Asianet Suvarna News Asianet Suvarna News

ಈ ಎರಡು ರಾಶಿಗಳಿಗೆ ಗುರುಬಲ ನೀಡಿ ಮದುವೆ ಮಾಡಿಸುವ ಹಳದಿ ನೀಲಮಣಿ

ನೀವು ನೀಲಮಣಿ ಧರಿಸಲು ಸಾಧ್ಯವಾಗದಿದ್ದರೆ, ಬದಲಿಗೆ ಅದರ ಉಪರತ್ನ ಹಳದಿ ನೀಲಮಣಿ ಧರಿಸಬಹುದು. ಈ ರತ್ನವೂ ನೀಲಮಣಿಯಂತೆ ಪರಿಣಾಮಕಾರಿಯಾಗಿದೆ. ಎರಡು ರಾಶಿಗಳಿಗಂತೂ ವರವೇ ಆಗಿದೆ. 

Topaz gemstone is considered a boon for 2 zodiac signs it shines luck skr
Author
Bangalore, First Published Jul 16, 2022, 10:02 AM IST | Last Updated Jul 16, 2022, 10:03 AM IST

ಎಷ್ಟು ಸಮಯದಿಂದ ಹುಡುಕುತ್ತಿದ್ದರೂ ವಿವಾಹಾಕಾಂಕ್ಷಿಗೆ ಸಂಬಂಧ ಸಿಗುತ್ತಿಲ್ಲವೇ? ಅಥವಾ ವೈವಾಹಿಕ ಜೀವನದ ಹಲವಾರು ಸಮಸ್ಯೆಗಳು ಕಂಗೆಡಿಸುತ್ತಿವೆಯೇ? ಮಕ್ಕಳಾಗುವಲ್ಲಿ ಸಮಸ್ಯೆ ಎದುರಿಸುತ್ತಿದ್ದೀರಾ? ಉದ್ಯೋಗ, ವ್ಯಾಪಾರದಲ್ಲಿ ಪ್ರಗತಿಯೇ ಕಾಣಿಸದೆ ಕಂಗಾಲಾಗಿದ್ದೀರಾ? ನಿಮ್ಮ ಪ್ರತಿಭೆಗೆ ಎಲ್ಲೂ ಮನ್ನಣೆ, ಅವಕಾಶ ಸಿಗುತ್ತಿಲ್ಲವೇ? ಹಾಗಿದ್ದರೆ, ನಿಮಗೆ ಗುರುಬಲ ಇಲ್ಲದಿರುವುದೇ ಪ್ರಮುಖ ಕಾರಣವಾಗಿರಬಹುದು. ಗುರು ಬಲ ಇಲ್ಲದೆ ಕೆಲ ವಿಷಯಗಳಿಗೆ ಎಷ್ಟೇ ಪ್ರಯತ್ನಿಸಿದರೂ ಅಷ್ಟೇ.. ಪ್ರಗತಿ ಸಾಧ್ಯವಿಲ್ಲ. ಹಾಗಂಥ ಗುರುಬಲವಿಲ್ಲ ಎಂದು ಕಂಗೆಟ್ಟು ಕೂರಬೇಡಿ.. ನೀವು ಈ ಎರಡು ರಾಶಿಗೆ ಸೇರಿದವರಾಗಿದ್ದರೆ ಗುರು ಗ್ರಹಕ್ಕೆ ಸಂಬಂಧಿಸಿದ ಹಳದಿ ನೀಲಮಣಿಯ ಧಾರಣೆ ನಿಮ್ಮ ಸಮಸ್ಯೆಗಳನ್ನು ಪರಿಹರಿಸಬಹುದು. 

ಹೌದು, ಜ್ಯೋತಿಷ್ಯದಲ್ಲಿ ರತ್ನಗಳಿಗೆ ಬಹಳ ಮಹತ್ವವಿದೆ. ಪ್ರತಿ ರತ್ನವೂ ಒಂದಿಲ್ಲೊಂದು ಗ್ರಹಕ್ಕೆ ಸಂಬಂಧಿಸಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ರತ್ನವು ವ್ಯಕ್ತಿಗೆ ಸರಿ ಹೊಂದಿದರೆ, ಅದು ಆತನ ಅದೃಷ್ಟವನ್ನೇ ಬದಲಾಯಿಸುತ್ತದೆ. ಈಗ ಹಳದಿ ನೀಲಮಣಿ ಅಥವಾ ಟೋಪಜ್ ರತ್ನ(Topaz gemstone)ದ ಬಗ್ಗೆ ತಿಳಿಯೋಣ. ಈ ಚಿನ್ನದ ಬಣ್ಣದ ರತ್ನವನ್ನು ಜಾತಕದಲ್ಲಿ ಅತ್ಯಂತ ಮಂಗಳಕರ ಗ್ರಹವಾದ ಗುರುವಿನ ಬಲಕ್ಕಾಗಿ ಧರಿಸಲಾಗುತ್ತದೆ. ಇವು ನಿಸರ್ಗದತ್ತವಾಗಿ ದೊರೆವ ಕಲ್ಲುಗಳು. ಇವು ಕೇವಲ ಹಳದಿಯಲ್ಲದೆ, ನೀಲಿ, ಗುಲಾಬಿ ಬಣ್ಣದಲ್ಲೂ ದೊರೆಯುತ್ತದೆ. ಅವುಗಳಲ್ಲಿ ಹಳದಿ ನೀಲಮಣಿ ಹೆಚ್ಚು ಜನಪ್ರಿಯವಾಗಿದೆ. ನೀಲಮಣಿಯ ಉಪರತ್ನವಾದ ಟೋಪಜ್ ಧಾರಣೆ ನಿಮಗೆ ಅತ್ಯಂತ ಪ್ರಯೋಜನಗಳನ್ನು ತಂದು ಕೊಡುತ್ತದೆ. 

ಆಕಾಶಕಾಯಗಳಿಗೆ ಸಂಬಂಧಿಸಿದ ಈ ಮೂಢನಂಬಿಕೆಗಳು ವಿಚಿತ್ರವಾದರೂ ಜನಪ್ರಿಯ!

ಎರಡು ರಾಶಿಗಳಿಗೆ ಪ್ರಯೋಜನಕಾರಿ
ಈ ಹಳದಿ ಹೊಳೆಯುವ ಕಲ್ಲು ಎರಡು ರಾಶಿಚಕ್ರ ಚಿಹ್ನೆಗಳಿಗೆ(Zodiac signs) ಅತ್ಯಂತ ಮಂಗಳಕರವಾಗಿದೆ. ಹೌದು, ಜ್ಯೋತಿಷ್ಯದ ಪ್ರಕಾರ, ಧನು ರಾಶಿ(Sagittarius) ಮತ್ತು ಮೀನ ರಾಶಿ(Pisces)ಯವರಿಗೆ ನೀಲಮಣಿ ಅತ್ಯಂತ ಮಂಗಳಕರವಾಗಿದೆ. ಏಕೆಂದರೆ ಈ ಎರಡೂ ರಾಶಿಗಳ ಅಧಿಪತಿ ಗ್ರಹ ಗುರುವೇ ಆಗಿದ್ದಾನೆ. ಹಾಗಾಗಿ, ಈ ರಾಶಿಯವರು ಟೋಪಜ್ ಧರಿಸಿದಾಗ ಅವರ ಆತ್ಮವಿಶ್ವಾಸ ಹೆಚ್ಚುತ್ತದೆ. ಅವರ ಪ್ರತಿಭೆಯನ್ನು ಎತ್ತಿ ಹಿಡಿಯುತ್ತದೆ. ಅವಕಾಶಗಳನ್ನು ತಂದು ಕೊಡುತ್ತದೆ. ಅದು ಉದ್ಯೋಗವಾಗಲಿ, ವ್ಯಾಪಾರವಾಗಲಿ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿಯನ್ನು ತರುತ್ತದೆ. ಈ ಕಲ್ಲು ಆರೋಗ್ಯದ ದೃಷ್ಟಿಯಿಂದಲೂ ಮಂಗಳಕರವೆಂದು ಪರಿಗಣಿಸಲಾಗಿದೆ. ಅಲ್ಲದೆ, ಈ ರತ್ನದ ಪ್ರಭಾವದಿಂದಾಗಿ, ವೈವಾಹಿಕ ಜೀವನದಲ್ಲಿನ ಅಡೆತಡೆಗಳು ಸಹ ದೂರವಾಗುತ್ತವೆ. ಧನು ರಾಶಿ ಮತ್ತು ಮೀನ ರಾಶಿಯನ್ನು ಹೊರತುಪಡಿಸಿ, ಕರ್ಕಾಟಕ ಮತ್ತು ಸಿಂಹ ರಾಶಿಯವರಿಗೆ ಕೂಡಾ ಹಳದಿ ನೀಲಮಣಿ ಉತ್ತಮವಾಗಿದೆ.

ಯಾವಾಗ ಮತ್ತು ಹೇಗೆ ಧರಿಸಬೇಕು?(When and How to wear)
ಗುರುವಾರ ಈ ರತ್ನವನ್ನು ಧರಿಸಲು ಅತ್ಯಂತ ಮಂಗಳಕರ ದಿನವಾಗಿದೆ. ಈ ರತ್ನದ ಉಂಗುರವನ್ನು ಧರಿಸಿದಾಗ ಅದು ನಿಮ್ಮ ಬೆರಳಿನ ಚರ್ಮವನ್ನು ಸ್ಪರ್ಶಿಸುವ ರೀತಿಯಲ್ಲಿ ಧರಿಸಬೇಕು. ಗುರುವಾರ(Thursday) ಬೆಳಿಗ್ಗೆ ಸ್ನಾನ ಮಾಡಿದ ನಂತರ ಹಾಲು ಮತ್ತು ಗಂಗಾಜಲದಲ್ಲಿ ಈ ರತ್ನದ ಕಲ್ಲು ಹೊದಿಸಿದ ಉಂಗುರವನ್ನು ಹಾಕಿ ನಂತರ ಜೇನುತುಪ್ಪದೊಂದಿಗೆ ಅಭಿಷೇಕ ಮಾಡಿ. ನಂತರ ಶುದ್ಧ ನೀರಿನಿಂದ ಉಂಗುರ ತೊಳೆದು ನಿಮ್ಮ ತೋರು ಬೆರಳಿಗೆ ಹಾಕಿಕೊಳ್ಳಿ. ಉಂಗುರವನ್ನು ಧರಿಸುವಾಗ, 'ಓಂ ಬ್ರಹ್ಮ ಬೃಹಸ್ಪತಿಯೇ ನಮಃ' ಎಂಬ ಮಂತ್ರವನ್ನು ಪಠಿಸಬೇಕು.

Vastu Tips: ಪೂಜಾ ತಟ್ಟೆ ಯಾವ Metalದಾಗಿರಬೇಕು?

ಈ ರಾಶಿಗಳ ಜನರು ಧರಿಸಬಾರದು(Which zodiac should not wear)
ವೃಷಭ, ಮಿಥುನ, ಕನ್ಯಾ, ತುಲಾ, ಮಕರ ಮತ್ತು ಕುಂಭ ರಾಶಿಯವರು ಜ್ಯೋತಿಷ್ಯದ ಸಲಹೆಯಿಲ್ಲದೆ ನೀಲಮಣಿಯನ್ನು ಧರಿಸಬಾರದು. ಏಕೆಂದರೆ ಈ ರಾಶಿಚಕ್ರಗಳಿಗೆ ಈ ರತ್ನ ಮಂಗಳಕರವಲ್ಲ. ಅವುಗಳ ಅಧಿಪತಿ ಗ್ರಹಕ್ಕೂ ಗುರುವಿಗೂ ಶತ್ರುತ್ವ ಇರುವುದು. ಅಲ್ಲದೆ, ಈ ರತ್ನವನ್ನು ಧರಿಸುವಾಗ, ಇದನ್ನು ಪಚ್ಚೆ, ನೀಲಮಣಿ, ವಜ್ರ ಮತ್ತು ಬೆಳ್ಳಿಯೊಂದಿಗೆ ಧರಿಸಬೇಡಿ. ಹಾಗೊಂದು ವೇಳೆ ಧರಿಸಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚಬಹುದು. 
 

Latest Videos
Follow Us:
Download App:
  • android
  • ios