸ್ವೀಕರಿಸಿದ ಅವರು ಈ ಪತ್ರ ಓದಿ ನಗೆಗಡಲಲ್ಲಿ ತೇಲಿದರು ಎಂದು ತಿಳಿದುಬಂದಿದೆ.
ಫರೂಕಾಬಾದ್ (ಮಾರ್ಚ್ 4, 2023): ಇನ್ನೇನು ಹೋಳಿ ಹಬ್ಬ ಬಂತು, ದೇಶದಲ್ಲಿ, ಅದ್ರಲ್ಲೂ ಪ್ರಮುಖವಾಗಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಸಂಭ್ರಮ ಹೆಚ್ಚಾಗಿರುತ್ತದೆ. ಇನ್ನು, ಹೋಳಿ ಹಬ್ಬದ ಸಂದರ್ಭದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಪೊಲೀಸ್ ಇಲಾಖೆಯ ಹೆಗಲ ಮೇಲಿದೆ. ಅದರಲ್ಲೂ ಈ ಸಮಯದಲ್ಲಿ ಶಬ್-ಎ-ಬರಾತ್ ಸಹ ಇರುವುದರಿಂದ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಪೊಲೀಸ್ ಇಲಾಖೆಯ ಹೆಗಲ ಮೇಲಿದೆ. ಅದರಲ್ಲೂ ಶಬ್-ಎ-ಬರಾತ್ ನಿಂದಾಗಿ ಈ ಬಾರಿ ಆಡಳಿತ ಸಜ್ಜಾಗಿದೆ. ಇದಕ್ಕಾಗಿ ಬಹುತೇಕ ಪೊಲೀಸರ ರಜೆ ರದ್ದಾಗಿದೆ. ಆದರೆ ಉತ್ತರಪ್ರದೇಶದ ಫರೂಕಾಬಾದ್‌ನಲ್ಲಿ ಇನ್ಸ್‌ಪೆಕ್ಟರ್ ಒಬ್ಬರು ಇಂತಹ ಸಮಸ್ಯೆಯನ್ನು ಮುಂದಿಟ್ಟುಕೊಂಡು ರಜೆ ಕೇಳಿದ್ದಾರೆ. ಈ ರಜೆಯ ಅರ್ಜಿ ವೈರಲ್ ಆಗಿದ್ದು, ಇದನ್ನು ನೋಡಿ ಎಸ್‌ಪಿ ಸಹ ನಕ್ಕಿದ್ದಾರಂತೆ.
ಉತ್ತರ ಪ್ರದೇಶದ (Uttar Pradesh) ಫರೂಕಾಬಾದ್‌ನ (Farrukhabad) ಪೊಲೀಸ್ ಇನ್ಸ್‌ಪೆಕ್ಟರ್ (Police Inspector) ಒಬ್ಬರು ರಜೆಗಾಗಿ (Holiday) ಅರ್ಜಿ ಸಲ್ಲಿಸಲು ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆದಿದ್ದು, ಈ ಲೀವ್ ಲೆಟರ್ (Leave Letter) ಅಥವಾ ರಜಾ ಅರ್ಜಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಪತ್ರದಲ್ಲಿ, ಇನ್ಸ್‌ಪೆಕ್ಟರ್ ಒಬ್ಬರು ಮದುವೆಯಾಗಿ 22 ವರ್ಷಗಳಾದರೂ ಹೋಳಿ (Holi) ಸಂದರ್ಭದಲ್ಲಿ ತನ್ನ ಹೆಂಡತಿ ತವರು ಮನೆಗೆ ಹೋಗಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಆಕೆ ತನ್ನ ತಾಯಿಯ ಮನೆಗೆ ಹೋಗಬೇಕು ಹಾಗೂ ತಾನು ಕರೆದುಕೊಂಡು ಹೋಗಬೇಕೆಂದು ಒತ್ತಾಯಿಸುತ್ತಿದ್ದಾಳೆ. ಆದ್ದರಿಂದ, ಈ ಸಮಸ್ಯೆಯನ್ನು ಸಹಾನುಭೂತಿಯಿಂದ ಪರಿಗಣಿಸಿ, ದಯವಿಟ್ಟು ಇಂದಿನಿಂದ (ಮಾರ್ಚ್ 4 ರಿಂದ) 10 ದಿನಗಳ ಕಾಲ ರಜೆ ನೀಡಿ ಎಂದು ಹೇಳಲಾಗಿದೆ.
ಇದನ್ನು ಓದಿ: Bank Holidays:ಮಾರ್ಚ್ ತಿಂಗಳಲ್ಲಿ 12 ದಿನ ಬ್ಯಾಂಕ್ ರಜೆ; ಇಲ್ಲಿದೆ ನೋಡಿ ಆರ್ ಬಿಐ ರಜಾಪಟ್ಟಿ
ಪತ್ರದಲ್ಲಿ ಬರೆದಿರೋದು ಏನು..?
ಪತ್ರದಲ್ಲಿ ಬರೆದಿರುವುದು ಹೀಗೆ.. 'ಮದುವೆಯಾಗಿ 22 ವರ್ಷಗಳಲ್ಲಿ, ಅರ್ಜಿದಾರರ ಪತ್ನಿ ಹೋಳಿ ಸಂದರ್ಭದಲ್ಲಿ ತನ್ನ ತಾಯಿಯ ಮನೆಗೆ ಹೋಗಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅರ್ಜಿದಾರರ ಮೇಲೆ ತೀವ್ರ ಕೋಪಗೊಂಡಿರುವ ಆಕೆ, ಹೋಳಿ ಹಬ್ಬದಂದು ತನ್ನ ತಾಯಿಯ ಮನೆಗೆ ಹೋಗಿ ಕರೆದುಕೊಂಡು ಹೋಗುವಂತೆ ಒತ್ತಾಯಿಸುತ್ತಿದ್ದಾಳೆ. ಈ ಕಾರಣಕ್ಕಾಗಿ, ಅರ್ಜಿದಾರರಿಗೆ ರಜೆಯ ಅವಶ್ಯಕತೆಯಿದೆ. ಸರ್, ಅರ್ಜಿದಾರರ ಸಮಸ್ಯೆಯನ್ನು ಸಹಾನುಭೂತಿಯಿಂದ ಪರಿಗಣಿಸಿ, ದಯವಿಟ್ಟು ಮಾರ್ಚ್ 4 ರಿಂದ 10 ದಿನಗಳ ರಜೆಯನ್ನು ಅರ್ಜಿದಾರರಿಗೆ ನೀಡಬೇಕೆಂದು ವಿನಮ್ರ ವಿನಂತಿ.'
ಉತ್ತರ ಪ್ರದೇಶದ ಫರೂಕಾಬಾದ್‌ನ ಇನ್ಸ್‌ಪೆಕ್ಟರ್ ಒಬ್ಬರು ಜಿಲ್ಲಾ ಎಸ್ಪಿ ಅಶೋಕ್ ಮೀನಾ ಅವರಿಗೆ ಈ ಪತ್ರ ಬರೆದಿದ್ದು, ಮಾಹಿತಿಯ ಪ್ರಕಾರ ರಜೆಗಾಗಿ ಅರ್ಜಿ ಸ್ವೀಕರಿಸಿದ ಅವರು ಈ ಪತ್ರ ಓದಿ ನಗೆಗಡಲಲ್ಲಿ ತೇಲಿದರು ಎಂದು ತಿಳಿದುಬಂದಿದೆ. ಅಲ್ಲದೆ, ಅವರು ಅನುಕಂಪದ ಮೇರೆಗೆ ರಜೆಯನ್ನೂ ನೀಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Holi 2023: ಹಬ್ಬದಲ್ಲಿ ಈ ಬಣ್ಣಗಳನ್ನು ನೀವು ಬಳಸಲೇಬೇಕು, ಏಕೆ ಗೊತ್ತಾ?
ಆದರೆ, ಹೋಳಿ ಹಬ್ಬಕ್ಕೆ 10 ದಿನ ರಜೆ ನೀಡಬೇಕೆಂದು ಅವರು ಕೇಳಿದ್ದು, ಆದರೆ 5 ದಿನ ಮಾತ್ರ ರಜೆ ಮಂಜೂರು ಮಾಡಲಾಗಿದೆ. ರಜೆಗಾಗಿ . ಈ ವಿಶಿಷ್ಟ ಅಪ್ಲಿಕೇಶನ್ ಪೊಲೀಸ್ ಇಲಾಖೆಯಲ್ಲಿ ಚರ್ಚೆಯಾಗಿದೆ. ಪೊಲೀಸ್ ಇಲಾಖೆ ಮಾತ್ರ ಅಲ್ಲ, ಈ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ಸಹ ವೈರಲ್ ಆಗಿದೆ.
ಇದನ್ನೂ ಓದಿ: Holi 2023: ಹೊಸದಾಗಿ ಮದುವೆಯಾಗಿದೀರಾ? ಹೋಳಿ ಸಮಯದಲ್ಲಿ ಅತ್ತೆ ಮನೆಯಲ್ಲಿರೋ ತಪ್ಪು ಮಾಡ್ಬೇಡಿ!