Asianet Suvarna News Asianet Suvarna News

ಒಂದು ಸಂಬಂಧ ಮುಂದುವರಿಸೋದು ಬೇಡವೆಂದು ಕಾಸ್ಮಿಕ್‌ ಶಕ್ತಿಯೂ ಹೇಳುತ್ತೆ

ನೀವು ಯಾರೊಂದಿಗಾದರೂ ಇರುವ ಸಮಯದಲ್ಲಿ ಪದೇ ಪದೆ ಕೆಲವು ಸನ್ನಿವೇಶಗಳು ಜರುಗುತ್ತಿದ್ದರೆ, ಕೆಲವು ರೀತಿಯ ಘಟನೆಗಳು ಪುನರಾವರ್ತಿತವಾಗುತ್ತಿದ್ದರೆ, ನಿಮ್ಮ ಅಂತಃಪ್ರಜ್ಞೆ ಬೇರೆ ಏನನ್ನೋ ಹೇಳಲು ಯತ್ನಿಸುತ್ತಿದ್ದರೆ ಕಡೆಗಣಿಸಬೇಡಿ. ಏಕೆಂದರೆ, ಬ್ರಹ್ಮಾಂಡವು ನಮಗೆ ಈ ಮಾರ್ಗಗಳ ಮೂಲಕ ನಮ್ಮ ಭವಿಷ್ಯವನ್ನು ಹೇಳಲು ಯತ್ನಿಸುತ್ತಿರಬಹುದು.

Universe wants to say something about your relationship through cosmi energy sum
Author
First Published Dec 15, 2023, 6:07 PM IST

ಮದುವೆ ಮಂಟಪದಿಂದ ಎದ್ದು ಹೋಗುವ ಮದುಮಗಳನ್ನು ಕಂಡು ಎಲ್ಲರೂ “ಇಷ್ಟು ದಿನ ಸುಮ್ಮನಿದ್ದು ಇವಳಿಗೇನಾಗಿದೆ?ʼ ಎಂದು ಬೈದುಕೊಳ್ಳುತ್ತಾರೆ. ಬೇರೊಂದಿಗೆ ಪ್ರೀತಿ-ಪ್ರೇಮದ ಪ್ರಕರಣಗಳಿಲ್ಲವಾದರೂ, ಕೇವಲ ಮನಸ್ಸಿನ ಮಾತನ್ನು ನಂಬಿಕೊಂಡು ಮದುವೆಯನ್ನು ನಿರಾಕರಿಸಿ ಎದ್ದುನಡೆದ ಮಹಿಳೆಯರು ಸಾಕಷ್ಟಿದ್ದಾರೆ. ಇವರಿಗೆಲ್ಲ ದಾರಿ ತೋರಿದ್ದು ಯಾವ ಶಕ್ತಿ ಎನಿಸುತ್ತದೆ. ನೀವು ಗಮನಿಸಿರಬಹುದು. ಯಾರೊಂದಿಗಾದರೂ ಇರುವ ಸಮಯದಲ್ಲಿ ಕೆಲವು ಶಕುನಗಳು ಸಂಭವಿಸುತ್ತವೆ. ಇವುಗಳನ್ನು ನಂಬದಿರುವವರು ಮೂಢನಂಬಿಕೆ ಎನ್ನಬಹುದು. ಆದರೆ, ಇವು ಮೂಢನಂಬಿಕೆಗಳಲ್ಲ. ಬ್ರಹ್ಮಾಂಡದ ಅದ್ಯಾವುದೋ ಶಕ್ತಿ ನಮಗೆ ವಿವಿಧ ರೂಪದಲ್ಲಿ ಸಂದೇಶ ನೀಡುತ್ತಿರುತ್ತದೆ. ಅದನ್ನು ಗುರುತಿಸುವ ಸಾಮರ್ಥ್ಯ ಬೆಳೆಸಿಕೊಂಡರೆ, ಅದೆಷ್ಟೋ ಅಪಾಯಗಳಿಂದ ಬಚಾವಾಗಲು ಸಾಧ್ಯವಾಗುತ್ತದೆ. ನೀವು ಯಾರೊಂದಿಗಾದರೂ ಇರುವ ಸಮಯದಲ್ಲಿ ನಿಮ್ಮೊಂದಿಗೆ ಅದ್ಯಾವುದೋ ಶಕ್ತಿ ಇದೆಯೆಂದು ಅನಿಸುತ್ತದೆಯೇ? ಅದು ನಿಮಗೆ ಮುಖ್ಯವಾಗಿದ್ದೇನೋ ಹೇಳಲು ತೊಡಗಿದೆ ಎನಿಸುತ್ತದೆಯೇ? ಹಾಗಿದ್ದರೆ ಎಚ್ಚೆತ್ತುಕೊಳ್ಳಿ. ನಿಮ್ಮ ಸುತ್ತ ಘಟಿಸುವ ಘಟನೆಗಳ ಬಗ್ಗೆ ಸೂಕ್ಷ್ಮರಾಗಿರಿ. 
ಎಲ್ಲ ಸಂಬಂಧಗಳು (Relationship) ಸಂಕೀರ್ಣವಾಗಿರುತ್ತವೆ. ಅದರಲ್ಲೂ ಜೀವನ ಸಂಗಾತಿಯ (Life Partner) ಆಯ್ಕೆ ಸಮಯದಲ್ಲಿ ಬಹಳ ಎಚ್ಚರಿಕೆ ಅಗತ್ಯ. ಯಾರನ್ನೋ ಪ್ರೀತಿಸುತ್ತಿದ್ದೀರಿ, ಅವರನ್ನು ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳುವ ನಿರ್ಧಾರ ಮಾಡಿರುತ್ತೀರಿ ಎಂದುಕೊಳ್ಳಿ. ಆದರೆ, ಅದರಿಂದ ಭವಿಷ್ಯದಲ್ಲಿ (Future) ಜೀವನಕ್ಕೆ ಹಾನಿಯಾಗಬಹುದು, ನಿಮಗೆ ಗೊತ್ತಿರುವುದಿಲ್ಲ. ಆದರೆ, ಬ್ರಹ್ಮಾಂಡದ (Universe) ಶಕ್ತಿ ಈ ಕುರಿತು ಎಚ್ಚರಿಕೆ ನೀಡುತ್ತದೆ. ಇಂತಹ ಸಮಯದಲ್ಲಿ ನಿಮ್ಮ ಜೀವನದಲ್ಲಿ ಕೆಲವು ಅನುಭವಗಳಾಗುತ್ತಿದ್ದರೆ ಅವುಗಳನ್ನು ಕಡೆಗಣಿಸಬೇಡಿ. ಅವು ನಿಮ್ಮ ಸಂಬಂಧವನ್ನು ಮರುಪರಿಶೀಲಿಸುವ ಸಮಯ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ.

2024 ಈ 3 ರಾಶಿಗೆ ಕಂಟಕ.. ಬದುಕು ಕತ್ತಲು ..ಎಚ್ಚರ

•    ಪದೇ ಪದೆ ಅಡೆತಡೆ 
ಸಂಬಂಧ ಚೆನ್ನಾಗಿರಲು ಹೊಂದಾಣಿಕೆ (Compatibility), ಸಹಭಾಗಿತ್ವ ಮುಖ್ಯ. ಆದರೆ, ಹೊಂದಾಣಿಕೆಯಾಗಲು ಸಾಧ್ಯವಿಲ್ಲದಂತೆ ಪದೇ ಪದೆ ಹಲವು ರೀತಿಯ ಅಡೆತಡೆಗಳು ಎದುರಾಗುತ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ನಿಮ್ಮ ನಡುವೆ ಇರಿಸುಮುರಿಸಿನ ಘಟನೆಗಳು ಹೆಚ್ಚಬಹುದು, ಆಗಾಗ ತಪ್ಪು ಸಂವಹನ (Wrong Communications) ಸಂಭವಿಸಬಹುದು, ಕಾರಣವೇ ಇಲ್ಲದೆ ಸಂಘರ್ಷಗಳಾಗಬಹುದು. ಇಂಥದ್ದು ನಿರಂತರವಾಗಿ ನಡೆಯುತ್ತಿದ್ದರೆ ಖಂಡಿತವಾಗಿ ಕಾಸ್ಮಿಕ್‌ (Cosmic) ಪ್ರಭಾವ ಇರುತ್ತದೆ. ಮದುವೆಯಾದ ಬಳಿಕ ಇಂಥವೆಲ್ಲ ಸರಿಹೋಗುತ್ತವೆ ಎಂದು ಕಡೆಗಣಿಸಬೇಡಿ. ನಿಮ್ಮ ಭವಿಷ್ಯವೂ ಅಡೆತಡೆಯಿಂದ ಕೂಡಿದೆ ಎನ್ನುವುದನ್ನು ಅದು ಹೇಳುತ್ತಿರುತ್ತದೆ. ಹಲವು ರೀತಿಯ ಎನರ್ಜಿಗಳ (Energy) ಮೂಲಕ ಬ್ರಹ್ಮಾಂಡವು ನಮ್ಮನ್ನು ಸಂಪರ್ಕಿಸುತ್ತದೆ. ನಿಮ್ಮ ಮಾರ್ಗ ಸರಿಯಾಗಿಲ್ಲ ಎನ್ನುವುದನ್ನು ಅವು ನಮಗೆ ತಿಳಿಸಬಹುದು.

•    ಆಗಾಗ ಸಮಸ್ಯೆ (Problems)
ಸಂಬಂಧಗಳಲ್ಲಿ ಎಂದಾದರೂ ಒಮ್ಮೆ ಸಮಸ್ಯೆ ಸಂಭವಿಸುವುದು ಸಹಜ. ಆದರೆ, ಮೇಲೆ ಹೇಳಿದ ಘಟನೆಗಳು, ಬೇರೆಯ ವಿಚಾರಕ್ಕೆ ಆಸ್ಪದವೇ ಇಲ್ಲದಂತೆ ಹೆಚ್ಚುವ ಕಿರಿಕಿರಿಗಳು, ಅವೇ ನಿಗದಿತ ನಮೂನೆಯ (Patterns) ಸನ್ನಿವೇಶಗಳು ಹೆಚ್ಚುತ್ತಿದ್ದರೆ ಎಚ್ಚೆತ್ತುಕೊಳ್ಳಿ. ಅವು ಖಂಡಿತವಾಗಿ ಆಕಸ್ಮಿಕವಾಗಿ ನಡೆಯುತ್ತಿರುವ ಘಟನೆಗಳಲ್ಲ. ಬ್ರಹ್ಮಾಂಡವು ನಮಗೆ ಏನನ್ನೂ ಸೂಚಿಸುತ್ತಿರುವ ವಿಧಾನಗಳು ಅವಾಗಿರುತ್ತವೆ. ಆ ಜನರೊಂದಿಗೆ ನಿಮ್ಮ ಜೀವನದ ಪಯಣ ಸುಖಕರವಾಗಿರಲು ಸಾಧ್ಯವಿಲ್ಲ ಎನ್ನುವುದನ್ನು ಅವು ಹೇಳುತ್ತಿರುತ್ತವೆ. ನಿಮ್ಮ ಮಧ್ಯೆ ಹೆಚ್ಚುವ ಈಗೋ, ಪ್ರತಿಷ್ಠೆ, ಹಿನ್ನಡೆ ಎಲ್ಲವೂ ಕಾಸ್ಮಿಕ್‌ ಶಕ್ತಿಯ ಪ್ರಭಾವವೇ ಆಗಿವೆ. ಸರಿಪಡಿಸಿಕೊಳ್ಳಲು ಸಾಧ್ಯ ಎನಿಸಿದರೆ ಇಬ್ಬರೂ ಸೇರಿ ಯತ್ನಿಸಿ. ಸಾಧ್ಯವಾಗುತ್ತಿಲ್ಲವೆನಿಸಿದರೆ ಖಂಡಿತವಾಗಿ ನಿಮ್ಮ ಸಂಬಂಧವನ್ನು ಪುನರ್‌ ಪರಿಶೀಲನೆ ಮಾಡಿ.

2024ರ ವೈವಾಹಿಕ ಜೀವನ, ಲವ್ ಲೈಫ್: ಈ ರಾಶಿಯವರು ಲೈಂಗಿಕ ಯೋಚನೆಗಳಿಂದ ದೂರ ಇರಬಾರದು!

•     ಅಂತಃಪ್ರಜ್ಞೆ (Intuition) ಹಾಗೂ ಕರುಳಿನ ಭಾವನೆ
ನೀವು ಯಾರನ್ನಾದರೂ ಪ್ರೀತಿಸುತ್ತಿರುವಿರಿ ಎನ್ನುವ ಸಮಯದಲ್ಲಿ ನಿಮ್ಮ ಅಂತಃಪ್ರಜ್ಞೆಯನ್ನು ಪ್ರಾಮಾಣಿಕವಾಗಿ ಪ್ರಶ್ನೆ ಮಾಡಿಕೊಳ್ಳಿ. ಕರುಳಿನ ಭಾವನೆಗೆ (Gut Feelings) ಬೆಲೆ ನೀಡಿ. ಏಕೆಂದರೆ, ಅವು ಅತ್ಯಂತ ಪ್ರಾಮಾಣಿಕವಾಗಿರುತ್ತವೆ, ನಿಮ್ಮ ಭವಿಷ್ಯವನ್ನು ಸೂಚಿಸುತ್ತವೆ. ನಮ್ಮದೇ ಅಂತಃಪ್ರಜ್ಞೆಯ ಮೂಲಕವೂ ಬ್ರಹ್ಮಾಂಡ ನಮ್ಮನ್ನು ಸಂಪರ್ಕಿಸುತ್ತದೆ. ಅಂತರಾಳದ ಭಾವನೆಯನ್ನು ಎಂದಿಗೂ ಕಡೆಗಣಿಸಬಾರದು. ಅವು ಕಾಸ್ಮಿಕ್‌ ಶಕ್ತಿಯೊಂದಿಗೆ ಸೌಹಾರ್ದ ಸಂಬಂಧ ಹೊಂದಿರುತ್ತವೆ. 

Follow Us:
Download App:
  • android
  • ios