ಇವರು ಇಂದಿನ ಶಹಜಹಾನ್; ಪತ್ನಿಗಾಗಿ 7 ಕೋಟಿ ರೂ. ವೆಚ್ಚದ ದೇವಾಲಯ ನಿರ್ಮಿಸಿದ ಪತಿ!
ಭಾರತದ ಇತಿಹಾಸದಲ್ಲಿ ತಾಜ್‌ಮಹಲ್ ವಿಭಿನ್ನ ಪ್ರಾಮುಖ್ಯತೆಯನ್ನು ಹೊಂದಿದೆ. ಶಹಜಹಾನ್ ತನ್ನ ಪತ್ನಿ ಮುಮ್ತಾಜ್ ಸ್ಮರಣಾರ್ಥ ಈ ಅದ್ಭುತ ಸ್ಮಾರಕ ನಿರ್ಮಿಸಿದ್ದಾನೆ. ಇದೀಗ ಮತ್ತೊಬ್ಬ ವ್ಯಕ್ತಿ ತನ್ನ ಪ್ರೀತಿಯ ಪತ್ನಿಯ ಇಚ್ಚೆ ಈಡೇರಿಸಲು 7 ಕೋಟಿ ವೆಚ್ಚದ ಸುಂದರ ದೇವಾಲಯ ನಿರ್ಮಿಸಿದ್ದಾನೆ.
ಶಹಜಹಾನ್ ತನ್ನ ಪ್ರೀತಿಯ ಮುಮ್ತಾಜ್‌ಗಾಗಿ ತಾಜ್‌ಮಹಲನ್ನು ನಿರ್ಮಿಸಿದ ಬಗ್ಗೆ ನಿಮಗೆ ಗೊತ್ತೇ ಇರುತ್ತದೆ. ಆದರೆ, ಈಗಲೂ ಯಾರಾದರೂ ವ್ಯಕ್ತಿ ಇಂಥ ಸಾಹಸಕ್ಕೆ ಕೈ ಹಾಕಲು ಸಾಧ್ಯವೇ? ಹಾಗೆ ಮಾಡಲು ಆತ ರಾಜನೇ ಆಗಿರಬೇಕಷ್ಟೇ ಎನಿಸುತ್ತದೆ ಅಲ್ಲವೇ?
ಆದರೆ, ಇಲ್ಲೊಬ್ಬರು ಆಧುನಿಕ ಶಹಜಹಾನ್ ಇದ್ದಾರೆ. ಅವರು ಪತ್ನಿ ಬದುಕಿರುವಾಗಲೇ ಆಕೆಯ ಆಸೆಯನ್ನು ಈಡೇರಿಸುವ ಇಚ್ಚೆಯಿಂದ ಹೆಂಡತಿಗಾಗಿ ಬರೋಬ್ಬರು 7 ಕೋಟಿ ರೂ. ವೆಚ್ಚದ ದೇವಾಲಯ ನಿರ್ಮಿಸಿದ್ದಾರೆ. ಈ ಮೂಲಕ ಪತ್ನಿಯ ಪಾಲಿಗೆ ಆತ ನಿಜಕ್ಕೂ ಮಹಾರಾಜನೇ ಎನಿಸಿಕೊಂಡಿದ್ದಾರೆ.
ಹೌದು, ಒಡಿಶಾದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಸಂತೋಷಕ್ಕಾಗಿ 7 ಕೋಟಿ ರೂ. ಮೌಲ್ಯದ ದೇವಾಲಯವನ್ನು ನಿರ್ಮಿಸಿದ ವಿಶಿಷ್ಟ ಘಟನೆ ವರದಿಯಾಗಿದೆ. ಈ ದೇವಾಲಯವು ಹಲವು ವಿಧಗಳಲ್ಲಿ ಬಹಳ ವಿಶಿಷ್ಟವಾಗಿದೆ ಮತ್ತು ಪತಿ-ಪತ್ನಿಯರ ನಡುವಿನ ಪ್ರೀತಿ ಮತ್ತು ಭಕ್ತಿಯ ಸಂಕೇತವಾಗಿದೆ.
ಒಡಿಶಾದಲ್ಲಿದೆ..
ಈ ದೇವಾಲಯವನ್ನು ಒಡಿಶಾದ ಜಾಜ್‌ಪುರ ಜಿಲ್ಲೆಯಲ್ಲಿ ನಿರ್ಮಿಸಲಾಗಿದೆ. ತಾಜ್ ಮಹಲ್‌ನಂತೆಯೇ ಇದು ತುಂಬಾ ಸುಂದರವಾಗಿದೆ. ತನ್ನ ಪತ್ನಿಗಾಗಿ ದೇವಾಲಯವನ್ನು ನಿರ್ಮಿಸಿದ ವ್ಯಕ್ತಿಯನ್ನು ಖೇತ್ರವಾಸಿ ಲೆಂಕ ಎಂದು ಗುರುತಿಸಲಾಗಿದೆ. ಅವರೊಬ್ಬ ಉದ್ಯಮಿ. ಅವರ ಪತ್ನಿಯ ಹೆಸರು ಬೈಜಂತಿ. ಅವರು ಸಂತೋಷಿ ಮಾ ಅವರ ಭಕ್ತೆ. ಈ ದೇವಾಲಯವನ್ನು ನಿರ್ಮಿಸಿದ ಖೇತ್ರವಾಸಿ ಲೆಂಕ ಅವರೇ ದೇವಾಲಯದ ನಿರ್ಮಾಣದ ವಿವರಗಳನ್ನು ಮತ್ತು ಅದರ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.
Attractive girls: ಈ ರಾಶಿಯ ಹುಡುಗಿಯರು ಮೊದಲ ಭೇಟಿಯಲ್ಲೇ ಹುಡುಗರನ್ನು ಹುಚ್ಚರಾಗಿಸುತ್ತಾರೆ!
ಖೇತ್ರವಾಸಿ ಲೆಂಕಾ ಅವರು 1992ರಲ್ಲಿ ವಿವಾಹವಾದರು. ಅವರ ಪತ್ನಿ ಸಂತೋಷಿ ಮಾ ಭಕ್ತರಾಗಿದ್ದರು.
'ಮದುವೆಯಾದ ನಂತರ ಗ್ರಾಮದಲ್ಲಿ ಸಂತೋಷಿ ಮಾತೆಯ ಚಿಕ್ಕ ದೇವಸ್ಥಾನವನ್ನು ನಿರ್ಮಿಸೋಣ ಎಂದುಕೊಂಡಿದ್ದೆವು. ಈ ಸಣ್ಣ ದೇವಾಲಯವು ತುಂಬಾ ದೊಡ್ಡದಾಗುತ್ತದೆ ಎಂದು ನಿವಾಸಿಗಳು ಯೋಚಿಸಿರಲಿಲ್ಲ. ಈ ದೇವಾಲಯವನ್ನು ನಿರ್ಮಿಸಿದ ನಂತರ ನನಗೂ ಸಂತೋಷವಾಗಿದೆ' ಎಂದು ಅವರು ಹೇಳುತ್ತಾರೆ.
ಅವರ ಪತ್ನಿ ಮತ್ತು ಗ್ರಾಮಸ್ಥರು ಕೂಡ ಸಂತೋಷಪಟ್ಟಿದ್ದಾರೆ. ತನ್ನ ಪತಿ ತನಗಾಗಿ ದೇವಾಲಯವನ್ನು ನಿರ್ಮಿಸಿದ್ದಾನೆ ಎಂದು ಖೇತ್ರವಾಸಿಯ ಪತ್ನಿ ಬಹಿರಂಗಪಡಿಸಿದ್ದಾರೆ. 'ಈ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ದೇವಿಯ ಮೂರ್ತಿಯನ್ನು ಗ್ರಾಮ ಮಾತ್ರವಲ್ಲದೆ ದೇಶದಾದ್ಯಂತ ಜನರು ಪೂಜಿಸಿ ಸಂತೋಷಿ ಮಾತೆಯ ಆಶೀರ್ವಾದವನ್ನು ಪಡೆಯಬೇಕೆಂದು ನಾನು ಪ್ರಾಮಾಣಿಕವಾಗಿ ಬಯಸುತ್ತೇನೆ' ಎಂದು ಬೈಜಂತಿ ಹೇಳುತ್ತಾರೆ.
Holi 2023: ಈ ದಿನ ಶನಿ ಸೇರಿ ಈ ಗ್ರಹಗಳ ಸಂಚಾರ 4 ರಾಶಿಗಳಿಗೆ ತರಲಿದೆ ಕುತ್ತು, ಇಲ್ಲಿದೆ ಪರಿಹಾರ
ಬೈಜಂತಿ ತನ್ನ ಪತಿಯೊಂದಿಗೆ ಹೈದರಾಬಾದ್‌ನಲ್ಲಿ ವಾಸಿಸುತ್ತಾರೆ. ಆಕೆ ತನ್ನ ತವರು ಗ್ರಾಮದಲ್ಲಿ ಸಂತೋಷಿ ಮಾತೆಯ ಮಂದಿರ ನಿರ್ಮಾಣವಾಗಬೇಕು ಎಂದು ಆಸೆ ವ್ಯಕ್ತಪಡಿಸಿದ್ದರು. ನಂತರ ಆಕೆಯ ಆಸೆಯನ್ನು ಈಡೇರಿಸಲು ಪತಿ ನಿರ್ಧರಿಸಿದ್ದಾರೆ. ಅವರು 2008ರಲ್ಲಿ ದೇವಾಲಯದ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದರು. ಈಗ ಈ ದೇವಾಲಯವು ಸಿದ್ಧವಾಗಿದೆ. ಈ ದೇವಾಲಯವನ್ನು ದಕ್ಷಿಣ ಭಾರತೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ದೇವಾಲಯವನ್ನು ನಿರ್ಮಿಸಲು ಎಲ್ಲಾ ಕುಶಲಕರ್ಮಿಗಳು ಚೆನ್ನೈನಿಂದ ಬಂದಿದ್ದರು ಎಂದು ಬೈಜಂತಿ ಹೇಳುತ್ತಾರೆ.