Asianet Suvarna News Asianet Suvarna News

Feet Touching Rules: ಈ ಜನರ ಪಾದ ಮುಟ್ಟುವುದು ಮಹಾಪಾಪ!

ನಮ್ಮ ಸಂಪ್ರದಾಯದಲ್ಲಿ ಹಿರಿಯರ, ಗೌರವಾನ್ವಿತರ ಹಾಗೂ ಪ್ರತಿಭೆಯುಳ್ಳವರ ಪಾದ ಸ್ಪರ್ಶಿಸಿ ಅವರ ಆಶೀರ್ವಾದ ಪಡೆಯುವ ಅಭ್ಯಾಸವಿದೆ. ಆದರೆ, ಕೆಲವರ ಪಾದ ಸ್ಪರ್ಶಿಸುವುದನ್ನು ಮಾತ್ರ ಮಹಾ ಪಾಪ ಎಂದು ಪರಿಗಣಿಸಲಾಗುತ್ತದೆ. ಯಾರ ಪಾದ ಮುಟ್ಟಬಾರದು?

Touching the feet of these people is considered a sin in the scriptures skr
Author
First Published Jun 25, 2023, 9:38 AM IST | Last Updated Jun 25, 2023, 9:38 AM IST

ಪಾದಗಳನ್ನು ಸ್ಪರ್ಶಿಸುವ ಸಂಪ್ರದಾಯವನ್ನು ಗೌರವವನ್ನು ವ್ಯಕ್ತಪಡಿಸುವ ದೃಷ್ಟಿಯಿಂದ ನೋಡಲಾಗುತ್ತದೆ. ಹಿಂದೂ ಧರ್ಮದಲ್ಲಿ ಪಾದಗಳನ್ನು ಸ್ಪರ್ಶಿಸಲು ವಿಶೇಷ ನಿಯಮಗಳಿವೆ. ಇದರ ಪ್ರಕಾರ ಕೆಲವರ ಪಾದಗಳನ್ನು ಸ್ಪರ್ಶಿಸುವುದನ್ನು ಪಾಪವೆಂದು ಪರಿಗಣಿಸಲಾಗುತ್ತದೆ.

ಹಿಂದೂ ಧರ್ಮದಲ್ಲಿ ಪಾದಗಳನ್ನು ಸ್ಪರ್ಶಿಸುವ ಸಂಪ್ರದಾಯವು ಬಹಳ ಹಳೆಯದು. ಇದು ಇತರರಿಗೆ ಗೌರವವನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿದೆ. ಭಕ್ತಿ ಮತ್ತು ಸಮರ್ಪಣಾ ಭಾವದಿಂದ ಜನರು ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಾರೆ. ಪಾದಗಳನ್ನು ಸ್ಪರ್ಶಿಸುವ ಮೂಲಕ, ಜನರು ದೇವರು ಮತ್ತು ದೇವತೆಗಳು, ಸಂತರು, ಮಹಾತ್ಮರು, ಗುರುಗಳು ಮತ್ತು ಹಿರಿಯರ ಕಡೆಗೆ ತಮ್ಮ ಗೌರವವನ್ನು ವ್ಯಕ್ತಪಡಿಸುತ್ತಾರೆ.

ಭಾರತೀಯ ಧರ್ಮ, ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ, ಸಂತರು ಮತ್ತು ಹಿರಿಯರ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ಬೇಡುವುದು ಶತಮಾನಗಳಿಂದ ನಡೆದುಕೊಂಡು ಬಂದಿದೆ. ಆದಾಗ್ಯೂ, ಪುರಾಣಗಳಲ್ಲಿ ಪಾದಗಳನ್ನು ಸ್ಪರ್ಶಿಸಲು ಕೆಲವು ವಿಶೇಷ ನಿಯಮಗಳನ್ನು ಸಹ ನೀಡಲಾಗಿದೆ. ಅದರಲ್ಲಿ ಕೆಲವು ಜನರ ಪಾದಗಳನ್ನು ಸ್ಪರ್ಶಿಸುವುದನ್ನು ಒಪ್ಪುವುದಿಲ್ಲ. ಯಾರಾದರೂ ನಿಮ್ಮ ಪಾದಗಳನ್ನು ಸ್ಪರ್ಶಿಸುತ್ತಿದ್ದರೆ ಅಥವಾ ನೀವು ಯಾರೊಬ್ಬರ ಪಾದಗಳನ್ನು ಮುಟ್ಟುತ್ತಿದ್ದರೆ, ಖಂಡಿತವಾಗಿಯೂ ಈ ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಧರ್ಮಗ್ರಂಥಗಳಲ್ಲಿ ಈ ಜನರ ಪಾದಗಳನ್ನು ಸ್ಪರ್ಶಿಸುವುದು ಪಾಪವೆಂದು ಪರಿಗಣಿಸಲಾಗಿದೆ. ಅವರು ಯಾರೆಲ್ಲ ನೋಡೋಣ. 

Weekly Love Horoscope: ಈ ರಾಶಿಯು ಅಹಂಕಾರ ಬದಿಗಿಟ್ಟರೆ ಸಂಗಾತಿಗೆ ಹತ್ತಿರಾಗಬಹುದು..

ಕನ್ಯೆಯರು
ಶಾಸ್ತ್ರಗಳ ಪ್ರಕಾರ, ಯಾವುದೇ ವ್ಯಕ್ತಿ ಅವಿವಾಹಿತ ಹುಡುಗಿಯರ ಪಾದಗಳನ್ನು ಮುಟ್ಟಬಾರದು. ಕನ್ಯೆಯ ಪಾದಗಳನ್ನು ಮುಟ್ಟಬಾರದು. ಅದರ ಬದಲಿಗೆ, ಬಹಳ ಚಿಕ್ಕ ಹುಡುಗಿಯರನ್ನು ಬಾಲಿಕಾ ಮುತ್ತೈದೆಯರು ಎಂದು ಪರಿಗಣಿಸಲಾಗುತ್ತದೆ. ಸಣ್ಣ ಹುಡುಗಿಯರ ಪಾದಗಳನ್ನು ಸ್ಪರ್ಶಿಸಿದರೆ ತೊಂದರೆ ಇಲ್ಲ.
 
ಸೊಸೆ, ಮಗಳು
ಯಾವ ತಂದೆಯೂ ತನ್ನ ಹೆಣ್ಣುಮಕ್ಕಳ ಪಾದಗಳನ್ನು ಮುಟ್ಟಬಾರದು. ಜೊತೆಗೆ, ಅತ್ತೆ ಮತ್ತು ಮಾವ ತಮ್ಮ ಸೊಸೆಯ ಪಾದಗಳನ್ನು ಮುಟ್ಟಬಾರದು. 
 
ದೇವಸ್ಥಾನದಲ್ಲಿ ಹಿರಿಯರ ಪಾದಗಳು
ನೀವು ದೇವಸ್ಥಾನದಲ್ಲಿ ಹಿರಿಯ ಅಥವಾ ಗೌರವಾನ್ವಿತ ವ್ಯಕ್ತಿಯನ್ನು ಭೇಟಿಯಾದರೆ, ಅಲ್ಲಿ ಅವರ ಪಾದಗಳನ್ನು ಮುಟ್ಟಬೇಡಿ. ಶಾಸ್ತ್ರಗಳ ಪ್ರಕಾರ, ದೇವಸ್ಥಾನದಲ್ಲಿ ದೇವರಿಗಿಂತ ದೊಡ್ಡವರು ಯಾರೂ ಇಲ್ಲ ಮತ್ತು ದೇವರ ಮುಂದೆ ಇನ್ನೊಬ್ಬರ ಪಾದಗಳನ್ನು ಸ್ಪರ್ಶಿಸುವುದು ದೇವಸ್ಥಾನ ಮತ್ತು ದೇವರಿಗೆ ಅವಮಾನವೆಂದು ಪರಿಗಣಿಸಲಾಗಿದೆ. ದೇವಸ್ಥಾನದಲ್ಲಿ ಅಥವಾ ಮನೆಯಲ್ಲಿ ಪೂಜೆ ಮಾಡುವ ವ್ಯಕ್ತಿಯ ಪಾದಗಳನ್ನು ಸ್ಪರ್ಶಿಸುವುದು ಸೂಕ್ತವಲ್ಲ. 

ರಾಜರಂತೆ ಬದುಕುವ ಸ್ವಭಾವ ತುಲಾ ರಾಶಿಯದು; ಇವರ ಲವ್ ಲೈಫ್ ಹೇಗಿರುತ್ತೆ?

ಮಲಗಿರುವ ವ್ಯಕ್ತಿಯ ಪಾದಗಳನ್ನು ಸ್ಪರ್ಶಿಸಕೂಡದು
ಒಬ್ಬ ವ್ಯಕ್ತಿಯು ಮಲಗಿದ್ದರೆ ಆ ಸಮಯದಲ್ಲಿ ಅವರ ಪಾದಗಳನ್ನು ಮುಟ್ಟಬಾರದು. ಸತ್ತ ವ್ಯಕ್ತಿಯ ಪಾದಗಳನ್ನು ಮಾತ್ರ ಮಲಗಿದ್ದಾಗ ಸ್ಪರ್ಶಿಸಲಾಗುತ್ತದೆ. ಯಾರಾದರೂ ಮಲಗಿದ್ದರೆ ಅವರನ್ನು ಕೂರಲು ಹೇಳಿಯೇ ಆಶೀರ್ವಾದ ಪಡೆಯಬೇಕು.
 
ಸ್ಮಶಾನದಿಂದ ಹಿಂತಿರುಗಿದ ವ್ಯಕ್ತಿ
ಸ್ಮಶಾನದಿಂದ ಹಿಂತಿರುಗುವ ಜನರ ಪಾದಗಳನ್ನು ಮುಟ್ಟಬಾರದು. ಅಂತ್ಯಕ್ರಿಯೆಯಿಂದ ಹಿಂದಿರುಗಿದ ನಂತರ, ವ್ಯಕ್ತಿಯು ಅಶುದ್ಧನಾಗಿರುತ್ತಾನೆ. ಆದ್ದರಿಂದ ಅವನ ಪಾದಗಳನ್ನು ಸ್ಪರ್ಶಿಸುವುದನ್ನು ನಿಷೇಧಿಸಲಾಗಿದೆ. ಸ್ನಾನದ ನಂತರ ಅವನು ಶುದ್ಧವಾದಾಗ ನೀವು ಅವನ ಪಾದಗಳನ್ನು ಸ್ಪರ್ಶಿಸಬಹುದು.

ಸೋದರಳಿಯ
ಸೋದರಳಿಯ ಎಂದಿಗೂ ತಾಯಿಯ ಕಡೆಯ ಮಾವ ಅತ್ತೆಯ ಕಾಲಿಗೆ ನಮಸ್ಕರಿಸಬಾರದು ಎಂಬ ಪದ್ಧತಿ, ನಂಬಿಕೆ ಕೆಲವೆಡೆ ಇದೆ. 

ಧ್ಯಾನ ಮಾಡುತ್ತಿರುವವರು
ಯಾರಾದರೂ ವ್ಯಕ್ತಿ, ಎಷ್ಟೇ ಹಿರಿಯರಾಗಿರಲಿ, ಅವರು ಧ್ಯಾನ ಮಾಡುತ್ತಿದ್ದರೆ, ದೇವರ ಜಪ ಮಾಡುತ್ತಿದ್ದರೆ ಅಥವಾ ತಪಸ್ಸಿನಲ್ಲಿ ನಿರತರಾಗಿದ್ದರೆ, ಅವರ ಪಾದಗಳನ್ನು ಸ್ಪರ್ಶಿಸಬಾರದು. ಇದು ಅವರ ಧ್ಯಾನಕ್ಕೆ ಭಂಗ ತರುತ್ತದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios