Asianet Suvarna News Asianet Suvarna News

Surya Grahan: ಗ್ರಹಣದ ಸಂದರ್ಭದಲ್ಲಿ ತುಳಸಿ ಆರೈಕೆ ಹೀಗಿರಲಿ

ಗ್ರಹಣದ ವೇಳೆ ವಿಶೇಷ ಕಾಳಜಿವಹಿಸಬೇಕಾಗುತ್ತದೆ. ಗ್ರಹಣದ ಸಂದರ್ಭದಲ್ಲಿ ಊಟ ನಿಷಿದ್ಧ. ಗ್ರಹಣದ ಸಮಯದಲ್ಲಿ ನಿದ್ರೆ ಕೂಡ ಮಾಡುವ ಹಾಗಿಲ್ಲ.  ಹಾಗೆಯೇ ಪ್ರಕೃತಿಯ ಕೆಲ ಗಿಡ, ವಸ್ತುಗಳನ್ನು ಕೂಡ ಸುರಕ್ಷಿತವಾಗಿಡಬೇಕು. 
 

Tulsi Plant Care On Surya Grahan
Author
First Published Oct 22, 2022, 7:59 PM IST | Last Updated Oct 22, 2022, 8:00 PM IST

ಅಕ್ಟೋಬರ್ 25, ಕಾರ್ತಿಕ ಅಮವಾಸ್ಯೆಯಂದು ಸೂರ್ಯ ಗ್ರಹಣ ಸಂಭವಿಸಲಿದೆ. ಇದು ಈ ವರ್ಷದ ಕೊನೆಯ ಸೂರ್ಯಗ್ರಹಣವಾಗಿದೆ. ಈ ಬಾರಿ ಸಂಭವಿಸುವ ಸೂರ್ಯ ಗ್ರಹಣ ಭಾರತದಲ್ಲಿಯೂ ಗೋಚರಿಸಲಿದೆ. ಹಾಗಾಗಿ ಭಾರತದಲ್ಲಿ ಸೂತಕ ಕೂಡ ಅನ್ವಯವಾಗಲಿದೆ. ವರ್ಷದ ಕೊನೆಯ ಸೂರ್ಯಗ್ರಹಣ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಕೆಲ ರಾಶಿಯವರಿಗೆ ಶುಭ ಹಾಗೂ ಕೆಲ ರಾಶಿಯವರಿಗೆ ಅಶುಭ ಫಲವನ್ನು ನೀಡಲಿದೆ. 

ಗ್ರಹಣ (Eclipse) ದ ವೇಳೆ ಕೆಲ ನಿಯಮಗಳನ್ನು ಪಾಲನೆ ಮಾಡಲಾಗುತ್ತದೆ. ಗ್ರಹಣದ ಸಂದರ್ಭದಲ್ಲಿ ದೇವಸ್ಥಾನ (Temple) ಗಳ ಬಾಗಿಲು ಹಾಕಲಾಗುತ್ತದೆ. ಗ್ರಹಣ ಕಾಲದಲ್ಲಿ ಹಾಗೂ ಸೂತಕದ ಸಮಯದಲ್ಲಿ ಯಾವುದೇ ಆಹಾರ ಸೇವನೆ ಮಾಡುವಂತಿಲ್ಲ. ಗ್ರಹಣದ ವೇಳೆ ದೇವರನ್ನು ಬಟ್ಟೆಯಿಂದ ಮುಚ್ಚಲಾಗುತ್ತದೆ. ಆಹಾರಗಳಿಗೆ ತುಳಸಿ ಎಲೆಗಳನ್ನು ಹಾಕಲಾಗುತ್ತದೆ. ಹಾಗೆಯೇ ಗ್ರಹಣ ಶುರುವಾಗುವ ಸಮಯದಲ್ಲಿ ಹಾಗೂ ಗ್ರಹಣ ಮುಗಿದ ಮೇಲೆ ಸ್ನಾನ ಮಾಡಿ ಜನರು ಶುದ್ಧವಾಗುತ್ತಾರೆ. ಗ್ರಹಣ ಕೆಲ ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಕಾರಣ, ಈ ವೇಳೆ ದಾನಕ್ಕೆ ಕೆಲ ವಸ್ತುಗಳನ್ನು ತೆಗೆದಿಡಬೇಕೆಂಬ ನಂಬಿಕೆಯೂ ಇದೆ. ಗ್ರಹಣದ ಕಾಲದಲ್ಲಿ ತುಳಸಿ (Tulsi) ಗಿಡದ ಆರೈಕೆ ಕೂಡ ಮಹತ್ವಪಡೆಯುತ್ತದೆ. ಇಂದು ನಾವು ಗ್ರಹಣದ ವೇಳೆ ತುಳಸಿ ಗಿಡವನ್ನು ಹೇಗೆ ನೋಡಿಕೊಳ್ಳಬೇಕು ಎನ್ನುವ ಬಗ್ಗೆ ಹೇಳ್ತೆವೆ.

ಕೆಮ್ಮಣ್ಣು ಬಳಕೆ ಮಾಡಿ : ಹಿಂದೂ ಧರ್ಮದಲ್ಲಿ ಕೆಮ್ಮಣ್ಣಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಧಾರ್ಮಿಕ ಕಥೆಯ ಪ್ರಕಾರ, ಕಾರ್ತೀಕೇಯ ಹಾಗೂ ಗಣೇಶನಿಗೆ ಸ್ಪರ್ಧೆ ನಡೆದಿತ್ತು. ಕಾರ್ತೀಕೇಯ ಜಗತ್ತು ಸುತ್ತಲು ಹೋಗಿದ್ದ. ಆದ್ರೆ ಗಣೇಶ, ಪಾರ್ವತಿ, ಈಶ್ವರರ ಪ್ರದಕ್ಷಣೆ ಹಾಕಿ ಸ್ಪರ್ಧೆಯಲ್ಲಿ ಗೆದ್ದ.  ಇದನ್ನು ತಿಳಿದ ಕಾರ್ತಿಕೇಯ ಕೋಪಗೊಂಡು ಕೌಂಚ ಪರ್ವತದ ಕಡೆಗೆ ಹೋದ. ತಾಯಿ ಪಾರ್ವತಿ ಅವನ ಮನವೊಲಿಸಲು ಹೋದಳು. ಇದಕ್ಕೆ ಕಾರ್ತಿಕೇಯ ಒಪ್ಪಲಿಲ್ಲ. ಆಗ ತಾಯಿ ಪಾರ್ವತಿ ಕೋಪಗೊಂಡು ನಾನು ಕೊಟ್ಟದ್ದನ್ನು ನೀನು ಹಿಂದಿರುಗಿಸು ಎಂದಳು. ಪ್ರತಿಯೊಬ್ಬ ವ್ಯಕ್ತಿಗೂ ತಂದೆ ಬೀಜವನ್ನು ಹಾಗೂ ತಾಯಿ ರಕ್ತವನ್ನೂ ನೀಡುತ್ತಾಳೆ ಎಂದನು. ಜೊತೆಗೆ ನನ್ನ ರಕ್ತವನ್ನೆಲ್ಲ ನಿನಗೆ ಮರಳಿ ಕೊಡುತ್ತೇನೆ ಎಂದನು. ಅದರಂತೆ ಕಾರ್ತಿಕೇಯನ ದೇಹದ ರಕ್ತವು ಭೂಮಿಯ ಮೇಲೆ ಬಿದ್ದಾಗ ಕೆಮ್ಮಣ್ಣು ರೂಪುಗೊಂಡಿತು ಎನ್ನಲಾಗಿದೆ. ಅದಕ್ಕಾಗಿಯೇ ಕೆಮ್ಮಣ್ಣನ್ನು ತುಂಬಾ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಗ್ರಹಣದ ದಿನ ತುಳಸಿ ಗಿಡವಿರುವ ಕುಂಡದ ಮೇಲೆ ಕೆಮ್ಮಣ್ಣನ್ನು ಹಚ್ಚಿದ್ರೆ ಗ್ರಹಣದ ಪ್ರಭಾವಕ್ಕೆ ಒಳಗಾಗಿ ತುಳಸಿ ಗಿಡ ಹಾಳಾಗುವುದಿಲ್ಲ ಎನ್ನಲಾಗುತ್ತದೆ.

ಈ 5 ರಾಶಿಯವರಿಗೆ ಶನಿ ಮಾರ್ಗಿಯಿಂದ ಆರ್ಥಿಕ ಆಘಾತ, ಎಚ್ಚರದಿಂದಿರಿ!

ಗ್ರಹಣದ ಸಮಯದಲ್ಲಿ ಹೀಗೆ ಮಾಡಿದ್ರೆ ಒಣಗಲ್ಲ ತುಳಸಿ : ತುಳಸಿಗೆ ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನವಿದೆ. ಗ್ರಹಣದಿಂದ ತುಳಸಿ ಕಲುಷಿತಗೊಳ್ಳುವುದಿಲ್ಲ. ಆದ್ರೆ ಸೂರ್ಯನ ಕಿರಣಗಳು ತುಳಸಿ ಗಿಡದ ಮೇಲೆ ಬಿದ್ದಾಗ ಗಿಡ ಒಣಗುವ ಸಾಧ್ಯತೆಯಿರುತ್ತದೆ. ಹಾಗಾಗಿ ನೀವು ತುಳಸಿ ಗಿಡದ ಮೇಲೆ ಹತ್ತಿ ಬಟ್ಟೆಯನ್ನು ಹಾಕಿದ್ರೆ ಒಳ್ಳೆಯದು.

ಗ್ರಹಣದ ನಂತ್ರ ಈ ಕೆಲಸ ಮಾಡಲು ಮರೆಯಬೇಡಿ : ಗ್ರಹಣ ಮುಗಿದ ಮೇಲೆ ಸ್ನಾನ ಮಾಡಿ, ತುಳಸಿ ಗಿಡದ ಬಳಿ ತುಪ್ಪದ ದೀಪವನ್ನು ಹಚ್ಚಬೇಕು. ನೀವು ಗ್ರಹಣದ ಸಂದರ್ಭದಲ್ಲಿ ತುಳಸಿ ಗಿಡದ ಬಳಿ ಒಂದು ಪಾತ್ರೆಯಲ್ಲಿ ನೀರನ್ನಿಡಬೇಕು. ಗ್ರಹಣ ಮುಗಿದ ಮೇಲೆ ಆ ನೀರನ್ನು ಚರಂಡಿಗೆ ಹಾಕಬೇಕು. ಗ್ರಹಣ ಬೆಳಿಗ್ಗೆ ಮುಗಿದಿದ್ದರೆ ನೀವು ತುಳಸಿ ಗಿಡಕ್ಕೆ ನೀರನ್ನು ಹಾಕಬಹುದು. 

Diwali 2022 : ಈ ದಿನ ರಾತ್ರಿ ಗೂಬೆ ಕಂಡ್ರೆ ನಿಮ್ಮ ಲಕ್ ಬದಲಾಗುತ್ತೆ!

ಈ ವಿಷ್ಯಕ್ಕೆ ಮಹತ್ವ ನೀಡಿ : ಸೂತಕಕ್ಕೆ ಮೊದಲೇ ನೀವು ತುಳಸಿ ಎಲೆಯನ್ನು ಕತ್ತರಿಸಿಡಬೇಕು. ಸೂತಕದ ಸಮಯದಲ್ಲಿ ತುಳಸಿ ಸ್ಪರ್ಶ ಮಾಡಬಾರದು. ಗ್ರಹಣದ ಸಮಯದಲ್ಲಿ ತುಳಸಿಯನ್ನು ನೀವು ನೆರಳಿನ ಜಾಗದಲ್ಲಿ ಇಡಬಹುದು. ತುಳಸಿಗೆ ಗಂಗಾಜಲ ಹಾಕಬಹುದು. ಗ್ರಹಣದ ಸಮಯದಲ್ಲಿ ತುಳಸಿ ಎಲೆಗಳನ್ನು ಸೇವನೆ ಮಾಡಬಾರದು.

Latest Videos
Follow Us:
Download App:
  • android
  • ios