ನಿದ್ರೆ ಕಣ್ಣಲ್ಲಿ ನಡೆದುಕೊಂಡು ಹೋಗಿ ಕೊರಗಜ್ಜನ ಮುಂದೆ ನಿಂತ ಬಾಲಕಿ: ಮುಂದಾಗಿದ್ದೇ ರೋಚಕ
ಉಡುಪಿ ಜಿಲ್ಲೆಯಲ್ಲಿ ಬಾಲಕಿಯೊಬ್ಬಳು ತಾನು ನಿದ್ದೆಗಣ್ಣಿನಲ್ಲಿ ಎದ್ದು, ಮನೆಯ ಬಾಗಿಲು ತೆಗೆದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗಿ ಕೊರಗಜ್ಜನ ಮುಂದೆ ನಿಂತಿದ್ದಾಳೆ.
ಉಡುಪಿ (ಜು.20): ಮಕ್ಕಳಲ್ಲಿ ಹೆಚ್ಚಾಗಿ ರಾತ್ರಿ ನಿದ್ದೆಯಲ್ಲಿ ಮಾತನಾಡುವ ಅಭ್ಯಾಸ ಇರುತ್ತದೆ. ಇನ್ನು ಕೆಲವರಿಗೆ ನಿದ್ದೆಯಲ್ಲಿ ನಡೆದುಕೊಂಡು ಹೋಗುವ ಅಭ್ಯಾಸವೂ ಇರುತ್ತದೆ. ಆದರೆ, ಇಲ್ಲೊಬ್ಬ ಬಾಲಕಿ ತಾನು ನಿದ್ದೆಗಣ್ಣಿನಲ್ಲಿ ಎದ್ದು, ಮನೆಯ ಬಾಗಿಲು ತೆಗೆದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗಿ ಕೊರಗಜ್ಜನ ನಾಮಫಲಕದ ಮುಂದೆ ನಿಂತಿದ್ದಾಳೆ.
ಮಕ್ಕಳು ಮಾತ್ರವಲ್ಲ, ಹಲವರಿಗೆ ನಿದ್ದೆಗಣ್ಣಿನಲ್ಲಿ ನಡೆದುಕೊಂಡು ಹೋಗುವ ಅಭ್ಯಾಸ ಇರುತ್ತದೆ. ಇದೇ ರೀತಿ ಗಾಢ ನಿದ್ದೆಯಲ್ಲಿರುವುದರಿಂದ ಅವರಿಗೆ ಅದರ ಪರಿವೇ ಇಲ್ಲದಂತೆ ನಡೆದುಕೊಂಡು ಹೋಗುತ್ತಾರೆ. ಇಂತಹಾ ಮಕ್ಕಳ ಬಗ್ಗೆ ಪೋಷಕರಿಗೆ ಯಾವತ್ತೂ ಆತಂಕ ಇರುತ್ತದೆ. ಇದೀಗ ಆರು ವರ್ಷದ ಬಾಲಕಿಯೊಬ್ಬಳು ನಿದ್ದೆ ಮಂಪರಿನಲ್ಲಿ ಎದ್ದು ಮನೆಯಿಂದ ಕೆಲವು ಮೀಟರ್ ದೂರ ಹೋದ ಘಟನೆ ಕುಂದಾಪುರ ಬಳಿ ನಡೆದಿದೆ. ರಾತ್ರಿ ಮನೆಯಲ್ಲಿ ಮಲಗಿದ್ದ ಬಾಲಕಿ, ನಿದ್ದೆ ಮಂಪರಿನಲ್ಲೇ ನಡೆದು ಸುಮಾರು ದೂರ ಸಂಚರಿದ್ದಾಳೆ. ನಡುರಾತ್ರಿಯಲ್ಲಿ ಮುಖ್ಯ ರಸ್ತೆಗೆ ಬಂದು, ಇನ್ನೇನು ರಸ್ತೆ ದಾಟಬೇಕು ಅನ್ನುವಷ್ಟರಲ್ಲಿ ಅಲ್ಲೇ ಇದ್ದ ಕೊರಗಜ್ಜನ ನಾಮಫಲಕದ ಮುಂದೆ ಬಂದು ನಿಂತಿದ್ದಾಳೆ.
ಬರದ ನಾಡು ಯಾದಗಿರಿಯಲ್ಲಿ ಭರ್ಜರಿ ಮಳೆ: ಶಾಲೆಗಳಿಗೆ ರಜೆ ಘೋಷಣೆ
ದಬ್ಬೆಕಟ್ಟೆ-ತೆಕ್ಕಟ್ಟೆ ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕಿ: ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಚಾರುಕೊಟ್ಟಿಗೆ ಸಮೀಪ ದಬ್ಬೆಕಟ್ಟೆ-ತೆಕ್ಕಟ್ಟೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು ವಿಶ್ವನಾಥ್ ಎಂಬುವವರು ನೋಡಿದ್ದಾರೆ. ತಡರಾತ್ರಿ ಹೀಗೆ ಮೈಮೇಲೆ ಯಾವುದೇ ಬಟ್ಟೆ ಧರಿಸದೆ ನಡೆದುಕೊಂಡು ಬಂದ ಬಾಲಕಿಯನ್ನು ಗಮನಿಸಿದ ಅವರು ಕೂಡಲೇ ಆಕೆಯನ್ನು ಸುರಕ್ಷಿತವಾಗಿ ಕರೆತಂದು ಪರಿಸರದ ಮಹಿಳೆಯರ ಮೂಲಕ ವಿಚಾರಣೆ ನಡೆಸಿದ್ದಾರೆ. ಬಾರ್ ಒಂದರಲ್ಲಿ ಕೆಲಸ ಮಾಡುವ ವಿಶ್ವನಾಥ್ ಪೂಜಾರಿ ತಡರಾತ್ರಿ 2 ಗಂಟೆ ಸುಮಾರಿಗೆ ಅಂದಿನ ಲೆಕ್ಕಾಚಾರವನ್ನು ಪೂರೈಸಿಕೊಂಡು ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ದಬ್ಬೆಕಟ್ಟೆ-ತೆಕ್ಕಟ್ಟೆ ರಸ್ತೆಯಲ್ಲಿರುವ ಸ್ವಾಮಿ ಕೊರಗಜ್ಜನ ನಾಮಫಲಕದ ಕೆಳಗೆ ಬಾಲಕಿಯೊಬ್ಬಳು ನಿಂತಿರುವುದನ್ನು ನೋಡಿದ್ದಾರೆ. ಬಳಿಕ ಬಾಲಕಿ ಬಳಿ ತೆರಳಿ ವಿಚಾರಿಸಿದ್ದಾರೆ. ನಂತರ ಆಕೆಯನ್ನು ಮನೆಗೆ ತಲುಪಿಸಿ ನೆರವಾಗಿದ್ದಾರೆ.
ಗೃಹ ಲಕ್ಷ್ಮಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್: ಮೊದಲ ದಿನ 60 ಸಾವಿರ ಮಹಿಳೆಯರ ನೋಂದಣಿ
ಬಾಲಕಿಯನ್ನು ರಕ್ಷಣೆ ಮಾಡಿದ ಬಾರ್ ಸಿಬ್ಬಂದಿ: ಬಾಲಕಿ ಮನೆಗೆ ಬರುತ್ತಿದ್ದಂತೆ, ಮನೆಯವರು ಶಾಕ್ ಆಗಿದ್ದಾರೆ. ಯಾಕೆಂದರೆ ನಿದ್ದೆಗಣ್ಣಿನಲ್ಲಿ ಆಕೆ ಹೊರಹೋಗಿರುವ ವಿಚಾರವೇ ಮನೆಯವರಿಗೆ ತಿಳಿದಿರಲಿಲ್ಲ. ತಮ್ಮ ಮಗು ನಿದ್ರೆ ಕಣ್ಣಿನಲ್ಲಿ ಓಡಾಡುವ ಬಗ್ಗೆ ಮಾಹಿತಿ ಇದ್ದ ಪೋಷಕರು ಈ ಬಗ್ಗೆ ವಿಶೇಷ ಎಚ್ಚರ ವಹಿಸಿದ್ದರು. ಆದರೂ ಈ ರಾತ್ರಿ ಕಣ್ ತಪ್ಪಿಸಿ ಹೋದ ಮಗುವಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನು, ಬಾಲಕಿ ಕೊರಗಜ್ಜ ದೈವಸ್ಥಾನದ ನಾಮಫಲಕದ ಬಳಿ ಸುರಕ್ಷಿತವಾಗಿದ್ದಿದ್ದಕ್ಕೆ ಇದು ದೈವದ ಪವಾಡವೇ ಹೌದು ಅಂತಾ ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ. ಕೊರಗಜ್ಜನ ಮಹಿಮೆಯಿಂದ ಬಾಲಕಿ ಸುರಕ್ಷಿತವಾಗಿ ಮನೆಗೆ ಮರಳುವಂತಾಯಿತು ಎಂಬುದು ಜನರು ನಂಬಿಕೆಯಾಗಿದೆ.
ಈ ರೀತಿ ಮಕ್ಕಳು ನಿದ್ರೆಯಲ್ಲಿ ಎದ್ದೇಳುವುದು ನಡೆಯುವುದು ಸಾಮಾನ್ಯ. ಸೂಕ್ತ ತಜ್ಞರ ಮೂಲಕ ಚಿಕಿತ್ಸೆ ನೀಡುವುದು ಅಗತ್ಯವಾಗಿದೆ