ಬೆಂಗ್ಳೂರಲ್ಲಿ ರ‍್ಯಾಂಬೋ ಸಿನಿಮಾ ಶೈಲಿಯಲ್ಲಿ ಕಳ್ಳತನ: ಕಸ್ಟಮರ್‌ಗೆ ಬೇಕಾದ ಬೈಕನ್ನೇ ಕದೀತಿದ್ದ ಖದೀಮರು!
ಬೈಕ್ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡ್ತಿದ್ದರು. ಕದ್ದ ಹಣದಿಂದ ವಿಲಾಸಿ ಜೀವನ ನಡೆಸುತ್ತಿದ್ದರು. ಬಂಧಿತ ಆರೋಪಿಗಳಿಂದ 12.5 ಲಕ್ಷ ಮೌಲ್ಯದ 13 ಬೈಕ್ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು(ಅ.01): ನಗರದಲ್ಲಿ ರ‍್ಯಾಂಬೋ ಸಿನಿಮಾ ಶೈಲಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಮಾಡಿ ಬೈಕ್ ಮಾರಾಟ ಮಾಡೋರನ್ನ ನೋಡರ್ತೀರಾ, ಆದ್ರೆ ಕಸ್ಟಮರ್ ಗಳಿಂದ ಆರ್ಡರ್ ಪಡೆದು ನಂತರ ಯಾವ ಬೈಕ್ ಬೇಕೋ ಅದೇ ಬೈಕ್ ಕಳ್ಳತನ ಮಾಡೋ ಕಳ್ಳರನ್ನ ಎಲ್ಲಾದರೂ ನೋಡಿದ್ದಿರಾ? ಇಲ್ಲಾ ಅಲ್ವಾ? ಇಂತಹ ಖತರ್ನಾಕ್ ಬೈಕ್ ಕಳ್ಳರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಶಬಾಜ್ ಖಾನ್ ಹಾಗೂ ಓಂ ಬಂಧಿತ ಆರೋಪಿಗಳು. ಒಮ್ಮೆ ಬೈಕ್ ಕದ್ದ ಆರೋಪಿಗಳು ಆನ್‌ಲೈನ್‌ನಲ್ಲಿ ಮಾರಾಟ ಮಾಡಿದ್ದರು. ನಂತರ ಆನ್‌ಲೈನ್‌ನಲ್ಲಿ ಕಸ್ಟಮರ್ ಗಳು ಒಬ್ಬರ ಮೂಲಕ ಮತ್ತೊಬ್ಬರ ಪರಿಚಯವಾಗಿತ್ತು. 15 ರಿಂದ 20 ಸಾವಿರಕ್ಕೆ ಆರೋಪಿಗಳು ಬೈಕ್ ಮಾರಾಟ ಮಾಡುತ್ತಿದ್ದರು. ಮಾರಾಟದ ವೇಳೆ ಯಾರಿಗಾದ್ರು ಕಡಿಮೆ ಬೆಲೆಗೆ ಯಾವ ಬೈಕ್ ಬೇಕಾದ್ರು ಕೊಡ್ತಿವಿ ಕಸ್ಟಮರ್ ಇದ್ರೆ ಹೇಳಿ ಅಂತಿದ್ರು. ಕಸ್ಟಮರ್ ಸಿಕ್ಕಾಗ ಯಾವ ಬೈಕ್ ಬೇಕೋ ಅದೇ ಬೈಕನ್ನ ಕದ್ದು ಮಾರಾಟ ಮಾಡತಿದ್ದ ಆರೋಪಿಗಳು.
ಬೆಂಗಳೂರು: ಮಲಗುವ ವಿಚಾರಕ್ಕೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕಾರ್ಮಿಕನ ಹತ್ಯೆ